Horoscope Today: ದಿನಭವಿಷ್ಯ, ರಾಜಕಾರಿಣಿಗಳ ಒಡನಾಟವು ಈ ರಾಶಿಯವರಿಗೆ ಹೊಸ ಮಾರ್ಗ ತೋರಿಸಬಹುದು

| Updated By: Rakesh Nayak Manchi

Updated on: Jul 21, 2023 | 12:45 AM

ನೀವು ಧನುಸ್ಸು, ಮಕರ, ಕುಂಭ, ಮೀನಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ದಿನಭವಿಷ್ಯ, ರಾಜಕಾರಿಣಿಗಳ ಒಡನಾಟವು ಈ ರಾಶಿಯವರಿಗೆ ಹೊಸ ಮಾರ್ಗ ತೋರಿಸಬಹುದು
ಇಂದಿನ ದಿನ ಭವಿಷ್ಯ
Image Credit source: Getty Images
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ , ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03 ರಿಂದ 12:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:27ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:50 ರಿಂದ 09:26ರ ವರೆಗೆ.

ಧನುಸ್ಸು: ನೂತನ ಉದ್ಯೋಗವು ನಿಮಗೆ ಪ್ರಾಪ್ತವಾಗಲಿದೆ. ಅಧಿಕಾರಿಯ ಜೊತೆ ನಿಮ್ಮ ಮಾತುಕತೆಗಳು ಮಿತಿಮೀರಲಿದೆ. ದಿನಬಳಕೆಯ ವಸ್ತುವನ್ನು ಮಾರಾಟ ಮಾಡುವವರು ಲಾಭವನ್ನು ಗಳಿಸುವರು. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಅದನ್ನು ಕೈ ಬಿಡುವಿರಿ. ಅಧಿಕ ವೆಚ್ಚವನ್ನು ನೀವು ಮಾಡಲಿದ್ದೀರಿ. ನಟರಿಗೆ ಹೆಚ್ಚಿನ ಅವಕಾಶಗಳು ಸಿಗಲಿದೆ. ಸಂಬಂಧಗಳು ನಿಮಗೆ ಸಹಕಾರವಾಗಲಿದೆ. ಸಾಹಸಕ್ಕೆ ಹೋಗುವಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ದುರಾಲೋಚನೆಯು ನಿಮ್ಮ ಸಮಯವನ್ನೂ ಮಾರ್ಗವನ್ನೂ ಬದಲಾಯಿಸಬಹುದು.

ಮಕರ: ಆರ್ಥಿಕದಿಂದ ನೀವು ಬಲವಾಗುವಿರಿ. ಸಹೋದರಿಯ ಜೊತೆ ಸಂತೋಷದಿಂದ ನೀವು ಮಾತನಾಡಿ ಸಂತೋಷಗೊಳಿಸುವಿರಿ. ಹಿತಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಸ್ಥಿರಾಸ್ತಿಯ ವಿಷಯದಲ್ಲಿರುವ ಗೊಂದಲು ನಿವಾರಣೆ ಆಗಬಹುದು. ಪ್ರತ್ಯೇಕವಾಗಿ ಇರಲು ಬಯಸುವಿರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ತಿಳಿಯದಾಗಿದೆ. ರಾಜಕಾರಿಣಿಗಳ ಒಡನಾಟವು ನಿಮಗೆ ಹೊಸ ಮಾರ್ಗವನ್ನು ತೋರಿಸಬಹುದು. ವೈರಾಗ್ಯಭಾವವು ನಿಮಗೆ ಹಿತವೆನಿಸವುದು.‌ ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು. ಪ್ರಯಾಣದಲ್ಲಿ ನಿಮಗೆ ಸುರಕ್ಷತೆಯ ಅವಶ್ಯಕತೆ ಇರಲಿದೆ.

ಕುಂಭ: ವಿದ್ಯಾರ್ಥಿಗಳು ಪರೀಕ್ಷೆಗೆ ಹೆಚ್ಚು ತಯಾರಿ ಮಾಡುವಿರಿ. ಬಂಧುಗಳು ನಿಮಗೆ ಕಿರಿಕಿರಿ ಆಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡಲಿದ್ದೀರಿ. ಸಂಗಾತಿಯ ಜೊತೆ ವಿರಸವು ಇರಲಿದೆ. ಸಜ್ಜನರ ಸಹವಾಸವನ್ನು ಬಯಸುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಲಿದೆ. ಅಸ್ಥಿರ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳು ಗೊತ್ತಾಗಲಿದೆ. ಎಲ್ಲರೆದುರು ಮಾತನಾಡಲು ನಿಮಗೆ ಭಯವಾಗಲಿದೆ. ಆಪ್ತರನ್ನು ಕಳೆದುಕೊಳ್ಳಲು ಕಷ್ಟವಾದೀತು. ಆಸ್ತಿಯನ್ನು ಮಾರಾಟ‌ ಮಾಡಲು ಇಚ್ಛಿಸುವಿರಿ.

ಮೀನ: ದಾಂಪತ್ಯದಲ್ಲಿ ಮಾತುಕತೆಗಳು ವಿವಾದವಾಗಿ ಬದಲಾಗಬಹುದು. ವಿದ್ಯುತ್ ಉಪಕರಣಗಳ ಉದ್ಯಮವನ್ನು ಮಾಡುತ್ತಿದ್ದರೆ ಲಾಭವನ್ನು ಪಡೆಯಲಿದ್ದೀರಿ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅಧಿಕವಾಗಲಿದೆ. ನಿಮ್ಮ ನಿರ್ಧಾರದಲ್ಲಿ ಗೊಂದಲ ಇರಲಿದೆ. ಎಲ್ಲವೂ ಅಂದುಕೊಂಡಂತೆ ಆಗದು ಎಂಬ ಮಾನಸಿಕ ಸ್ಥಿತಿಯು ನಿಮ್ಮದಾಗುವುದು. ನಿಮ್ಮ ಉಪಕ್ರಮವು ಸರಿಯಾಗಿರದೇ ಇರುವುದರಿಂದ ಗುರಿಯೂ ತಪ್ಪಬಹುದು. ಪ್ರವಾಸ ಮಾಡುವುದು ನಿಮಗೆ ಇಷ್ಟವಾಗುವುದು. ಮನೆಯ ವಾತಾವರಣವೂ ನಿಮಗೆ ಇಷ್ಟವಾಗಲಿದೆ. ಭವಿಷ್ಯದ ಬಗ್ಗೆ ನಿಮಗೆ ಭೀತಿ ಇರಬಹುದು.