ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 21 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ , ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03 ರಿಂದ 12:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:50 ರಿಂದ 09:26ರ ವರೆಗೆ.
ಸಿಂಹ: ಚರಾಸ್ತಿಯನ್ನು ಕಳೆದುಕೊಳ್ಳುವಿರಿ. ನಿಮ್ಮ ನಿಗದಿತ ಸಮಯವು ವ್ಯತ್ಯಾಸವಾಗಿ ಕಾರ್ಯಕ್ರಮವೂ ಬದಲಾಗಲಿದೆ. ಉದ್ವಿಗ್ನತೆಗೆ ಎಡಮಾಡಿಕೊಡದೇ ಸಮಾಧಾನಚಿತ್ತದಿಂದ ಇರುವುದನ್ನು ಕಲಿಯಬೇಕಾದೀತು. ನೌಕರರ ವಿಷಯದಲ್ಲಿ ಸಿಟ್ಟಾಗುವ ಸಾಧ್ಯತೆ ಇದೆ. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ. ಪ್ರಯತ್ನವನ್ನು ಮಾಡಿ, ಫಲವನ್ನು ಪಡೆಯುವಿರಿ. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು. ಸಮಯೋಚಿತ ಉತ್ತರಗಳು ನಿಮಗೆ ಧನಾತ್ಮಕ ಅಂಕಗಳನ್ನು ತಂದುಕೊಡುವುದು. ನಿಮ್ಮ ವರ್ತನೆಗಳು ಇತರರಿಗೆ ಮಾದರಿಯಾಗಬಹುದು.
ಕನ್ಯಾ: ಮಾನಸಿಕವಾಗಿ ಬಳಲಲಿದ್ದೀರಿ. ದೈಹಿಕ ಸಾಮರ್ಥ್ಯದಿಂದ ಕುಗ್ಗಿರುವಿರಿ. ಜೀವನದಲ್ಲಿ ಬದಲಾವಣೆಯನ್ನು ಬಯಸುವಿರಿ. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ವಿದ್ಯಾರ್ಥಿಗಳು ತೀರ್ಮಾನಿಸಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ಗೊಂದಲವಿರಲಿದೆ. ಸಂಬಂಧಗಳಲ್ಲಿ ನಿಮಗೆ ಅಪನಂಬಿಕೆ ಉಂಟಾಗಬಹುದು. ನಿಮ್ಮ ಮೇಲೆ ಅಪವಾದಗಳು ಬರುವ ಸಾಧ್ಯತೆ ಇದೆ. ರಾಜಕೀಯದಲ್ಲಿ ನೀವು ಸಿಕ್ಕಿಕೊಳ್ಳುವಿರಿ. ವಿದೇಶದಲ್ಲಿ ಇದ್ದವರಿಗೆ ಸಂಕಟವಾಗಲಿದೆ. ನೂತನ ವಾಹನವನ್ನು ಖರೀದಿಸುವಿರಿ. ವಾತಾವರಣದಿಂದ ನಿಮಗೆ ಮನಸ್ಸು ಹಾಳಾಗಬಹುದು.
ತುಲಾ: ಹೊಸ ಸ್ಥಳಗಳನ್ನು ನೀವು ನೋಡಲು ನಿಮಗೆ ಇಷ್ಟವಾಗಲಿದೆ. ಸಮಯಪಾಲನೆಗೆ ನೀವು ಹೆಚ್ಚು ಒತ್ತನ್ನು ಕೊಡುವಿರಿ. ನೀರಿನಿಂದ ಇಂದು ಭಯವಾಗುವ ಸಾಧ್ಯತೆ ಇದೆ. ನೀವು ಸುಳ್ಳು ಹೇಳುತ್ತಿರುವುದನ್ನು ನಿಮ್ಮ ಮುಖ ಹೇಳುವುದು. ವೃತ್ತಿಯನ್ನು ಆನಂದಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ. ಸಂಗಾತಿಯ ವಿಷಯದಲ್ಲಿ ನಿಮಗೆ ಇಷ್ಟ ಕಡಿಮೆಯಾಗಲಿದೆ. ಕಾಲು ನೋವಿನಿಂದ ಬಳಲುವಿರಿ. ಇಂದಿನ ದಿನ ಒತ್ತಡದಿಂದ ಇರಲಿದೆ. ವಿದ್ಯಾರ್ಥಿಗಳು ಖುಷಿಯಿಂದ ಇರಲಿದ್ದು, ಇದಕ್ಕೆ ಸಾಧನೆಯು ಕಾರಣವಾಗಲಿದೆ. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಬಹುದು. ರಹಸ್ಯವನ್ನು ಬಿಟ್ಟುಕೊಡಲು ಇಚ್ಛಿಸುವಿರಿ.
ವೃಶ್ಚಿಕ: ಉದ್ಯೋಗದ ಕಾರಣಕ್ಕೆ ನಿಮಗೆ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಬರಬೇಕಾದ ಹಣವನ್ನು ನೀವು ಪಡೆಯಲಿದ್ದೀರಿ. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಉದ್ಯೋಗಕ್ಕೆ ಸೇರಲು ಮಾನಸಿಕವಾಗಿ ನೀವು ಸಿದ್ಧರಾಗುವಿರಿ. ಕಲೆಯ ಅಭ್ಯಾಸವನ್ನು ನೀವು ಮಾಡಲಿದ್ದೀರಿ. ವಿದೇಶಕ್ಕೆ ಹೋಗಲು ಅವಕಾಶಗಳು ಬರಬಹುದು. ಗೃಹನಿರ್ಮಾಣಕ್ಕೆ ತಕ್ಕಂತೆ ನಿಮ್ಮ ನಿರ್ಧಾರಗಳು ಬದಲಾಗಲಿದೆ. ಕಣ್ಣಿನ ತೊಂದರೆಯಿಂದ ಕಷ್ಟಪಡುವಿರಿ. ಸಮಯೋಚಿತ ಸ್ಫುರಣೆಯ ನಿಮಗೆ ಯಶಸ್ಸನ್ನು ತರಲಿದೆ. ವಿದ್ಯಾರ್ಥಿಗಳು ಓದಿಗೋಸ್ಕರ ತಜ್ಞರ ಸಲಹೆಯನ್ನು ಪಡೆದು ಮುಂದುವರಿಸಿರಿ. ಬಂಧನಭೀತಿ ಇರಲಿದೆ.