
2025ರ ಕೊನೆಯ ತಿಂಗಳಾದ ಡಿಸೆಂಬರ್ ನಲ್ಲಿ ಗುರುವು ಮಿಥುನಕ್ಕೂ ಸೂರ್ಯನು ಧನುರಾಶಿಗೂ ಬರುವ ಕಾರಣ ಪರಸ್ಪರ ದೃಷ್ಟಿ ಬರಲಿದೆ. ನಾಲ್ಕು ಗ್ರಹರೂ ಗುರುವಿನ ರಾಶಿಯಾದ ಧನು ರಾಶಿಯಲ್ಲಿ ಇರುವುದು ಹಾಗೂ ಅವರ ಮೇಲೆ ಗುರುವಿನ ದೃಷ್ಟಿ ಒಂದು ಅಪೂರ್ವ ಘಟನೆಗೆ ಸಾಕ್ಷಿಯಾಗಲಿದೆ. ಹೊಸ ವರ್ಷದ ಹೊಸ್ತಿಲಿನಲ್ಲಿ ಈ ಗ್ರಹಗಳು ಭವಿಷ್ಯದ ದಿಕ್ಕನ್ನು ಬದಲಿಸಲಿವೆ ಮನುಷ್ಯನಿಗೂ ಹಲವು ಶುಭ ಭಾಗ್ಯವನ್ನೂ ತರಲಿವೆ. ಎಲ್ಲರಿಗೂ ಈ ತಿಂಗಳು ಮಂಗಲಕರವಾಗಿರಲಿ.
ಡಿಸೆಂಬರ್ ತಿಂಗಳಿನಲ್ಲಿ ಧನು ರಾಶಿಯನ್ನು ಪ್ರವೇಶಿಸುವ ಸೂರ್ಯನ ಪ್ರಭಾವದಿಂದ ಧೈರ್ಯ, ಪ್ರವಾಸ, ಹೊಸ ಕಾರ್ಯಾರಂಭಗಳು ಬಲವಾಗುತ್ತವೆ. ಹೋರಾಟದಲ್ಲಿ ಜಯ. ಸರ್ಕಾರದ ಸಂಪತ್ತನ್ನು ಪಡೆಯುವಿರಿ. ಮಿಥುನದಲ್ಲಿರುವ ಗುರು ನಿಮ್ಮ ಮಾತು, ಬೋಧನೆ, ಬರವಣಿಗೆ, ಸಂವಹನ ಕ್ಷೇತ್ರಗಳಲ್ಲಿ ಅದ್ಭುತ ಅವಕಾಶಗಳನ್ನು ನೀಡುವನು. ಕಲೆಯಲ್ಲಿ ಪ್ರಗತಿ ಕಾಣಿಸುವು. ಮೀನದಲ್ಲಿರುವ ಶನಿ ಹಳೆಯ ನಿಧಾನವಾಗಿ ಪರಿಹರಿಸಿ ಆಧ್ಯಾತ್ಮಿಕ ಬಲ ನೀಡುತ್ತಾನೆ. ದೂರ ಪ್ರಯಾಣ, ವಿದೇಶ, ಉನ್ನತ ಅಧ್ಯಯನಕ್ಕೆ ಶುಭ.
ಡಿಸೆಂಬರ್ ತಿಂಗಳಲ್ಲಿ ಹಣಕಾಸಿನಲ್ಲಿ ಬುದ್ಧಿವಂತ ನಿರ್ಧಾರಗಳನ್ನು ಮಾಡುವ ಕಾರಣ ಖರ್ಚುದ್ದರೂ ಅದನ್ನು ಸರಿ ತೂಗಿಸಿಬಲ್ಲಿರಿ. ಧನುವಿನಲ್ಲಿರುವ ಸೂರ್ಯನು ರಹಸ್ಯಜ್ಞಾನ, ಸಂಶೋಧನೆ, ಸಾಲ ಸಮಸ್ಯೆಗಳಿಗೆ ಪರಿಹಾರ, ಆಳವಾದ ಬದಲಾವಣೆಗಳನ್ನು ಕೊಡುವನು. ಮೀನದಲ್ಲಿರುವ ಶನಿ ಹಳೆಯ ಸ್ನೇಹ, ಸಂಪರ್ಕಗಳನ್ನು ಶುದ್ಧಗೊಳಿಸಿ ನಿಜವಾದವರನ್ನು ಉಳಿಸುತ್ತಾನೆ. ರಾಶಿಯ ಅಧಿಪತಿ ಅಷ್ಟಮದ ಧನು ರಾಶಿಯಲ್ಲಿ ಇರುವ ಕಾರಣ ನಿಮ್ಮದಲ್ಲದ ವಾಹನದಲ್ಲಿ ಓಡಾಡುವಿರಿ.
