ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರಾ, ಯೋಗ: ಶಿವ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:26 ರಿಂದ 09:53ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:20 ರಿಂದ 12:47 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:14 ರಿಂದ 03:41ರ ವರೆಗೆ.
ಮೇಷ ರಾಶಿ: ಕುಟುಂಬದ ಜವಾಬ್ದಾರಿಯನ್ನು ಅನಿವಾರ್ಯ ಕಾರಣಕ್ಕೆ ಪಡೆಯಬೇಕಾದೀತು. ಗುರಿಯನ್ನು ಸಾಧಿಸಿದ ಸಂಭ್ರಮವು ನಿಮಗೆ ಇರುವುದು. ಆಪ್ತರಿಗೆ ನಿಮ್ಮ ಮೇಲಿರುವ ಭಾವನೆಯು ಬದಲಾಗಬಹುದು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ನಿಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ಇರುವುದು. ದಿನದ ಆರಂಭದಲ್ಲಿ ಆಲಸ್ಯ ತೋರಿದರೂ ಅನಂತರ ಉತ್ಸಾಹದಿಂದ ಇರುವಿರಿ. ಆಕಸ್ಮಿಕ ದ್ರವ್ಯ ಲಾಭದಿಂದ ಖುಷಿ ಪಡುವಿರಿ. ನಿಮ್ಮ ಉಪಕರಣಗಳು ದುರಸ್ತಿಗೆ ಬರಬಹುದು. ಯೋಗ್ಯತೆಗೆ ಅನುಗುಣವಾದ ಕಾರ್ಯವನ್ನು ಒಪ್ಪಿಕೊಳ್ಳಿ. ಮೂರನೇ ವ್ಯಕ್ತಿಗಳ ಮೂಲಕ ಇಂದು ನಿಮ್ಮ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಮಕ್ಕಳ ಸ್ವಭಾವಕ್ಕೆ ಯಾರನ್ನಾದರೂ ಹೋಲಿಕೆ ಮಾಡುವಿರಿ. ಸಂಗಾತಿಯ ಮಾನಸಿಕತೆಯು ನಿಮಗೆ ಗೊತ್ತಾಗದು. ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವುದು ಬೇಡ.
ವೃಷಭ ರಾಶಿ: ನಿಮಗೆ ಸಿಕ್ಕ ಗೌರವವನ್ನು ಬೇರೆಯವರಿಗೆ ಬಿಟ್ಟುಕೊಡುವಿರಿ. ದೊಡ್ಡ ಯೋಜನೆಯು ಚೆನ್ನಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರಲು ಆಗದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಅವಕಾಶ ಸಿಗಬಹುದು. ಕುಟುಂಬದಲ್ಲಿ ಅಪಶ್ರುತಿಯನ್ನು ತೆಗೆದುಹಾಕಲು ನೀವು ಪ್ರಯತ್ನಿಸುತ್ತೀರಿ. ವಿದೇಶದಲ್ಲಿ ವಾಸಿಸುವವರಿಂದ ಶುಭವಾರ್ತೆ ಸಿಗುವುದು. ನಿಯಮಪಾಲನೆಯಲ್ಲಿ ನೀವು ನಿಸ್ಸೀಮರು. ಅನಾದರದಿಂದ ನಿಮಗೆ ಬೇಸರವಾದೀತು. ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿ ನೀವು ಇರುವಿರಿ. ಎಲ್ಲ ಸಮಸ್ಯೆಯೂ ನಿಮ್ಮದೇ ಎಂಬಂತೆ ಇರುವಿರಿ. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು. ಹೊಸತನಕ್ಕೆ ತೆರೆದುಕೊಳ್ಳುವ ಅಗತ್ಯತೆಯು ಇದೆ. ಮಕ್ಕಳ ವಿಚಾರದಲ್ಲಿ ನೀವು ತಿಳಿದುಕೊಳ್ಳಬೇಕಾದುದು ಬಹಳಷ್ಟು ಇವೆ. ಯಾರ ಮಾತಿನಲ್ಲಿಯೂ ನಿಮಗೆ ನಂಬಿಕೆ ಬಾರದು.
