AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 30, 2023 | 12:30 AM

Share

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 30 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಪಂಚಾಂಗ: ಶಾಲಿವಾಹನ ಶಕೆ 1947, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಸುಕರ್ಮ. ಕರಣ : ಗರಜ, ಸೂರ್ಯೋದಯ – 06-03 am, ಸೂರ್ಯಾಸ್ತ – 06-55 pm. ರಾಹು ಕಾಲ 03:43 – 05:19, ಯಮಘಂಡ ಕಾಲ 09:17 – 10:53, ಗುಳಿಕ ಕಾಲ 12:30 –02:06ರ ವರೆಗೆ

ಧನುಸ್ಸು: ಇಂದು ನಿಮ್ಮ ಮಾತಿನ ಮೃದುತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ಇಂದು ಮಿತವಾದ ಆಹಾರವನ್ನು ಸೇವಿಸುವುದು ಉತ್ತಮ. ಇಂದು ನೀವು ಆರ್ಥಿಕ ವಿಷಯದಲ್ಲಿ ಯಶಸ್ಸನ್ನು ಗಳಿಸಿದರೂ ಮನೆಯಲ್ಲಿ ಅಲ್ಪ ಕಿರಿಕಿರಿಯನ್ನು ಅನುಭವಿಸುವಿರಿ. ನೀವು ಎಷ್ಟೇ ಚುರುಕಾಗಿ ಕೆಲಸ ಮಾಡಲು ಪ್ರಯತ್ನಿಸಿದರೂ ಕೆಲಸಗಳು ನಿಧಾನವಾಗಿ ಸಾಗುವುದು. ಇಂದು ನಿಮ್ಮ ಸಹನೆಯ ಪರೀಕ್ಷೆಯೂ ಆಗಬಹುದು.‌ ಉತ್ತಮ ಫಲಿತಾಂಶ ಇದರಿಂದ ಹೊರಬರಲಿದೆ. ಇನ್ನೊಬ್ಬರಿಗೆ ಕೊಟ್ಟ ಹಣವು ಸಕಾಲಕ್ಕೆ ಬಾದೆ ನೀವೇ ಸಾಲಗಾರರಾಗುವ ಪ್ರಸಂಗವು ಬಂದರೂ ಬಂದೀತು.

ಮಕರ: ಈ‌ ಮೊದಲೇ ನೀವು ನಿಲ್ಲಿಸಿದ ಯಾ ಕೆಲಸವು ಇಂದು ಪೂರ್ಣವಾಗುವುದು. ಕಚೇರಿಯಲ್ಲಿ ನೀವು ಅಧೀನ ಕಾರ್ಮಿಕರಿಂದ ಒತ್ತಡವನ್ನು ಅನುಭವಿಸುವಿರಿ. ಸಣ್ಣ ಸಣ್ಣ ವಿಷಯಗಳನ್ನು ತಪ್ಪಿಸುವುದು ಒಳ್ಳೆಯದು. ನಿಮಗಿಂದು ಶುಭ ದಿನವಾಗಿದೆ. ಆತ್ಮೀಯರೆಂದು ನಂಬಿ ಆಸ್ತಿ ಖರೀದಿಗೆ ಯತ್ನಿಸಿದ್ದೀರೆ ಅವರಿಂದಲೇ ವಂಚನೆ ಆಗಬಹುದು. ಸಾಧ್ಯವಾದಲ್ಲಿ ಪಾಲುದಾರಿಕೆಯ ಒಪ್ಪಂದವನ್ನು ರದ್ದು ಪಡಿಸಿಕೊಳ್ಳಿ. ಮುಂದೆ ನಿಮ್ಮ ಹಣಕ್ಕೆ ತೊಂದರೆ ಬರಲಿದೆ. ಭೂ ವ್ಯವಹಾರದಲ್ಲಿ ಕೈ ಹಾಕಲು ಹೋಗಲೇಬೇಡಿ. ಹೊಸದಾಗಿ ವೃತ್ತಿಗೆ ಸೇರಿದ ಯುವಕರಿಗೆ ವೃತ್ತಿಯಲ್ಲಿ ಗೊಂದಲ ಕಾಡಬಹುದು.

ಕುಂಭ: ಇಂದು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಹಳೆಯ ಸ್ನೇಹಿತರಿಂದ ನಿಮಗೆ ಸಹಾಯ ಸಿಗಲಿದೆ.‌ ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೆಗೆದುಕೊಳ್ಳವುದು ಬೇಡ. ಇಲ್ಲದಿದ್ದರೆ ನೀವು ದೊಡ್ಡ ಅನಾರೋಗ್ಯವನ್ನು ಎದುರಿಸಬೇಕಾಗಬಹುದು. ನೀವು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ವಾಹನವನ್ನು ಬಳಸುವುವಾಗ ಮುನ್ನೆಚ್ಚರಿಕೆ ಇರಲಿ. ಅವಸರದಲ್ಲಿ ತೆಗೆದುಕೊಂಡ ನಿರ್ಧಾರಗಳು ಮುಂದೆ ಅದೇ ಇರಬಹುದು. ಸ್ಪಷ್ಟವಾಗಿ ಕೈಗೊಳ್ಳಲಿರುವ ಕಾರ್ಯಗಳು ಹೊಸ ಸ್ವರೂಪವನ್ನು ಪಡೆಯಲಿವೆ. ಸರ್ಕಾರಿ ನೌಕರರಿಗೆ ಅದರಲ್ಲೂ ಉನ್ನತಾಧಿಕಾರಿಗಳಿಗೆ ಪದೋನ್ನತಿ ಆಗಬಹುದುದು.

ಮೀನ: ಇಂದು ಹೊಸ ಕೆಲಸಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನಗಳು ಶುಭವಾಗಲಿದೆ. ನೀವು ಯಾವುದೇ ಸಂದರ್ಭದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಇಲ್ಲವಾದರೆ ನಷ್ಟವಾಗಬಹುದು. ಕೆಲಸ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಮಗೆ ಮುಖ್ಯ. ಮಾನಸಿಕ ಚಂಚಲತೆ ವಿಪರೀತವಾಗುವುದರಿಂದ ಅದನ್ನು ಹತೋಟಿಯಲ್ಲಿಡುವಿರಿ. ನೆರೆಹೊರೆಯವರ ಜೊತೆ ಸೌಹಾರ್ದವಿರಲಿ ಬಾಂಧವ್ಯವಿರಲಿ. ಯಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡುವಿರಿ.

ಲೋಹಿತಶರ್ಮಾ – 8762924271 (what’s app only)

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More