ಗುರು ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಡಿಸೆಂಬರ್ ದೊಡ್ಡ ತಿರುವಿನ ತಿಂಗಳು. ಆತ್ಮವಿಶ್ವಾಸ, ಪ್ರಸಿದ್ಧಿ, ಹೊಸ ಅವಕಾಶಗಳು, ನಾಯಕತ್ವ ಇವೆಲ್ಲಾ ಬಲವಾಗುತ್ತದೆ. ಸಂಸಾರದ ಭಿನ್ನಾಭಿಪ್ರಾಯವೂ ಪ್ರಶಾಂತವಾಗಲಿದೆ. ಧನು ಸೂರ್ಯನು ಸಂಬಂಧಗಳು ಮತ್ತು ಜೋಡಿ ಜೀವನದಲ್ಲಿ ಸ್ಪಷ್ಟತೆ ತರುತ್ತಾನೆ. ಸರ್ಕಾರಿ ಉದ್ಯೋಗದ ಸಂಗಾತಿ ನಿಮಗೆ ಸಿಗವರು. ಮೀನದಲ್ಲಿರುವ ಶನಿ ವೃತ್ತಿಯಲ್ಲಿ ಗಂಭೀರ ಬೆಳವಣಿಗೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತಾನೆ.
ಡಿಸೆಂಬರ್ ತಿಂಗಳಲ್ಲಿ ಮಿಥುನದ ಗುರು ನಿಮ್ಮ ದ್ವಾದಶ ಸ್ಥಾನದಲ್ಲಿ ಇರುವುದರಿಂದ ವಿದೇಶ, ಧ್ಯಾನ, ನಿದ್ರೆ, ಆತ್ಮಶಕ್ತಿ ಇವು ಬಲವಾಗುತ್ತವೆ. ಮನೆಯಿಂದ ವಿದ್ಯಾಭ್ಯಾಸದ ಕಾರಣಕ್ಕೆ ದೂರ ಇರುವಿರಿ. ಧನು ಸೂರ್ಯನು ಕೆಲಸ ಹುದ್ದೆಗಳಲ್ಲಿ ಹೊಸ ಅವಕಾಶ ತರುತ್ತಾನೆ. ಬಲವುಳ್ಳವರ ವಿರೋಧವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಮೀನದ ಶನಿ ನಂಬಿಕೆ, ಆಧ್ಯಾತ್ಮಿಕತೆ, ಗುರು ಶಿಷ್ಯ ಸಂಬಂಧಗಳಲ್ಲಿ ಪರಿಶುದ್ಧತೆ ತರುತ್ತಾನೆ. ಪೂರ್ವಸ್ಮರಣೆಯೂ ನಿಮಗಾಗಲಿದೆ.
ಐದನೇ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಗುರು ಲಾಭಸ್ಥಾನವನ್ನು ಬಲಪಡಿಸಿ ದೊಡ್ಡ ಜನಸಂಪರ್ಕ, ಸಾಮಾಜಿಕ ಹೆಸರು, ಬಹುಮುಖ್ಯ ವ್ಯಕ್ತಿಗಳ ಪರಿಚಯ ಮೀರಿ ಬರಲು ಅವಕಾಶವಿಸೆ. ಧನು ಸೂರ್ಯ ಪ್ರೇಮ, ಮಕ್ಕಳ, ಕಲೆ, ಸೃಜನಶೀಲತೆಗೆ ಅದ್ಭುತ ಬೆಳಕು ನೀಡುತ್ತಾನೆ. ಮೀನ ಶನಿ ಹೂಡಿಕೆ, ಜಂಟಿ ಹಣಕಾಸುಗಳಲ್ಲಿ ಜವಾಬ್ದಾರಿ ಕಲಿಸುತ್ತಾನೆ.
