Nitya Bhavishya: ಈ ರಾಶಿಯರಿಗೆ ಸಿನಿಮಾರಂಗವು ಕೈಬೀಸಿ ಕರೆಯಬಹುದು, ಕೆಲಸವಿಲ್ಲದವರಿಗೆ ಹೊಸ ಉದ್ಯೋಗ ಪ್ರಾಪ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 05, 2023 | 6:03 AM

2023 ಫೆಬ್ರವರಿ 05 ರವಿವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

Nitya Bhavishya: ಈ ರಾಶಿಯರಿಗೆ ಸಿನಿಮಾರಂಗವು ಕೈಬೀಸಿ ಕರೆಯಬಹುದು, ಕೆಲಸವಿಲ್ಲದವರಿಗೆ ಹೊಸ ಉದ್ಯೋಗ ಪ್ರಾಪ್ತಿ
ಪ್ರಾತಿನಿಧಿಕ ಚಿತ್ರ
Image Credit source: www.freepik.com
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 05 ರವಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಪುಷ್ಯ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 32 ನಿಮಿಷಕ್ಕೆ. ರಾಹು ಕಾಲ ಸಂಜೆ 05:06 –  06:32, ಯಮಘಂಡ ಕಾಲ 12:47 ರಿಂದ 2: 13, ಗುಳಿಕ ಕಾಲ 03:40 ರಿಂದ 05: 06.

ಮೇಷ: ಸ್ವಂತಿಕೆಯಿಂದ ಆಲೋಚಿಸಿ ಕೆಲಸಮಾಡಿ. ಹೆಚ್ಚಿನ ಲಾಭವು ದೊರೆಯುವುದು. ಉದ್ಯಮಿಗಳಿಗೆ ಹೊಸ ಕೆಲಸವು ಸಿಗಲಿದೆ. ನಿಮ್ಮ ಜೊತೆಗಾರರನ್ನು ಇಷ್ಟಪಡುವಿರಿ. ಅವರ ಜೊತೆ ಸಂತೋಷದಿಂದ ಕಾಲ ಕಳೆಯುವಿರಿ. ಅನಿರೀಕ್ಷಿತ ಧನಾಗಮನದ ನಿರೀಕ್ಷೆಯಲ್ಲಿ ಇರಬಹುದು. ವಿದ್ಯಾರ್ಥಿಗಳು ಉನ್ನತಿಯನ್ನು ಸಾಧಿಸಲು ಯೋಜನೆಯನ್ನು ರೂಪಿಸಿಕೊಳ್ಳುವರು. ತಾಳ್ಮೆಯನ್ನು ಕಳೆದುಕೊಳ್ಳದೇ ವ್ಯವಹರಿಸಿ. ವಿವೇಚನೆಯಿಂದ ಕೆಲಸಗಳನ್ನು ಮಾಡಿ. ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು.

ವೃಷಭ: ನಿಮ್ಮ ಬಗ್ಗೆ ಕಾಳಜಿ ಇರುವವರಿಗೆ ಅಕ್ಕರೆ ತೋರಿಸಿ. ನಿಮ್ಮ ಒಳ್ಳೆತನವು ದುರುಪಯೋಗಬಾಗಬಹುದು. ದೂರದ ಪ್ರಯಾಣವನ್ನು ಕಡಿಮೆ ಮಾಡಿ. ಯಾರ ಮೇಲೂ ದ್ವೇಷವನ್ನು ಸಾಧಿಸಬೇಡಿ. ಹಣವು ಖರ್ಚಾಗಬಹುದು. ವಿಚಾರಿಸಿ ಅಗತ್ಯತೆಗೆ ಅನುಸಾರವಾಗಿ ಖರ್ಚು ಮಾಡಿ. ಆಪ್ತರ ಮಾತುಗಳು ನಿಮಗೆ ನೋವನ್ನು ತಂದೀತು. ಅವುಗಳ ಮುತುವರ್ಜಿ ಮಾಡುವುದು ಬೇಡ. ಸೌಂದರ್ಯಕ್ಕೆ ಹೆಚ್ಚು ಒತ್ತುಕೊಡಲಿದ್ದೀರಿ. ಕಾರಣವಿಲ್ಲದೆ ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿ.

