
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ರೋಹಿಣೀ, ವಾರ : ಮಂಗಳ ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಮೂಲಾ, ಯೋಗ : ಸಿದ್ಧ, ಕರಣ : ಗರಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 48 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:36 – 17:12, ಯಮಗಂಡ ಕಾಲ 09:09 – 10:46, ಗುಳಿಕ ಕಾಲ 12:22 – 13:59
ಮೇಷ ರಾಶಿ: ಇಂದು ನಿಮ್ಮ ಆದಾಯದ ಮೂಲಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆಸ್ತಿಯಿಂದ ಲಾಭ ಉಂಟಾಗಲಿದೆ. ಏಕಾಭಿಪ್ರಾಯದಿಂದ ಒಂಟಿಯಾಗಬೇಕಾಗುವುದು. ಹಣದ ವಿಷಯಗಳಲ್ಲಿ ಯಾರನ್ನೂ ಹೆಚ್ಚು ನಂಬಬೇಡಿ. ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತೀರಿ, ಆದರೆ ತಾಳ್ಮೆಯೇ ನಿಮ್ಮ ಅಸ್ತ್ರವಾಗಬೇಕು. ಉತ್ತರಿಸಲು ಹೋಗದೇ ಅಲೆಗಳು ಶಾಂತವಾಗುವವರೆಗೆ ಸುಮ್ಮನಿರಿ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು.
ವೃಷಭ ರಾಶಿ: ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾದ ಅವಶ್ಯಕತೆಯಿದೆ. ಕೆಲಸ ಚುರುಕುಗೊಳ್ಳಬೇಕು ಮತ್ತು ಇದರಿಂದ ನಿಮಗೆ ಬೆಂಬಲವೂ ಸಿಗುತ್ತದೆ. ನಿಮ್ಮ ಮಾತಿಗೆ ಅಪಾರ್ಥದ ಲೇಪ ಅಂಟಿಕೊಳ್ಳಬಹುದು. ದೂರ ಪ್ರಯಾಣದ ಸಾಧ್ಯತೆ ಇರಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುತ್ತದೆ. ಅಧಿಕಾರಿಗಳೂ ನಿಮಗೆ ಬೆಂಬಲ ನೀಡುತ್ತಾರೆ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಧೈರ್ಯವನ್ನು ಹೇಳುವಿರಿ.
ಮಿಥುನ ರಾಶಿ: ಭೂಮಿಯ ಪಾಲನೆಯನ್ನು ಮಾಡಿಕೊಕೊಂಡು ಹೋಗುವುದು ನಿಮಗೆ ಕಷ್ಟವಾಗುವುದು. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಕೆಟ್ಟ ಕೆಲಸವನ್ನು ಮಾಡಿ ಸಂಭಾವಿತರಂತೆ ತೋರಿಸಿಕೊಳ್ಳುವಿರಿ. ವೃತ್ತಿಪರ ಕೆಲಸಗಳಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕೆಲಸದಲ್ಲಿಯೂ ಅತ್ಯುತ್ತಮ ಸಾಧನೆ ಇರುತ್ತದೆ. ದಿನವು ಅನುಕೂಲಕರವಾಗಿದೆ. ಕಾಲಹರಣಕ್ಕಾಗಿ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ.
ಕರ್ಕಾಟಕ ರಾಶಿ: ಸಣ್ಣ ಖರ್ಚುಗಳಿಗೆ ಸ್ವಂತ ಹಣವನ್ನು ಬಳಸಿ, ಪರರ ಸಹಾಯ ಬೇಡ. ಸ್ಥಾನಮಾನಕ್ಕಾಗಿ ಮುಸುಕಿನ ಗುದ್ದಾಟ ನಡೆಯಬಹುದು. ನಿಮ್ಮ ಮೇಲೆ ನಿಮಗೆ ವಿಶ್ವಾಸವಿದ್ದರೆ, ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಕುಟುಂಬದಿಂದ ನಿಮಗೆ ಬೆಂಬಲ ಸಿಗುತ್ತದೆ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ನಡೆದಂತೆ ನುಡಿಯುವುದು ನಿಮಗೆ ಕಷ್ಟವಾಗುವುದು. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು.
