Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 18, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 18) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ
ರಾಶಿ ಭವಿಷ್ಯ
Follow us on

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಚಿತ್ರಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೂಲಾ, ಯೋಗ: ಆಯುಷ್ಮಾನ್, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 10 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:18 ರಿಂದ 01:46ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:53 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:50 ರಿಂದ ಮಧ್ಯಾಹ್ನ 12:18ರ ವರೆಗೆ.

ಧನು ರಾಶಿ : ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಧಾರ್ಮಿಕ ಆಸಕ್ತಿಯು ಇಂದು ಅಧಿಕವಾಗಿ ಇದ್ದು ಹೆಚ್ಚಿನ ಸಮಯವನ್ನು ದೇವರ ಸನ್ನಿಧಿಯಲ್ಲಿ ಕಳೆಯುವಿರಿ. ಮಿತ್ರರ ಕಾರಣದಿಂದ ನಿಮ್ಮ ಸಮಯವು ವ್ಯರ್ಥವಾಗಬಹುದು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ಅವಶ್ಯಕತೆ ಇದ್ದರಷ್ಟೇ ನಿಮ್ಮನ್ನು ಬಳಸಿಕೊಳ್ಳುವರು. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಇನ್ನೊಬ್ಬರಿಗಾಗಿ ವಾಹನ ಚಲಾಯಿಸಬೇಕಾದೀತು. ತುರ್ತು ಕಾರ್ಯದ ನಿಮಿತ್ತ ಪ್ರಯಾಣ ಮಾಡಬೇಕಾದೀತು. ನಿಮ್ಮ ಮಾತಿನ ಮೇಲೆ ಪೂರ್ಣ ವಿಶ್ವಾಸವನ್ನು ಇಡುವುದು ಕಷ್ಟವಾಗಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ. ಸಂಗಾತಿಯ ಜೊತೆ ಖರೀದಿಗೆ ಹೋಗಬೇಕಾಗುವುದು.

ಮಕರ ರಾಶಿ : ನಿಮ್ಮ ಗುಣವನ್ನು ದುರುಪಯೋಗ ಮಾಡಿಕೊಂಡಾರು. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಹೂಡಿಕೆಯ ವಿಚಾರದಲ್ಲಿ ನಿಮಗೆ ಪೂರ್ಣ ಆಸಕ್ತಿ ಇರದು. ಇಂದು ಪರಿಶ್ರಮವಿದ್ದರೂ ಫಲವು ಅಲ್ಪವಿರಲಿದೆ. ನಿಮ್ಮ ಯೋಜನೆಯು ದೂರದೃಷ್ಟಿಯನ್ನು ಇಟ್ಟಕೊಳ್ಳಲಿ. ಇನ್ನೊಬ್ಬರ ದೋಷವನ್ನೇ ಗುರುತಿಸುವ ಸ್ವಭಾವವು ಬೇಡ. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವಾಗುವುದು. ಸಮಾರಂಭಗಳಿಗೆ ಹೋಗುವ ಅವಕಾಶವು ಸಿಗುವುದು. ಕಲಾವಿದರಿಗೆ ಹಿನ್ನಡೆಯ ಸಾಧ್ಯತೆ ಇದೆ.

ಕುಂಭ ರಾಶಿ : ಇಂದು ನಡೆದ ಅಹಿತಕರ‌ ಘಟನೆಯನ್ನು ಕೆಟ್ಟ ಗಳಿಗೆ ಎಂದು ಮರೆತುಬಿಡುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ‌ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ಸಾಲ ಬಾಧೆಯ ಕಾರಣ ಕಣ್ತಪ್ಪಿಸಿ ಓಡಾಡುವಿರಿ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ಮೊದಲು ಪ್ರಯಾಣವು ಸುಖಕರ ಎನಿಸದರೂ ದೇಹಪೀಡೆ ಅಧಿಕವಾದೀತು. ಇನ್ನೊಬ್ಬರನ್ನು ಅವಲಂಬಿಸಿರವುದು ನಿಮಗೆ ಇಷ್ಟವಾಗದು. ನೀವು ಇಂದು ಅಪರಿಚಿತ ವ್ಯಕ್ತಿಗಳ ನಡುವೆ ಇರುವ ಕಾರಣ ಮೌನವಾಗಿರುವಿರಿ. ಸಂಗಾತಿಯ ಮಾತುಗಳಿಗೆ ಸಿಟ್ಟಾಗುವುದು ಬೇಡ. ತಕ್ಷಣದ ಪ್ರತಿಕ್ರಿಯೆಯೂ ಬೇಡ. ಸಮಯದ ಸದುಪಯೋಗವಾಗುವಂತೆ ನೋಡಿಕೊಳ್ಳಿ.

ಮೀನ ರಾಶಿ : ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ವರ್ಗಾವಣೆಯ ಭೀತಿ ಕಾಡಲಿದೆ. ನಿಮ್ಮ ಇತರ ಚಟುವಟಿಕೆಗಳು ಬೆಳಕಿಗೆ ಬರಬಹುದು. ಆಕಸ್ಮಿಕವಾಗಿ ಬರುವ ಅಲ್ಪ ಸಂಪತ್ತೂ ಕೈಯಲ್ಲಿ ನಿಲ್ಲದು. ದಂಪತಿಗಳ ನಡುವೆ ಪ್ರೀತಿಯು ಹೆಚ್ಚಾಗುವುದು. ಕೋಪವನ್ನು ಮಾಡುವ ಸಂದರ್ಭವು ಎದರಾಗಲಿದ್ದು, ನಿಮ್ಮ ನಿಯಂತ್ರಣದಲ್ಲಿ ಇರಲಿ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಬಂಧುಗಳ ಜೊತೆ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯೇ ಇರಲಿ. ಒಂದೇ ವಿಷಯವನ್ನು ಹಲವರಿಂದ ಕೇಳಿ ಬೇಸರವಾಗುವುದು‌ ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಯಾರ ಜೊತೆಯೂ ಹಂಚಿಕೊಳ್ಳುವುದು ಬೇಡ. ಕೂಷ್ಮಾಂಡ ದೇವಿಯನ್ನು ಆರಾಧಿಸಿ.

-ಲೋಹಿತಶರ್ಮಾ – 8762924271 (what’s app only)