
ಈ ದಿನದ ಬಹುಪಾಲು ಸಮಯ ನಿಮಗೊಂದು ನೀರಸತೆ ಕಾಡಲಿದೆ. ಎಂದಿನ ಉತ್ಸಾಹ- ಚಟುವಟಿಕೆಯಲ್ಲಿ ಕೆಲಸ- ಕಾರ್ಯದಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇನ್ನು ನಿಮ್ಮಲ್ಲಿ ಯಾರು ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತೀರೋ ಅಂಥವರಿಗೆ ಈಗ ಮಾಡುತ್ತಿರುವ ಕೆಲಸದ ಜೊತೆಗೆ ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸೂಚನೆ ನೀಡಬಹುದು. ಸ್ನೇಹಿತರು- ಸಂಬಂಧಿಗಳ ಮನೆಯಲ್ಲಿ ಆಯೋಜನೆ ಆಗಿರುವ ಕಾರ್ಯಕ್ರಮ- ಸಮಾರಂಭಗಳಿಗೆ ನೆರವು ನೀಡಬೇಕೆಂದು ನಿಮ್ಮಲ್ಲಿ ಕೆಲವರನ್ನು ಜೊತೆಗೆ ಬರುವಂತೆ ಕೇಳಿಕೊಳ್ಳಲಿದ್ದಾರೆ. ಮನಸ್ಸಿಲ್ಲದ ಮನಸ್ಸಿನಲ್ಲಿ ಹೂಂ ಅನ್ನುವ ಮುನ್ನ ಆಲೋಚಿಸುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಇರುವಂಥ ನಿರುತ್ಸಾಹ ಅಥವಾ ಏಕಾಗ್ರತೆ ಇಲ್ಲದಿರುವುದನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ದಿನ ಸಾಧ್ಯವಾದಷ್ಟೂ ಬಿಳಿ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಿ.
ದೇವಸ್ಥಾನ- ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ನಿಮಗೆ ಅಂಥದ್ದೊಂದು ಉದ್ದೇಶ ಇದೆಯೋ ಇಲ್ಲವೋ ಕೊನೆಗೆ ತಮ್ಮ ಜೊತೆಗೆ ಡ್ರೈವಿಂಗ್ ಮಾಡುವುದಕ್ಕೆ ಜನರಲಿಲ್ಲ, ಆದ್ದರಿಂದ ತಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡು, ಆ ಮೂಲಕವಾದರೂ ನಿಮಗೆ ಇಂಥದ್ದೊಂದು ಅವಕಾಶ ಸಿಗಲಿದೆ. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಂದ ಬಳಲುತ್ತಾ ಇರುವವರಿಗೆ ಪರಿಣಾಮಕಾರಿಯಾದ ಔಷಧೋಪಚಾರ ದೊರೆಯುವ ಮಾಹಿತಿ ಸಿಗಲಿದೆ. ನಿಮಗೆ ಬಹಳ ಆಪ್ತರಾದವರು ತಮ್ಮ ಜೊತೆಗೇ ಕರೆದುಕೊಂಡು ಹೋಗಿ, ವೈದ್ಯರ ಬಳಿ ಚಿಕಿತ್ಸೆಗೆ ಸಹಾಯ ಮಾಡಲಿದ್ದಾರೆ. ಮಾಂಸಾಹಾರ ಸೇವನೆ ಮಾಡುವವರಿದ್ದಲ್ಲಿ ಅತಿಯಾದ ಜಿಡ್ಡು, ಅತಿಯಾದ ಮಸಾಲೆಯುಕ್ತ ಮಾಂಸಹಾರ ಸೇವನೆಯಿಂದ ದೂರ ಇರುವುದು ಒಳ್ಳೆಯದು. ಇದೇ ಕಾರಣಕ್ಕೆ ನಿಮ್ಮಲ್ಲಿ ಕೆಲವರಿಗೆ ತೀವ್ರವಾದ ಹೊಟ್ಟೆನೋವು ಹಾಗೂ ಅದಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಎಲ್ಲಿಯಾದರೂ ಬರಿಗಾಲಲ್ಲಿ ನಡೆದಾಡುವ ಸಂದರ್ಭದಲ್ಲಿ ಎಚ್ಚರಿಕೆಯನ್ನು ವಹಿಸಿ. ನಿಮ್ಮಲ್ಲಿ ಕೆಲವರಿಗೆ ಚೂಪಾದ ಗಾಜು, ಮುಳ್ಳು ಅಥವಾ ಕಲ್ಲು ಚುಚ್ಚಿಕೊಂಡು, ಪಾದದಲ್ಲಿ ತೀವ್ರ ಸ್ವರೂಪದ ಗಾಯ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಬೇಡ ಅಂದುಕೊಂಡಿದ್ದ ಕೆಲವೊಂದರ ನಿಮಿತ್ತವಾಗಿ ಸಾಲ ಪಡೆದುಕೊಳ್ಳುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಫೋಟೋಗ್ರಾಫರ್ ಇದ್ದೀರಿ, ಸ್ಟುಡಿಯೋಗಳನ್ನು ನಡೆಸುತ್ತಾ ಇದ್ದೀರಿ ಅಂಥವರು ಹೊಸ ತಂತ್ರಜ್ಞಾನಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದಕ್ಕಾಗಿ ಕೆಲವರ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಲಿದ್ದೀರಿ. ಬೇಗನೇ ಹಣ ಮಾಡಿಬಿಡಬಹುದು, ಅದಕ್ಕೆ ತಾನು ಐಡಿಯಾಗಳನ್ನು ನೀಡುವುದಾಗಿ ನಿಮ್ಮ ಬಳಿ ಬರುವಂಥ ಹೊಸ ಪರಿಚಯಸ್ಥರಿಂದ ಅಂತರ ಕಾಯ್ದುಕೊಳ್ಳುವುದು ಕ್ಷೇಮ. ಈ ವಿಚಾರದಲ್ಲಿ ನಿಮ್ಮ ಸ್ನೇಹಿತರಿಗೋ ಸಂಬಂಧಿಗಳಿಗೋ ರೆಫರ್ ಕೂಡ ಮಾಡಬೇಡಿ.
ಡೇರಿ ಉತ್ಪನ್ನಗಳ ಮಾರಾಟ- ವಿತರಣೆ- ಉತ್ಪಾದನೆಯಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ನಾನಾ ಅವಕಾಶಗಳು ತೆರೆದುಕೊಳ್ಳಲಿವೆ. ಪೂಜಾ ಸಾಮಗ್ರಿಗಳು ಮಾಡಿಸುವುದಕ್ಕೆ- ಖರೀದಿ ಮಾಡುವುದಕ್ಕೆ ಅಥವಾ ದೇವರಮನೆ ರಿನೋವೇಷನ್ ಇಂಥವುಗಳ ಬಗ್ಗೆ ಈ ದಿನ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಮತ್ತೆ ನಿಮ್ಮಲ್ಲಿ ಕೆಲವರು ಮನೆಯ ವಾಸ್ತುವಿನಲ್ಲಿ ಆಗಬೇಕಾದ ಬದಲಾವಣೆಗಳು ಇದ್ದಲ್ಲಿ ಅದನ್ನು ಮಾಡಿಸಲು ಬೇಕಾದಂಥ ವ್ಯಕ್ತಿಗಳನ್ನು ಕರೆಸಿ, ಕೆಲಸದ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ಕೃಷಿ ವಿಜ್ಞಾನಿಗಳಿಗೆ ತಮ್ಮ ಈಗಿನ ಪ್ರಾಜೆಕ್ಟ್ ಜೊತೆಗೆ ಮಹತ್ವಾಕಾಂಕ್ಷೆಯ- ದೊಟ್ಟ ಮಟ್ಟದ- ಪ್ರತಿಷ್ಠಿತ ಸಂಸ್ಥೆಯ ಅನುದಾನದ ಯೋಜನೆಗಳನ್ನು ಮುನ್ನಡೆಸುವಂತೆ ಸೂಚನೆ ಬರಲಿದೆ. ನಿಮ್ಮ ವೃತ್ತಿ ಜೀವನದಲ್ಲಿ ಬಹಳ ಮುಖ್ಯವಾದ ಪ್ರಾಜೆಕ್ಟ್ ಇದಾಗಿರಲಿದೆ ಎಂಬ ಖಾತ್ರಿ ಸಹ ನಿಮಗೆ ಸಿಗಲಿದೆ.
