ದಿನ, ಸಮಯ ಎಲ್ಲರಿಗೂ ಒಂದೇ ಆದ್ರೂ ಜೀವನದಲ್ಲಿ ನಡೆಯುವ ಘಟನೆಗಳು ವಿಭಿನ್ನ. ಇದಕ್ಕೆ ಕಾರಣ ನಮ್ಮ ಜನ್ಮ ರಾಶಿಗಳಲ್ಲಾಗುವ ಬದಲಾವಣೆ. ನಮ್ಮ ಆರೋಗ್ಯ, ಯಶಸ್ಸು, ಸಂತೋಷ, ನೆಮ್ಮದಿ ಎಲ್ಲವೂ ನಮ್ಮ ರಾಶಿಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಕೆಲವರು ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗಾದರೆ ಇಂದಿನ (2023 ಏಪ್ರಿಲ್ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭ ಎಂದು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಭಾನು, ತಿಥಿ : ತೃತೀಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಸಿದ್ಧಿ, ಕರಣ : ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:44ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:34 ರಿಂದ 02:07ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ.
ಸಿಂಹ: ನಿಮ್ಮ ಸ್ನೇಹಿತರು ಮತ್ತು ಬಂಧುಗಳ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಒತ್ತಡಕ್ಕೆ ಸಿಲುಕಿ ಅಪಭ್ರಂಶವನ್ನು ಮಾತನಾಡಬೇಡಿ. ಕುಟುಂಬ ಜೀವನದಲ್ಲಿ ಜಾಗರೂಕರಾಗಿರಿ, ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಇಲ್ಲದಿದ್ದರೆ ನಿಮ್ಮ ಸಂಬಂಧವು ಮುರಿದುಹೋಗುವುದು. ಆರ್ಥಿಕವಾಗಿ ಸಬಲರಾಗಲು ನಿಮಗೆ ಅನೇಕ ದಾರಿಗಳು ಕಾಣಿಸುವುವು. ಸಂಜೆಯ ಶುಭಸಮಾರಂಭಗಳಿಗೆ ಭೇಟಿ ನೀಡುವಿರಿ. ಅನಿರೀಕ್ಷಿತ ಮಿತ್ರರ ಭೇಟಿ ಕುತೂಹಲ ಕೆರಳಿಸದರೂ ಸಂತೋಷವಾಗಲಿದೆ.
ಕನ್ಯಾ: ದೈವದ ಬಗ್ಗೆ ಆಸಕ್ತಿ, ಶ್ರದ್ಧೆ, ಭಕ್ತಿಗಳ ಕೊರತೆ ಹೆಚ್ಚಾಗಿ ಕಾಣಿಸುವುದು. ಸಂಬಂಧವು ಗಟ್ಟಿಯಾದರೂ ಖರ್ಚು ಹೆಚ್ಚಾಗಬಹುದು ಎಂಬ ಭಾವನೆಯಲ್ಲಿ ನೀವಿರುವಿರಿ. ನಿಮ್ಮ ಕಾರ್ಯಗಳಿಗೆ ಸಂಗಾತಿಯು ಸಹಕರಿಸಬಹುದು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸಕ್ಕೆ ಕೆಲವರನ್ನು ಸೇರಿಸಿಕೊಳ್ಳುವಿರಿ. ಪೂರ್ವಪುಣ್ಯವು ನಿಮಗೆ ನಿಮಗೆ ಸಹಕಾರಿಯಾಗಲಿದೆ. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂಬ ಬುದ್ಧಿಯು ತರ್ಕಿಸುವುದು. ಸಂತೋಷಕ್ಕೆ ಬೇಕಾದ ಎಲ್ಲ ಇದ್ದರೂ ಚಿಂತೆ ಇರಲಿದೆ. ಸಕಾರಾತ್ಮಕ ಆಲೋಚನೆ ಇರಲಿ.
ತುಲಾ: ವಿದೇಶದ ವ್ಯಕ್ತಿಗಳ ಸ್ನೇಹವಾಗಲಿದೆ. ಊಟಕ್ಕೆ ಕಷ್ಟಪಡಬೇಕಾದೀತು. ನೀವು ಬುದ್ಧಿವಂತಿಕೆಯಿಂದ ಕೆಲಸ ಮಾಡಿದರೂ ಕೈಗೂಡದೇ ಹೋಗಬಹುದು. ವ್ಯವಹಾರದಲ್ಲಿ ಅಧಿಕ ಲಾಭವನ್ನು ಅಪೇಕ್ಷಿಸುವಿರಿ. ಒಳ್ಳೆಯ ಕಡೆಗೆ ಹೂಡಿಕೆ ಮಾಡುವುದರಿಂದ ನಿಮ್ಮ ಸಂಪತ್ತು ವೃದ್ಧಿಯಾಗುವುದು. ಉದ್ಯೋಗದ ಕಾರಣಕ್ಕೆ ದೂರದ ಪ್ರಯಾಣವನ್ನು ಮಾಡುವಿರಿ, ಆಯಾಸಗೊಳುಳ್ಳುವಿರಿ. ತುಂಬ ದಿನಗಳಿಂದ ನಡೆಯುತ್ತಿರುವ ಕುಟುಂಬದ ಕಲಹವು ನಿಮಗೆ ಬೇಸರ ತರಿಸೀತು. ಯಾರನ್ನಾದರೂ ವಹಿಸಿಕೊಂಡು ಹೋಗುವಿರಿ, ಅವರಿಂದ ನೋವಾಗಲಿದೆ.
ವೃಶ್ಚಿಕ: ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕೋಪಗೊಳ್ಳುವಿರಿ. ನಿಮ್ಮ ಮೇಲೆ ಸಹೋದ್ಯೋಗಿಗಳು ಕಿಡಿಕಾರಬಹುದು. ಉದ್ಯೋಗವನ್ನು ಬಿಡುವುದಾಗಿ ಬೆದರಿಸಿಯಾರು. ರಾಜಕೀಯಕ್ಕೆ ಹೋಗಲು ನೀವು ಬಹಳ ಉತ್ಸುಕರಾಗಿದ್ದೀರಿ. ಮನೆಯ ಹಿರಿಯರ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ನಿಮ್ಮ ಬುದ್ಧಿಯನ್ನು ಪ್ರದರ್ಶಿಸಬೇಡಿ. ನಿಮ್ಮ ವೈಯಕ್ತಿಕವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
-ಲೋಹಿತಶರ್ಮಾ ಇಡುವಾಣಿ