Daily horoscope: ವಿದ್ಯಾರ್ಥಿಗಳಲ್ಲಿ ಇಂದು ಪ್ರಗತಿ ಕಾಣಬಹುದು, ಉದ್ಯೋಗ ಸಿಗುವ ಸಾಧ್ಯತೆ

|

Updated on: Apr 02, 2023 | 5:00 AM

ಇಂದಿನ (2023 ಏಪ್ರಿಲ್​ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily horoscope: ವಿದ್ಯಾರ್ಥಿಗಳಲ್ಲಿ ಇಂದು ಪ್ರಗತಿ ಕಾಣಬಹುದು, ಉದ್ಯೋಗ ಸಿಗುವ ಸಾಧ್ಯತೆ
ಪ್ರಾತಿನಿಧಿಕ ಚಿತ್ರ
Image Credit source: entertainment.howstuffworks.com
Follow us on

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 2) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಶೂಲ, ಕರಣ : ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 28 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ. ರಾಹು ಕಾಲ 05:12 ರಿಂದ 06:43ರ ವರೆಗೆ, ಯಮಘಂಡ ಕಾಲ 12:36 ರಿಂದ 02:08ರ ವರೆಗೆ, ಗುಳಿಕ ಕಾಲ 03:40ರಿಂದ 05:12ರ ವರೆಗೆ.

ಮೇಷ: ನೀವು ಕಾರಣವಿಲ್ಲದೆ ಅತೃಪ್ತರಾಗುವಿರಿ. ಇದು ಶೀಘ್ರದಲ್ಲೇ ಕೊನೆಗೊಳ್ಳುವುದು. ಇಂದು ನಿಮಗೆ ಅಸುರಕ್ಷಿತ ಭಾವವಿರುವುದು. ಶಾಂತವಾಗಿ ನಿಮ್ಮ ಕೆಲಸವನ್ನು ಮಾಡಿ. ನಿಮ್ಮ ಈ ಉದ್ದೇಶವನ್ನು ನೀವು ಪೂರೈಸಿಕೊಂಡು ಮನಶಾಂತಿಯನ್ನು ಪಡೆಯುವಿರಿ. ಈ ದಿನ‌ ದಿನಚರಿಯಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಅನಗತ್ಯ ಸಂಭಾಷಣೆಯನ್ನು ಮಾಡಬೇಡಿ. ನಿಮ್ಮ ಮನಸ್ಸಿಗೆ ತೋಚಿದ್ದನ್ನು ನಿರ್ಬಿಡೆಯಿಂದ ಮಾಡುವಿರಿ.

ವೃಷಭ: ನಿಮ್ಮ ಸಮಸ್ಯೆಗೆ ಪರಿಹಾರ ತಾಳ್ಮೆಯಿಂದ ಕಂಡುಕೊಳ್ಳುವುದು ಒಳ್ಳೆಯದು. ಕೆಟ್ಟ ಸಮಯವು ಸಣ್ಣ ಅಪಘಾತ ಮಾಡಿ ಹೋಗುವುದು. ನಿಮ್ಮ ಭದ್ರತೆಯ ಬಗ್ಗೆ ಸ್ವಲ್ಪ ಜಾಗರೂಕರಾಗಿರಬೇಕಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನ‌ ಮಾಡುವ ಅವಶ್ಯಕತೆಯಿದೆ. ಪ್ರೇಮ ವ್ಯವಹಾರದ ವಿಷಯದಲ್ಲಿ ಉತ್ತಮವಾಗಿರುವುದು. ನೀವು ಹೊಸ ಸಂಬಂಧವನ್ನು ಪ್ರಾರಂಭಿಸಲು ಹೋದರೆ ಅದರಲ್ಲಿ ನೀವು ಯಶಸ್ಸನ್ನು ಪಡೆಯುವಿರಿ.

