ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 07 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಕರಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ :ಮಂಗಳ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಮಘಾ, ಯೋಗ : ಶೋಭನ, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ, ಸೂರ್ಯಾಸ್ತ ಸಂಜೆ 06 ಗಂಟೆ 33 ನಿಮಿಷಕ್ಕೆ. ರಾಹು ಕಾಲ 03:40 – 05:07, ಯಮಘಂಡ ಕಾಲ 09:54 ರಿಂದ 11 : 20, ಗುಳಿಕ ಕಾಲ 12:47 ರಿಂದ 2: 13.
ಮೇಷ: ಇಂದು ನೀವು ಕಾರ್ಯದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ. ವ್ಯವಹಾರದಲ್ಲಿ ನಷ್ಟವನ್ನು ಕಾಣಬೇಕಾದೀತು. ಆಲೋಚಿಸದೇ ಯಾವುದೇ ಸಾಹಸದ ಕಾರ್ಯವನ್ನು ಮಾಡಬೇಡಿ. ಸಮಯವನ್ನು ವ್ಯರ್ಥ ಮಾಡದೆ ನಿಮ್ಮ ಕಾರ್ಯ ಸಾಧನೆ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ ಇಂದು ನಿಮಗೆ ಆಗಲಿದೆ. ಅನ್ಯರ ಮಾತಿಗೆ ಬಲಿಯಾಗಬೇಡಿ. ಉದ್ಯೋಗಸ್ಥ ಮಹಿಳೆಯರಿಗೆ ವರ್ಗಾವಣೆ.
ವೃಷಭ: ಇಷ್ಟದೇವತಾ ಕಾರ್ಯಗಳಲ್ಲಿ ತೊಡಗುವಿರಿ. ಹಿರಿಯರ ಭೇಟಿ ಇಂದು ಆಗಬಹುದು. ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಗಬಹುದು. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಇಂದು ಲಾಭವು ಆಗಲಿದೆ. ಕೈಗೊಂಡ ಕಾರ್ಯಗಳಲ್ಲಿ ಸಫಲತೆಯನ್ನು ಅನುಭವಿಸುವಿರಿ. ಹಣದ ಒಳ ಅರಿವು ಮಂದಗತಿಯಲ್ಲಿ ಇರುತ್ತದೆ. ಅಧಿಕ ಓಡಾಟ ಹೆಚ್ಚು ಆಯಾಸವನ್ನು ತರಿಬಹುದು. ಸರ್ಕಾರಿ ಕಛೇರಿಯ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತವೆ.
ಮಿಥುನ: ಬೇರೆಯವರ ಕಷ್ಟಗಳಲ್ಲಿ ನೆರವಾಗುವಿರಿ. ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಪ್ರಯತ್ನಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರೇಯಸ್ಸು ಇರುತ್ತದೆ. ಕೋಪದಿಂದ ಯಾವ ಕಾರ್ಯ ಸಾಧನೆಗಳು ನಿಮ್ಮಿಂದ ಆಗದು. ಎಲೆಕ್ಟ್ರಾನಿಕ್ ಸಂವಹನ ಕ್ಷೇತ್ರದಲ್ಲಿರುವವರಿಗೆ ಬೇಡಿಕೆ ಹೆಚ್ಚುತ್ತದೆ. ದೂರ ಪ್ರಯಾಣವನ್ನು ಮಾಡಬೇಕಾಗಬಹುದು.
ಕರ್ಕ: ನಿಮ್ಮ ಸಹೋದರರಿಂದ ನಿಮಗೆ ಸಹಾಯ ಸಿಗಬಹುದು. ವೃತ್ತಿಯಲ್ಲಿ ನಿಮ್ಮ ಕೆಲಸವನ್ನು ನೀವು ನಿಯಮಬದ್ಧವಾಗಿ ಮಾಡುವುದು ಉತ್ತಮ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಗೊಳ್ಳುತ್ತದೆ. ವಿದ್ಯಾರ್ಥಿಗಳಲ್ಲಿ ಅಭ್ಯಾಸದಲ್ಲಿ ಹೆಚ್ಚಿನ ಶ್ರದ್ಧೆ ಕಾಣಬಹುದು. ಕಲಾವಿದರಿಗೆ ಯಶಸ್ಸು ದೊರೆಯಲಿದೆ. ಹೆಚ್ಚಿನವಾದ ವಾದ ವಿವಾದಗಳನ್ನು ಮಾಡುವುದು ಖಂಡಿತ ಬೇಡ. ದೇವಿ ಸರಸ್ವತಿಯನ್ನು ಸ್ಮರಿಸಿ.
