Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 23ರ ದಿನಭವಿಷ್ಯ

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 23ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 23ರ ದಿನಭವಿಷ್ಯ
Numerology
Edited By:

Updated on: Jan 23, 2026 | 12:10 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನೀವು ಎಲ್ಲ ರೀತಿಯಿಂದ ಶ್ರಮ ಪಟ್ಟು, ಇನ್ನು ಆಗಲಾರದು ಎಂದುಕೊಂಡಿದ್ದ ಕೆಲವು ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಿಗೆ ಪವಾಡದ ರೀತಿಯಲ್ಲಿ ಮುಗಿಯಲಿದೆ. ನಿಮ್ಮ ಗೆಳೆಯ- ಗೆಳತಿಯರು ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ತಾತ್ಕಾಲಿಕ ಎಂಬಂತೆ ಸ್ವಲ್ಪ ಹಣಕಾಸಿನ ಅಗತ್ಯ ಕಂಡುಬರಲಿದೆ. ಸಂಗಾತಿ ಕಡೆಯಿಂದ ಈ ವಿಚಾರದಲ್ಲಿ ಸಹಾಯ ಒದಗಿ ಬರಲಿದೆ. ಸದ್ದಿಲ್ಲದೆ ಆರಂಭ ಮಾಡಿದ್ದ ವ್ಯಾಪಾರ- ವ್ಯವಹಾರಗಳು ಕೈ ಹಿಡಿಯುತ್ತಿರುವುದಕ್ಕೆ ಸೂಚನೆ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಸಂತೆ ಹೊತ್ತಿಗೆ ಮೂರು ಮೊಳ ಎಂಬ ರೀತಿಯಲ್ಲಿ ಯಾವ ಕೆಲಸವನ್ನು ಸಹ ಮಾಡುವುದಕ್ಕೆ ಹೋಗಬೇಡಿ. ತುರ್ತಾಗಿ ಕೆಲಸ ಮುಗಿಸುವ ಭರದಲ್ಲಿ ಗುಣಮಟ್ಟದ ಜೊತೆ ರಾಜೀ ಮಾಡಿಕೊಂಡು, ದೀರ್ಘಾವಧಿಯಲ್ಲಿ ಅದಕ್ಕಾಗಿ ಪಶ್ಚಾತಾಪ ಪಡುವಂತೆ ಆಗುತ್ತದೆ. ಸೋದರ- ಸೋದರಿಯರ ಜತೆಗಿನ ಭಿನ್ನಾಭಿಪ್ರಾಯ ಈಗಾಗಲೇ ಇದ್ದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ತಂದೆ- ತಾಯಿಗೆ ಬೇಸರ ಆಗುವಂತೆ ನಡೆದುಕೊಳ್ಳಬೇಡಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರ ಮೇಲೆ ದೂರುಗಳು ಮೇಲಧಿಕಾರಿಗೆ ಹೋಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಒಂದು ಬಗೆಯ ತೃಪ್ತಿ- ಸಮಾಧಾನ ಮನದಲ್ಲಿ ಮೂಡಲಿದೆ. ಉದ್ಯೋಗ, ವೃತ್ತಿ- ವ್ಯವಹಾರದಲ್ಲಿ ಮುಂದೆ ಏನಾಗಿಬಿಡುತ್ತೋ ಎಂದು ಆತಂಕ ಆಗಿದ್ದಲ್ಲಿ ಅದರಿಂದ ಹೊರಬರಲಿದ್ದೀರಿ. ನೀವು ಕೆಲಸ ಮಾಡುವ ಸಂಸ್ಥೆಗೆ ದೊಡ್ಡ ಮೊತ್ತದ ಆರ್ಡರ್ ಬರಬಹುದು, ಅಥವಾ ಇನ್ನೊಂದು ದೊಡ್ಡ ಸಂಸ್ಥೆಯೊಂದಿಗೆ ಜತೆಗೂಡಿ ವ್ಯವಹಾರ ಮುಂದುವರಿಸಲು ನಿರ್ಧರಿಸಬಹುದು. ಒಟ್ಟಿನಲ್ಲಿ ಈ ಬೆಳವಣಿಗೆಯಿಂದ ನಿಮಗೆ ಅನುಕೂಲ ಆಗಲಿದೆ. ನಿಮ್ಮ ಮಾನಸಿಕ ಸ್ಥೈರ್ಯ ಕುಗ್ಗಿಸುವುದಕ್ಕೆ ಪ್ರಯತ್ನಿಸುವವರಿಗೆ ಕಠಿಣವಾದ ಮಾತುಗಳಿಂದ ಎಚ್ಚರಿಕೆ ನೀಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.