ಮಿಥುನ: ನಿಮ್ಮ ಸ್ನೇಹಿತರಿಗೆ ನೀವು ಸಲಹೆಯನ್ನು ಕೊಡಲಿದ್ದೀರಿ. ಅವರಿಗೆ ಸಹಾಯವನ್ನೂ ಮಾಡುವಿರಿ. ಸಲಹೆಯನ್ನು ನೀಡುವ ಮೊದಲು ಎಚ್ಚರಿಕೆ ಇರಲಿ. ಮನೋರಂಜನೆಗೆ ಸಂಬಂಧಿಸಿದ ವಿಷಯಗಳನ್ನು ಆಲೋಚಿಸುವಿರಿ. ನೀವು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಬಯಸುವಿರಿ. ಇಂದು ಕೆಲಸದ ಜೊತೆ ಸ್ವಲ್ಪ ವಿಶ್ರಾಂತಿಯನ್ನೂ ತೆಗೆದುಕೊಳ್ಳಿ. ವಿದ್ಯಾರ್ಥಿಗಳಲ್ಲಿ ಇಂದು ಪ್ರಗತಿ ಕಾಣಬಹುದು. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹತಾಶೆಯಾಗಲಿದೆ.

ಕಟಕ: ನಿಮಗೆ ನಿರರ್ಥಕ ಭಾವವಂಟಾಗಲಿದೆ. ಉಂಟುಮಾಡುತ್ತದೆ. ಯಶಸ್ಸಿನ ಹಿಂದೆ ಹೋಗಿ ವಿದ್ಯಾರ್ಥಿಗಳು ಜೀವನವನ್ನು ನಷ್ಟ ಮಾಡಿಕೊಳ್ಳುವರು. ಸತ್ಯವನ್ನು ಹೇಳಲು ನೀವು ಹಿಂಜರಿಯುವಿರಿ. ದಾಂಪತ್ಯದಲ್ಲಿ ಸಣ್ಣ ಕಲಹವುಂಟಾಗಲಿದೆ. ಪ್ರಾಣಿಗಳಿಂದ ಕಚ್ಚಿಸಿಕೊಳ್ಳುವ ಸಾಧ್ಯತೆ ಇದೆ.‌ ಉದ್ಯೋಗದಲ್ಲಿ ಗೊಂದಲಗಳು ಇರಲಿವೆ. ಮಕ್ಕಳ ಅಶಿಸ್ತಿನ ನಡೆತೆಯು ಪಾಲಕರಿಗೆ ಮುಜುಗರವಾಗಬಹುದು. ಒಬ್ಬೊಂಟಿಯಾಗಿರುವುದು ಸುಖವೆನಿಸಬಹುದು.

ಸಿಂಹ: ನೀವಿಂದು ಯಶಸ್ಸಿನ ಶಿಖರವೇರುವಿರಿ. ನಿಮಗೆ ಸಲಹೆಯನ್ನು ಕೊಡುವವರು ಬಹಳ ಮಂದಿ ಇರಲಿದ್ದಾರೆ. ನೀವು ಪ್ರೀತಿಪಾತ್ರರಿಗೆ ಅಧಿಕಸಮಯವನ್ನು ಮೀಸಲಿಡುವಿರಿ. ಜೀವನದಲ್ಲಿ ಸಾಧಿಸುವ ಛಲದಲ್ಲಿ ನಿಷ್ಕರುಣೆ ಇರಲಿದೆ. ನೀವಿಂದು ಉತ್ಸಾಹದಿಂದ ಕೆಲಸಗಳನ್ನು ಮಾಡುವಿರಿ. ಉದ್ವೇಗದಲ್ಲಿ ಏನನ್ನಾದರೂ ಹೇಳಬಹುದು. ನಿಮ್ಮ ಯೋಜನೆಗಳನ್ನು ಬದಲಾಯಿಸಬೇಡಿ. ಸೂಕ್ತ ಕಾಲಕ್ಕೆ ಅದು ಬೆಳೆಯುವುದು.

ಕನ್ಯಾ: ಆತ್ಮವಿಶ್ವಾಸದ ಕೊರತೆಯಿಂದ ನೀವು ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ. ನಿಮಗೆ ಸ್ನೇಹಿತರ‌ ಬೆಂಬಲ ಸಿಕ್ಕಿ ವಿಶ್ವಾಸವನ್ನು ಗಳಿಸಿಕೊಳ್ಳುವಿರಿ. ಅಧಿಕವಾಗಿ ಮಾತನಾಡಿ ಸಿಕ್ಕಿ ಹಾಕಿಕೊಳ್ಳಬೇಡಿ. ಇಂದು ನೀವಂದುಕೊಂಡಷ್ಟು ಸರಳವಾಗಿ ಯಾವ ಕೆಲಸವೂ ಆಗದು.‌ ಸರ್ಕಾರಿ ಕೆಲಸಗಳು‌ ನಿಧಾನಗತಿಯಲ್ಲಿ ಕುಂಟುತ್ತಾ ಸಾಗಲಿದೆ. ದಂಪತಿಸಹಿತರಾಗಿ ವಿಹಾರವನ್ನು ಮಾಡಲಿದ್ದೀರಿ. ಆಹಾರದ ವಿಚಾರದಲ್ಲಿ ಇತಿಮಿತಿ ಇರಲಿ. ಕೊರತೆಯನ್ನು ಕಂಡುಕೊಳ್ಳುತ್ತ ಕೊರಗುವ ಸಾಧ್ಯತೆ ಇದೆ.