ನಿಮ್ಮ ವಿಶ್ವಾಸಾರ್ಹತೆ, ನಿಷ್ಠೆ, ಪ್ರಾಮಾಣಿಕತೆಯನ್ನು ಸಾಬೀತು ಮಾಡಬೇಕಾದ ಅನಿವಾರ್ಯ ಸೃಷ್ಟಿ ಅಗಲಿದೆ. ಸಂಗಾತಿಯ ಆರ್ಥಿಕ ವಿಚಾರಗಳಿಗೆ ನಿಮ್ಮ ಬೆಂಬಲ ಹಾಗೂ ಸಹಕಾರ ಅಗತ್ಯವಿದೆ ಎಂಬುದು ಖಾತ್ರಿ ಆಗಲಿದೆ. ಉಪನ್ಯಾಸಕರು- ಮನೆಯಲ್ಲಿಯೇ ಟ್ಯೂಷನ್ ಮಾಡುತ್ತಾ ಆ ಮೂಲಕ ಆದಾಯ ಪಡೆಯುತ್ತಾ ಇರುವವರಿಗೆ ಹಣಕಾಸಿನ ಹರಿವಿನಲ್ಲಿ ಇಳಿಕೆ ಆಗುತ್ತಿರುವುದು ಆತಂಕಕ್ಕೆ ಕಾರಣ ಆಗಲಿದೆ. ಯಾರು ಇಷ್ಟು ಸಮಯ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಿದ್ದರೋ ಅಂಥವರು, ಇನ್ನು ಮುಂದೆ ನಿಮ್ಮ ಬೆಂಬಲಕ್ಕೆ ನಿಲ್ಲುವುದು ತಮ್ಮಿಂದ ಸಾಧ್ಯವಿಲ್ಲ ಎಂಬುದನ್ನು ಈ ದಿನ ಹೇಳಲಿದ್ದಾರೆ. ಮಕ್ಕಳ ಮದುವೆ ಮಾಡುವುದಕ್ಕೆ ಪ್ರಯತ್ನಿಸುತ್ತಾ ಇರುವವರಿಗೆ ಕಠಿಣ ಸವಾಲುಗಳು ಎದುರಾಗಲಿವೆ. ಇನ್ನು ನಿಮ್ಮಲ್ಲಿ ಕೆಲವರು ಅವಮಾನ- ಮುಜುಗರ ಆಗುವಂಥ ಸನ್ನಿವೇಶಗಳನ್ನು ಸಹ ಎದುರಿಸುವಂತೆ ಆಗಲಿದೆ.
