Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ

|

Updated on: Mar 13, 2023 | 7:11 AM

2023 ಮಾರ್ಚ್ 13ರ ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿ ತಿಳಿದುಕೊಳ್ಳಿ

Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಫಲ, ಭವಿಷ್ಯ ಹೀಗಿದೆ
ನಿತ್ಯಭವಿಷ್ಯ
Follow us on

ಶುಭೋದಯ ಓದುಗರೇ ಪ್ರತಿ ದಿನ ಸೂರ್ಯ, ಚಂದ್ರ ಹುಟ್ಟುತ್ತಾರೆ. ಭೂಮಿ ತಿರುಗುತ್ತಿರುತ್ತೆ. ಪ್ರತಿಯೊಬ್ಬರ ಜೀವನವು ನಡೆಯುತ್ತಲೇ ಇರುತ್ತೆ. ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ(2023 ಮಾರ್ಚ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಸೋಮವಾರ , ತಿಥಿ: ಷಷ್ಠಿ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಹರ್ಷಣ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ, ಸೂರ್ಯಾಸ್ತ 06 ಗಂಟೆ 40 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 08: 13 ರಿಂದ 09:43ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11: 13 ರಿಂದ 12:42ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ: 01:42 ರಿಂದ 03:42 ವರೆಗೆ.

ಮೇಷ: ಅನೀತಿಮಾರ್ಗದಿಂದ ಹಣಸಂಪಾದನೆಯನ್ನು ಮಾಡುವ ಮನಸ್ಸು ಮಾಡಲಿದ್ದೀರಿ. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ‌. ದೂರದ ಊರಿಗೆ ಕಾರ್ಯದ ಕಾರಣ ಪ್ರಯಾಣ ಮಾಡುವ ಸಂಭವವಿದೆ. ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಿಗಲಿದೆ. ಕೆಲವು ದಿನಗಳಿಂದ ಅನುಭವಿಸಿರುವವ ಖಾಯಿಲೆಯು ಕಡಿಮೆಯಾಗುವುದು. ಮಕ್ಕಳು ನಿಮಗೆ ಶುಭವಾರ್ತೆಯನ್ನು ಕೇಳಿಸುವರು‌. ದಾಂಪತ್ಯದ ಸುಖಜೀವನವು ಅನುಭವಕ್ಕೆ ಬರಲಿದೆ. ಗುರುಚರಿತ್ರೆಯನ್ನು ಓದಿ.

ವೃಷಭ: ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಇಂದು ಇಷ್ಟು ದಿನ ಕಾಡುತ್ತಿದ್ದ ಚಿಂತೆಯಿಂದ ಬಿಡುವಾಗುವಿರಿ. ಪ್ರಯತ್ನವಿಲ್ಲದೇ ಯಾವುದೂ ಸಾಧ್ಯವಾಗದು ಎನ್ನುವ ಮಾತನ್ನು ಮನನ ಮಾಡಿಕೊಳ್ಳುವುದು ಉತ್ತಮ. ಕಛೇರಿಯ ಒತ್ತಡಗಳಿಗೆ ಸಿಲುಕದೆ ಜಾಗರೂಕತೆಯಿಂದ ಕೆಲಸ ಮಾಡಿ ಪಾಲುದಾರಿಕೆ ವಿಚಾರದಲ್ಲಿ ಅರಿವಿರಲಿ. ಕೂಲಂಕಷವಾದ ವಿಚಾರದ ಜೊತೆ‌ ಮುಂದುವರಿಯಿರಿ. ಅವಕಾಶಗನ್ನು ಯಾರಿಗೂ ಬಿಟ್ಟುಕೊಡದೇ ನೀವೇ ಅನುಭವಿಸಿ. ಕುಟುಂಬದವರ ಜೊತೆ ಇಂದು ಕಾಲವನ್ನು ಕಳೆಯಿರಿ. ಸಂಗಾತಿಯಿಂದ ಅನಿರೀಕ್ಷಿತ ಸಮಾಚಾರ ಬರಲಿದೆ. ಧ್ಯಾನ ಹಾಗು ಯೋಗದಿಂದ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಿ.

