Rashi Bhavishya: ಶತ್ರುಬಾಧೆಯಿಂದ ಮನೆಯಲ್ಲಿ ಕಲಹದ ವಾತಾವರಣವು ಇರುವುದು-ಎಚ್ಚರ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 28) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Rashi Bhavishya: ಶತ್ರುಬಾಧೆಯಿಂದ ಮನೆಯಲ್ಲಿ ಕಲಹದ ವಾತಾವರಣವು ಇರುವುದು-ಎಚ್ಚರ
ರಾಶಿ ಭವಿಷ್ಯ

Updated on: Jan 28, 2024 | 12:30 AM

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 28) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಸೌಭಾಗ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 28 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:03 ರಿಂದ 06:28ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:46 ರಿಂದ 02:11ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:37 ರಿಂದ 05:03ರ ವರೆಗೆ.

ಸಿಂಹ ರಾಶಿ : ನಿಮ್ಮ ಕೆಲಸದ ಬಗ್ಗೆ ನೀವು ಹೆಚ್ಚು ಗಮನ ಹರಿಸುತ್ತೀರಿ. ನ್ಯೂನತೆಗಳನ್ನು ನಿವಾರಿಸಲು ಪ್ರಯತ್ನಿಸುತ್ತೀರಿ. ಕೌಟುಂಬಿಕ ವಾತಾವರಣ ಉತ್ತಮವಾಗಿರುತ್ತದೆ. ಎಲ್ಲ ಜನರಿಂದ ಬೆಂಬಲ ಸಿಗಲಿದೆ. ಆದರೆ ನೆರೆಹೊರೆಯವರೊಂದಿಗೆ ವಿವಾದ ಉಂಟಾಗಬಹುದು. ಇದಕ್ಕೆ ಸಹಾಯವು ಸಿಗಲಿದೆ‌. ದಾಂಪತ್ಯ ಜೀವನದಲ್ಲಿ ಪ್ರೀತಿ ಮತ್ತು ಸಂತೋಷ ಉಳಿಯುತ್ತದೆ. ನಿಮ್ಮ ಸಂಬಂಧವು ಮಧುರವಾಗಿರುತ್ತದೆ. ಇಂದು ನೀವು ನಿಮ್ಮ ಹಳೆಯ ಸ್ನೇಹಿತನೊಂದಿಗೆ ನಿಮ್ಮ ಮನಸಿಗೆ ತಕ್ಕಂತೆ ಮಾತನಾಡುತ್ತೀರಿ. ಖರೀದಿಸಿದ ಭೂಮಿಯನ್ನು ಮತ್ತೊಬ್ಬರಿಗೆ ಕೊಟ್ಟುಬಿಡುವಿರಿ. ಸಾಲವನ್ನು ತೀರಿಸುವಷ್ಟು ಹಣವು ಆಗತ್ತದೋ ಇಲ್ಲವೋ ಎಂಬ ಭೀತಿ ಕಾಡುವುದು. ಹಿರಿಯರಿಂದ ನಿಮಗೆ ಮೆಚ್ಚುಗೆ ಸಿಗಬಹುದು. ದಾಂಪತ್ಯದಲ್ಲಿ ಪ್ರೀತಿಗೆ ನೀವು ಮಾರುಹೋಗಬಹುದು. ಅತಿಥಿಗಳ ಆಗಮನವು ನಿಮ್ಮ ಮನೆಗೆ ಆಗಲಿದೆ. ವೃತ್ತಿಯಲ್ಲಿ ನಿಮ್ಮ ಸಹಕಾರಕ್ಕೆ ಪ್ರಶಂಸೆಯು ಸಿಗುವುದು. ಪರಿಚಿತರ ಸ್ವತ್ತನ್ನು ಅಪಹರಿಸುವಿರಿ.

ಕನ್ಯಾ ರಾಶಿ : ನಿಮ್ಮ ಆದಾಯವನ್ನು ಹೆಚ್ಚುಮಾಡಿಕೊಳ್ಳಲು ಹೋಗಿ, ಮುಗ್ಗರಿಸಬಹುದು. ನಿಮ್ಮ ಶ್ರಮದ ಫಲಿತಾಂಶಗಳನ್ನು ಗುಣಾತ್ಮಕವಾಗಿ ಹೆಚ್ಚಿಸಬೇಕಾಗುವುದು. ಅದರ ಬಗ್ಗೆಯೇ ನಿಮ್ಮ ಗಮನವು ಇರುತ್ತದೆ. ಇದರಿಂದ ನಿಮ್ಮ ಆದಾಯವು ಹೆಚ್ಚಾಗುವುದನ್ನು ಕಾಣಬಹುದು. ದುಡಿಯುವ ಜನರಿಗೆ ಇಂದು ಉತ್ತಮ ದಿನ. ಅವರು ತಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯಾಪಾರ ಮಾಡುವವರು ಹಿರಿಯ ವ್ಯಕ್ತಿಯಿಂದ ಬೆಂಬಲವನ್ನು ಪಡೆಯುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಪ್ರೇಮ ಜೀವನವನ್ನು ಸಂತೋಷದಿಂದ ನಡೆಸುವಿರಿ. ಇಂದು ಧೈರ್ಯದ ಕಾರ್ಯದಲ್ಲಿ ಮುನ್ನಡೆಯಲು ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಮಾನಸಿಕ ಸ್ಥಿತಿಯನ್ನು ಬಿಡಲು ಪ್ರಯತ್ನಿಸುವಿರಿ. ಆದರೆ ಅದು ನಿಮಗೆ ಗೊತ್ತಿಲ್ಲದೇ ನಿಮ್ಮನ್ನು ಆವರಿಸಬಹುದು. ವಾಹನ ಖರೀದಿಸಲು ನಿಮಗೆ ಹಣಕಾಸಿನ ಕೊರತೆಯಾಗಿ ಮುಂದೂಡುವಿರಿ. ದಾಂಪತ್ಯದ ಇಂದಿನ ಕಲಹವನ್ನು ಅಲ್ಲಿಗೇ ನಿಲ್ಲಿಸಿ. ಹೆಚ್ಚು ಪ್ರಯತ್ನದಿಂದ ಅಲ್ಪ ಲಾಭ. ಇನ್ನೊಬ್ಬರ ನೇರವಾದ ಮಾತಿನಿಂದ ನಿಮಗೆ ನೋವಾಗುವುದು.