ನೆರೆಮನೆಯವರ ಜೊತೆಗೆ ಯಾವುದೇ ಜಗಳ- ಕಲಹಗಳು ಆಗದಿರುವಂತೆ ನೋಡಿಕೊಳ್ಳಿ. ಪಾರ್ಕಿಂಗ್ ಕಾರಣಕ್ಕಾಗಿ ಅಭಿಪ್ರಾಯ ಭೇದ ಅಥವಾ ಮನಸ್ತಾಪ ಇದ್ದಲ್ಲಿ ಕೂತು, ಮಾತನಾಡಿ ಬಗೆಹರಿಸಿಕೊಳ್ಳಿ. ನಿಮಗೆ ಬರಬೇಕಾದ ಹಣ ಇದ್ದಲ್ಲಿ ಅದಕ್ಕಾಗಿ ಗಟ್ಟಿಯಾಗಿ ಪ್ರಯತ್ನವನ್ನು ಮಾಡಿ. ನೀವು ಯಾವುದಾದರೂ ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ಅದಕ್ಕೆ ಎಷ್ಟು ಹಣವನ್ನು ಚಾರ್ಜ್ ಮಾಡುತ್ತೀರಿ ಎಂಬ ಬಗ್ಗೆ ಸ್ಪಷ್ಟವಾಗಿ ಮಾತನಾಡಿಕೊಳ್ಳುವುದು ಒಳ್ಳೆಯದು. ಕಬ್ಬಿಣದ ಕೆಲಸ ಮಾಡುವವರು, ಮರದ ಕೆಲಸ ಮಾಡುವವರು ನಿಮಗೆ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುವುದಕ್ಕೆ ಜನರು ಲಭ್ಯ ಇದ್ದಾರೆಯೇ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರವಷ್ಟೇ ಮಾತು ನೀಡುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಗಡುವಿನೊಳಗೆ ಕೆಲಸ ಮಾಡುವುದು ಅಸಾಧ್ಯ ಎನಿಸಿ, ಮುಜುಗುರ ಅನುಭವಿಸುವಂತೆ ಆಗಲಿದೆ.
ನಿಮಗೆ ಆಗುವ ಅನುಕೂಲಗಳು ಏನೇನು ಎಂಬುದನ್ನು ಎಲ್ಲ ವಿಷಯಗಳನ್ನು ಆಲೋಚನೆ ಮಾಡುವುದಕ್ಕೆ ಆರಂಭಿಸುತ್ತೀರಿ. ಮಕ್ಕಳ ಶಿಕ್ಷಣಕ್ಕಾಗಿ ನಾನಾ ಪ್ರಯತ್ನಗಳನ್ನು ಮಾಡುವುದಕ್ಕೆ ಶುರು ಮಾಡುತ್ತೀರಿ. ವಿದೇಶದಲ್ಲಿ ನಿಮಗಿರುವ ಸ್ನೇಹಿತರು- ಸಂಬಂಧಿಗಳ ಸಹಾಯದಿಂದ ವೀಸಾ ಮತ್ತಿತರ ಅಡೆತಡೆಗಳು ಇದ್ದಲ್ಲಿ ಅದರ ನಿವಾರಣೆಗೆ ನಿಮ್ಮಲ್ಲಿ ಕೆಲವರು ಸಹಾಯ ಪಡೆದುಕೊಳ್ಳಲಿದ್ದೀರಿ. ಆಹಾರ ಧಾನ್ಯಗಳನ್ನು ಬೆಳೆಯುತ್ತಿರುವ ರೈತರಿಗೆ ಆದಾಯದಲ್ಲಿ ಏರಿಕೆ ಆಗುವಂಥ ಸಾಧ್ಯತೆ ಇದೆ. ಪ್ರತಿಷ್ಠಿತ ಸಂಘ- ಸಂಸ್ಥೆಗಳು, ಒಕ್ಕೂಟದಿಂದ ನಿಮ್ಮಲ್ಲಿ ಕೆಲವರಿಗೆ ಮಾನ- ಸನ್ಮಾನ ಆಗುವ ಯೋಗ ಇದೆ. ಎನ್ ಜಿಒಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಮೊತ್ತದ ಅನುದಾನ ದೊರೆಯುವ ಬಗ್ಗೆ ಮಾಹಿತಿ ತಿಳಿದು ಬರಲಿದೆ. ಮುಖ್ಯ ಕೆಲಸ- ಕಾರ್ಯಗಳಿಗೆ ಇನ್ನೂ ಸಮಯ ಇದೆ ಎಂದುಕೊಂಡು, ಮುಂದಕ್ಕೆ ಹಾಕುತ್ತಾ ಹೋಗಬೇಡಿ.
ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಸೂಕ್ತ ತರಬೇತಿ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ತಿಳಿದುಬರಲಿದೆ. ಅದಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಮೊತ್ತವನ್ನು ಪಾವತಿಸಿ, ಸೀಟು ಕಾಯ್ದಿರಿಸುವ ನಿರ್ಧಾರ ಮಾಡಲಿದ್ದೀರಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ದೊರೆಯುವ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ವೈದ್ಯಕೀಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಆಪರೇಷನ್ ಏನಾದರೂ ಮಾಡಿಸಿಕೊಂಡಿದ್ದಲ್ಲಿ ಅದರ ಫಾಲೋ ಅಪ್ ಚೆಕಪ್ ಗಳನ್ನು ಮಾಡಿಸಿಕೊಂಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಬೆಳ್ಳಿ ತಟ್ಟೆ- ಲೋಟ ಇಂಥವುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಹೂಡಿಕೆ ಉದ್ದೇಶದಿಂದ ನಿಮ್ಮಲ್ಲಿ ಕೆಲವರು ಚಿನ್ನದ ನಾಣ್ಯ ಅಥವಾ ಬಾರ್ ಇಂತಹದ್ದನ್ನು ಕೊಳ್ಳುವ ಸಾಧ್ಯತೆ ಸಹ ಇದೆ.
ಈ ದಿನ ಸಮಯಕ್ಕೆ ಸರಿಯಾಗಿ ಊಟ ಸಹ ಮಾಡಲು ಸಾಧ್ಯವಾಗದಂಥ ಕೆಲಸ- ಕಾರ್ಯಗಳ ಒತ್ತಡ ಹೆಚ್ಚಾಗಲಿದೆ. ನಿಮ್ಮ ಶ್ರಮದ ಫಲವಾಗಿ ದೊಡ್ಡ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಗಿಯುವುದಕ್ಕೆ ಸಹಾಯ ಆಗಲಿದೆ. ಪ್ರಭಾವಶಾಲಿ ವ್ಯಕ್ತಿಗಳು ನಿಮ್ಮ ಸಂಪರ್ಕಕ್ಕೆ ದೊರೆಯಲಿದ್ದು, ಇದರಿಂದ ನಿಮಗೆ ಆಗಬೇಕಾದ ಕಾರ್ಯಗಳು ಪೂರ್ಣಗೊಳಿಸುವುದಕ್ಕೆ ನೆರವು ಆಗಲಿದೆ. ತಂದೆ- ತಾಯಿಗಾಗಿ ಹೆಲ್ತ್ ಇನ್ಷೂರೆನ್ಸ್ ಖರೀದಿ ಮಾಡುವ ಬಗ್ಗೆ ನಾಲ್ಕಾರು ಕಡೆ ವಿಚಾರಣೆ ಮಾಡಲಿದ್ದೀರಿ. ಅಥವಾ ನಿಮ್ಮಲ್ಲಿ ಕೆಲವರು ಈಗ ಇರುವಂಥ ಇನ್ಷೂರೆನ್ಸ್ ನಿಂದ ಪೋರ್ಟ್ ಮಾಡಬೇಕು ಎಂದುಕೊಂಡು ಈ ವಿಚಾರದ ಬಗ್ಗೆ ತಿಳಿವಳಿಕೆ- ಅನುಭವ ಇರುವವರ ಜೊತೆಗೆ ಮಾತುಕತೆಯನ್ನು ನಡೆಸಲಿದ್ದೀರಿ. ಈ ದಿನ ಕುಟುಂಬದವ ಜೊತೆಗೂಡಿ ಊಟ- ತಿಂಡಿ ಮಾಡುವುದಕ್ಕೆ ಉತ್ತಮ ರೆಸ್ಟೋರೆಂಟ್ ಗೆ ತೆರಳಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