ಮಿಥುನ: ನಿಮ್ಮ ದಾಂಪತ್ಯಜೀವನವು ಇಂದು ಸುಖದಿಂದ ಇರಲಿದೆ. ಪತಿ ಹಾಗು ಪತ್ನಿಯರ ನಡುವೆ ಪ್ರೇಮಸಲ್ಲಪವು ಎಂದಿಗಿಂತ ಜೋರಾಗಿ ಇರಲಿದೆ. ನಿಮ್ಮ ನಡುವೆ ಪರಸ್ಪರ ಕಾಳಜಿಯು ಗೊತ್ತಾಗುವ ಸಾಧ್ಯತೆ ಇದೆ. ದೈವವನ್ನು ನಂಬುವ ನೀವು ಹೆಚ್ಚು ಕಾಲದ ದೈವಸ್ಮರಣೆಯಲ್ಲಿ ಇರುವುದು ಒಳ್ಳೆಯದು. ಅಧಿಕ ಧನಹಾನಿಯಾಗುವ ಸ್ಥಿತಿ ಎದುರಾಗಬಹುದು. ಸ್ವಲ್ಪ ಎಚ್ಚದಿಂದ ಇರಿ. ಎಂದೋ ಭವಿಷ್ಯಕ್ಕೆ ಬೇಕೆಂದು ಕೂಡಿಟ್ಟ ಹಣದ ಉಪಯೋಗವು ಇಂದಾಗಲಿದೆ. ಮಿತ್ರರು ನಿಮ್ಮ ಗುಟ್ಟನ್ನು ಬಿಚ್ಚಿಟ್ಟಾರು. ಸಾಲವನ್ನು ನೀಡಿದವರು ನಿಮಗೆ ಪೀಡಿಸುವರು. ಪಂಚಾಕ್ಷರೀಜಪವನ್ನು ಮಾಡಿ.

ಕಟಕ: ಆತ್ಮಗೌರವಕ್ಕೆ ಧಕ್ಕೆ ಉಂಟಾಗಲಿದೆ. ಹಿಂದುಳಿದ ಕಾರ್ಯಗಳು ಪ್ರಗತಿಯನ್ನು ಕಾಣುವುವು. ಲಾಭವನ್ನು ಪಡೆಯಲು ನೂತನ ಯೋಜನೆಯನ್ನು ಮಾಡುವಿರಿ. ಮಕ್ಕಳ ಕಾರ್ಯಕ್ಕೆ ನೀವು ಓಡಾಡಬೇಕಾಗಿ ಬರಬಹುದು. ನಿಮ್ಮ ಕಾರ್ಯವೇ ನಿಮಗೆ ಮುಳುವಾಗುವುದು. ಉದ್ಯೋಗದಲ್ಲಿ ಉಂಟಾದ ಗೊಂದಲದಿಂದ ನಿಮಗೆ ಆತಂಕವಸದೀತು. ಕಾರ್ಯದ ಸ್ಥಳದಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ರಾಜಕಾರಣಿಗಳು ಜನರಿಂದ ಗೌರವವನ್ನು ಪಡೆಯುವರು. ನಿಮ್ಮ ಭಾವನೆಗಳಿಗೆ ಧಕ್ಕೆ ಉಂಟಾಗುವ ಸನ್ನಿವೇಶಗಳು ನಡೆಯಲಿವೆ. ಅಲ್ಪ ಧನವನ್ನು ಕಳೆದುಕೊಳ್ಳುವಿರಿ. ಬಂಧುಗಳ ಭೇಟಿಯು ಹರ್ಷವನ್ನು ತರಬಹುದು. ಕುಲದೇವರ ಆರಾಧನೆಯಿಂದ ಬರುವ ಸಂಕಟಗಳು ದೂರಾಗುವವು.

-ಲೋಹಿತಶರ್ಮಾ, ಇಡುವಾಣಿ

Published On - 7:01 am, Mon, 13 March 23