ಸಿಂಹ: ಮಕ್ಕಳ ವಿಚಾರದಲ್ಲಿ ಸಂತೋಷ ವೃದ್ಧಿಯಾಗಲಿದೆ. ಪಾಲುದಾರಿಕೆಯ ವ್ಯವಹಾರಗಳಲ್ಲಿ ಸಂಯಮವಿರಲಿ. ಬಂಧು ಬಳಗದವರಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಗುರು ಹಿರಿಯರೊಂದಿಗೆ ಸಮಾಲೋಚನೆಯನ್ನು ಮಾಡಲಿದ್ದೀರಿ. ಪಾರದರ್ಶಕತೆಗೆ ಆದ್ಯತೆ ನೀಡುವವರು ನೀವು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗವು ಬರಲಿದೆ.
ಕನ್ಯಾ: ಗೃಹ ಉಪಯೋಗಿ ವಸ್ತುಗಳ ಸಂಗ್ರಹವನ್ನು ಮಾಡಲಿದ್ದೀರಿ. ಪೂರ್ವಯೋಜಿತ ವಿಷಯಗಳಿಂದ ಸಫಲತೆಯನ್ನು ಕಾಣಲಿದ್ದೀರಿ. ದಾಂಪತ್ಯದಲ್ಲಿ ಸುಖವು ಇರಲಿದೆ. ಚರ್ಚೆಗಳಿಗೆ ಆಸ್ಪದ ನೀಡದಿರಿ. ನೂತನ ಮಿತ್ರರ ಭೇಟಿ ಆಗವುದು. ಸೂಕ್ಷ್ಮ ವಿಚಾರಗಳನ್ನು ತಾಳ್ಮೆಯಿಂದ ನಿರ್ವಹಿಸುವುದು ಒಳ್ಳೆಯದು. ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿಯನ್ನು ವಹಿಸಬೇಕಾದೀತು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಪ್ರಗತಿಯು ಆಗಲಿದೆ.
ತುಲಾ: ಗುರು ಹಿರಿಯರಿಂದ ಉತ್ತಮ ಸಹಕಾರ. ಇದರ ಸಂಬಂಧಿಸಿದ ರೋಗಗಳು ಕಾಣಲಿದೆ. ನಿರೀಕ್ಷಿತ ಸ್ಥಾನಮಾನಕ್ಕೆ ಹೆಚ್ಚಿನ ಶ್ರಮ ಪಡಲಿದ್ದೀರಿ. ತಪ್ಪು ತಿಳುವಳಿಕೆಯಿಂದ ಸಂಬಂಧ ಕೊನೆಗೊಳ್ಳುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಕಾಲ ಕಳೆಯಲಿದ್ದೀರಿ. ಅತಿಯಾದ ಕಾರ್ಯಗಳಿಂದ ಸುಸ್ತಾಗಬಹುದು. ರಪ್ತಿನ ವಿಷಯದಲ್ಲಿ ನಿಮ್ಮನ್ನು ಹೆಚ್ಚು ಸಮಯ ಕಾಯುವಂತೆ ಮಾಡುತ್ತದೆ.
