Horoscope Today: ರಾಶಿಭವಿಷ್ಯ, ಈ ರಾಶಿಯವರು ನಿಮ್ಮ ಆಪ್ತರನ್ನು ಕಳೆದುಕೊಳ್ಳುವ ಸಂಭವವಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2023 | 12:45 AM

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ರಾಶಿಭವಿಷ್ಯ, ಈ ರಾಶಿಯವರು ನಿಮ್ಮ ಆಪ್ತರನ್ನು ಕಳೆದುಕೊಳ್ಳುವ ಸಂಭವವಿದೆ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶೋಭನ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 12:33 ರಿಂದ 2:06ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:55 ರಿಂದ 09:27ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 11:00 ರಿಂದ 12:33ರ ವರೆಗೆ.

ಧನು ರಾಶಿ : ನಿಮಗಾಗದವರು ನಿಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವರು. ನೀವೇ ಬುದ್ಧಿವಂತರೆಂಬಂತೆ ತೋರಿಸಿಕೊಳ್ಳುವಿರಿ. ಅಧಿಕಾರದ ಮಾತುಗಳು ನಿಮ್ಮ ಕೆಲಸಕ್ಕೆ ಬಾರದು. ನಿಮ್ಮ ಸ್ವಭಾವದ ಬದಲಾವಣೆಯು ಎಲ್ಲರಿಗೂ ಅಚ್ಚರಿಯನ್ನು ತಂದೀತು. ಉದ್ಯೋಗದಲ್ಲಿ ವಿರಾಮವನ್ನು ತೆಗೆದುಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದೇ ವಾದಿಸುವಿರಿ. ತಾಯಿಯ ಜೊತೆ ವಾಗ್ವಾದ ನಡೆಸುವಿರಿ. ನಿಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ತೆಗೆಯಬಹುದು. ಆಸಮಯದಲ್ಲಿ ನೀವು ಭೋಜನವನ್ನು ಮಾಡಿ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಲಾಭಕ್ಕೆ ಯಾರನ್ನಾದರೂ ಬಳಸಿಕೊಳ್ಳುವಿರಿ.

ಮಕರ ರಾಶಿ : ವ್ಯಾಪಾರದಲ್ಲಿ ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಅಹಂಕಾರದ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ನಿಮಗೆ ಕಷ್ಟವಾಗುವುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವುದು ಅನಿವಾರ್ಯವಾದೀತು. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಭೇಟಿಯಾಗವರು. ದೊಡ್ಡ ಅಪಾಯದಿಂದ ನಿಮಗೆ ರಕ್ಷಣೆಯಾಗುವುದು. ಸಂಗಾತಿಯ ಇಂಗಿತವನ್ನು ತಿಳಿದುಕೊಳ್ಳುವುದು ನಿಮಗೆ ಕಷ್ಟವಾಗುವುದು. ಎಂದು ಆಡಿದ ಮಾತಿಗೆ ಇಂದು ಪಶ್ಚಾತ್ತಾಪಪಡಬೇಕಾದೀತು.‌ ಒಂಟಿಯಾಗಿ ಎಲ್ಲಿಗಾದರೂ ಹೋಗಬೇಕು ಎಂದು ಅನ್ನಿಸುವುದು.

ಕುಂಭ ರಾಶಿ : ಹಣವನ್ನು ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಿಗೆ ಹಣವನ್ನು ಕೊಡುವರು. ಆರೋಗ್ಯವು ಸರಿಯಾದರೂ ಮನಸ್ಸು ಸರಿಯಾಗಲು ಸಮಯವನ್ನು ತೆಗದುಕೊಳ್ಳಬಹುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಂಭವವಿದೆ. ಉದ್ಯೋಗದಲ್ಲಿ ಉಂಟಾದ ಸಣ್ಣ ಅಡ್ಡಿಯನ್ನೇ ದೊಡ್ಡದಾಗಿ ಬಿಂಬಿಸುವಿರಿ. ನಿಮ್ಮವರು ನಿಮ್ಮನ್ನು ಅನ್ಯ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಾತೀತ ನಿಲುವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಹಂತದ ಕೆಲಸಗಳು ಮಂದಗತಿಯಲ್ಲಿ ಇರಲಿದೆ. ಮೊದಲೇ ತೀರ್ಮಾನವಾದ ನಿಮ್ಮ ಪ್ರಯಾಣವು ಮುಂದೆ ಹೋಗಬಹುದು. ನಕಾರಾತ್ಮಕ ವಿಚಾರಗಳೇ ನಿಮಗೆ ಎಲ್ಲ ಕಡೆಗಳಲ್ಲಿಯೂ ಕಾಣಿಸುವುದು.

ಮೀನ ರಾಶಿ : ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಕಾರವೂ ಸಿಗದೇ ಇರುವುದು ಬೇಸರವಾಗಬಹುದು. ನಿರಂತರ ಕೆಲಸದಿಂದ ನಿಮಗೆ ಮುಕ್ತಿಯ ಅವಶ್ಯಕತೆ ಇದೆ. ಸ್ವಲ್ಪ ಮನಸ್ಸು ಎಲ್ಲದರಿಂದ ಮುಕ್ತವಾಗಿರಲು ಬಯಸುವುದು. ಸಾಮರಸ್ಯದ ಕೊರತೆಯಿಂದ ದ್ವೇಷವೂ ಹುಟ್ಟಿಕೊಳ್ಳಬಹುದು. ವಿದ್ಯಾಭ್ಯಾಸದ ವಿಷಯದಲ್ಲಿ ನಿಮಗೆ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಯೋಗ್ಯವಾದ ರೀತಿಯಲ್ಲಿ ಇಟ್ಟುಕೊಳ್ಳಿ. ನಿಮ್ಮನ್ನು ಕಡೆಗಣಿಸಿದ್ದು ನಿಮಗೆ ಪ್ರೇರಣೆಯಾಗಬಹುದು. ಕೆಲಸಗಳನ್ನು ಮುಂದೂಡುತ್ತ ಇರುವುದು ನಿಮ್ಮ ನಿರಾಸಕ್ತಿಯನ್ನು ತೋರಿಸುವುದು. ವಹಿಸಿಕೊಂಡ ಕಾರ್ಯವನ್ನು ಸಕಾಲಕ್ಕೆ ಮಾಡಿ ಮುಗಿಸಿ.

-ಲೋಹಿತಶರ್ಮಾ 8762924271 (what’s app only)