Weekly Horoscope: ಮಾರ್ಚ್ 5ರಿಂದ ಮಾರ್ಚ್ 11ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

2023ರ ಮಾರ್ಚ್ 5ರಿಂದ ಮಾರ್ಚ್ 11ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ಮಾರ್ಚ್ 5ರಿಂದ ಮಾರ್ಚ್ 11ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ವಾರ ಭವಿಷ್ಯ
Follow us
Rakesh Nayak Manchi
|

Updated on: Mar 05, 2023 | 5:15 AM

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ (Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಮಾರ್ಚ್ 5ರಿಂದ ಮಾರ್ಚ್ 11ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

ಮೇಷ: ನಿಮ್ಮದೇ ರಾಶಿಯಲ್ಲಿ ರಾಹುವಿದ್ದು ಅತಿಯಾದ ದೇಹಾಯಾಸವಾಗಲಿದೆ. ದ್ವಿತೀಯದಲ್ಲಿರುವ ಕುಜನು ಭೂಮಿಯಿಂದ ಲಾಭವನ್ನು ಮಾಡಿಸುವನು. ಕುಟುಂಬದ ಜೊತೆ ಹೆಚ್ಚಿನ ಸಂತಸದಿಂದ ಕಾಲಕಳೆಯುವಿರಿ. ಏಕಾದಶದಲ್ಲಿರುವ ಶನಿಯು ನಿಮಗೆ ಅನೇಕ ಲಾಭವನ್ನು ಕೊಡಲಿದ್ದಾನೆ. ದ್ವಾದಶ ಗುರುವಿನಿಂದ ನಿಮಗೆ ಅಪಮಾನವಾಗುವ ಸಾಧ್ಯತೆ ಇದೆ.‌ ತಂದೆಯಿಂದ ಸಂಪತ್ತು ಸಿಗಬಹುದು. ದೂರದ ಊರಿಗೆ ಪ್ರಯಾಣ ಮಾಡಲಿದ್ದೀರಿ. ವಿಶ್ರಾಂತಿಯ ಅವಶ್ಯಕತೆಯಿದೆ.

ವೃಷಭ: ಆಗಿ ಹೋದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಲಿದ್ದೀರಿ. ಹಿತವಾದ ಮಾನಸಿಕ ಸ್ಥಿತಿ ಬರುವುದು. ಮನಸ್ಸಿನಲ್ಲಿ ಏನೋ ಕೊಯುತ್ತಿರುವುದು. ಸ್ಪಷ್ಟತೆ ಇಲ್ಲದೇ ಒದ್ದಾಡುವಿರಿ. ಏಕಾದಶದಲ್ಲಿರುವ ಗುರು ಹಾಗು ಶುಕ್ರರು ನಿಮಗೆ ಇಷ್ಟಾರ್ಥವನ್ನು ಕೊಡಿಸುವರು. ಸರ್ಕಾರಿ ಉದ್ಯೋಗಕ್ಕೆ ಅವಕಾಶ ಸಿಗಲಿದೆ. ನಿಮ್ಮವರು ನಿಮ್ಮನ್ನು ಪ್ರಶಂಸಿಸುವರು. ದಾನವನ್ನು ಮಾಡುವ ಮನಸ್ಸು ಮಾಡುವಿರಿ. ದ್ವಾದಶದಲ್ಲಿರುವ ರಾಹುವು ನಿಮಗೆ ಅಮೂಲ್ಯವಸ್ತುವಿನ ನಷ್ಟವನ್ನು ಮಾಡಿಸುವನು. ಕಳೆದುದುದರ ಬಗ್ಗೆ ಚಿಂತೆ ಬೇಡ. ಕಾರ್ತಿಕೇಯನ ಸ್ಮರಣೆ ಮಾಡಿ.

ಮಿಥುನ: ನಿಮ್ಮದೇ ಆದ ಮಾರ್ಗದಲ್ಲಿ ನೀವು ಹೋಗುವಿರಿ. ಹುಂಬುತನ ನಿಮ್ಮನ್ನು ಆವರಿಸಬಹುದು. ಒಳ್ಳೆಯ ಮಾತುಗಳನ್ನು ಕೇಳುವ ವ್ಯವಧಾನ ಇಲ್ಲದೆಯೇ ಇರಬಹುದು. ಪೂರ್ವಸ್ವಭಾವವನ್ನು ಬಿಟ್ಟು ಹೊರಬರುವುದು ಉತ್ತಮ. ದಶಮದಲ್ಲಿರುವ ಶುಕ್ರನು ಉತ್ತಮ ಉದ್ಯೋಗವನ್ನೂ ಹೆಚ್ಚಿನ ವೇತನವನ್ನೂ ಕೊಡಿಸುವನು. ನವಮದಲ್ಲಿರುವ ಸೂರ್ಯ ಹಾಗೂ ಬುಧರು ನಿಮ್ಮ ಬುದ್ಧಿಯನ್ನು ಹೆಚ್ಚಿಸಿ ಉತ್ತಮ ಕಾರ್ಯಕ್ಕೆ ಪ್ರೇರಣೆ ಕೊಡುವರು. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯವಾಗಲಿದೆ. ಏಕಾದಶದ ರಾಹುವು ನಿಮಗೆ ಅನ್ಯಾನ್ಯ ಮಾರ್ಗದಿಂದ ಸಂಪತ್ತು ಬರುವಂತೆ ಮಾಡುವನು.