ಸಿಂಹ ರಾಶಿ: ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಂಟುವ ಕುದುರೆ ವೇಗವಾಗಿ ಸಾಗದು. ಕೆಲಸದಲ್ಲಿನ ಅಡೆತಡೆಗಳು ಕೊನೆಗೊಳ್ಳುತ್ತವೆ. ನೀವು ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಮತ್ತು ನಿಮ್ಮ ಆದಾಯವು ಸುಧಾರಿಸುತ್ತದೆ. ಭೂಮಿಗೆ ಸಂಬಂಧಿಸಿದ ಪ್ರಯೋಜನಗಳ ಸಾಧ್ಯತೆ ಇದೆ. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು.
ಕನ್ಯಾ ರಾಶಿ: ಕೋಪವನ್ನು ಹತೋಟಯಲ್ಲಿ ಇಟ್ಟುಕೊಳ್ಳಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಇಂದು ನಿಮ್ಮ ಲಾಭದ ಸಮಯ ಉರುಳಿಹೋಗಬಹುದು. ನೀವು ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ ಮತ್ತು ಸಕಾರಾತ್ಮಕವಾಗಿ ಉಳಿಯುತ್ತೀರಿ. ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ. ಯಾವ ಉದ್ಯಮವನ್ನೂ ನೀವು ಹಗುರಾಗಿ ಕಾಣುವುದು ಬೇಡ. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖವಾಗುವ ಸಂದರ್ಭವಿದೆ.
ತುಲಾ ರಾಶಿ: ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ಪರರನ್ನು ನೋಡಿ ಇರುವ ವಸ್ತುವಿನಲ್ಲಿ ಸುಖಪಡಲಾರಿರಿ. ನಿಮ್ಮ ಸಂಗಾತಿಯೊಂದಿಗಿನ ವಿವಾದಗಳು ಕೊನೆಗೊಳ್ಳುತ್ತವೆ. ಚಿಂತೆಗಳು ಕೊನೆಗೊಳ್ಳುತ್ತವೆ ಮತ್ತು ಹಣ ಸಿಗುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಹೊಸ ಕೆಲಸಗಳು ದೊರೆಯುತ್ತವೆ. ಅನಿರೀಕ್ಷಿತ ವಾರ್ತೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ಉದ್ಯೋಗದಿಂದ ತೆಗೆದುಹಾಕುವ ಭೀತಿಯು ನಿಮ್ಮನ್ನು ಕಾಡಬಹುದು.
ವೃಶ್ಚಿಕ ರಾಶಿ: ನಿಮ್ಮ ಮಾತು ಆದಷ್ಟು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ವಿದೇಶಕ್ಕೆ ಪ್ರಯಾಣಕ್ಕೆ ಸಂಬಂಧಿತ ಸಮಸ್ಯೆಗಳು ಬಗೆಹರಿಯುತ್ತವೆ. ಅಪಾಯದ ಮುನ್ಸೂಚನೆಯನ್ನು ಅಲ್ಲಗಳೆಯುವುದು ಬೇಡ. ಸಹೋದರಿಯರ ಭೇಟಿಯು ನಿಮಗೆ ಸಂತೋಷ ಕೊಡುವುದು. ಕೆಲವೊಮ್ಮೆ ನೀವೇ ಸಮಸ್ಯೆಯನ್ನು ತಂದುಕೊಂಡು ಕಷ್ಟಪಡುವಿರಿ.
ಧನು ರಾಶಿ: ನಿಮ್ಮ ಆರ್ಥಿಕ ನೆಲೆ ಬಲವಾಗಿ ಉಳಿಯುತ್ತದೆ. ವಿಶೇಷ ಆತಿಥ್ಯವನ್ನು ನೀವಿಂದು ಪಡೆದು ಖುಷಿಪಡುವಿರಿ. ಯೋಜನೆಗಳು ಯಶಸ್ವಿಯಾಗುತ್ತವೆ, ಚಿಂತನಶೀಲವಾಗಿ ಕೆಲಸ ಮಾಡಿ ಮತ್ತು ತಾಳ್ಮೆಯಿಂದ ಕೆಲಸ ಮಾಡಿ. ನಿಮ್ಮ ಪ್ರತಿಭೆಗೆ ಸ್ಥಳ ಹುಡುಕುವಿರಿ. ವಾಹನದ ವಿಚಾರದಲ್ಲಿ ನಿಮಗೆ ಗೊಂದಲ ನಿವಾರಣೆಯಾಗದು. ಇಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು.
