ಈ ನಕ್ಷತ್ರದಲ್ಲಿ ಜನಿಸಿದವರ ಶರೀರದಲ್ಲಿ ಕಾಂತಿ ಹೆಚ್ಚು…! ಆದರೆ ಅಷ್ಟು ಮಾತ್ರವಲ್ಲ…

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 8:30 PM

ಇದು ನಕ್ಷತ್ರ ಪುಂಜಗಳಲ್ಲಿ ಆರನೇ ನಕ್ಷತ್ರ. ‌ಇದರ ಅಧಿದೇವತೆ ಲಯಕರ್ತನಾದ ರುದ್ರ. ಈ ನಕ್ಷತ್ರವು ಒಂದೇ ನಕ್ಷತ್ರವಾಗಿದ್ದು, ಮಣಿಯಂತೆ ರಾತ್ರಿ ಸಮಯದಲ್ಲಿ ಬೆಳಗುತ್ತದೆ. ಈ ನಕ್ಷತ್ರವನ್ನು ಮಳೆಗೆ ಸಂಬಂಧಿಸಿದಂತೆ ನೋಡುವ ಪದ್ಧತಿ ಇದೆ. ರವಿಯು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದಾಗ ಮಳೆಯು ಹೇಗಿರುತ್ತದೆ ಎನ್ನುವುದನ್ನು ತಿಳಿಯಬಹುದಾಗಿದೆ.

ಈ ನಕ್ಷತ್ರದಲ್ಲಿ ಜನಿಸಿದವರ ಶರೀರದಲ್ಲಿ ಕಾಂತಿ ಹೆಚ್ಚು...! ಆದರೆ ಅಷ್ಟು ಮಾತ್ರವಲ್ಲ...
Follow us on

ಇದು ನಕ್ಷತ್ರ ಪುಂಜಗಳಲ್ಲಿ ಆರನೇ ನಕ್ಷತ್ರ. ‌ಇದರ ಅಧಿದೇವತೆ ಲಯಕರ್ತನಾದ ರುದ್ರ. ಈ ನಕ್ಷತ್ರವು ಒಂದೇ ನಕ್ಷತ್ರವಾಗಿದ್ದು, ಮಣಿಯಂತೆ ರಾತ್ರಿ ಸಮಯದಲ್ಲಿ ಬೆಳಗುತ್ತದೆ. ಈ ನಕ್ಷತ್ರವನ್ನು ಮಳೆಗೆ ಸಂಬಂಧಿಸಿದಂತೆ ನೋಡುವ ಪದ್ಧತಿ ಇದೆ. ರವಿಯು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದಾಗ ಮಳೆಯು ಹೇಗಿರುತ್ತದೆ ಎನ್ನುವುದನ್ನು ತಿಳಿಯಬಹುದಾಗಿದೆ.

ಹಗಲಿನಲ್ಲಿ ರವಿಯು ಸೂರ್ಯನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದಾಗ ಪ್ರಪಂಚದಲ್ಲಿ ನಾನಾರೀತಿಯ ತೊಂದರೆಗಳು ಕಾಣಿಸಿಕೊಳ್ಳುವುದು. ಅಲ್ಪ ಮಳೆ ಹಾಗೂ ಸಸ್ಯಗಳ ನಾಶವಾಗಲಿದೆ. ಅದೇ ರಾತ್ರಿಯಲ್ಲಿ ಸೂರ್ಯನ ಪ್ರವೇಶವಾದರೆ ಸುವೃಷ್ಟಿ, ಸಸ್ಯಗಳ ಸಮೃದ್ದಿ, ಜನರಿಗೆ ಸಂತೋಷವಾಗಲಿದೆ. ಇದು ಸಾಮಾನ್ಯವಾಗಿ ಮಂಗಲ ಕಾರ್ಯಗಳಿಗೆ ಪ್ರಶಸ್ತವಲ್ಲ.

ಹಾಗಾಗಿ ರವಿಯ ಆರ್ದ್ರಾ ನಕ್ಷತ್ರ ಪ್ರವೇಶವನ್ನು ನಿರೀಕ್ಷಿಸುವವರೂ ಇದ್ದಾರೆ.

