ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ರಿಂದ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 56 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:30 ರಿಂದ 02:07ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:40 ರಿಂದ 09:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:30ರ ವರೆಗೆ.
ಮೇಷ: ಹೊಸ ಜೀವನ ಶೈಲಿಯು ನಿಮಗೆ ಕಷ್ಟವಾಗಬಹುದು. ಮನಸ್ಸನ್ನು ನಿಯಂತ್ರಿಸಲು ನಿಮಗೆ ಕಷ್ಟವಾದೀತು. ನಿಮ್ಮ ಜೊತೆ ಸಂಧಾನಕ್ಕೆ ಬರಬಹುದು. ದ್ವೇಷವನ್ನು ಮರೆಯಲು ಹಿರಿಯರು ನಿಮಗೆ ಉಪದೇಶವನ್ನು ಮಾಡಬಹುದು. ಅಧಿಕ ಆದಾಯದಿಂದ ಕಷ್ಟವಾದೀತು. ಲೆಕ್ಕಪತ್ರಗಳನ್ನು ಸರಿಯಾಗಿ ಇಡಿ. ಸಾಮಾಜಿಕ ಕೆಲಸದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ಪ್ರೀತಿ ಬರಬಹುದು. ಸಂಗಾತಿಯ ಜೊತೆ ಒಂದೇ ವಿಚಾರದಲ್ಲಿ ಕಲಹವಾಗಬಹುದು. ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಅನುಕೂಲತೆಗಳು ಉಂಟಾಗಬಹುದು.
ವೃಷಭ: ಅರಂಭಿಸಿದ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಿ ನೆಮ್ಮದಿಯಿಂದ ಇರುವಿರಿ. ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ದೂರವಿಡಿ. ಅತಿಯಾದ ಆಲಸ್ಯ ಮತ್ತು ಅಹಂಕಾರ ನಿಮ್ಮನ್ನು ವ್ಯವಹಾರಗಳಿಂದ ಹೊರಗಿಡಬಹುದು. ಸಂಗಾತಿಯ ಆದಾಯವನ್ನು ನೀವು ಪಡೆಯಬಹುದು. ನೂತನ ವಾಹನವನ್ನು ಖರೀದಿಸುವಿರಿ. ಹೆಚ್ಚಿನ ಆದಾಯಕ್ಕೆ ವೃತ್ತಿಯನ್ನು ಬದಲಿಸುವಿರಿ. ಸಮಯಕ್ಕೆ ಸರಿಯಾಗಿ ನಿದ್ರೆಯ ಅವಶ್ಯಕತೆ ಇರಲಿದೆ. ನಿಮ್ಮ ಜಾಣ ಕಿವುಡುತನ ಎಲ್ಲರಿಗೂ ಗೊತ್ತಾಗಬಹುದು. ಪಕ್ಷಪಾತ ಮಾಡುವ ದೂರು ಬರಬಹುದು.
ಮಿಥುನ: ಕಷ್ಟಗಳಿಗೆ ನೆರವಾಗುವುದನ್ನು ಸ್ವಭಾವವಾಗಿ ಮಾಡಿಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳಿಗೆ ಓಡಾಟವು ಹೆಚ್ಚಾಗಬಹುದು. ಹೆಚ್ಚು ಜನರ ಸಂಪರ್ಕ ಮಾಡಬೇಕಾದ ಅನಿವಾರ್ಯತೆ ಬರಬಹುದು. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಸ್ನೇಹಿತರ ತಪ್ಪು ನಿಮ್ಮ ಮೇಲೆ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ಉತ್ತಮ ಫಲಿತಾಂಶವನ್ನು ಪಡೆಯಬಹುದು. ವಿದೇಶದಲ್ಲಿ ವೃತ್ತಿಯು ನಿಮ್ಮನ್ನು ಕರೆದರೂ ನೀವು ಹೋಗಲು ಆಸಕ್ತಿ ತೋರಿಸುವುದಿಲ್ಲ. ಕೋಪಗೊಳ್ಳುವ ಸಂದರ್ಭದಲ್ಲಿ ನೀವು ಮೌನವಹಿಸುವಿರಿ.
