Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ತಮ್ಮ ಸಂಗಾತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ

|

Updated on: May 15, 2023 | 6:29 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 15) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿ ಭವಿಷ್ಯ, ಈ ರಾಶಿಯವರು ತಮ್ಮ ಸಂಗಾತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ
ಇಂದಿನ ರಾಶಿ ಭವಿಷ್ಯ
Image Credit source: freepik
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 15 ಸೋಮವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ವೈಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:42 ರಿಂದ 09:17ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:04 ರಿಂದ 03:40ರ ವರೆಗೆ.

ಧನು: ಇಂದು ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳಬಹುದು. ನಿಮ್ಮ ಪ್ರತಿ ಮಾತಿನ್ನೂ ಇನ್ನೊಬ್ಬರು ಗಮನಿಸುವರು.‌ ನೀವು ತಾಳ್ಮೆಯಿಂದ ಇದ್ದಷ್ಟೂ ನಿಮ್ಮ ಸಂಬಂಧವು ಗಟ್ಟಿಯಾಗುವುದು. ಇಂದು ಕಚೇರಿ ಸ್ವಲ್ಪ ಒತ್ತಡವನ್ನು ಅನುಭವಿಸುವಿರಿ. ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ತಿಳಿಸಲು ನೀವು ಪ್ರಯತ್ನಿಸುವಿರಿ. ಅಸಾಧಾರಣ ಯೋಚನೆಗಳು ಇದ್ದರೂ ಅವುಗಳನ್ನು ಸರಿಯಾಗಿ ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗದೇ ಇರದಬಹುದು. ಕೆಲಸದ ವಿಷಯದಲ್ಲಿ ಸ್ವಲ್ಪ ಉದ್ವೇಗ ಉಂಟಾಗುವ ಸಾಧ್ಯತೆ ಇದೆ.‌ ಅನ್ಯಾಯದ ಮಾರ್ಗದಲ್ಲಿ ನೀವಿದ್ದರೆ ಮುಂದೆ ನೀವು ನಷ್ಟವನ್ನು ಕಷ್ಟವನ್ನೂ ಅನುಭವಿಸಬೇಕಾಗಬಹುದು. ಈಗಲೇ ಬೇಕಾದ ಕ್ರಮವನ್ನು ಕೈಗೊಳ್ಳಿ.

ಮಕರ: ಇಂದು ನೀವು ಮನೆಯಲ್ಲಿ ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಬುದ್ಧಿವಂತಿಕೆಯಿಂದ ಪ್ರಯತ್ನಿಸಬೇಕಾದೀತು. ಇಂದು ನಿಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡುವಿರಿ. ನಿಮ್ಮ ಗುರಿಯನ್ನು ಸಾಧಿಸುವ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳಿ. ನಿಮ್ಮ ದುರಭ್ಯಾಸಗಳನ್ನು ಬಿಟ್ಟು ಉತ್ತಮ ನಡತೆಯನ್ನು ಅಳವಡಿಸಿಕೊಳ್ಳಲು ಇಚ್ಛಿಸಬಹುದು. ಭಿನ್ನಾಭಿಪ್ರಾಯಗಳನ್ನು ಮರೆತು ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿ ಇರಲಿ. ಆಗ ನಿರ್ಧಾರಗಳು ಸರಿಯಾಗಿರುತ್ತವೆ. ನೂತನ ಗೃಹವನ್ನು ಖರೀದಿಸುವ ಯೋಚನೆ ಮಾಡುವಿರಿ.

ಕುಂಭ: ಇಂದು ನಿಮ್ಮ ಸ್ನೇಹಿತರು ನಿಮಗೆ ಅಗತ್ಯವಾಗಿ ಬೇಕಾದ ಸಹಾಯವನ್ನು ಮಾಡುವರು. ಕೆಲವು ಸವಾಲಿನ ಪರಿಸ್ಥಿತಿಗಳು ಬರುವ ಸಾಧ್ಯತೆ ಇದೆ. ನೀವು ಅವುಗಳನ್ನು ಸುಲಭವಾಗಿ ಎದುರಿಸಬಲ್ಲಿರಿ. ನೀವು ಇಂದು ನಿಮ್ಮ ಬಲವನ್ನೇ ನಂಬಿ ಮುನ್ನಡೆಯುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಮೆಚ್ಚಗೆಯು ಸಿಗಬಹುದು. ಇದು ಕೆಲಸಕ್ಕೆ ಉತ್ತೇಜನವನ್ನು ಕೊಡುವುದು. ಪ್ರತಿ ಬಾರಿಯೂ ಇನ್ನೊಬ್ಬರ ಮನಃಸ್ಥಿತಿಯನ್ನು ನಿರ್ಣಯಿಸುವಲ್ಲಿ ಸೋಲುವಿರಿ. ಕೆಲ ಕಾಲ ಹೊಸ ಉದ್ಯಮಕ್ಕೆ ಪಾಲುದಾರರಾಗುವುದು ಬೇಡ. ಸಂಗಾತಿಯ ಆಸೆಗಳನ್ನು ತಿಳಿದುಕೊಂಡು ಪೂರೈಸಿ.

ಮೀನ: ನಾಯಕ ಸ್ಥಾನದಿಂದ ನೀವು ಕೆಳಗಿಳಿಯುವ ಆಲೋಚನೆ ಮಾಡುವಿರಿ. ಸಾಮಾಜಿಕ ಕೆಲಸವು ನಿಮಗೆ ಬೇಸರ ತರಿಸಬಹುದು. ನೆಮ್ಮದಿಗಾಗಿ ಎಲ್ಲಿಗಾದರೂ ಹೋಗುವ ಮನಸ್ಸು ಮಾಡುವಿರಿ. ಕಛೇರಿಯಲ್ಲಿ ಎಂದಿನ ಉತ್ಸಾಹವು ಇರುವುದಿಲ್ಲ. ಮಕ್ಕಳ‌ ಮನಸ್ಸು ಅರ್ಥಮಾಡಿಕೊಳ್ಳುವ ವಿಚಾರದಲ್ಲಿ ಸೋಲುವಿರಿ. ನಿಮ್ಮ ಮೂಗಿನ ನೇರದ ವಿಷಯಕ್ಕೆ ಜನ ಕುಟುಂಬದಲ್ಲಿ ಬೆಂಬಲ ಸಿಗದು. ಅಧ್ಯಾತ್ಮದ ವಿಚಾರದಲ್ಲಿ ಒಲವು ಅತಿಯಾಗಬಹುದು. ಅಪವಾದದ ಮೂಲವನ್ನು ಹುಡುಕುವ ಪ್ರಯತ್ನ ಮಾಡುವಿರಿ.

-ಲೋಹಿತಶರ್ಮಾ ಇಡುವಾಣಿ