ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 1 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಸ್ವಾತಿ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:07 ರಿಂದ 03:43ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ.
ಸಿಂಹ: ಬಹಳ ದಿನಗಳ ಸಂಬಂಧವು ಹಳಸಿಹೋಗುವ ಸಾಧ್ಯತೆ ಇದೆ. ಭವಿಷ್ಯವನ್ನು ಅತಿಯಾಗಿ ಕಲ್ಪಿಸಿಕೊಂಡು ಸಮಯವನ್ನು ಹಾಳುಮಾಡಿಕೋಳ್ಳುವುದು ಯೋಗ್ಯವಲ್ಲ. ಅಪರಿಚಿತ ವ್ಯಕ್ತಿಗಳು ಉದ್ಯೋಗಕ್ಕೆ ಒತ್ತಾಯ ಮಾಡಬಹುದು. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಬಯಕೆಯನ್ನು ಇಟ್ಟುಕೊಂಡಿದ್ದರೆ ಸ್ವಲ್ಪ ಸಮಯ ಕಾಯಬೇಕಾದೀತು. ಅಪರೂಪಕ್ಕೆ ಬಂದ ಅವಕಾಶದಲ್ಲಿ ಆಯ್ಕೆ ಮಾಡುತ್ತ ಇರುವುದು ಬೇಡ. ಉದ್ವೇಗದಲ್ಲಿ ಏನ್ನಾದರೂ ಮಾಡಿಕೊಳ್ಳಲು ಹೋಗಬೇಡಿ. ಕೆಲಸಕ್ಕೆ ಸಮಯಮಿತಿಯನ್ನು ಹಾಕಿಕೊಳ್ಳಿ.
ಕನ್ಯಾ: ಗೃಹನಿರ್ಮಾಣವನ್ನು ಮಾಡುವ ಅನಿವಾರ್ಯತೆ ಸೃಷ್ಟಿಯಾವಗುದು. ನಿಮ್ಮನ್ನು ಇಷ್ಟಪಡುವವರ ಜೊತೆ ಕಳೆಯಲು ಸಮಯವನ್ನು ಹೊಂದಿಸಿಕೊಳ್ಳುವಿರಿ. ರಾಜಕೀಯು ನಿಮ್ಮನ್ನು ಕೈ ಬೀಸಿ ಕರೆಯಬಹುದು. ನಿಮಗೆ ವ್ಯಕ್ತಿಯ ಮೇಲೆ ಉಂಟಾದ ಆಕರ್ಷಣೆಯಿಂದ ಹೊರಬರಲು ಬಹಳ ಕಷ್ಟಪಡುವಿರಿ. ಧಾರ್ಮಿಕವಾಗಿ ನೀವು ಏನನ್ನಾದರೂ ದೈವಜ್ಞರ, ಹಿರಿಯರ ಸಲಹೆಯನ್ನು ಪಡೆದು ಮಾಡಿ. ಹೆಚ್ಚು ಮಾತನಾಡುವುದರಿಂದ ಸಮಯವೂ ವ್ಯರ್ಥ, ಆಯಾಸವೂ ಆದೀತು. ಒಂಟಿಯಾಗಿ ನೀವು ಎಲ್ಲಿಗೂ ಹೋಗುವುದು ಬೇಡ. ಆಪ್ತ ಬಂಧುವನ್ನು ನೀವು ಕಳೆದುಕೊಳ್ಳುವಿರಿ.
ತುಲಾ: ಸಂಗಾತಿಯ ಜೊತೆಗಿನ ಅನ್ಯೋನ್ಯತೆಯು ಹೆಚ್ಚಾಗಬಹುದು. ಅಧಿಕಾರದ ಆಸೆಯಿಂದ ಅವ್ಯವಹಾರವನ್ನು ಮಾಡುವುದು ಬೇಡ. ಸಂಕುಚಿತ ಸ್ವಭಾವವು ನಿಮಗೆ ಅನೇಕ ಅವಕಾಶವನ್ನು ತಪ್ಪಿಸೀತು. ಸಂಗಾತಿಗಾಗಿ ಹಣವನ್ನು ಖರ್ಚುಮಾಡುವಿರಿ. ಪಕ್ಷಪಾತ ನೀತಿಯನ್ನು ಬಿಡುವ ಅನಿವಾರ್ಯತೆ ಸೃಷ್ಟಿಯಾದೀತು. ಹಣಕಾಸಿನ ಗೊಂದಲಕ್ಕೆ ಸರಿಯಾದ ತೆರೆ ಬೀಳಲಿದೆ. ಹೋಗುವ ಕೆಲಸವು ಇಂದು ಪೂರ್ಣವಾಗದೇ ಹೋದೀತು. ನಿಮ್ಮ ದುರ್ದೈವಕ್ಕೆ ಯಾರನ್ನೋ ಹೀಗಳೆಯುವುದು ಯೋಗ್ಯವಲ್ಲ. ನಿಮ್ಮ ಕಾಲ್ಪನಿಕ ಜಗತ್ತು ವಾಸ್ತವದಿಂದ ಬಹಳ ದೂರವಿರಲಿದೆ.
ವೃಶ್ಚಿಕ: ನಿಮ್ಮ ಸಮಯವನ್ನು ಯಾರಾದರೂ ವ್ಯರ್ಥವಾಗಿಸಬಹುದು. ಆ ಬಗ್ಗೆ ಹೆಚ್ಚಿನ ಗಮನವಿರಲಿ. ಇನ್ನೊಬ್ಬರ ನೋವಿನಿಂದ ಖುಷಿಪಡುವುದು ಒಳ್ಳೆಯದಾಗದು. ನಿಮ್ಮ ಮೇಲೆ ನಿಮಗೆ ನಂಬಿಕೆಯು ಕಡಿಮೆಯಾಗುವುದು. ಹೊಸತನ್ನು ಕಲಿಯುವ ಬಯಕೆ ಇದ್ದರೂ ಸಮಯ, ವ್ಯವಸ್ಥೆಯು ಕಷ್ಟವಾದೀತು. ನೇರ ನುಡಿಯನ್ನು ನಿಮ್ಮಿಂದ ಇಷ್ಟಪಡರು. ಉದ್ಯೋಗದಲ್ಲಿ ನೆಮ್ಮದಿ ಇದ್ದರೂ ಆದಾಯವು ಅಧಿಕವಿಲ್ಲ ಎಂಬ ಕೊರಗು ಇರಬಹುದು. ಹೆಚ್ಚಿ ಆದಾಯಕ್ಕೆ ದಿನ ಉಳಿದ ಸಮಯವನ್ನು ಬಳಸಿಕೊಲ್ಳಬಹುದು. ನಿಮ್ಮ ನಿರ್ಧಾರಗಳು ಅಸ್ಪಷ್ಟವಾಗಿ ಇರಿಲಿದೆ.
-ಲೋಹಿತಶರ್ಮಾ ಇಡುವಾಣಿ