ಮಕರ ರಾಶಿ: ಅನಾರೋಗ್ಯದ ಕಾರಣಕ್ಕಾಗಿ ಅಧಿಕ ಖರ್ಚು ಆಗಲಿದೆ. ಮಾನಸಿಕವಾದ ಉಲ್ಲಾಸವಿರಲಿದೆ. ಆರ್ಥಿಕ ಸಂಕಷ್ಟದಿಂದ ಕೆಲವು ಕೆಲಸವನ್ನು ಮುಂದೂಡುವಿರಿ. ಕಠಿಣ ಪರಿಶ್ರಮದಿಂದ ನೀವು ಎಲ್ಲರಿಗಿಂತ ಮುಂದೆ ಸಾಗುತ್ತೀರಿ. ನಿಮ್ಮ ಯೋಜನೆ ಉತ್ತಮವಾಗಿರುತ್ತದೆ. ಹೊಸ ಅವಕಾಶ ಸಿಗುವ ಸಾಧ್ಯತೆ ಇದೆ. ನೀವು ತಾಳ್ಮೆ ಮತ್ತು ತಿಳುವಳಿಕೆಯಿಂದ ವರ್ತಿಸಬೇಕಾಗುತ್ತದೆ. ಭೂಮಿಯ ಮೇಲೆ ಹೂಡಿಕೆ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು.
ಕುಂಭ ರಾಶಿ: ಸಂಗಾತಿಯ ಜೊತೆ ಆಪ್ತವಾಗಿ ಮಾತನಾಡಲು ಇಷ್ಟವಾಗದು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಿದರೆ ಫಲಿತಾಂಶ ಉತ್ತಮ. ಸೌಹಾರ್ದ ಮಾತುಕತೆಗಳಿಂದ ವಿವಾದ ಇತ್ಯರ್ಥವಾಗಲಿದೆ. ಮನೆಯವರ ಜೊತೆ ಸಮಯ ಕಳೆಯುವ ಅವಕಾಶ ಸಿಗಬಹುದು. ಆರ್ಥಿಕವಾಗಿ ಸ್ಥಿರತೆ ಇದೆ, ಆದರೆ ಅಪರೂಪದ ಖರ್ಚುಗಳಿಗೆ ಸಿದ್ಧರಾಗಿ. ಇನ್ನೊಬ್ಬರ ಮೇಲೆ ನಿಮಗರ ಪಶ್ಚಾತ್ತಾಪಭಾವ ಬರುವುದು. ಸಮಯಕ್ಕೆ ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ.
ಮೀನ ರಾಶಿ: ನಿಮ್ಮ ಕೆಲಸದ ಮೇಲೆ ಮಾತ್ರ ನೀವು ಗಮನಹರಿಸಿದರೆ ಉತ್ತಮ. ಒತ್ತಡದಲ್ಲಿ ಅನ್ವೇಷಣೆ ಆಗಿರಬರದು. ಕೆಲವೊಂದು ಬಲವಾದ ನಿರ್ಧಾರಗಳು ತೆಗೆದುಕೊಳ್ಳಬೇಕಾದ ಗೊಂದಲದ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ತಾಳ್ಮೆಯೊಂದಿಗೆ ನಿರ್ಧಾರ ಮಾಡಿ, ತಕ್ಷಣದ ಪ್ರತಿಕ್ರಿಯೆ ಬೇಡ. ಕೆಲವೊಂದು ಸ್ನೇಹಿತರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು, ಹಿರಿಯರ ಸಲಹೆಯನ್ನು ಒಡೆಯಿರಿ. ಮಕ್ಕಳ ಮೇಲೆ ನಿಮಗೆ ಅತಿಯಾದ ಮೋಹ ಬೇಡ.
ಲೋಹಿತ ಹೆಬ್ಬಾರ್-8762924271 (what’s app only)