ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ತೃತೀಯಾ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಸೌಭಾಗ್ಯ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ರಿಂದ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:31 ರಿಂದ 02:05ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:38 ರಿಂದ 05:12ರ ವರೆಗೆ.
ಧನುಸ್ಸು: ಇಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ನೋವನ್ನು ಅನುಭವಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸಂಪೂರ್ಣ ಗಮನವಿರಬೇಕಾದೀತು. ಅವರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವುದು ಒಳ್ಳೆಯದು. ಸರ್ಕಾರಿ ಅಧಿಕಾರಿಗಳಿಂದ ಕಾನೂನು ರೀತಿಯ ತೊಡಕುಗಳು ಎದುರಾಗಬಹುದು. ಕೃಷಿಕರು ಬೆಳೆಗಳಿಗೆ ಉತ್ತಮ ಬೆಲೆ ದೊರೆತ ಕಾರಣ ಸಂತೋಷಪಡಬಹುದು. ಇಂದು ನೆಮ್ಮದಿಯಿಂದ ಮನೆಯಲ್ಲಿಯೇ ಇದ್ದು ಕಾಲಕಳೆಯುವಿರಿ. ನಿರಂತರ ಸುತ್ತಾಟದಿಂದ ಬೇಸತ್ತ ನಿಮಗೆ ಇಂದು ಹಾಯೆನಿಸಬಹುದು. ನಿಮ್ಮ ಗುಪ್ತ ಆಲೋಚನೆಗಳು ಬಯಲಾಗಬಹುದು.
ಮಕರ: ಇಂದು ನೀವು ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಬೇಡಿ. ಸುಮ್ಮನೇ ಕಾಲಹರಣ ಮಾಡುವ ಬದಲು ಉಪಯುಕ್ತ ಕೆಲಸವನ್ನು ಮಾಡಲು ಆಲೋಚಿಸಿ. ಮಕ್ಕಳು ದುರಭ್ಯಾಸಗಳಿಗೆ ಬಲಿಯಾಗಬಹುದು. ಪೋಷಕರು ಇವರ ನಡತೆಯನ್ನು ಗಮನಿಸುವುದು ಒಳ್ಳೆಯದು. ಮಹಿಳೆಯರಿಗೆ ಆಸೆಗಳನ್ನು ಪೂರೈಸಿಕೊಳ್ಳುವ ಸುದಿನ ಇದು. ಜಮೀನು ಮತ್ತು ಆಸ್ತಿಗೆ ಸಂಬಂಧಪಟ್ಟ ನೊಂದಣಿ ಕಾರ್ಯಗಳು ಪೂರ್ಣಗೊಳ್ಳದೇ ಮುಂದೆ ಹೋಗುವುದು ನಿಮಗೆ ಬೇಸರ ತರಿಸದಬಹುದು. ನಿಮಗೆ ಬಂಧುಗಳಿಂದ ಹೆಚ್ಚಿನ ಗೌರವ ದೊರೆಯುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳ ಸಹವಾಸ ಮಾಡುವಿರಿ. ಗಳಿಸುವುದನ್ನು ಪ್ರಾಮಾಣಿಕವಾಗಿ ಗಳಿಸಿ.
ಕುಂಭ: ಎಂದಿಗಿಂತ ಇಂದು ವ್ಯಾಪಾರದಲ್ಲಿ ವೃದ್ಧಿ ಇರಲಿದೆ. ಉದ್ಯೋಗದ ಸ್ಥಾನದಲ್ಲಿ ಒತ್ತಡವು ಹೆಚ್ಚಾಗಲಿ. ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಬಹಳ ಒತ್ತಡದಲ್ಲಿ ಇರುವರು. ರಾಜಕೀಯ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿನ ಕಿರಿಕಿರಿಯು ಉಂಟಾಗಬಹುದು. ಉದರಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಹಣದ ಹರಿವು ನಿಮ್ಮ ಅಪೇಕ್ಷೆಯಂತೆ ಇರುತ್ತದೆ. ಪಿತ್ರಾರ್ಜಿತ ಸ್ವತ್ತುಗಳು ಸಿಗುವ ಸಾಧ್ಯತೆಯಿದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮುನ್ನಡೆ ಇರುತ್ತದೆ. ಪತ್ನಿಯ ಜೊತೆ ವಾಗ್ವಾದ ಬೇಡ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ.
ಮೀನ: ಇಂದು ನಿಮಗೆ ಹಣದ ಅಗತ್ಯತೆ ತುಂಬ ಇದ್ದು ಇದಕ್ಕೆ ತಾಯಿಯಿಂದ ಸಹಾಯ ಸಿಗಬಹುದು. ನೀವು ಆಯ್ಕೆ ಮಾಡಿಕೊಂಡ ವೃತ್ತಿಯ ಬಗ್ಗೆ ಸಂತೋಷವಿರುತ್ತದೆ. ವಾಹನ ಖರೀದಿಗೆ ನೀವು ಮನಸ್ಸು ಮಾಡುವಿರಿ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಸಂಗಾತಿಯು ನಿಮಗೆ ಅನುಕೂಲಳಾಗಿರುವಳು. ನಿಮ್ಮ ಮೇಲೆ ವಿಶ್ವಾಸವಿಟ್ಟವರಿಗೆ ಧನಸಹಾಯ ಮಾಡಬೇಕಾಗಿಬರಬಹುದು. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವು ಇಂದು ಸಿಹಿ ಸುದ್ದಿಯನ್ನು ಕೊಡುವರು.
-ಲೋಹಿತಶರ್ಮಾ ಇಡುವಾಣಿ