ಈ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ವೃತ್ತಿಯಲ್ಲಿ ನಿರೀಕ್ಷೆ ಮೀರಿದ ಅವಕಾಶಗಳು. ದಶಮದ ಗುರು ಗೌರವ ಪದವಿ ಉನ್ನತಸ್ಥಾನವನ್ನು ಕೊಡಿಸುವನು. ಕೇಳಿದ ಕಾರ್ಯಗಳು ವೃತ್ತಿಯಲ್ಲಿ ನಡೆಯುವುದು. ಧನುರಾಶಿಯಲ್ಲಿ ಸೂರ್ಯನಿದ್ದು ಮನೆ, ಕುಟುಂಬ, ಆಸ್ತಿ ವಿಚಾರದಲ್ಲಿ ಹೊಸ ಶುಭಾರಂಭ. ಹಿರಿಯರ ಅನುಭವನ್ನು ಪಡೆಯುವಿರಿ. ತಂದೆ ಅಥವಾ ತಂದೆಗೆ ಸಮಾನರಿಂದ ಸಂಪತ್ತು ಪ್ರಾಪ್ತಿ. ಮೀನದಲ್ಲಿ ಶನಿಯು ದಾಂಪತ್ಯ, ವ್ಯಾಪಾರ ಒಪ್ಪಂದ, ಪಾಲುದಾರಿಕೆಯಲ್ಲಿ ಗಂಭೀರತೆ ಮತ್ತು ದೀರ್ಘಕಾಲದ ಬಲವನ್ನು ನೀಡುತ್ತಾನೆ.
ಈ ತಿಂಗಳಲ್ಲಿ ನಿಮಗೆ ನವಮದಲ್ಲಿರುವ ಗುರುವಿನಿಂದ ಉನ್ನತ ಶಿಕ್ಷಣಕ್ಕೆ ಮಾರ್ಗ ಸ್ಪಷ್ಟವಾಗುವುದು. ಧರ್ಮ, ಅಧ್ಯಾತ್ಮದಲ್ಲಿ, ಸಾಹಿತ್ಯ ರಚನೆ ಅಥವಾ ಬೋಧನೆಯಲ್ಲಿ ಆಸಕ್ತಿ ಅಧಿಕವಾಗಲಿದೆ. ಸೂರ್ಯನು ತೃತೀಯದಲ್ಲಿದ್ದು ಸಂವಹನ, ವ್ಯವಹಾರದಲ್ಲಿ ಶಕ್ತಿ ನೀಡುತ್ತಾನೆ. ಪರಾಕ್ರಮದ ಪ್ರದರ್ಶನಕ್ಕೆ ಹೆಚ್ಚು ಮಹತ್ತ್ವವಿರುವುದು. ಮೀನ ಅಂದರೆ ಆರನೇ ರಾಶಿಯಲ್ಲಿ ಶನಿಯು ಆರೋಗ್ಯ ದಿನನಿತ್ಯ ಕಾರ್ಯಸೇವಾ ಮನೋಭಾವವನ್ನು ಶುದ್ಧಗೊಳಿಸುತ್ತಾನೆ.
ಎಂಟನೇ ರಾಶಿಯವರಿಗೆ ಈ ವಾರ ಗುರುವು ಅಷ್ಟಮದಲ್ಲಿದ್ದು ಅಪಮಾನ ಹಿಂಜರಿಕೆಯನ್ನು ನೋಡಬೇಕಾದೀತು. ಕಲಾವಿದರಿಗೆ ತೊಂದರೆ. ಹಂಚಿಕೆಗಳಲ್ಲಿ ಲಾಭವನ್ನು ತರುತ್ತಾನೆ. ಧನು ಸೂರ್ಯ ಹಣಕಾಸಿಗೆ ನೇರ ಬಲ. ಪ್ರಖರವಾದ ಮಂಡನೆಯನ್ನು ಮಾಡುವಿರಿ. ರಾಜಧನವನ್ನು ಪಡೆಯಬಹುದು. ಮೀನದಲ್ಲಿ ಶನಿ ಪ್ರೀತಿಯಲ್ಲಿ ಗಂಭೀರತೆ, ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಿಸುವನು. ಆಳವಾದ ಬದಲಾವಣೆ ನಿಮ್ಮಿಂದಾಗಲಿದೆ.
