Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 30ರ ದಿನಭವಿಷ್ಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 29, 2024 | 6:27 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 30ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 30ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 30ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮಗೆ ಕುತ್ತಿಗೆ ತನಕ ಬಂದ ಕೋಪವನ್ನು ತಡೆದುಕೊಂಡು, ಕೆಲವು ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ಒಂದೋ ವಿಷಯವನ್ನು ಅರ್ಥ ಮಾಡಿಕೊಳ್ಳದ ಅಥವಾ ಸನ್ನಿವೇಶಕ್ಕೆ ಸರಿಯಾಗಿ ಸ್ಪಂದಿಸದ ಕೆಲವರ ಜತೆಗೆ ವ್ಯವಹರಿಸಲೇ ಬೇಕಾದ ಒತ್ತಡಕ್ಕೆ ನೀವು ಸಿಲುಕಿಕೊಳ್ಳಲಿದ್ದೀರಿ. ನಿಮ್ಮ ಮೇಲೆ ವಿಪರೀತ ಅವಲಂಬಿತರಾದ ಕೆಲವು ಸ್ನೇಹಿತರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಶ್ರಮವಾಗಿ ಪರಿಣಮಿಸಲಿದೆ. ಇನ್ನು ಯಾರು ಸ್ವಂತ ವೃತ್ತಿ, ವ್ಯವಹಾರ ಅಥವಾ ವ್ಯಾಪಾರವನ್ನು ಮಾಡುತ್ತಿರುವಿರೋ ಅಂಥವರಿಗೆ ದೊಡ್ಡ ದೊಡ್ಡ ಅವಕಾಶಗಳು ಕಾಣಿಸುವಂತಾಗುತ್ತದೆ. ಅದೇ ವೇಳೆ ಆ ಕಡೆಗೆ ಗಮನವಿಟ್ಟು ಕಾರ್ಯ ನಿರ್ವಹಿಸುವುದು ಸವಾಲಾಗಿ ಪರಿಣಮಿಸುತ್ತದೆ. ಈ ದಿನ ನೀವು ನೋ ಪಾರ್ಕಿಂಗ್, ಒನ್ ವೇ ಅಥವಾ ಸಿಗ್ನಲ್ ಜಂಪ್ ಇಂಥ ಕಾರಣಗಳಿಗಾಗಿ ದಂಡ ಕಟ್ಟಬೇಕಾಗುತ್ತದೆ, ಎಚ್ಚರಿಕೆಯಿಂದ ಇರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಈ ದಿನ ಇತರರ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತೀರಿ ಅಥವಾ ಅವರ ಪರವಾಗಿ ಮಾತುಕತೆಯನ್ನು ಮಾಡುತ್ತೀರಿ ಎಂದಾದಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳು ಬಹಳ ಹೆಚ್ಚಿದೆ. ನಿಮ್ಮ ಪ್ರಭಾ ವಲಯ ವಿಸ್ತರಣೆ ಆಗಲಿದೆ. ಮಕ್ಕಳ ಸಲುವಾಗಿ ವಾಹನಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇನ್ನು ಅವರ ಸಲುವಾಗಿ ಪ್ರವಾಸಗಳ ಯೋಜನೆಯನ್ನು ರೂಪಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಬಸ್, ರೈಲು, ವಿಮಾನದಲ್ಲಿ ಸೀಟ್ ಇಂಥದ್ದನ್ನು ಬುಕ್ ಮಾಡಬಹುದು ಅಥವಾ ಪ್ಯಾಕೇಜ್ ಪ್ರವಾಸಗಳನ್ನು ಸಹ ಬುಕ್ ಮಾಡುವಂಥ ಸಾಧ್ಯತೆಗಳು ಈ ದಿನ ಇದೆ. ಸಂಗಾತಿಯ ಕಡೆ ಸಂಬಂಧಿಕರು ಸಹಾಯ ಕೇಳಿಕೊಂಡು ಬರಬಹುದು. ನಿಮ್ಮಲ್ಲಿ ಕೆಲವರು ಈಗ ಮಾಡುತ್ತಿರುವ ಉದ್ಯೋಗ, ವೃತ್ತಿ ಅಥವಾ ವ್ಯಾಪಾರದ ಜತೆಗೆ ಇನ್ನೊಂದು ವ್ಯವಹಾರ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮಗೆ ಸಮಸ್ಯೆ ಮಾಡುತ್ತಿರುವವರು ಯಾರು, ವ್ಯವಹಾರಗಳಲ್ಲಿ ಅಡೆತಡೆಗಳನ್ನು ಒಡ್ಡುತ್ತಿರುವವರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಎಂದು ಆಲೋಚಿಸುವುದಕ್ಕೇ ಅಂತ ಬಹಳ ಸಮಯ ಹೋಗಿಬಿಡುತ್ತದೆ. ನಿಮ್ಮ ಜತೆಗಿರುವವರು ಹಾಗೂ ಆಪ್ತರಾಗಿರುವವರು, ಕಡೆಗೆ ಕುಟುಂಬ ಸದಸ್ಯರ ಬಗ್ಗೆಯೇ ನಾನಾ ರೀತಿಯಲ್ಲಿ ಆಲೋಚನೆಗಳು ಮೂಡಲಿವೆ. ನಿಮಗೆ ಬರುವಂಥ ಕೆಲಸಗಳು, ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡುವುದು ಉತ್ತಮ. ಒಮ್ಮೆ ಹೂಂ ಎಂದು ಒಪ್ಪಿಕೊಂಡ ಮೇಲೆ ಹಲವು ಬದಲಾವಣೆಗಳನ್ನು ಹೇಳುವ ಮೂಲಕ ಒತ್ತಡವನ್ನು ಹೇರಬಹುದು. ದಿನಂಪ್ರತಿ ನೋಡುವಂಥ ಹಾಗೂ ವ್ಯವಹರಿಸುವಂಥ ವ್ಯಕ್ತಿಗಳಲ್ಲೇ ದೊಡ್ಡ ಬದಲಾವಣೆಗಳನ್ನು ನೋಡುವಂತಾಗುತ್ತದೆ. ಹಣಕಾಸಿನ ವ್ಯವಹಾರ ಎಂದಾದರೆ ಮೈ ತುಂಬ ಎಚ್ಚರಿಕೆ ಇರಲಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಎಲ್ಲ ವಿಚಾರಗಳಿಗೆ, ಸಂಗತಿಗಳಿಗೆ ಮೂಗು ತೂರಿಸಿಕೊಂಡು ಬರುತ್ತಿದ್ದ ಅಥವಾ ಬರುತ್ತಿರುವ ವ್ಯಕ್ತಿಯೊಬ್ಬರಿಗೆ ಮುಲಾಜಿಲ್ಲದೆ ಎಚ್ಚರಿಕೆಯನ್ನು ನೀಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಯಾವುದೋ ಸಂಕೋಚದಿಂದ ಹೇಳದೇ ಉಳಿದ ಸಂಗತಿಗಳನ್ನು ಏಕಾಏಕಿ ಹೇಳಿ ಮುಗಿಸಲಿದ್ದೀರಿ. ನಿಮ್ಮಲ್ಲಿ ಯಾರು ಪ್ರೀತಿ- ಪ್ರೇಮ ವಿಚಾರಗಳನ್ನು ಹೇಳಬೇಕು ಎಂದುಕೊಳ್ಳಲೇ ಬೇಕು ಎಂದಿರುವಿರೋ ಅಂಥವರಿಗೆ ಅಂಥದ್ದೊಂದು ಅವಕಾಶ ಸೃಷ್ಟಿ ಆಗಲಿದೆ. ಮೊದಮೊದಲಿಗೆ ಹಿಂಜರಿಕೆ ಹಾಗೂ ಆತಂಕ ಎಂದೆನಿಸಿದರೂ ಕೊನೆ ಕ್ಷಣದಲ್ಲಿ ಒಂದು ಬಗೆಯ ಧೈರ್ಯ ಮೂಡಿ, ಹೇಳಿಕೊಳ್ಳುವಿರಿ. ಆರೋಗ್ಯದಲ್ಲಿ ಸಮಸ್ಯೆಗಳೇನಾದರೂ ಕಾಡುತ್ತಿದ್ದಲ್ಲಿ ಅದು ಕೂಡ ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಒಂದು ವೇಳೆ ಕೋರ್ಟ್ ವ್ಯಾಜ್ಯಗಳು ನಿಮ್ಮನ್ನು ಕಾಡುತ್ತಿದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಮಾರ್ಗ ತೋಚಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮಗೆ ಬಹಳ ಇಷ್ಟವಾಗುವಂಥ ವ್ಯಕ್ತಿಯ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಕಿರು ಪ್ರವಾಸಕ್ಕಾದರೂ ತೆರಳುವಂಥ ಯೋಗ ಇದೆ. ಇಲ್ಲದಿದ್ದಲ್ಲಿ ಹೋಟೆಲ್, ರೆಸ್ಟೋರೆಂಟ್ ಇಂಥ ಕಡೆಗಳಲ್ಲಿಯಾದರೂ ಒಟ್ಟಿಗೆ ಸಮಯ ಕಳೆಯುವ ಯೋಗ ಇದೆ. ಇನ್ನು ಈಗಾಗಲೇ ಪ್ರೀತಿ- ಪ್ರೇಮದಲ್ಲಿ ಒಡುಕು ಮೂಡಿ, ಸಣ್ಣ- ಪುಟ್ಟ ಮನಸ್ತಾಪ- ಅಭಿಪ್ರಾಯ ಭೇದಗಳು ಏನಾದರೂ ಕಾಣಿಸಿಕೊಂಡಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ನೀವಾಗಿಯೇ ತೆಗೆದುಕೊಂಡಂಥ ಜವಾಬ್ದಾರಿಗಳನ್ನು ತುಂಬ ಚೆನ್ನಾಗಿ ನಿರ್ವಹಣೆ ಮಾಡಲಿದ್ದೀರಿ. ನಿಮ್ಮೆದುರಿಗೆ ನಿಂತು ವ್ಯವಹಾರದ ವಿಚಾರಕ್ಕೆ ದಾರಿ ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂಬಷ್ಟು ಕಟ್ಟುನಿಟ್ಟಾಗಿ ನೀವು ನಡೆದುಕೊಳ್ಳಲಿದ್ದೀರಿ. ಕಫ- ಶೀತ ಮೊದಲಾದ ಸಮಸ್ಯೆಗಳು ಕಾಡಬಹುದು, ಜಾಗ್ರತೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನನ್ನ ಮಾತಿಗೆ ಯಾವ ಮಹತ್ವ ಇದೆ ಎಂದುಕೊಂಡು ಇಷ್ಟು ಸಮಯ ನೀವೇನಾದರೂ ಇದ್ದಲ್ಲಿ ಈ ದಿನ ಅಭಿಪ್ರಾಯವನ್ನೇ ಬದಲಿಕೊಳ್ಳುವಂಥ ಬೆಳವಣಿಗೆಗಳು ಆಗಲಿವೆ. ಯಾರು ನಿಮ್ಮ ಬಗ್ಗೆ ಲಘುವಾಗಿ ಪರಿಗಣಿಸಿರುತ್ತಾರೋ ಅಂಥವರಿಗಂತೂ ಭಾರೀ ಅಚ್ಚರಿ ಮೂಡುವಂತೆ ಆಗುತ್ತದೆ. ಒಂದು ವೇಳೆ ನೀವೇನಾದರೂ ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ನೀವು ನಿರೀಕ್ಷೆ ಮಾಡಿದಂಥ ಅಥವಾ ನಿಮ್ಮಲ್ಲಿ ಕೆಲವರಿಗೆ ನಿರೀಕ್ಷೆಯನ್ನು ಮೀರಿ ಬೆಲೆಯು ದೊರೆಯಬಹುದು. ಅಚಾನಕ್ ಸಿಗುವಂತಹ ಹಳೆಯ ಸ್ನೇಹಿತರು ಹೇಳುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ. ಅವರೇನಾದರೂ ವ್ಯಾಪಾರ ಅಥವಾ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಅವಕಾಶಗಳ ಬಗ್ಗೆ ತಿಳಿಸಿದಲ್ಲಿ ಆ ಬಗ್ಗೆ ಕೂಡಲೇ ಸ್ಪಂದಿಸಿ. ಯಾವುದೇ ಕಾರಣಕ್ಕೂ ಆಮೇಲೆ ಮಾಡಿದರಾಯಿತು, ನೋಡಿದರಾಯಿತು ಎಂಬ ಧೋರಣೆಯನ್ನು ತೋರಿಸಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ದಿನ ಬಿಡುವೇ ಸಿಗದಷ್ಟರ ಮಟ್ಟಿಗೆ ಕೆಲಸಗಳು ಮೈ ಮೇಲೆ ಬೀಳಲಿವೆ. ಅದರ ಜತೆಗೆ ನೀವು ಪಡುವಂಥ ಶ್ರಮಕ್ಕೆ ತಕ್ಕ ಪ್ರತಿಫಲವೂ ದೊರೆಯಲಿದೆ. ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಲೆಟ್ ಅಥವಾ ಇಂಥ ಯಾವುದಾದರೂ ವಸ್ರುವನ್ನು ಈ ದಿನ ಕೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ. ಕ್ರೆಡಿಟ್ ಕಾರ್ಡ್ ಬಳಸಿಯೋ ಅಥವಾ ಇಎಂಐ ಆಗಿ ಕನ್ವರ್ಟ್ ಮಾಡಿಸಿಯೋ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ನೆನಪಿನಲ್ಲಿಡಿ, ಸಾಲ ದೊರೆಯುತ್ತದೆ ಅಥವಾ ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದೆ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯವನ್ನು ಮೀರಿ, ಖರೀದಿ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಅಥವಾ ಕುಟುಂಬದಲ್ಲಿನ ಕಿರಿಯರ ಶಿಕ್ಷಣದ ವಿಚಾರ ವಿಪರೀತ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ನೀವೇ ಸಾಲ ಮಾಡಬೇಕಾಗಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮಲ್ಲಿ ಯಾರಿಗೆ ಆಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುತ್ತದೋ ಅಂಥವರಿಗೆ ಅದು ಉಲ್ಬಣಿಸುವ ಸಾಧ್ಯತೆ ಸಿಕ್ಕಾಪಟ್ಟೆ ಇದೆ. ಮುಖ್ಯವಾಗಿ ನಿಮಗೆ ಯಾವ ಆಹಾರ ಪದಾರ್ಥವು ಅಲರ್ಜಿಯೋ ಅಂಥ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು. ಈ ದಿನ ನಿಮ್ಮ ಬಾಯಿಯ ಕಾರಣಕ್ಕೆ ಸಮಸ್ಯೆಯನ್ನು ಮಾಡಿಕೊಳ್ಳಲಿದ್ದೀರಿ. ಅದು ಬಾಯಿ ಚಪಲಕ್ಕೆ ಬಿದ್ದು, ವಿಪರೀತ ರುಚಿರುಚಿಯಾದದ್ದನ್ನು ಸೇವಿಸಿ ಸಮಸ್ಯೆ ಮಾಡಿಕೊಳ್ಳುತ್ತೀರೋ ಅಥವಾ ಆಡಬಾರದ ಮಾತು ಹಾಗೂ ಆಡಬಾರದ ಸ್ಥಳದಲ್ಲಿ ಆಡಿ, ತೊಂದರೆ ಮೈ ಮೇಲೆ ಎಳೆದುಕೊಳ್ಳುತ್ತೀರೋ ಒಟ್ಟಿನಲ್ಲಿ ನೆಮ್ಮದಿಯಂತೂ ಇಲ್ಲದಂತಾಗುತ್ತದೆ. ಇನ್ನು ಕೆಲವರಿಗೆ ಕೂದಲು ಹಾಗೂ ಚರ್ಮಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಡಬಹುದು. ಅಥವಾ ನೀವು ಈಗಾಗಲೇ ತೆಗೆದುಕೊಂಡ ಔಷಧಿಯಿಂದ ಸಮಸ್ಯೆ ಇನ್ನೂ ವಿಪರೀತಕ್ಕೆ ಹೋಗಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೆ ಈ ದಿನ ಬಹಳ ಸಮಾಧಾನ ದೊರೆಯುವಂಥ ದಿನವಾಗಿರುತ್ತದೆ. ಒಂದು ವೇಳೆ ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ನಿಮಗೆ ತೃಪ್ತಿ ದೊರೆಯುವಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಬಹುದು. ಇತರರು ಬಹಳ ಕಷ್ಟಪಟ್ಟು ಮಾಡುತ್ತಿರುವ ಅಥವಾ ಮಾಡುವಂಥ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲಿದ್ದೀರಿ. ನಿಮ್ಮಲ್ಲಿ ಯಾರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಇತರರ ಸಹಾಯದ ಅಥವಾ ಶಿಫಾರಸಿನ ಮೂಲಕ ಸುಲಭವಾಗಿ ಕೆಲಸಗಳು ಆಗಬಹುದು. ಇನ್ನು ಯಾರು ಮನೆಯಲ್ಲಿ ಕೆಲವು ಸಿವಿಲ್ ಕೆಲಸಗಳನ್ನು ಮಾಡಿಸಬೇಕು ಅಂದುಕೊಳ್ಳುತ್ತೀರೋ ಅಂಥವರಿಗೆ ಉತ್ತಮ ಕೆಲಸಗಾರರ ಪರಿಚಯವಾಗಿ, ನೀವು ಅಂದುಕೊಂಡಿದ್ದಕ್ಕಿಂತ ಕಡಿಮೆ ಮೊತ್ತದಲ್ಲಿ ಕೆಲಸ ಮುಗಿಯಲಿಕ್ಕೆ ಮಾರ್ಗ ಗೋಚರ ಆಗಲಿದೆ.

ಲೇಖನ- ಎನ್‌.ಕೆ.ಸ್ವಾತಿ