ತುಲಾ ರಾಶಿ : ನಿಮ್ಮ ಖರ್ಚುಗಳು ಇಂದು ಹೆಚ್ಚಾಗುತ್ತವೆ. ಮಾನಸಿಕ ಒತ್ತಡದಿಂದ ಆರೋಗ್ಯವೂ ಹದಗೆಡಬಹುದು. ನಿಮ್ಮ ಬಗ್ಗೆ ಸಂಪೂರ್ಣ ಗಮನವಿರಲಿ. ಉದ್ಯೋಗದಲ್ಲಿರುವ ಜನರು ಒತ್ತಡವನ್ನು ಎದುರಿಸಬೇಕಾಗುತ್ತದೆ ಮತ್ತು ಉದ್ಯೋಗವನ್ನು ಬದಲಾಯಿಸುವ ಆಲೋಚನೆ ಅವರ ಮನಸ್ಸಿನಲ್ಲಿ ಬರುತ್ತದೆ. ನೀವು ಎಲ್ಲಿಂದಲಾದರೂ ಲಾಭ ಪಡೆಯಬಹುದು. ನಿಮ್ಮ ಸಂಬಂಧಿಕರಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಇರುತ್ತದೆ. ಪ್ರೀತಿಯ ಜೀವನವನ್ನು ನಡೆಸುವ ಜನರು ಇಂದು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಾರ್ವಜನಿಕವಾಗಿ ಸಿಗುವ ಮನ್ನಣೆಯನ್ನು ವಿರೋಧಿಸುವರು. ಆದಾಯದ ವೃದ್ದಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಿರಿ. ಹಣಕಾಸಿನ ಮೌಲ್ಯವನ್ನು ಇಂದು ತಿಳಿದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ನಿಮಗೆ ಅವಸರ ಹೆಚ್ಚಾಗಿರುವುದು. ಧನದ ಸಹಾಯವನ್ನು ನಿಮ್ಮ ಸ್ನೇಹಿತರು ನಿಮ್ಮಿಂದ ಬಯಸುವರು. ಇಂದು ಅಧಿಕ ಒತ್ತಡವಿಲ್ಲದೇ ಕಾರ್ಯವು ಮುಗಿಯುವುದು. ವಿದೇಶಪ್ರಯಾಣದಿಂದ ಖುಷಿಯು ಇರಲಿದೆ. ನೌಕರರು ನಿಮಗೆ ಪೂರಕವಾಗಿ ಇರುವರು.

ವೃಶ್ಚಿಕ ರಾಶಿ : ಇಂದು ನಿಮ್ಮ ಸ್ವಾಭಿಮಾನ ಹೆಚ್ಚಾಗುತ್ತದೆ. ನೀವು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುವ ಹಂಬಲವಿರುವುದು. ಕೆಲಸಕ್ಕೆ ಸಂಬಂಧಿಸಿದಂತೆ ಅಲ್ಪ ಪ್ರಯೋಜನವನ್ನು ಪಡೆಯುವಿರಿ. ನಿಮ್ಮ ಕೆಲಸವನ್ನು ನೀವು ಆನಂದಿಸುವಿರಿ ಮತ್ತು ಮುಂದೆ ಸಾಗುತ್ತೀರಿ ಮತ್ತು ಬಿಡದೇ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಅದೃಷ್ಟ ನಿಮ್ಮ ಕಡೆ ಇರುತ್ತದೆ. ನೀವು ಯಾವುದೇ ಸವಾಲಿಗೆ ಹೆದರುವುದಿಲ್ಲ ಮತ್ತು ಶ್ರಮಿಸುತ್ತೀರಿ. ಉದ್ಯೋಗಿಗಳಿಗೆ ದಿನವು ಉತ್ತಮವಾಗಿರುತ್ತದೆ. ಅಪ್ರಬುದ್ಧ ಆಲೋಚನೆಗಳು ನಿಮ್ಮಿಂದ ದೂರವಿರಲಿ. ಸಾಹಸದ ಕೆಲಸಕ್ಕೆ ನೀವು ಹೆಚ್ಚು ಉತ್ಸುಕರಾಗಿದ್ದೀರಿ. ಶತ್ರುಬಾಧೆಯಿಂದ ಮನೆಯಲ್ಲಿಯೇ ಕಲಹದ ವಾತಾವರಣವು ಇರುವುದು. ಮೆಚ್ಚುಗೆಯ ಮಾತಿನಿಂದ ಸಂಕೋಚಗೊಳ್ಳುವಿರಿ. ಆರಿಸಿಕೊಂಡ ಆಯ್ಕೆಯು ನಿಮಗೆ ಇಷ್ಟವಾಗದೇ ಈಗ ಇರುವುದು. ಪರಿಚಿತರ ವಿಚಾರದಲ್ಲಿ ನೀವು ನಕಾರಾತ್ಮಕವಾಗಿ ಮಾತನಾಡುವಿರಿ.