ಒಂಭತ್ತನೇ ರಾಶಿಯವರಿಗೆ ಈ ತಿಂಗಳಲ್ಲಿ ಸೂರ್ಯ ನಿಮ್ಮ ರಾಶಿಗೆ ಬಂದಿರುವುದರಿಂದ ಚೈತನ್ಯ, ಧೈರ್ಯ, ಹೊಸ ಜೀವನಚಕ್ರ ಆರಂಭ. ಕೋಪವೂ ಕಡಿಮೆ ಬಂದರೂ ಬಂದಮೇಲೆ ಉಗ್ರವಾದ ಪರಿಣಾಮವನ್ನೇ ಮಾಡಲಿದೆ. ಮಿಥುನದಲ್ಲಿನ ಗುರು ದಾಂಪತ್ಯದ ವೈಮನಸ್ಸು ದೂರಾಗುವುದು. ವ್ಯವಹಾರ ಪಾಲುದಾರಿಕೆಯಲ್ಲಿ ದೊಡ್ಡ ಯಶಸ್ಸು ನೀಡುತ್ತಾನೆ. ನಾಲ್ಕನೇ ರಾಶಿಯಲ್ಲಿ ಶನಿ ಮನೆ, ಕುಟುಂಬ, ಮನಸ್ಸು, ಆಸ್ತಿಯಲ್ಲಿ ಕಾರ್ಯಗಳು ವಿಳಂಬದಂತೆ ಕಂಡರೂ ದೀರ್ಘಪರಿಣಾಮ ಶಾಶ್ವತ.
ಇದನ್ನೂ ಓದಿ: ಆನಂದದಿಂದ ಕರ್ತವ್ಯ ನಿರ್ವಹಿಸಿದರೆ ಲಾಭ ಖಚಿತ
ಡಿಸೆಂಬರ್ ನಲ್ಲಿ ಈ ರಾಶಿಯವರಿಗೆ ಗುರು ಷಷ್ಠದಲ್ಲಿದ್ದು, ಗುರುವಿನ ಅಥವಾ ಗುರು ಸಮಾನರ ಜೊತೆ ಕಲಹ ಸಾಧ್ಯವಿದೆ. ಧನು ಸೂರ್ಯ ಆಧ್ಯಾತ್ಮಿಕತೆಯಿಂದ ವಿಮುಖ ಮಾಡಿಸುವನು. ವಿಶ್ರಾಂತಿ, ಮನಶ್ಶಾಂತಿಯೂ ಸರಿಯಾಗಿ ಸಿಗದಂತೆ ಆಗುವುದು. ಮೀನ ಶನಿ ಸಂವಹನ, ಸಹೋದರ, ಸಹೋದರಿ ವಿಷಯಗಳಲ್ಲಿ ಗಂಭೀರತೆ ತರುತ್ತಾನೆ. ಹೊಸ ಶುರು ಮಾಡಲು ಸಮಯ ಬೇಕು.
ಹನ್ನೊಂದನೇ ರಾಶಿಯವರಿಗೆ ಡಿಸೆಂಬರ್ ತಿಂಗಳಲ್ಲಿ ಪಂಚಮದ ಗುರುವು ಪ್ರೇಮ, ಕಲೆ, ಶೌರ್ಯ, ಮಕ್ಕಳಲ್ಲಿ ಅದ್ಭುತ ಯಶಸ್ಸು ನೀಡುತ್ತಾನೆ. ಏಕಾದಶದಲ್ಲಿರುವ ಸೂರ್ಯನು ಲಾಭ, ಸಂಪರ್ಕ, ಸಮೂಹಸಲ್ಲಿ ನಿಮ್ಮ ಪ್ರಾಮುಖ್ಯವನ್ನು ಹೆಚ್ಚಿಸುತ್ತಾನೆ. ಮೀನ ಶನಿ ಹಣಕಾಸಿನಲ್ಲಿ ಜವಾಬ್ದಾರಿ ಇದ್ದರೂ ನಿರ್ವಹಣೆ ಕಷ್ಟ. ಯಾವ ಕಡೆಯಿಂದಲೂ ಖರ್ಚು ಬರುವುದು. ತಿಂಗಳ ಕೊನೆಯಲ್ಲಿ ಕನಸುಗಿಂತ ದೊಡ್ಡ ಫಲವನ್ನು ಇರುವುದು.
ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ತಿಂಗಳಲ್ಲಿ
ಶನಿ ನಿಮ್ಮ ರಾಶಿಯಲ್ಲಿ ಇರುವುದರಿಂದ ಜೀವನದ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡುವನು. ಚತುರ್ಥದಲ್ಲಿ ಗುರುವು ಮನೆ, ಕುಟುಂಬ, ಆಸ್ತಿಯನ್ನು ಅವಶ್ಯಕತೆಗೆ ನೀಡಿ ತೃಪ್ತಿ ಪಡಿಸುವನು. ತಾಯಿಯ ಬಗ್ಗೆ ಅನುಕಂಪ ಬರಲಿದೆ. ಧನು ಸೂರ್ಯ ವೃತ್ತಿಯಲ್ಲಿ ಹೆಸರು, ಧೈರ್ಯದಿಂದ ಹೊಸ ಅವಕಾಶ ನಿಮ್ಮದಾಗಲಿದೆ.
– ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