ಇನ್ನು ಈ ರಾಶಿಯಲ್ಲಿ ಜನಿಸಿದರೆ ಏನಾಗುತ್ತದೆ ಎನ್ನುವುದನ್ನು ನೋಡಬೇಕು.

ಹಸಿವು ಹೆಚ್ಚು : ಈ ನಕ್ಷತ್ರದವರಿಗೆ ಹಸಿವು ಹೆಚ್ಚು. ಇವರು ಹೆಚ್ಚು ಆಹಾರವನ್ನು ಸೇವಿಸುತ್ತಾರೆ ಮತ್ತು ದಿನದಲ್ಲಿ ಹೆಚ್ಚು ಬಾರಿ ಆಹಾರವನ್ನು ಸೇವಿಸುತ್ತಾರೆ. ಆಗಾಗ ಹಸಿವಾಗಿ ತಿನ್ನಬೇಕು ಎನಿಸುವುದು.

ಶರೀರ ಕಾಂತಿ : ಇವರ ಶರೀರವು ಕಾಂತಿಯಿಂದ ಕೂಡಿರುವುದು. ಬಂಗಾರದ ಬಣ್ಣವನ್ನು ಹೋಲುವಂತೆಯೂ ಆಕರ್ಷಕವೂ ಆಗಿರುವುದು.

ಸಿಟ್ಟು ಹೆಚ್ಚು : ಇವರ ಸ್ವಭಾವದಲ್ಲಿ ಹೆಚ್ಚು ಗೊತ್ತಾಗುವುದು ಇದು. ಎಲ್ಲ ವಿಚಾರಕ್ಕೂ ಸಿಟ್ಟು ಮಾಡಿಕೊಳ್ಳುವರು. ತಾಳ್ಮೆಯಿಂದ ಇರುವುದು ಇವರಿಗೆ ಕಷ್ಟ. ಮುಂಗೋಪ ಅಧಿಕ.

ವಿನೀತರಲ್ಲ : ವಿನೀತ ಭಾವವು ಇವರಲ್ಲಿ ಇರದು. ಸದಾ ಹಠ, ತಾನೇ ಸರಿ, ತನ್ನ ಮಾತೇ ನಡೆಯಬೇಕು ಎನ್ನುವ ಹುಂಬುತನ ಇವರಲ್ಲಿ ಇರುವುದು. ಇನ್ನೊಬ್ಬರನ್ನು ಒಪ್ಪುವ ಸ್ವಭಾವವಿರದು.

ಕ್ಷಮಾ ತಿರಸ್ಕಾರ : ಯಾರಾದರೂ ಮಾಡಿದ ತಪ್ಪಿಗೆ, ಶರಣಾಗಿ ಬಂದು ಕ್ಷಮೆಯನ್ನು ಕೇಳಿದರೆ ಅದನ್ನೂ ನೀವು ಸ್ವೀಕರಿಸದೇ ಒರಟಾಗಿ ವರ್ತಿಸುವಿರಿ. ಯಾರ ಮಾತೂ ನಿಮಗೆ ಪುರಸ್ಕಾರ್ಯವಾಗದು.

ಅವಗುಣಗಳೇ ಅಧಿಕವಾಗಿ ಇರುವ ಅಥವಾ ಬರುವ ನಕ್ಷತ್ರ ಆರ್ದ್ರಾ. ಈ ನಕ್ಷತ್ರದವರು ರುದ್ರನ ಅಘೋರರೂಪವನ್ನು ಧ್ಯಾನಿಸಬೇಕು. ಒಳ್ಳೆಯ ಅಂಶಗಳನ್ನು ರೂಢಿಸಿಕೊಳ್ಳಬೇಕು. ಆಗ ಸಾಮಾಜಿಕ ರಂಗದಲ್ಲಿ ಮಾನ್ಯರೂ ವೈಯಕ್ತಿಕವಾಗಿ ಸ್ವಸ್ಥರೂ ಆಗುವರು.

– ಲೋಹಿತ ಹೆಬ್ಬಾರ್ – 8762924271