ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಬ್ರಹ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 16 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:27 ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:14 ರಿಂದ 03:50ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:16 ರಿಂದ 07:52ರ ವರೆಗೆ.
ಧನಸ್ಸು: ಭೂಮಿಯ ವ್ಯವಹಾರವನ್ನು ಮಾಡಲು ಬಹಳ ಉತ್ಸಾವಿರಲಿದ್ದು ಪಾಲುದಾರಿಕೆಯಲ್ಲಿ ಇನ್ನೊಬ್ಬರ ಜೊತೆ ಸೇರಿ ಮಾಡುವಿರಿ. ಕಛೇರಿಯಲ್ಲಿ ನಿಮ್ಮ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿರಲಿ. ನಿಮಗೆ ಬೇಡದ ವಸ್ತುಗಳನ್ನು ಯಾರಿಗಾದರೂ ಕೊಡುವ ಮನಸ್ಸಾಗುವುದು. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಿಕೊಳ್ಳುವುದು ಉತ್ತಮ. ನೀವು ಶುಭವಾರ್ತೆಯ ನಿರೀಕ್ಷೆಯಲ್ಲಿ ಇರುವಿರಿ. ಮಕ್ಕಳ ಭವಿಷ್ಯವನ್ನು ನಿರೂಪಿಸಲು ನಿಮಗೆ ಒದ್ದಾಟವಾಗಬಹುದು. ನಿಮ್ಮ ಜೊತೆ ಉದ್ಯೋಗದ ವೃದ್ಧಿಗೆ ಸಂಬಂಧಿಸಿದ ಮಾತುಕತೆಗಳು ನಡೆಯುವುದು.
ಮಕರ: ಸರ್ಕಾರದ ಅಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ನಿಮಗೆ ಸಂಕಷ್ಟವು ಬರಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಕೆಲವರನ್ನು ದೂರಮಾಡಿಕೊಳ್ಳುವಿರಿ. ಯಾರದೋ ಒತ್ತಾಯಕ್ಕಾಗಿ ಪ್ರಯಾಣ ಮಾಡಬೇಕಾಗಬಹುದು. ಪತ್ನಿಯ ಕಡೆಯಿಂದ ನಿಮಗೆ ಕೆಲವು ಸಹಾಯವನ್ನು ನಿರೀಕ್ಷಿಸಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ಲಭಿಸುವುದು. ಖಾಸಗಿಯ ಸಮಾರಂಭದಲ್ಲಿ ಭಾಗವಹಿಸುವಿರಿ. ನಿಮಗೆ ಒತ್ತಡದ ಕೆಲಸವು ಬಂದು ಮನೆಯ ಕೆಲಸವು ಮರೆಯಾಗಬಹುದು.
ಕುಂಭ: ಶತ್ರುಗಳ ಬಾಧೆಯು ನಿಮಗೆ ಚಿಂತೆಯನ್ನು ಉಂಟುಮಾಡೀತು. ನಿಮ್ಮಷ್ಟಕ್ಕೆ ನೀವಿರಲು ಬಯಸುವಿರಿ. ಹಿಂದಿನಿಂದ ಮಾತನಾಡಿಕೊಳ್ಳುವರಿಗೆ ನೆಲೆಯನ್ನು ಕೊಡುವುದು ಬೇಡ. ಮಾತನಾಡಲು ನಿಮಗೆ ತೊಂದರೆಯಾದೀತು. ಇಂದು ನಿಮಗಾದ ವಿಶ್ವಾಸದ್ರೋಹದಿಂದ ನೀವು ಸಿಟ್ಟಿಗೇಳುವಿರಿ. ನಿಮ್ಮದಲ್ಲದ ವಸ್ತುವನ್ನು ಪಡೆದುಕೊಳ್ಳಲು ಹಂಬಲಿಸುವಿರಿ. ಸಿಗದೇ ದುಃಖಿಸಬೇಕಾದೀತು. ಸಂಗಾತಿಯ ಪ್ರೀತಿಯು ಕಡಿಮೆಯಾಗಬಹುದು. ಕೆಲಸವನ್ನು ನಿಭಾಯಿಸಲು ಸರಳ ತಂತ್ರವನ್ನು ಬಳಸಿವಿರಿ. ಇನ್ನೊಬ್ಬರ ಬಗ್ಗೆ ಇರುವ ತಪ್ಪು ಕಲ್ಪನೆ ಇರಬಹುದು.
ಮೀನ: ರಪ್ತು ವ್ಯವಹಾರವನ್ನು ಇಂದು ಸುಗಮವಾಗಿ ನಡೆಸುವಿರಿ. ಸ್ತ್ರೀಯ ಕಾರಣದಿಂದ ನಿಮಗೆ ಲಾಭಗಳು ಆಗಲಿದೆ. ವಾಹನ ಖರೀದಿಗೆ ಬೇಕಾದ ವ್ಯವಸ್ಥೆಯನ್ನು ಇಂದು ಮಾಡಿಕೊಳ್ಳಲಿದ್ದೀರಿ. ಇಂದು ನಿಮ್ಮ ತಲೆಯಲ್ಲಿ ಅಪೂರ್ಣ ತುಂಬಿರಲಿವೆ. ನಿಮ್ಮ ಮಗನ ಮೇಲೆ ಸಂಪತ್ತಿನ ವಿಚಾರವಾಗಿ ಅಪವಾದಗಳು ಕೇಳಿಬರಬಹುದು. ತುರ್ತು ಕಾರ್ಯಕ್ಕಾಗಿ ಮನೆಯಿಂದ ಹೊರಡುವಿರಿ. ಕುಟುಂಬದವರ ಸಹಾಯದಿಂದ ನೀವು ಆತ್ಮವಿಶ್ವಾಸವನ್ನು ಪಡೆಯುವಿರಿ. ಹೇಳಿದ ಕೆಲಸಗಳು ಆಗದೇ ಇರುವುದರಿಂದ ನೌಕರರ ಮೇಲೆ ಸಿಟ್ಟಾಗುವಿರಿ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