ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 19 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಸಿದ್ಧ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:28 ರಿಂದ 11:02ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:10 ರಿಂದ 03:44ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:20 ರಿಂದ 07:54ರ ವರೆಗೆ.
ಧನು ರಾಶಿ: ಯಾರ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಔಚಿತ್ಯದ ಕೊರತೆಯು ಕಾಣಿಸುವುದು. ವ್ಯಾಪಾರದಲ್ಲಿ ಇದು ಬಹಳ ಮುಖ್ಯವಾಗಿ ಬೇಕಾಗಬಹುದು. ಸ್ತ್ರೀಯರ ಮಾತಿಗೆ ನಿಮ್ಮ ಬೆಂಬಲವು ಇರಲಿದೆ. ಆಕಸ್ಮಿಕ ಧನಲಾಭವು ನಿಮಗೆ ಗೊಂದಲವನ್ನೂ ಸಂತೋಷವನ್ನೂ ತರುವುದು. ಸಂಗಾತಿಯ ಜೊತೆ ಅಕಾರಣವಾಗಿ ಕಲಹವಾಗಬಹುದ. ಮನೆಯಿಂದ ದೂರದಲ್ಲಿ ವಾಸ ಮಾಡುವ ಸ್ಥಿತಿಯು ಬರಬಹುದು. ಆಪ್ತರನ್ನು ದೂರ ಮಾಡಿಕೊಳ್ಳುವುದು ನಿಮಗೆ ಕಷ್ಟವಾದೀತು. ನಿಮ್ಮ ಯೋಜನೆಯನ್ನು ನೀವಂದುಕೊಂಡಂತೆ ನಡೆಸಲಾಗದು. ಹೆಚ್ಚು ನಿದ್ರೆಯಲ್ಲಿ ಸಮಯವನ್ನು ಕಳೆಯುವಿರಿ.
ಮಕರ ರಾಶಿ: ನಿಮ್ಮ ಕಾರ್ಯಗಳಿಗೆ ಕೂಡಲೇ ಫಲವನ್ನು ನಿರೀಕ್ಷಿಸುವ ಅಗತ್ಯವಿಲ್ಲ. ನಿಮ್ಮ ಕಾರ್ಯದಲ್ಲಿ ನಿಷ್ಠೆಯಿಂದ ಇರಲಿ. ವ್ಯಾಪಾರದಲ್ಲಿ ಲಾಭಗಳಿಸಲು ಹೋಗಿ ಮುಗ್ಗರಿಸಬಹುದು. ಇನ್ನೊಬ್ಬರಿಗೆ ಸಹಾಯವನ್ನು ಮಾಡುವ ಮನಸ್ಸಾಗುವುದು. ಮಕ್ಕಳಿಂದ ಶುಭಸಮಾಚಾರವು ಬರಲಿದೆ. ತಪ್ಪಿಲ್ಲದೇ ಇದ್ದರೂ ತಲೆ ತಗ್ಗಿಸಬೇಕಾದ ಸ್ಥಿತಿಯು ಬರಬಹುದು. ಸಾಹಸ ಕಾರ್ಯಗಳಿಗೆ ಹೋಗುವುದು ಬೇಡ. ಸಿಟ್ಟಾಗಲು ಇಂದು ನಿಮಗೆ ಬಹಳ ಅವಕಾಶಗಳು ಸಿಗಲಿದೆ. ನಿಮ್ಮ ವರ್ತನೆಯ ಮೇಲೆ ಮುಂದಿನದ್ದು ನಿರ್ಣಯವಾಗುವುದು. ಒತ್ತಡದಿಂದ ಮುಕ್ತರಾಗ ಸಂದರ್ಭವು ಬರಬಹುದು.
ಕುಂಭ ರಾಶಿ: ನಿಮ್ಮ ಬಗ್ಗೆ ಕುಟುಂಬಕ್ಕೆ ಕನಿಕರ ಬರಬಹುದು. ಉದ್ಯೋಗಕ್ಕೆ ಬಂಧುಗಳಿಂದ ಸಹಾಯ ದೊರೆಯುವುದು. ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ಕೆಲಸಗಳಿಗೆ ನಿಮ್ಮ ಮೇಲೆ ಒತ್ತಡ ಬರಬಹುದು. ಸ್ನೇಹಿತರ ಮಧ್ಯದಲ್ಲಿ ಅನ್ಯರ ಪ್ರವೇಶವು ಆಗಬಹುದು. ನಿಮ್ಮ ವೈಫಲ್ಯವನ್ನು ನೀವು ಸಕಾರಾತ್ಮಕವಾಗಿಯೇ ತೆಗೆದುಕೊಳ್ಳುವಿರಿ. ಹೆಚ್ಚಿನ ವೆಚ್ಚಕ್ಕೆ ಕಡಿವಾಣ ಹಾಕುವ ನಿರ್ಧಾರವನ್ನು ಮಾಡುವಿರಿ. ಉದರಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ಮನೆಯಲ್ಲಿಯೇ ಸೂಕ್ತ ಔಷಧವನ್ನು ಮಾಡಿಕೊಳ್ಳಿ. ಶನೈಶ್ಚರನಿಗೆ ಪ್ರೀತ್ಯರ್ಥವಾಗಿ ಎಳ್ಳನ್ನು ದಾನವಾಗಿ ಕೊಡಿ. ಗೋಗ್ರಾಸವನ್ನು ಕೊಟ್ಟು ಗೋಸೇವೆಯನ್ನು ಮಾಡಿ.
ಮೀನ ರಾಶಿ: ಉದ್ಯೋಗವು ಮಂದಗತಿಯಲ್ಲಿ ಸಾಗಲಿದೆ. ಮಾನಸಿಕ ಜಾಡ್ಯವು ನಿಮ್ಮ ಎಲ್ಲ ಕೆಲಸವೂ ಹಿಂದುಳಿಯುವುದು. ಹಿರಿಯರಿಗೆ ಅಗೌರವವನ್ನು ಕೊಡುವುದು ಬೇಡ. ವಾಹನದಿಂದ ಗಾಯವಾಗಲಿದೆ. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ಅರ್ಥಿಕವಾಗಿ ಕಷ್ಟವಿದ್ದರೂ ವಿದ್ಯಾಭ್ಯಾಸಕ್ಕೆ ಒತ್ತು ಕೊಡುವಿರಿ. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ದಾನವಾಗಿ ಕೊಡುವಿರಿ. ನಿಮಗೆ ಸಿಕ್ಕ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವಿರಿ. ಅನಧಿಕೃತ ವ್ಯವಹಾರದಿಂದ ನಿಮಗೆ ತೊಂದರೆಯಾಗಲಿದೆ. ನಿಮ್ಮ ಮಿತ್ರರನ್ನು ಭೇಟಿಯಾಗಲಿದ್ದೀರಿ. ಕುಲದೇವರ ಅರಾಧನೆಯಲ್ಲಿ ಸಮಯವನ್ನು ಕಳೆಯುವಿರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