Rashi Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಸಂಗಾತಿಯ ಜೊತೆ ಒಂದೇ ವಿಚಾರದಲ್ಲಿ ಕಲಹವಾಗಬಹುದು
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 31) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 02:07ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:40 ರಿಂದ 09:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:30ರ ವರೆಗೆ.
ಮೇಷ: ಹೊಸ ಜೀವನ ಶೈಲಿಯು ನಿಮಗೆ ಕಷ್ಟವಾಗಬಹುದು. ಮನಸ್ಸನ್ನು ನಿಯಂತ್ರಿಸಲು ನಿಮಗೆ ಕಷ್ಟವಾದೀತು. ನಿಮ್ಮ ಜೊತೆ ಸಂಧಾನಕ್ಕೆ ಬರಬಹುದು. ದ್ವೇಷವನ್ನು ಮರೆಯಲು ಹಿರಿಯರು ನಿಮಗೆ ಉಪದೇಶವನ್ನು ಮಾಡಬಹುದು. ಅಧಿಕ ಆದಾಯದಿಂದ ಕಷ್ಟವಾದೀತು. ಲೆಕ್ಕಪತ್ರಗಳನ್ನು ಸರಿಯಾಗಿ ಇಡಿ. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ಪ್ರೀತಿ ಬರಬಹುದು. ಸಂಗಾತಿಯ ಜೊತೆ ಒಂದೇ ವಿಚಾರದಲ್ಲಿ ಕಲಹವಾಗಬಹುದು. ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಅನುಕೂಲತೆಗಳು ಉಂಟಾಗಬಹುದು.
ವೃಷಭ: ಅರಂಭಿಸಿದ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಿ ನೆಮ್ಮದಿಯಿಂದ ಇರುವಿರಿ. ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ದೂರವಿಡಿ. ಅತಿಯಾದ ಆಲಸ್ಯ ಮತ್ತು ಅಹಂಕಾರ ನಿಮ್ಮನ್ನು ವ್ಯವಹಾರಗಳಿಂದ ಹೊರಗಿಡಬಹುದು. ಸಂಗಾತಿಯ ಆದಾಯವನ್ನು ನೀವು ಪಡೆಯಬಹುದು. ನೂತನ ವಾಹನವನ್ನು ಖರೀದಿಸುವಿರಿ. ಹೆಚ್ಚಿನ ಆದಾಯಕ್ಕೆ ವೃತ್ತಿಯನ್ನು ಬದಲಿಸುವಿರಿ. ಸಮಯಕ್ಕೆ ಸರಿಯಾಗಿ ನಿದ್ರೆಯ ಅವಶ್ಯಕತೆ ಇರಲಿದೆ. ನಿಮ್ಮ ಜಾಣ ಕಿವುಡುತನ ಎಲ್ಲರಿಗೂ ಗೊತ್ತಾಗಬಹುದು. ಪಕ್ಷಪಾತ ಮಾಡುವ ದೂರು ಬರಬಹುದು.
ಮಿಥುನ: ಕಷ್ಟಗಳಿಗೆ ನೆರವಾಗುವುದನ್ನು ಸ್ವಭಾವವಾಗಿ ಮಾಡಿಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳಿಗೆ ಓಡಾಟವು ಹೆಚ್ಚಾಗಬಹುದು. ಹೆಚ್ಚು ಜನರ ಸಂಪರ್ಕ ಮಾಡಬೇಕಾದ ಅನಿವಾರ್ಯತೆ ಬರಬಹುದು. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಸ್ನೇಹಿತರ ತಪ್ಪು ನಿಮ್ಮ ಮೇಲೆ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ಉತ್ತಮ ಫಲಿತಾಂಶವನ್ನು ಪಡೆಯಬಹುದು. ವಿದೇಶದಲ್ಲಿ ವೃತ್ತಿಯು ನಿಮ್ಮನ್ನು ಕರೆದರೂ ನೀವು ಹೋಗಲು ಆಸಕ್ತಿ ತೋರಿಸುವುದಿಲ್ಲ. ಕೋಪಗೊಳ್ಳುವ ಸಂದರ್ಭದಲ್ಲಿ ನೀವು ಮೌನವಹಿಸುವಿರಿ.
ಕಟಕ: ಸರ್ಕಾರಿ ಕಚೇರಿಗೆ ಆಸ್ತಿಯ ವಿಚಾರವಾಗಿ ಹೆಚ್ಚು ಅಲೆದಾಟವಾಗಬಹುದು. ಸಂಪಾದನೆಯು ಇಂದು ನಿಮ್ಮ ನಿರೀಕ್ಷಯ ಮಟ್ಟವನ್ನು ತಲುಪಬಹುದು. ನಿಮ್ಮ ಬಂಧುಗಳು ಆರ್ಥಿಕ ಸಹಾಯಕ್ಕಾಗಿ ನಿಮ್ಮಲ್ಲಿಗೆ ಬರುವರು. ಕೆಲಸದ ಮಧ್ಯದಲ್ಲಿಯೂ ಕುಟುಂಬದ ಆಗು ಹೋಗುಗಳತ್ತ ಗಮನಹರಿಸುವಿರಿ. ಹಳೆಯ ಸ್ನೇಹಿತರ ಜೊತೆ ಕಾಲ ಕಳೆಯುವಿರಿ. ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಎಲ್ಲ ಕೆಲಸಗಳೂ ಏಕಕಾಲಕ್ಕೆ ಬರಬಹುದು. ನಿಮ್ಮ ಮೇಲಿನ ಭರವಸೆಯು ಸುಳ್ಳಾಗದೇ ಇರಲಿದೆ.
-ಲೋಹಿತಶರ್ಮಾ ಇಡುವಾಣಿ