Horoscope: ಇಂದಿನ ರಾಶಿ ಭವಿಷ್ಯ, ಈ ರಾಶಿಯವರ ಪ್ರೀತಿಗೆ ಹಿರಿಯರಿಂದ ಗ್ರೀನ್ ಸಿಗ್ನಲ್ ಸಿಗಲಿದೆ

|

Updated on: May 31, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 31) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿ ಭವಿಷ್ಯ, ಈ ರಾಶಿಯವರ ಪ್ರೀತಿಗೆ ಹಿರಿಯರಿಂದ ಗ್ರೀನ್ ಸಿಗ್ನಲ್ ಸಿಗಲಿದೆ
ಇಂದಿನ ರಾಶಿಭವಿಷ್ಯ
Image Credit source: freepik
Follow us on

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ಧನಸ್ಸು: ಭೂಮಿಯ ಉತ್ಪನ್ನದ ವ್ಯವಹಾರವು ಬಹಳ ಚೆನ್ನಾಗಿ ಆಗಬಹುದು. ಸರ್ಕಾರದಿಂದ ಬರಬೇಕಾದ ಹಣವು ಬಂದು ಸಾಲದಿಂದ ನೀವು ಮುಕ್ತವಾಗುವಿರಿ. ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಿ. ಸಾಹಸಪ್ರಿಯರಿಗೆ ಹೊಸ ವಿಚಾರಗಳು ಬರಬಹುದು. ಇಂದು ನಿಮ್ಮ ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ವ್ಯಾಪಾರಗಳಲ್ಲಿ ಚೇತರಿಕೆ ಕಂಡು ಸಂತಸವಾಗುವುದು. ನಿಮ್ಮ ಕಾರ್ಯಕ್ಷಮತೆಯನ್ನು ಸಂಸ್ಥೆಯು ಪ್ರಶಂಸಿಸುವುದು.‌ ಹಣಕಾಸಿಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿ ಇರಲಿ.

ಮಕರ: ಭೂಮಿಯ ವ್ಯವಹಾರದವರಿಗೆ ನಂಬಿಕೆ ದ್ರೋಹ ಆಗಬಹುದು. ದಾಂಪತ್ಯದಲ್ಲಿ ಅನ್ಯೋನ್ಯತೆ ಮೂಡುವುದು ಕಷ್ಟವಾದೀತು. ನಡವಳಿಕೆಯಿಂದ ನಿಮ್ಮ ವರ್ಚಸ್ಸು ಹೆಚತಚಾಗುವುದು. ವಿದೇಶಿದಲ್ಲಿ ಇರುವವರು ಸ್ವಂತ ಉದ್ಯೋಗವನ್ನು ಆರಂಭಿಸಬಹುದು. ಆರ್ಥಿಕ ಸ್ಥಿತಿಯು ಸ್ವಲ್ಪ ಸುಧಾರಣೆಯಾಗಲಿದೆ. ಮಾರ್ಗದರ್ಶಕರ ಸಲಹೆಯಂತೆ ನಿಮ್ಮ ಗುರಿಮುಟ್ಟುವ ಹಾದಿಯನ್ನು ಬದಲಿಸಿಕೊಳ್ಳಿ. ರಾಜಕೀಯ ವ್ಯಕ್ತಿಗಳಿಗೆ ಹುದ್ದೆ ದೊರೆಯುವುದು. ನೀವು ಪ್ರೇಮದಲ್ಲಿ ಬಿದ್ದುದರಿಂದ ಹಿರಿಯರು ನಿಮ್ಮ ಪ್ರೀತಿಗೆ ಒಪ್ಪಿಗೆ ನೀಡುವರು. ವೃತ್ತಿಯಲ್ಲಿ ಬಹಳ ಜಾಣ್ಮೆಯಿಂದ ಕೆಲಸವನ್ನು ಮಾಡುವಿರಿ.

ಕುಂಭ: ಇಂದು ನಿಮಗೆ ಒಡಹುಟ್ಟಿದವರು ಸಾಕಷ್ಟು ವಿರೋಧವನ್ನು ಮಾಡಿಯಾರು. ಖರ್ಚಿಗೆ ತಕ್ಕಂತೆ ಆದಾಯವೂ ಬರುವುದರಿಂದ ಆರ್ಥಿಕ ಸ್ಥಿತಿಯು ಸಮತೋಲನದಲ್ಲಿ ಇರವುದು. ಪಿತ್ರಾರ್ಜಿತ ಆಸ್ತಿಗಾಗಿ ಬಂಧುಗಳ ನಡುವೆ ಭಿನ್ನಾಭಿಪ್ರಾಯ ಮೂಡಲಿದೆ. ಯಂತ್ರಗಳ ಉತ್ಪಾದನಾ ಕ್ಷೇತ್ರದಲ್ಲಿರುವವರಿಗೆ ಹೆಚ್ಚು ಲಾಭ ದೊರೆಯುವುದು. ಹಿರಿಯರ ಆರೋಗ್ಯ ಸಮಸ್ಯೆಗಳು ಸರಿಯಾಗಬಹುದು. ನಿಮ್ಮವರನ್ನು ಸತ್ಕಾರ್ಯಕ್ಕೆ ಮನವೊಲಿಸಲು ಶ್ರಮಪಡಬೇಕಾದೀತು. ಸ್ಥಿರಾಸ್ತಿಗೆ ಸಂಬಂಧಿಸಿದ ಸರ್ಕಾರಿ ಕಾನೂನು ತೊಡಕುಗಳು ಇಂದು ನಿವಾರಣೆಯಾಗುವುದು.

ಮೀನ: ವ್ಯವಹಾರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಬಹಳ ಶ್ರಮಪಡುವಿರಿ. ನೀವು ಸಂಸ್ಥೆಯ ಅಭಿವೃದ್ಧಿಯ ಸಲಹೆಗಾರರಾಗಿ ನೇಮಕಗೊಳ್ಳಬಹುದು. ನಿಮ್ಮ ಕೆಲಸವನ್ನು ನಿಯಮಬದ್ಧವಾಗಿ ಮಾಡಿ ಮುಗಿಸುವುದು ಉತ್ತಮ. ಎಲ್ಲ ವಿಚಾರಗಳಲ್ಲೂ ನಿಮ್ಮದೇ ಅಭಿಪ್ರಾಯ ಹೇಳುವುದಕ್ಕಿಂತ ಇತರರ ಅಭಿಪ್ರಾಯಗಳಿಗೂ ಬೆಲೆ ಕೊಡಿ. ಹೊಸ ನೀರು ಹರಿದು ಬರಬಹುದು. ಸ್ತ್ರೀರೋಗತಜ್ಞರಿಗೆ ಬೇಡಿಕೆ ಹೆಚ್ಚಾಗಿ ಸಂಪಾದನೆ ಅಧಿಕವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಲಿದೆ.

-ಲೋಹಿತಶರ್ಮಾ ಇಡುವಾಣಿ