ಕಟಕ: ಸರ್ಕಾರಿ ಕಚೇರಿಗೆ ಆಸ್ತಿಯ ವಿಚಾರವಾಗಿ ಹೆಚ್ಚು ಅಲೆದಾಟವಾಗಬಹುದು. ಸಂಪಾದನೆಯು ಇಂದು ನಿಮ್ಮ ನಿರೀಕ್ಷಯ ಮಟ್ಟವನ್ನು ತಲುಪಬಹುದು. ನಿಮ್ಮ ಬಂಧುಗಳು ಆರ್ಥಿಕ ಸಹಾಯಕ್ಕಾಗಿ ನಿಮ್ಮಲ್ಲಿಗೆ ಬರುವರು. ಕೆಲಸದ ಮಧ್ಯದಲ್ಲಿಯೂ ಕುಟುಂಬದ ಆಗು ಹೋಗುಗಳತ್ತ ಗಮನಹರಿಸುವಿರಿ. ಹಳೆಯ ಸ್ನೇಹಿತರ ಜೊತೆ ಕಾಲ ಕಳೆಯುವಿರಿ. ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಎಲ್ಲ ಕೆಲಸಗಳೂ ಏಕಕಾಲಕ್ಕೆ ಬರಬಹುದು. ನಿಮ್ಮ ಮೇಲಿನ ಭರವಸೆಯು ಸುಳ್ಳಾಗದೇ ಇರಲಿದೆ.
ಸಿಂಹ: ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿದ್ದು ಒಪ್ಪಿಕೊಳ್ಳುವಿರಿ. ಪ್ರಭಾವಶಾಲಿ ವ್ಯಕ್ತಿಯ ಭೇಟಿಯಾಗುವುದು. ಓದಿನಲ್ಲಿ ಆಸಕ್ತಿ ಹೆಚ್ಚಾಗಬಹುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಿರಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಕಾಡಬಹುದು. ತಾಯಿಯ ಜೊತೆ ವಾದವನ್ನು ಮಾಡುವಿರಿ. ಸಂಗಾತಿಗೆ ಹಿರಿಯರ ಆಸ್ತಿ ಸಿಗಬಹುದು. ಸೂಕ್ತ ವೈವಾಹಿಕ ಸಂಬಂಧವು ದೊರೆಯುವ ಸಾಧ್ಯತೆ ಇದೆ. ಹಿರಿಯರಿಂದ ನಿಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಹೆಚ್ಚಿನ ಮಾಹಿತಿ ಲಭ್ಯವಾಗುವುದು.
ಕನ್ಯಾ: ಸ್ನೇಹಿತರ ಜೊತೆ ವ್ಯವಹಾರ ಮಾಡುವಾಗ ಅಪನಂಬಿಕೆಗಳು ಬಾರದಂತೆ ಎಚ್ಚರವಹಿಸಿರಿ. ಸ್ವಂತ ವ್ಯವಹಾರದಲ್ಲಿ ನಷ್ಟವಾಗಬಹುದು. ನಿಮ್ಮ ಮಾತುಗಳು ನಿಮಗೆ ಗೌರವ ತರಲಿ. ಉದಾಸೀನ ಮನಃಸ್ಥಿತಿಯಿಂದ ವ್ಯಾಪಾರದಲ್ಲಿ ನಷ್ಟವಾದರೂ ಗುಣಮಟ್ಟ ಹಾಗೆಯೇ ಇರಲಿದೆ. ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಬರಬಹುದು. ನೌಕರರಿಗೆ ಹೆಚ್ಚು ಒತ್ತಡವಾಗಬಹುದು. ಕೃಷಿಯು ನಿಮಗೆ ಆಸಕ್ತಿಯ ವಿಷಯವಾಗಿದ್ದು ತೊಡಗಿಕೊಳ್ಳಲು ತೊಡಕುಗಳು ಇರಲಿದೆ. ನೀವು ತೆರಿಗೆಯ ವಿಚಾರದಲ್ಲಿ ಸರಿಯಾಗಿ ಇರಬೇಕಾಗಬಹುದು.