ಮಿಥುನ ರಾಶಿ: ನೀವು ಇಂದು ದೊಡ್ಡ ಗುರಿಯತ್ತ ಸಾಗುವಿರಿ. ಚಿಂತನಾತ್ಮಕ ಕೆಲಸದಲ್ಲಿ ನೀವು ಆಸಕ್ತಿ ಹೊಂದಿರುತ್ತೀರಿ. ಹೊಸ ವ್ಯವಹಾರದ ಪ್ರಸ್ತಾಪವು ನಿಮಗೆ ಒಪ್ಪಿಗೆ ಆದೀತು. ನೀವು ಪಾಲುದಾರಿಕೆಯಲ್ಲಿಯೇ ಇರಲು ಇಷ್ಟಪಡುವಿರಿ. ಯಾವುದೇ ವಸ್ತುವನ್ನು ಕಳೆದುಕೊಂಡರೆ ಅದನ್ನು ಪಡೆಯುವ ಬಯಕೆ ಅತಿಯಾಗಿ ಇರುವುದು. ಭೂವ್ಯವಹಾರದ ಪ್ರಸ್ತಾಪವು ಕುಟುಂಬದಲ್ಲಿ ನಡೆಯಬಹುದು. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ. ಅತಿಯಾದ ಬುದ್ಧಿವಂತಿಕೆಯನ್ನು ತೋರಿಸುದು ಬೇಡ. ಅಪಾಯವು ನಿಮ್ಮ ಕಡೆಗೆ ತಿರುಗೀತು. ಕ್ರಿಯಾಶೀಲತೆಯನ್ನು ನೀವು ಬಿಟ್ಟಿರುವುದು ನಿಮ್ಮ ಮನಸ್ಸಿಗೆ ಬರಲಿದೆ. ನೂತನ ವಸ್ತುಗಳಿಂದ ನಿಮಗೆ ಇಂದು ಸಂತೋಷವು ಸಿಗುವುದು. ನಿಮ್ಮ ವ್ಯವಹಾರವು ಇಂದು ಪೂರ್ಣವಾಗಲಾರದು. ಅನಿರೀಕ್ಷಿತ ಸಂಪತ್ತನ್ನು ತಂದೆಯಿಂದ ಪಡೆಯುವಿರಿ.
ಕಟಕ ರಾಶಿ: ನಿಮ್ಮ ಅತಿಯಾದ ಆತ್ಮವಿಶ್ವಾಸವೂ ನಿಮಗೇ ತೊಂದರೆಯನ್ನು ಉಂಟುಮಾಡೀತು. ಎಲ್ಲರಿಂದ ಹೇಳಿಸಿಕೊಳ್ಳುವಿರಿ. ಅಚಾತುರ್ಯದಿಂದ ಆದ ತಪ್ಪನ್ನು ನೀವು ಸರಿ ಮಾಡಲು ಪ್ರಯತ್ನಿಸುವಿರಿ. ನಿಮ್ಮಲ್ಲಿ ಸಮೃದ್ಧಿಯು ಇರಲಿದೆ. ಎಲ್ಲರ ಜೊತೆ ಬೆರೆಯುವ ಮನಸ್ಸಿದ್ದರೂ ನಿಮ್ಮನ್ನು ಸ್ವೀಕರಿಸರು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ. ಕೃತಿಯಿಂದ ತೋರಿಸಿ. ಮನೆಯಿಂದ ನಿಮಗೆ ಶುಭಸಂದೇಶದ ಆಗಮನವಾಗಲಿದೆ. ಸಹೋದ್ಯೋಗಿಗಳ ಬೆಂಬಲವು ಉದ್ಯೋಗದಲ್ಲಿ ಸಿಗಲಿದೆ. ಅವಸರದ ನಿರ್ಧಾರವನ್ನು ಮಾಡಲುಹೋಗುವುದು ಬೇಡ. ನಿಮ್ಮ ಮಾತು ಮಿತಿಯನ್ನೂ ಮೀರಬಹುದು. ಹೂಡಿಕೆಯ ಚಿಂತನೆಯನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಪಕ್ಷಪಾತ ಮನಃಸ್ಥಿತಿಯು ನಿಮಗೆ ಶೋಭೆ ತರದು. ಈ ದಿನವನ್ನು ಕಳೆಯಲು ನೀವು ನಾನಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಒಂಟಿತನವು ನಿಮಗೆ ಇಷ್ಟವಾಗದು.