ವೃಶ್ಚಿಕ: ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಕೊಂಚ ಬದಲಾವಣೆಯನ್ನು ಮಾಡಲಿದ್ದೀರಿ. ಫಲಾ ಅಪೇಕ್ಷೆ ಇಲ್ಲದೆ ಕೆಲಸ ಮಾಡಿದರೆ ಒಳ್ಳೆಯದು. ಆರೋಗ್ಯದ ಸಣ್ಣ ಸಮಸ್ಯೆಯನ್ನೂ ಸಹ ನಿರ್ಲಕ್ಷ್ಯ ಮಾಡಬೇಡಿ. ವೈವಾಹಿಕ ಜೀವನವು ಸುಖ ಶಾಂತಿಯಿಂದ ತುಂಬಿರುತ್ತದೆ. ಸಹೋದ್ಯೋಗಿ ಹಾಗೂ ಸಂಬಂಧಿಕರ ಬೆಂಬಲವನ್ನು ನೀವು ಪಡೆಯಬಹುದು.
ಧನುಸ್ಸು: ಕಠಿಣ ಪರಿಶ್ರಮದಿಂದ ಕಾರ್ಯಸಾಧನೆಯಾಗಲಿದೆ. ನೀವು ಉತ್ತಮ ಆರೋಗ್ಯವನ್ನು ಅನುಭವಿಸುವಿರಿ. ಉದ್ಯೋಗದಲ್ಲಿ ಸ್ವಲ್ಪ ಏರಳಿತಗಳನ್ನು ಎದುರಿಸಬೇಕಾದೀತು. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಪ್ರವಾಸಕ್ಕೆ ಹೋಗುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಕೊಂಚ ನಷ್ಟ ಅನುಭವಿಸಬೇಕಾದೀತು. ದಾಂಪತ್ಯ ಜೀವನದಲ್ಲಿ ಬಿಸಿಲು ನೆರಳಿನ ವಾತಾವರಣವಿರುತ್ತದೆ.
ಮಕರ: ಮಕ್ಕಳ ಭವಿಷ್ಯದ ಚಿಂತೆ. ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ. ಸಂಗಾತಿಯೊಂದಿಗೆ ತಾಳ್ಮೆಂದಿರಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಗಟ್ಟಿತನವೇ ನಿಮಗೆ ಧೈರ್ಯ ಕೊಡಲಿದೆ. ಅತಿಥಿಗಳ ಆಗಮನದಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಉದ್ಯೋಗಿಗಳು ಹಣ ಹೂಡಿಕೆ ಮಾಡಿದರೆ ನಷ್ಟವನ್ನು ಅನುಭವಿಸಬೇಕಾದೀತು. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ.
ಕುಂಭ: ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸಬಹುದು. ಗೃಹ ಕೃತ್ಯಗಳನ್ನು ಪೂರೈಸಲು ಇಂದು ಅನುಕೂಲಕರ ದಿನ. ಆರೋಗ್ಯದ ಕಡೆ ಹೆಚ್ಚಿನ ಗಮನವಹಿಸಿ. ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನದ ಸಾಧ್ಯತೆ. ನಿಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಸಮಾಧಾನದಿಂದ ಇರಬೇಕಾದ ಅವಶ್ಯಕತೆ ಇದೆ. ಶಿವನ ಅನುಗ್ರಹಕ್ಕೆ ಪಾತ್ರರಾಗುವಿರಿ.
ಮೀನ: ಯಾವುದೇ ವಾದ ವಿವಾದಗಳಿಗೆ ಕಿವಿ ಕೊಡಬೇಡಿ. ನಿಮ್ಮ ಸಂಗಾತಿಯಿಂದ ಅಚ್ಚರಿಯ ಸುದ್ದಿ ಕಾದಿರುತ್ತದೆ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಪಾಲುದಾರರ ಕೈಜೋಡಿಸುವ ಮುನ್ನ ಯೋಚಿಸಿ. ದೇವಿಯನ್ನು ಆರಾಧಿಸಿ ಇಷ್ಟಾರ್ಥವನ್ನು ನೀಡುವಳು. ಉದ್ಯೋಗ ಬದಲಾವಣೆ ಸಾಧ್ಯತೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗುವಿರಿ.
ಲೋಹಿತಶರ್ಮಾ, ಇಡುವಾಣಿ