Horoscope: ದಿನಭವಿಷ್ಯ, ಈ ರಾಶಿಯವರಿಗೆ ಇಂದು ಧನಾಗಮನವು ಆಗಲಿದ್ದು, ಅದನ್ನು ಸತ್ಕಾರ್ಯಕ್ಕೆ ನೀಡುವಿರಿ

| Updated By: ವಿವೇಕ ಬಿರಾದಾರ

Updated on: Jan 22, 2024 | 12:30 AM

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಜನವರಿ 22) ಭವಿಷ್ಯಹೇಗಿದೆ ಎಂಬುದು ಇಲ್ಲಿದೆ.

Horoscope: ದಿನಭವಿಷ್ಯ, ಈ ರಾಶಿಯವರಿಗೆ ಇಂದು  ಧನಾಗಮನವು ಆಗಲಿದ್ದು, ಅದನ್ನು ಸತ್ಕಾರ್ಯಕ್ಕೆ ನೀಡುವಿರಿ
ಜ್ಯೋತಿಷ್ಯ
Follow us on

ಒಂದಷ್ಟು ಮಂದಿ ಬೆಳಗ್ಗೆ ಎದ್ದ ನಂತರ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ ಇದೆಯಾ? ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ, ಏನು ಮಾಡಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಜನವರಿ 22) ಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಉತ್ತರಾಷಾಢಾ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಬ್ರಹ್ಮ, ಕರಣ: ಬವ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:19 ರಿಂದ ಮಧ್ಯಾಹ್ನ 12:44ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:09 ರಿಂದ 03:35ರ ವರೆಗೆ.

ಸಿಂಹ ರಾಶಿ: ಇಂದು ನಿಮ್ಮ ಸಂಗಾತಿಗೆ ಸಹಕಾರವನ್ನು ನೀಡುವಿರಿ. ಸಾಮಾಜಿಕ ಕಾರ್ಯವು ನಿಮಗೆ ಪ್ರಶಂಸೆಯನ್ನು ಕೊಟ್ಟೀತು. ಉತ್ತಮ ಆರ್ಥಿಕತೆಗಾಗಿ ನೀವು ವಿದೇಶದ ವ್ಯಾಪಾರದಲ್ಲಿ ಆಸಕ್ತಿ ಬರಬಹುದು. ಸತತ ಪ್ರಯತ್ನದಿಂದ ಆದಾಯ ಹಾಗೂ ಖರ್ಚನ್ನು ಸರಿಯಾಗಿ ತೂಗಿಸಲು ತಿಳಿಯುವಿರಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ಆದಾಯದ ಭಾಗವನ್ನು ದಾನ ಮಾಡುವ ಆಸೆ ಬರಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಬಂಧುಗಳು ನಿಮ್ಮ ಹತ್ತಿರ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು. ಹಿರಿಯರ ಸೇವೆಯಿಂದ ಸಂತೋಷಪಡುವಿರಿ. ಮನಸ್ಸಿನ ಕಿರಿಕಿರಿಯಿಂದ ಕೋಪವು ಬರಬಹುದು.

ಕನ್ಯಾ ರಾಶಿ: ಇಂದಿನ ದಿನ ವಾದ, ವಿವಾದಗಳಿಂದಲೇ ಇರುವುದು. ಕಛೇರಿಯಲ್ಲಿ ನಿಮಗೆ ಅಸಂಬದ್ಧ ಆಲೋಚನೆಗಳು ಬರಬಹುದು. ಸಹೋದರಿಯ ಜೊತೆ ಮನಸ್ತಾಪ ಮಾಡಿಕೊಳ್ಳುವಿರಿ. ಗೃಹನಿರ್ಮಾಣವು ನೀವಂದುಕೊಂಡಷ್ಟು ಸರಳವಾಗಿ ಇರದು. ಉತ್ತಮ‌ ದಿನದ ನಿರೀಕ್ಷೆಯಲ್ಲಿ ಇರುವ ನಿಮಗೆ ಬೇಸರವಾದೀತು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಹೇಳದೇ ಮೌನದಿಂದ ಇರುವಿರಿ. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡುವುದು. ಯಾರ ಮಾತನ್ನೂ ಕೇಳುವ ತಾಳ್ಮೆ ಇರದು. ನಿಮ್ಮ ಮಾತನ್ನು ಕೇಳಲು ಆಸಕ್ತಿ ಇರದು. ಇಂದು ಮೇಲೆ ಆರ್ಥಿಕ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡಿ.