ತುಲಾ: ಮಹಿಳೆಯರು ಸಕಾರಾತ್ಮಕ ಚಿಂತನೆಯತ್ತ ಗಮನಕೊಡುವುದು ಉತ್ತಮ. ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಉದ್ಯೋಗದಲ್ಲಿ ನಿಮ್ಮ ಛಾಪನ್ನು ಮೂಡಿಸಿಕೊಳ್ಳುವಿರಿ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದು ಖರ್ಚು ಇನ್ನೂ ಅಧಿಕವಾಗಬಹುದು. ಸಂಸಾರದಲ್ಲಿ ಕಲಹವಾಗಬಹುದು. ವಿದೇಶದಲ್ಲಿದ್ದು ಸಂಗಾತಿಯನ್ನು ಹುಡುಕುತ್ತಿದ್ದರೆ ಸಂಗಾತಿಯು ಸಿಗುವ ಸಾಧ್ಯತೆ ಇದೆ. ಕೃಷಿ ಸಂಬಂಧಿಸಿದ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚಿನ ಹುದ್ದೆಯನ್ನು ನೀಡುವ ಪ್ರಸ್ತಾಪವೂ ಬರಬಹುದು.
ವೃಶ್ಚಿಕ: ಉನ್ನತ ಅಧಿಕಾರಿಗಳಿಗೆ ಮುಂಬಡ್ತಿ ದೊರೆಯುವ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಅವಸರ ಬೇಡ. ಖರ್ಚನ್ನು ನಿಭಾಯಿಸುವುದು ನಿಮಗೆ ಬಹಳ ಕಷ್ಟವಾದೀತು. ಸಹೋದ್ಯೋಗಿಗಳ ಜೊತೆ ಹೆಚ್ಚಿನ ವಿವಾದಗಳು ಬೇಡ. ಸಾಮಾಜಿಕ ಜೀವನದಲ್ಲಿ ಹೆಚ್ಚು ಪ್ರಗತಿ ಕಾಣುವಿರಿ. ಹಲವು ದಿನಗಳಿಂದ ಕಣ್ಮರೆಯಾಗಿದ್ದ ಸರ್ಕಾರಿ ದಾಖಲೆಗಳು ಇಂದು ಸಿಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಶ್ರದ್ಧೆಯು ಬರಬಹುದು. ನಿಮ್ಮನ್ನು ಕಛೇರಿಯಲ್ಲಿ ಗಮನಿಸಬಹುದು. ಹಾಗಾಗಿ ಸಣ್ಣ ನಡೆಯೂ ದೊಡ್ಡ ಸುದ್ದಿಗೆ ಕಾರಣವಾಗಬಹುದು.
ಧನಸ್ಸು: ಭೂಮಿಯ ಉತ್ಪನ್ನದ ವ್ಯವಹಾರವು ಬಹಳ ಚೆನ್ನಾಗಿ ಆಗಬಹುದು. ಸರ್ಕಾರದಿಂದ ಬರಬೇಕಾದ ಹಣವು ಬಂದು ಸಾಲದಿಂದ ನೀವು ಮುಕ್ತವಾಗುವಿರಿ. ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಿ. ಸಾಹಸಪ್ರಿಯರಿಗೆ ಹೊಸ ವಿಚಾರಗಳು ಬರಬಹುದು. ಇಂದು ನಿಮ್ಮ ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ವ್ಯಾಪಾರಗಳಲ್ಲಿ ಚೇತರಿಕೆ ಕಂಡು ಸಂತಸವಾಗುವುದು. ನಿಮ್ಮ ಕಾರ್ಯಕ್ಷಮತೆಯನ್ನು ಸಂಸ್ಥೆಯು ಪ್ರಶಂಸಿಸುವುದು. ಹಣಕಾಸಿಗೆ ಸಂಬಂಧಿಸಿದ ದಾಖಲೆಗಳು ಸರಿಯಾಗಿ ಇರಲಿ.