ಮಿಥುನ: ಆರ್ಥಿಕಕತೆಯ ವಿಚಾರವಾಗಿ ಮನೆಯ ಕಲಹಗಳು ಆಗಬಹುದು. ಅನಿರೀಕ್ಷಿತ ಬಂಧುಗಳ ಆಗಮನವು ಮನೆಯಲ್ಲಿ ಹಬ್ನದ ವಾತಾವರಣವನ್ನು ತರಲಿದೆ. ವಿದ್ಯುಪಕರಣದಿಂದ ನಷ್ಟವಾಗುವ ಸಾಧ್ಯತೆ ಇದೆ. ಇನ್ನೊಬ್ಬರನ್ನು ನೋಡಿ ಅಸೂಯೆ ಪಡುವುದನ್ನು ಬಿಟ್ಟರೆ ಒಳ್ಳೆಯದು. ಸಮಯದ ಸದುಪಯೋಗವನ್ನು ಇಂದು ಮಾಡಿಕೊಳ್ಳಿ. ವೃತ್ತಿಪರರು ಸ್ವಲ್ಪ ಮಟ್ಟಿಗೆ ನಿರಾಳರತೆಯಲ್ಲಿ ಇರುವಿರಿ. ನಿಮ್ಮವರು ನಿಮ್ಮಿಂದ ಸಹಾಯವನ್ನು ನಿರೀಕ್ಷಿಸಬಹುದು.

ಕಟಕ: ಅಲ್ಪವನ್ನು ಉಳಿಸಲು ಹೋಗಿ ಅತಿಯಾದ ವ್ಯಯವನ್ನು ಮಾಡಿಕೊಳ್ಳುವಿರಿ‌. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸುವರು. ಸಾಧ್ಯವಾದಷ್ಟು ತಾಳ್ಮೆಯನ್ನು ಉಳಿಸಿಕೊಳ್ಳಿ. ಮನೆಯ ಕಡೆಯಿಂದ ಅನಿರೀಕ್ಷಿತ ಅಶುಭವಾರ್ತೆಯು ಬರಬಹುದು. ಸಿಗಲಿರುವ ಸಾಮಾಜಿಕ ಮನ್ನಣೆಯನ್ನು ಸಕಾರಣವಾಗಿ ತಿರಸ್ಕರಿಸುವಿರಿ. ಉದ್ಯೋಗದ ನಿಮಿತ್ತ ಬೇರೆ ಕಡೆಗೆ ಹೋಗುವ ಸಾಧ್ಯತೆ ಇದೆ. ಉತ್ತಮ ಬಾಂಧವ್ಯವು ಕೆಡದಂತೆ ನೋಡಿಕೊಳ್ಳಿ. ಮಕ್ಕಳ ಜೊತೆ ಹೆಚ್ಚು ಕಾಲ ಕಳೆಯುವಿರಿ.

ಸಿಂಹ: ಧನದ ಸಂಪಾದನೆಗೆ ಬೇರೆ ಊರಿಗೆ ಹೋಗಲಿದ್ದೀರಿ. ಪರಸ್ಥಳದಲ್ಲಿ ರಾಜೋಚಿತ ಭೋಜನ ಸಿಗಲಿದೆ. ಸತ್ಯವನ್ನು ಆಡಲು ಹೋಗಿ ನಿಮ್ಮವರಿಗೆ ಬೇಸರ ತರಿಸುವಿರಿ. ಅತಿಯಾದ ಭೋಜನವು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.
ಹಣದ ಸಮಸ್ಯಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಣವು ನಿಮಗೆ ಸಿಗದೇ ಓಡಾಟವನ್ನು ನಡೆಸುವಿರಿ. ಅತಿಯಾದ ಆಲೋಚನೆಯಿಂದ ಮನಸ್ಸು ಹಾಳಾಗಬಹುದು. ಧೈರ್ಯವನ್ನು ಕಳೆದುಕೊಳ್ಳಬೇಡಿ.