ತುಲಾ: ನೀವು ಜೀವನದಲ್ಲಿ ಜಾದುವಿನಂತೆ ಏನಾದರೂ ನಡೆಯಲಿ ಎನ್ನುವ ಬಯಕೆಯನ್ನು ಇಟ್ಟುಕೊಂಡಿದ್ದೀರಿ. ಒಂದೇ ರೀತಿಯ ಜೀವನವು ಸಪ್ಪೆ ಎನಿಸಬಹುದು. ಪ್ರತಿ ಕ್ಷಣವನ್ನೂ ಆನಂದಿಸುತ್ತಾ ಮುಂದುವರಿಯುವಿರಿ. ಅಧಿಕಾರಿಗಳ‌ ಆದೇಶವನ್ನು ಪಾಲಿಸಿದ್ದಕ್ಕೆ ನಿಮಗೆ ಪ್ರಶಂಸೆ ಸಿಗಲಿದೆ. ದೊಡ್ಡ ಸಾಧನೆಯ ಬೆನ್ನು ಹತ್ತಿ ಎಲ್ಲವನ್ನೂ ಮರೆಯಲಿದ್ದೀರಿ. ಪ್ರಯತ್ನಕ್ಕೆ ತಕ್ಕ ಫಲವಿಲ್ಲ ಎಂಬ ಕೊರಗು ಇರಲಿದೆ. ವಾಹನಸಂಚಾರದಲ್ಲಿ‌ ತೊಂದರೆಗಳು ಬರಬಹುದು. ಕೃಷಿಕರಿಗೆ ಬೆಲೆ ಏರಿಕೆಯಿಂದ ಸಂತವಾಗಲಿದೆ.

ವೃಶ್ಚಿಕ: ಇಂದು ನಿಮ್ಮವರಿಗೆ ಸಾಲವಾಗಿ ಹಣವನ್ನು ಕೊಡಲಿದ್ದೀರಿ. ನಿಬಂಧನೆಗಳೊಂದಿಗೆ ಇರಲಿ. ಸ್ಪರ್ಧಾತ್ಮಕಪರೀಕ್ಷೆಗೆ ಬಹಳ ತಯಾರಿ ನಡೆಯಲಿದೆ. ಸಂಶೋಧಕರಾಗಿದ್ದರೆ ನಿಮಗೆ ಗೌರವಗಳು ಸಿಗಲಿವೆ.‌ ವಿದೇಶಕ್ಕೆ ಹೋಗಲು ಕರೆಯಬಹುದು. ಕಛೇರಿಯಲ್ಲಿ ಒತ್ತಡಗಳು ಅಧಿಕವಾಗಿದೆ. ತಂದೆಯ ಮಾತಿಗೆ ವಿರುದ್ಧವಾಗಿ ನಡೆದುಕೊಳ್ಳುವಿರಿ. ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವಿರಿ. ನೂತನ ವಸ್ತುಗಳನ್ನು ಖರೀದಿಸುವ ವೇಗದಲ್ಲಿ ಆರ್ಥಿಕವಾಗಿ ನಷ್ಟವನ್ನು ಮಾಡಿಕೊಳ್ಳುವಿರಿ.

ಧನುಸ್ಸು: ಕೋಪದ ಕೈಗೆ ಬುದ್ಧಿಕೊಟ್ಟು ತೊಂದರಗೆ ಸಿಕ್ಕಿಹಾಕಿಕೊಳ್ಳಬಹುದು. ಅತಿಯಾದ ಆಸೆಯಿಟ್ಟುಕೊಂಡು ಅದನ್ನು ಪಡೆಯಲಾಗದೇ ಸೋಲುವಿರಿ. ಅನಾರೋಗ್ಯದಿಂದ ನೀವು ಆಸ್ಪತ್ರೆಗೆ ಹೋಗಬೇಕಾಗಿ ಬರಬಹುದು. ಖರ್ಚನ್ನು ಕಡಿಮೆ ಮಾಡುವ ನೆಪದಲ್ಲಿ ಹಣವನ್ನು ಕಳೆದುಕೊಳ್ಳಬೇಕಾಗಬಹುದು. ದುಷ್ಟರ ಸಹವಾಸದಿಂದ ಇಂದು ದೂರವಿಲಾಗಲಿದ್ದೀರಿ. ಭೂಮಿಯ ವ್ಯವಹಾರದಲ್ಲಿ ನಷ್ಟವಾಗಿ ಆ ವೃತ್ತಿಯನ್ನು ಬಿಡಲಿದ್ದೀರಿ.