ಕಟಕ: ಆಪ್ತರನ್ನೂ ನಂಬದ ಸ್ಥಿತಿಯಲ್ಲಿ ಇರುವಿರಿ. ಮನಸ್ಸು ಬೇಡದ ಚಿಂತೆಗಳನ್ನು ಮಾಡಿ ಕೆಟ್ಟುಹೋಗಬಹುದು‌. ವೃತ್ತಿಯಲ್ಲಿ ಅತಿಯಾದ ಒತ್ತಡವು ಇರುತ್ತದೆ. ಅಷ್ಟಮದಲ್ಲಿರುವ ಸೂರ್ಯನಿಂದ ತಂದೆಗೆ ತೊಂದರೆಯಾಗಬಹುದು. ಅನವಶ್ಯಕ ಖರ್ಚುಗಳು ಆಗಬಹುದು. ದ್ವಾದಶಾಧಿಪತಿಯಾದ ಬುಧನು ಅಷ್ಟಮದಲ್ಲಿರುವನು. ಆರೋಗ್ಯದಲ್ಲಿ ಅತಿಯಾದ ವ್ಯತ್ಯಾಸವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬೇಕಾಗಿಬರಬಹುದು. ಏಕಾದಶಾಧಿಪತಿಯಾದ ಶುಕ್ರನು ನವಮದಲ್ಲಿದ್ದು ಸ್ತ್ರೀಯಿಂದ ಸಂಪತ್ತು ಸಿಗುವಂತೆ ಮಾಡುವನು. ಪ್ರೇಮವು ಉಂಟಾಗಬಹುದು.

ಸಿಂಹ: ಈ ರಾಶಿಯ ಅಧಿಪತಿಯಾದ ರವಿಯು ಸಪ್ತಮಸ್ಥಾನದಲ್ಲಿರುವನು. ಇದು ನಿಮಗೆ ರಕ್ಷಾಕವಚವಾಗಿರಲಿದೆ. ಸಪ್ತಮದಲ್ಲಿಯೇ ಇರುವ ಶನಿಯು ನಿಮ್ಮ ಕಾರ್ಯಗಳನ್ನು ನಿಧಾನ ಮಾಡುವನು. ಮಾತ್ರವಲ್ಲ, ವಿವಾಹವನ್ನೂ ವಿಳಂಬವಾಗುವಂತೆ ಮಾಡುವನು. ಅಪವಾದಗಳು ಬರುವ ಸಾಧ್ಯತೆ ಇದೆ. ಅಷ್ಟಮದಲ್ಲಿರುವ ಗುರು ಹಾಗು ಶುಕ್ರರಿಂದ ಧನನಷ್ಟ, ಗೌರವಕ್ಕೆ ಧಕ್ಕೆಗಳು ಬರಬಹುದು. ನವಮದಲ್ಲಿರುವ ರಾಹುವು ನಿಮ್ಮ ಅದೃಷ್ಟವನ್ನು ಮುಚ್ಚಿ ಹಾಕುವನು. ಸ್ವಲ್ಪ ಕಾಲ ನಿಮ್ಮ ವಿರುದ್ಧ ಪಿತೂರಿಗಳೂ ನಡೆಯಬಹುದು. ತಂತ್ರಜ್ಞರಿಗೆ ಉತ್ತಮ ಕೆಲಸಗಳು ಸಿಗಲಿವೆ. ಶನೈಶ್ಚರನ ಮಂದಿರಕ್ಕೆ ಹೋಗಿ ಬನ್ನಿ.