ಕನ್ಯಾ: ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಒಳ್ಳೆಯ ಉದ್ಯೋಗವು ಸಿಗಲಿದೆ. ವಿನಾಕಾರಣ ದಾಂಪತ್ಯದಲ್ಲಿ ವೈಮನಸ್ಯ, ಕಲಹಗಳು ಆಗಲಿವೆ. ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಯೋಜನೆಗಳು ಸ್ವಲ್ಪ ವ್ಯತ್ಯಾಸವಾಗಬಹುದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಕೆಲಸ ಮಾಡುವುದು ಸೂಕ್ತ. ಆಧಿಕಾರಯುತವಾತ ಮಾತುಗಳಿಂದ ಒಂಟಿಯಾಗುವಿರಿ.

ತುಲಾ: ನಿಮ್ಮ ಅಲಕ್ಷ್ಯದಿಂದ ಉದ್ಯೋಗದಲ್ಲಿ ನಷ್ಟವಾಗಲಿದೆ. ಹಣದ ಮೂಲವು ಇಂದು ಇಲ್ಲವಾಗುತ್ತದೆ. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದೆ. ಬಹಳ ಗೊಂದಲಗಳನ್ನು ಇಟ್ಟುಕೊಂಡಿರುವಿರಿ. ಮಾತನಿಂದ ಆಗದೇ ಇರುವ ಕೆಲಸವು ಮೌನದಿಂದ ಆಗಲಿದೆ. ಸಂತತಿಯ ನಷ್ಟದಿಂದ ಬೇಸರವಾದೀತು. ಇನ್ನೊಬ್ಬರ ಕುರಿತು ಕುತೂಹಲವನ್ನು ಇಟ್ಟುಕೊಂಡಿರುತ್ತೀರಿ. ಆದಷ್ಟು ಒತ್ತಡದಿಂದ ಹೊರಬರಬೇಕು ಎಂದಿದ್ದರೂ ಸಾಧ್ಯವಾಗುವುದು. ನಿಮ್ಮ‌ ವ್ಯಕ್ತಿತ್ವವು ಅನುಸಾರ್ಯವಾಗಲಿದೆ.

ವೃಶ್ಚಿಕ: ಪ್ರೇಮವು ಇಂದು ದುರ್ಬಲವಾಗಬಹುದು. ನಿಮ್ಮ ಮಾತುಗಳು ಪ್ರೇಯಸಿಗೆ ನಕಾರಾತ್ಮಕ ಭಾವವನ್ನು ನೀಡಬಹುದು. ಬಹಳ ಹಿಂದೆ ಆಸೆ ಪಟ್ಟ ವಸ್ತುವೊಂದು ಇಂದು ಅನಿರೀಕ್ಷಿತವಾಗಿ ಸಿಗಬಹುದು. ಉತ್ತಮವಾದ ವಸ್ತುವನ್ನು ಯೋಗ್ಯವಾದ ವ್ಯಕ್ತಿಗೆ ದಾನ ಮಾಡಲಿದ್ದೀರಿ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯುಂಟಾಗಬಹುದು. ಧಾರ್ಮಿಕ ಆಚರಣೆಗಳನ್ನು ಮಾಡುವ ಮನಸ್ಸು ಮಾಡುವಿರಿ. ಯಾರದೋ ತಪ್ಪಿನಿಂದ ನೀವು ಕಷ್ಟವನ್ನು ಪಡಬೇಕಾದೀತು. ಸರ್ಕಾರಿ ಕೆಲಸದಲ್ಲಿ ವಿಳಂಬವಾಗುವುದು.

ಧನು: ನಿಮ್ಮ ಯೋಜನೆಗಳನ್ನು ಬದಲಾಯಿಸಲು ಯೋಚಿಸಬೇಡಿ. ಮನೆಯಲ್ಲಿ ಮಕ್ಕಳು ಇರಲಿದ್ದಾರೆ.‌ ಅವರಿಂದ ಸಂತೋಷವು ಇರಲಿದೆ. ವಿದೇಶೀವ್ಯಾಪಾರದಿಂದ ಲಾಭವಾಗುವುದು. ಆರೋಗ್ಯದ ವ್ಯತ್ಯಾಸದಿಂದ ಆಸ್ಪತ್ರೆಗೆ ಹೋಗಬೇಕಾಗಿಬರಬಹುದು. ಅನಿರೀಕ್ಷಿತವಾಗಿ ಕಾರ್ಯದಲ್ಲಿ ಒತ್ತಡವು ಸಂಭವಿಸುವುದು. ಸಾಹಿತ್ಯಾಸಕ್ತರು ಇಂದು ಸಾಹಿತ್ಯಸಮಾರಂಭದಲ್ಲಿ ಭಾಗವಹಿಸುವಿರಿ. ಹಣಕಾಸಿನ ಹರಿವು ತಕ್ಕಮಟ್ಟದಲ್ಲಿ ಇರಲಿದೆ.