ಮಕರ: ಭವಿಷ್ಯದ ಬಗ್ಗೆ ಅತಿಯಾದ ಆಲೋಚನೆ ಇರಲಿದೆ. ಅನ್ಯರ ಮಾತನ್ನು ಕೇಳಿ ಸಂಬಂಧದಲ್ಲಿ ಒಡಕು ತಂದುಕೊಳ್ಳುವಿರಿ. ನಿಮ್ಮ ಸಹೋದರಿಗೆ ಧನಸಹಾಯ ಮಾಡಬೇಕಾಗಿಬರಬಹುದು. ನಿಮ್ಮ ಒತ್ತಡವನ್ನು ಕಂಡು ಕಛೇರಿಯಲ್ಲಿ ನಿಮಗೆ ಸಹಾಯಕ್ಕೆ ಬರಲಿದ್ದಾರೆ. ಸ್ನೇಹಿತ ಜೊತೆ ಔತಣಕೂಟವಿರಲಿದೆ. ನಿಮ್ಮ ಯೋಚನೆಗಳನ್ನು ಪತ್ನಿಯು ಗೌರವಿಸುವಳು. ಆಪತ್ತಿನ ಧನವನ್ನು ಇಂದು ಖರ್ಚುಮಾಡಿಕೊಳ್ಳುವ ಸಾಧ್ಯತೆ ಇದೆ. ಕೆಲವು ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವುದು ಬೇಡ. ಹಾಗೆಯೇ ಇರಲಿ.

ಕುಂಭ: ಆಸ್ತಿಯ ವಿಚಾರವಾಗಿ ತಂದೆ ಹಾಗೂ ಸಹೋದರರ ನಡುವೆ‌ ಮಾತಿನ ತಿಕ್ಕಾಟವಿರಲಿದೆ. ನ್ಯಾಯಾಲಯದ ತೀರ್ಮಾನವನ್ನು ಒಪ್ಪದೇ ಧಿಕ್ಕರಿಸುವ ಹಂತಕ್ಕೆ ಹೋಗುವಿರಿ. ‌ಮನಸ್ಸಿನ‌ ಮೇಲೆ‌ ನಿಯಂತ್ರಣ ಇರಲಿ. ಕೃತಘ್ನತೆಯ ಅನುಭವವು ನಿಮಗಾಗಲಿದೆ. ಮಕ್ಕಳು ನಿಮಗೆ ವಂಚನೆ ಮಾಡಲಿದ್ದಾರೆ. ನಿಮಗಾದ ನೋವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಿ. ನಿಮ್ಮ ಉದ್ಯೋಗವು ನಿಧಾನವಾಗಿ ವೃದ್ಧಿಯಾಗಲಿದೆ. ಸಮಾರಂಭಗಳಿಗೆ ಹೋಗಲಿದ್ದೀರಿ.

ಮೀನ: ನಿಮಗೆ ಪರೀಕ್ಷೆಯ ಕಾಲವಿದಾಗಲಿದೆ. ಮನೆಯನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸುವಿರಿ. ಸತಿಗೆ ಅನಿರೀಕ್ಷಿತ ಕೊಡುಗೆಯನ್ನು ನೀಡುವಿರಿ. ನಿದ್ರೆಯಾಗದೇ ಹಿಂಸೆಪಡುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೀರಿ. ಸಮಾಜದಿಂದ‌ ಮನ್ನಣೆಯು ಸಿಗಬಹುದು. ನಾಯಕರಿಗೆ ಬೆಂಬಲವು ಸಿಗಲಿದೆ. ದೂರ ಹೋಗುವ ಪ್ರಯಾಣವು ರದ್ದಾಗಲಿದೆ. ಅವಘಟದಿಂದ ಪಾರಾಗುವಿರಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)