ತುಲಾ ರಾಶಿ: ಇಂದು ಅನಿರೀಕ್ಷಿತ ಧನಾಗಮನವು ಆಗಲಿದ್ದು, ಅದನ್ನು ಸತ್ಕಾರ್ಯಕ್ಕೆ ನೀಡುವಿರಿ. ಕಲಾವಿದರಿಗೆ ಖುಷಿಯ ವಾತಾವರಣವು ಇರಲಿದೆ. ನಿಮ್ಮ ಆಲೋಚನೆಯು ವಾಸ್ತವಕ್ಕಿಂತ ಭಿನ್ನವಾಗಿ ಕಾಣಿಸುವುದು. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ರಾಜಕೀಯದಲ್ಲಿ ನಿಮಗೆ ಆಸಕ್ತಿಯು ಇದ್ದರೂ ಪ್ರವೇಶಕ್ಕೆ ಮಾರ್ಗವನ್ನು ಹುಡುಕುವಿರಿ. ಹಿರಿಯರಿಗೆ ಅಗೌರವದಿಂದ ಮಾತನಾಡಿ, ಅನಂತರ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ.‌ ಮಕ್ಕಳ‌ ಮೇಲೆ‌ ನಿಮ್ಮ ಮೋಹವು ಅತಿಯಾಗಿದ್ದು ಅದು ಬಂಧನವೂ ಆಗಬಹುದು. ಅಸಾಮಾನ್ಯ ಕಾರ್ಯವನ್ನು ಮಾಡಲು ಬಹಳ ಉತ್ಸಾಹವಿರುವುದು. ಸಾಹಸದಲ್ಲಿ ವಿವೇಚನೆ ಇರಲಿ.

ವೃಶ್ಚಿಕ ರಾಶಿ: ಇಂದು ಪ್ರೇಮದಲ್ಲಿ ಇರುವವರಿಗೆ ಪರಸ್ಪರ ಭೇಟಿಯ ಅವಕಾಶವು ಇತಬಹುದು. ವಿವಾಹ ಸಮಾರಂಭದಲ್ಲಿ ಭಾಗಿಯಾಗುವಿರಿ. ಹೂಡಿಕೆಯಲ್ಲಿ ಇಂದು ಲಾಭ ಸಿಗದೇಹೋಗಬಹುದು. ಇಂದಿನ ನಿಮ್ಮ ಮಾತಿನಿಂದ ದ್ವೇಷವನ್ನು ಸಾಧಿಸಬಹುದು. ನಿಮಗೆ ನಕಾರಾತ್ಮಕ ಹಣೆಪಟ್ಟಿಯು ನಿಮಗೆ ಬೀಳಬಹುದು, ಎಚ್ಚರವಿರಲಿ. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವು ಪೂರ್ಣವಾಗಬಹುದು. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಓಡಾಟದ ಸಮಯದಲ್ಲಿ ನಿಮ್ಮ‌ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಕಳೆದುಕೊಂಡ ವಸ್ತುವಿನ ಮೌಲ್ಯವು ನಿಮಗೆ ಗೊತ್ತಾಗದೇ ಹೋಗುವುದು. ಅಪರಿಚಿತರು ನಿಮ್ಮಿಂದ ಧನವನ್ನು ಪಡೆಯುವರು. ಅತಿಯಾದ ನಿರೀಕ್ಷೆಯು ಇಂದು ನಿಮ್ಮ ಮನಸ್ಸನ್ನು ಕೆಡಸಬಹುದು. ಮನೆಗೆ ಬಂದ ಅತಿಥಿಯನ್ನು ಸತ್ಕಾರಿಸುವಿರಿ. ವಾಹನದಿಂದ ಬಿದ್ದು ಗಾಯವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ.