ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 21 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ರೋಹಿಣೀ, ಯೋಗ: ಅತಿಗಂಡ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಸಂಜೆ 05:17 ಗಂಟೆ 06:53ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:17ರ ವರೆಗೆ.
ಧನುಸ್ಸು: ಕೆಲಸದಿಂದ ನಿಮಗೆ ಅತಿಯಾದ ಮಾನಸಿಕ ಹಾಗೂ ದೈಹಿಕ ಆಯಾಸವಾಗಬಹುದು. ಸ್ವಲ್ಪ ವಿಶ್ರಾಂತಿ ಪಡೆಯುವುದು ಉತ್ತಮ. ಕುಟುಂಬದವರ ಮೇಲೆ ಕೋಪವನ್ನು ಮಾಡಿಕೊಳ್ಳುವಿರಿ. ನಿಮಗೆ ಪ್ರಿಯವಾದದ್ದನ್ನು ಸ್ನೇಹಿತರು ತಂದುಕೊಟ್ಟಾರು. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಹಳೆಯ ಘಟನೆಗಳು ನಿಮಗೆ ಸಂತೋಷವನ್ನು ಕೊಡುವುದು. ಅದನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಉನ್ನತ ಹುದ್ದೆಗೆ ಏರವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಇಲ್ಲದಿರಲಿದೆ.
ಮಕರ: ಮನಸ್ಸಿನ ನಿಗ್ರಹವನ್ನು ಮಾಡಲು ನೀವು ಬಹಳ ಪ್ರಯತ್ನಿಸುವಿರಿ. ಅಸಮತೋಲನ ಆಹಾರದಿಂದ ನಿಮಗೆ ಕಷ್ಟವಾದೀತು. ನಿಮ್ಮ ಸಾಮರ್ಥ್ಯವನ್ನು ಓರೆಗಲ್ಲಿ ಹಚ್ಚುವ ಕೆಲಸವಾಗಬಹುದು. ಸಂಗಾತಿಯ ವರ್ತನೆಗಳು ನಿಮಗೆ ಸರಿಯಾಗಿ ಅರ್ಥವಾಗದೇ ಇದ್ದೀತು. ನಿಮ್ಮ ಮಾತುಗಳು ಸರಿಯಾಗಿ ಸಂವಹನವಾಗದೇ ಇದ್ದೀತು. ಮನೆಯವರ ಜೊತೆ ಪ್ರಯಾಣವನ್ನು ಮಾಡುವಿರಿ. ಆಹಾರದ ಉದ್ಯಮವು ನಿಮಗೆ ಲಾಭವನ್ನು ತಂದುಕೊಡಬಹುದು. ಮಕ್ಕಳ ಅಭ್ಯಾಸದ ವಿಚಾರದಲ್ಲಿ ನಿಮಗೆ ಅಷ್ಟು ಸಂತೋಷವಿರಲಾರದು.
ಕುಂಭ: ನಿಮ್ಮ ಸೌದರ್ಯದ ಬಗ್ಗೆ ನಿಮಗೆ ಹಮ್ಮು ಇರಬಹುದು. ಹಳೆಯ ಪರಿಚಿತರ ಭೇಟಿಯಾಗಲಿದೆ. ಇದು ಆತ್ಮೀಯವಾಗುವ ಸಾಧ್ಯತೆ ಇದೆ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಹೊಣೆಗಾರಿಕೆ ಬಂದೀತು. ವಿದ್ಯಾರ್ಥಿಗಳು ಕಲಿಕೆಯಲ್ಲಿ ನೀವು ಹಿಂದೆ ಬೀಳುವ ಸಾಧ್ಯತೆ ಇದೆ. ಸಹೋದರರಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಬಹುದು. ಪ್ರಧಾನ ವಿಷಯವು ಗೌಣವಾಗಿ, ಅಪ್ರಧಾನವೇ ಮುಖ್ಯ ನೆಲೆಗೆ ಬರಬಹುದು. ಶಿಸ್ತಿಗೆ ಸಂಬಂಧಿಸಿದಂತೆ ನಿಮಗೆ ಕಿರಿಕಿರಿಯಾಗಬಹುದು. ಸ್ವಾಭಿಮಾನದಿಂದ ಇರಲು ನೀವು ಇಷ್ಟಪಡುವಿರಿ. ಆರ್ಥಿಕವಾಗಿ ಲಾಭವನ್ನು ಪಡೆಯಲು ಬಯಸುವಿರಿ.
ಮೀನ: ದೀರ್ಘ ಸಮಯದಿಂದ ಅನಾರೋಗ್ಯವು ಕಾಡುತ್ತಿದ್ದರೆ, ಇಂದು ಮುಕ್ತಿಪಡೆಯಬಹುದಾಗಿದೆ. ನಿಮಗೆ ಎದುರಾದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಿರಿ. ಸ್ನೇಹಿತರಲ್ಲಿ ಕೇಳಿಕೊಂಡರೆ ನಿಮಗೆ ಬೇಕಾದ ಸಹಾಯ ಸಿಗಬಹುದು. ಹೊಸ ಕೆಲಸಗಳಿಗೆ ಕಛೇರಿಯಲ್ಲಿ ನಿಮ್ಮನ್ನು ಜೋಡಿಸಬಹುದು. ಅನಿರೀಕ್ಷಿತ ತಿರುವು ನಿಮಗೆ ಗೊಂದಲವನ್ನು ಉಂಟುಮಾಡುವುದು. ದೈವಾನುಗ್ರಹವನ್ನು ಪ್ರಾರ್ಥಿಸಿ ಇಂದಿನ ಕೆಲಸವನ್ನು ಮಾಡಿ. ಅನಿರೀತವಾಗಿ ಕುಟುಂಬದ ಸಂಪೂರ್ಣ ಬೆಂಬಲವೂ ಸಿಗಲಿದೆ. ಕಲಹವಾಡಬೇಕೆನ್ನುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ. ಎಲ್ಲರನ್ನೂ ಸಮಭಾವದಿಂದ ನೋಡಿ.
-ಲೋಹಿತಶರ್ಮಾ ಇಡವಾಣಿ