ಮಕರ: ನೀವಿಂದು ಆಯ್ಕೆ ಮಾಡಿಕೊಂಡ ದಾರಿಯು ಸುಗಮವಾಗಲಿದೆ. ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ತೀರ್ಪುಗಳು ಬರಬಹುದು. ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಅಮೂಲ್ಯವಾದ ಸಂಪತ್ತುಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ. ಹಗುರವಾದ ಮಾತುಗಳು ನಿಮ್ಮನ್ನು ಹಗುರ ಮಾಡುವುದು. ಕಾಕತಾಳೀಯದಂತೆ ನಿಮಗೆ ಆಗಬೇಕಿದ್ದ ಕೆಲಸಗಳು ಆಗುವುವು. ಅತಿಯಾದ ಹಸಿವು ನಿಮ್ಮನ್ನು ಬಾಧಿಸಬಹುದು.

ಕುಂಭ: ಒಂದೇ ತೆರನಾದ ಕೆಲಸಗಳು ನಿಮಗೆ ಬೇಸರವನ್ನು ತರಿಸಬಹುದು. ಯಾವುದೇ ಹುಚ್ಚಾಟದ ಸಾಹಸಕ್ಕೆ ಹೋಗದೇ ಇರುವುದು ಉತ್ತಮ. ಕೆಲಸವಾಗಲಿಲ್ಲವೆಂದು ಹತಾಶವಾಗಬೇಡಿ. ಆಗುವ ಕಾಲಕ್ಕೆ ಆಗಿಯೇ ಆಗುವುದು ಎನ್ನುವ ದೃಢವಾದ ನಂಬಿಕೆಯನ್ನು ಇಟ್ಟಿರಿ. ಆರೋಗ್ಯವು ಹದ ತಪ್ಪಬಹುದು. ಯಾವ ಸಂದರ್ಭದಲ್ಲಿಯೂ ಸಿಗುವ ನೀವು ನಿಮ್ಮವರಿಗೆ ಬೇಕಾದವರಾಗಿರುತ್ತೀರಿ. ಸಂಪತ್ತಿನ‌ ವಿಚಾರದಲ್ಲಿ ವಿವೇಚನೆ ಇರಲಿ. ಮಿತವ್ಯಯವಿರಲಿ. ಯಾರ ಮೇಲೂ ಅಸೂಯೆ ಬೇಡ. ತಾಳ್ಮೆಯನ್ನು ಇಟ್ಟುಕೊಳ್ಳಿ

ಮೀನ: ಸಿನಿಮಾರಂಗ ನಿಮ್ಮನ್ನು ಕೈಬೀಸಿ ಕರೆಯಬಹುದು. ತ್ಯಾಗದಿಂದ ಸಫಲತೆ ಎನ್ನುವ ಮಂತ್ರವನ್ನು ನೀವು ಪಠಿಸುತ್ತಿರುತ್ತೀರಿ. ಸ್ನೇಹವನ್ನು ಕಳೆದುಕೊಳ್ಳುವ ಆತುರದಲ್ಲಿ ಇರುವಿರಿ. ಸರ್ಕಾರಿ ನೌಕರರು ವರ್ಗಾವಣೆಯಿಂದ ಹಿಂಸೆಯನ್ನು ಅನುಭವಿಸಬಹುದು. ಹಿತವಚನವನ್ನು ನೀವು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ವಿದ್ಯಾರ್ಥಿಗಳು ಏಕಾಗ್ರತೆಯನ್ನು ಅಭ್ಯಾಸಮಾಡಬೇಕಿದೆ. ಭವಿಷ್ಯವನ್ನು ನಿರ್ಧರಿಸಲು ಉತ್ತಮ ದಿನವಾಗಲಿದೆ. ಹಣಕಾಸಿನ ತೊಂದರೆ ಇರಲಿದೆ.

ಲೋಹಿತಶರ್ಮಾ ಇಡುವಾಣಿ