ಮಕರ: ಭೂಮಿಯ ವ್ಯವಹಾರದವರಿಗೆ ನಂಬಿಕೆ ದ್ರೋಹ ಆಗಬಹುದು. ದಾಂಪತ್ಯದಲ್ಲಿ ಅನ್ಯೋನ್ಯತೆ ಮೂಡುವುದು ಕಷ್ಟವಾದೀತು. ನಡವಳಿಕೆಯಿಂದ ನಿಮ್ಮ ವರ್ಚಸ್ಸು ಹೆಚತಚಾಗುವುದು. ವಿದೇಶಿದಲ್ಲಿ ಇರುವವರು ಸ್ವಂತ ಉದ್ಯೋಗವನ್ನು ಆರಂಭಿಸಬಹುದು. ಆರ್ಥಿಕ ಸ್ಥಿತಿಯು ಸ್ವಲ್ಪ ಸುಧಾರಣೆಯಾಗಲಿದೆ. ಮಾರ್ಗದರ್ಶಕರ ಸಲಹೆಯಂತೆ ನಿಮ್ಮ ಗುರಿಮುಟ್ಟುವ ಹಾದಿಯನ್ನು ಬದಲಿಸಿಕೊಳ್ಳಿ. ರಾಜಕೀಯ ವ್ಯಕ್ತಿಗಳಿಗೆ ಹುದ್ದೆ ದೊರೆಯುವುದು. ನೀವು ಪ್ರೇಮದಲ್ಲಿ ಬಿದ್ದುದರಿಂದ ಹಿರಿಯರು ನಿಮ್ಮ ಪ್ರೀತಿಗೆ ಒಪ್ಪಿಗೆ ನೀಡುವರು. ವೃತ್ತಿಯಲ್ಲಿ ಬಹಳ ಜಾಣ್ಮೆಯಿಂದ ಕೆಲಸವನ್ನು ಮಾಡುವಿರಿ.
ಕುಂಭ: ಇಂದು ನಿಮಗೆ ಒಡಹುಟ್ಟಿದವರು ಸಾಕಷ್ಟು ವಿರೋಧವನ್ನು ಮಾಡಿಯಾರು. ಖರ್ಚಿಗೆ ತಕ್ಕಂತೆ ಆದಾಯವೂ ಬರುವುದರಿಂದ ಆರ್ಥಿಕ ಸ್ಥಿತಿಯು ಸಮತೋಲನದಲ್ಲಿ ಇರವುದು. ಪಿತ್ರಾರ್ಜಿತ ಆಸ್ತಿಗಾಗಿ ಬಂಧುಗಳ ನಡುವೆ ಭಿನ್ನಾಭಿಪ್ರಾಯ ಮೂಡಲಿದೆ. ಯಂತ್ರಗಳ ಉತ್ಪಾದನಾ ಕ್ಷೇತ್ರದಲ್ಲಿರುವವರಿಗೆ ಹೆಚ್ಚು ಲಾಭ ದೊರೆಯುವುದು. ಹಿರಿಯರ ಆರೋಗ್ಯ ಸಮಸ್ಯೆಗಳು ಸರಿಯಾಗಬಹುದು. ನಿಮ್ಮವರನ್ನು ಸತ್ಕಾರ್ಯಕ್ಕೆ ಮನವೊಲಿಸಲು ಶ್ರಮಪಡಬೇಕಾದೀತು. ಸ್ಥಿರಾಸ್ತಿಗೆ ಸಂಬಂಧಿಸಿದ ಸರ್ಕಾರಿ ಕಾನೂನು ತೊಡಕುಗಳು ಇಂದು ನಿವಾರಣೆಯಾಗುವುದು.
ಮೀನ: ವ್ಯವಹಾರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಬಹಳ ಶ್ರಮಪಡುವಿರಿ. ನೀವು ಸಂಸ್ಥೆಯ ಅಭಿವೃದ್ಧಿಯ ಸಲಹೆಗಾರರಾಗಿ ನೇಮಕಗೊಳ್ಳಬಹುದು. ನಿಮ್ಮ ಕೆಲಸವನ್ನು ನಿಯಮಬದ್ಧವಾಗಿ ಮಾಡಿ ಮುಗಿಸುವುದು ಉತ್ತಮ. ಎಲ್ಲ ವಿಚಾರಗಳಲ್ಲೂ ನಿಮ್ಮದೇ ಅಭಿಪ್ರಾಯ ಹೇಳುವುದಕ್ಕಿಂತ ಇತರರ ಅಭಿಪ್ರಾಯಗಳಿಗೂ ಬೆಲೆ ಕೊಡಿ. ಹೊಸ ನೀರು ಹರಿದು ಬರಬಹುದು. ಸ್ತ್ರೀರೋಗತಜ್ಞರಿಗೆ ಬೇಡಿಕೆ ಹೆಚ್ಚಾಗಿ ಸಂಪಾದನೆ ಅಧಿಕವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗಲಿದೆ.
-ಲೋಹಿತಶರ್ಮಾ ಇಡುವಾಣಿ (ವಾಟ್ಸ್ಆ್ಯಪ್- 8762924271)