ಕನ್ಯಾ: ದ್ವಿತೀಯದಲ್ಲಿರುವ ಕೇತುವು ವಾಮಮಾರ್ಗದಲ್ಲಿ ಸಂಪತ್ತನ್ನು ಪಡೆಯಲು ಪ್ರೇರಿಸುವನು. ನಿಮ್ಮ ಮನಸ್ಸು ಶುದ್ಧವಾಗಿಟ್ಟುಕೊಳ್ಳಿ. ನೀವು ನಡೆಯುವ ಹಾದಿಯ ಬಗ್ಗೆ ಗಮನವಿರಲಿ. ಷಷ್ಠದಲ್ಲಿ ಬುಧ, ಶನಿ, ರವಿಯರು ಇದ್ದಾರೆ. ಸ್ವಲ್ಪ ಮಟ್ಟಿನ ತೊಂದರೆ ಇದ್ದರೂ ಅದನ್ನು ತೂಗಿಸಿಕೊಂಡು ಹೋಗುವಿರಿ. ಸನ್ಮಾನ, ಗೌರವಾದರಗಳು ಸಿಗಲಿವೆ. ಅವಿವಾಹಿತರಿಗೆ ವಿವಾಹ ಯೋಗವು ಕೂಡಿ ಬರಲಿದೆ.‌ ಹಣವೂ ಯಥೇಷ್ಟವಾಗಿ ಬರುವುದು. ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ‌. ಮನೆಯಲ್ಲಿ ಮಂಗಲಕಾರ್ಯಗಳು ನಡೆಯಬಹುದು.‌ ಮಿತ್ರರಿಂದ ಸಹಾಯವನ್ನು ಪಡೆದುಕೊಳ್ಳಲಿದ್ದೀರಿ. ಆದಿತ್ಯಹೃದಯವನ್ನು ಪಠಿಸಿರಿ.

ತುಲಾ: ಪಂಚಮದಲ್ಲಿ ಶನಿಯು ಇದ್ದುದರಿಂದ ಮನಸ್ಸು ಹಾಗು ಬುದ್ಧಿಯ ಜೊತೆ ಆಟವಾಡುವನು. ನಿಮಗೆ ನಾನಾ ರೀತಿಯ ಮಾನಸಿಕ ಹಿಂಸೆಗಳು ಬರಬಹುದು. ಜೀವನವೇ ಸಾಕೆನಿಸು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಈಗ ಸಧ್ಯಕ್ಕೆ ಯಾವ ಗ್ರಹಗಳೂ ನಿಮ್ಮ ಪರವಾಗಿ‌ಇಲ್ಲ. ಷಷ್ಠದಲ್ಲಿರುವ ಗುರು ಹಾಗೂ ಶುಕ್ರರೂ ನಿಮಗೆ ಪ್ರತಿಕೂಲವನ್ನೇ ಮಾಡುವರು. ನಿಮ್ಮ ರಾಶಿಯಲ್ಲಿಯೇ ಇರುವ ಕೇತುವು ಶರೀರಪೀಡಯನ್ನು ಕೊಡುವನು.‌ ಒಟ್ಟಿನಲ್ಲಿ ಎಲ್ಲ ಗ್ರಹಗಳೂ ಪ್ರತಿಕೂಲವಾಗಿಯೇ ಇರಲಿವೆ‌. ದೈವವೇ ನಿಮ್ಮನ್ನು ಕಾಪಾಡುವುದು. ದುರ್ಗಾರ್ತಿನಾಶಿನಿಯಾದ ದುರ್ಗೆಯನ್ನು ಸ್ತೋತ್ರ ಮಾಡಿ. ನಿಮ್ಮ ನೋವುಗಳು ಕಡಿಮೆಯಾಗುವುವು.

ವೃಶ್ಚಿಕ: ಪಂಚಮದಲ್ಲಿರುವ ಗುರು ಹಾಗೂ ಶುಕ್ರರು ನಿಮಗೆ ಅತ್ಯಂತ ಶುಭಫಲವನ್ನೇ ನೀಡಲಿದ್ದಾರೆ. ಸಂತಾನವನ್ನು ಅಪೇಕ್ಷೆಸುತ್ತಿದ್ದರೆ ಶುಭವಾರ್ತೆಯನ್ನು ಕೇಳಿದ್ದೀರಿ. ಚತುರ್ಥದಲ್ಲಿರುವ ಬುಧನು ನಿಮ್ಮ ಮನೆಯಲ್ಲು ಸುಖ, ನೆಮ್ಮದಿಯು ಇರುವಂತೆ ಮಾಡಲಿದ್ದಾನೆ. ಸಪ್ತಮದಲ್ಲಿ ಕುಜನು ಇರುವುದರಿಂದ ದಾಂಪತ್ಯದಲ್ಲಿ ಕಲಹವಾಗಲಿದೆ‌. ನ್ಯಾಯಾಲಯದ ಮೆಟ್ಟಿಲೇರಲಿದ್ದೀರಿ. ಷಷ್ಠದಲ್ಲಿರುವ ರಾಹುವು ಸ್ವಲ್ಪಮಟ್ಟಿನ ಅನಾರೋಗ್ಯವನ್ನು ಕೊಡಲಿದ್ದಾನೆ. ಮನೆತನದಿಂದ ನೀವು ಪ್ರಸಿದ್ಧರಾಗಲಿದ್ದೀರಿ. ಮಕ್ಕಳಿಂದ ನಿಮಗೆ ಖುಷಿ ಸಿಗಲಿದೆ. ನಾಗದೇವತೆಗೆ ಕ್ಷೀರಾಭಿಷೇಕ ಮಾಡಿರಿ.‌ ಅನಾರೋಗ್ಯದ ತೊಂದರೆ, ನರದೌರ್ಬಲ್ಯಗಳು ದೂರವಾಗುವುವು.

ಧನಸ್ಸು: ಚತುರ್ಥದಲ್ಲಿ ಶುಕ್ರನಿದ್ದು ಶುಭಫಲಗಳನ್ನು ಕೊಡುವನು. ‌ಆಭರಣಾದಿ ಖರೀದಿ‌ಗಳನ್ನು ಮಾಡಲಿದ್ದೀರಿ. ವಾಹನದಿಂದ ಲಾಭ‌ವಾಗುವ ಸಾಧ್ಯತೆ ಇದೆ. ವಿದೇಶ ಪ್ರವಾಸಕ್ಕೆ ಹೋಗುವ ಸಂದರ್ಭವು ಬರಲಿದೆ. ಆರೋಗ್ಯ ಉತ್ತಮವಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆಗಳು ಸಿಗಬಹುದು‌. ಮನಸ್ಸಿಗೆ ಖುಷಿಯಾಗುವ ಕಾರ್ಯಗಳನ್ನು ಮಾಡಲೊದ್ಸೀರಿ. ಭೂಮಿ ವ್ಯವಹಾರದಲ್ಲಿ ಲಾಭವನ್ನು ಗಳಿಸುವಿರಿ.‌ ಧೈರ್ಯದಿಂದ ಮಿನ್ನುಗ್ಗು ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ನಾನಾ ಮೂಲಗಳಿಂದ ಹಣ ಒದಗಿ‌ಬರಬಹುದು. ಕುಲಗುರುವಿನ ದರ್ಶನ ಹಾಗೂ ಆಶೀರ್ವಾದವನ್ನು ಪಡೆಯಿರಿ.

ಮಕರ: ದ್ವಿತೀಯದಲ್ಲಿ ಶನಿಯು ಇದ್ದಾನೆ. ಇದರಿಂದ ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಪರಸ್ಪರ ಕಾದಾಟಗಳು ಇರಲಿವೆ. ಶಾಂತರೀತಿಯಿಂದ ವರ್ತಿಸುವ ಅವಶ್ಯಕತೆವಿದೆ‌. ದ್ವಿತೀಯದಲ್ಲಿರುವ ಬುಧನು ಸುಖವನ್ನು ಹೆಚ್ವಿಸುವನು. ಆಲೋಚಿಸಿದ ಯೋಜನೆಗಳ ಕಾರ್ಯಕ್ರಮವನ್ನು ಪ್ರಾರಂಭ ಮಾಡಿ. ಉತ್ತಮ ಅವಕಾಶಗಳು ನಿಮ್ಮ ಮುಂದೆ ತೆರೆದುಕೊಳ್ಳಲಿವೆ. ಸಹೋದರು ನಿಮಗೆ ಸಹಾಯಹಸ್ತ‌ ಚಾಚಲಿದ್ದಾರೆ. ಮಾನಸಿಕ ಒತ್ತಡದಿಂದ ಕೊಂಚ ಹಿಂಸೆಯಾಗಬಹುದು. ಕುಲದೇವರಿಗೆ ಎಳ್ಳೆಣ್ಣೆಯ ದೀಪವನ್ನು ಬೆಳಗಿ.

ಕುಂಭ: ನಿಮ್ಮದೇ ರಾಶಿಯಲ್ಲಿ ಬುಧನಿದ್ದಾನೆ. ದೃಢವಾದ ದೇಹವಿರಲಿದೆ. ದ್ವಿತೀಯದಲ್ಲಿ ಗುರು ಮತ್ತು ಶುಕ್ರರಿದ್ದು ಆರ್ಥಿಕವಾಗಿ ಲಾಭವಿರಲಿದೆ. ಹಾಗಿದ್ದರೂ ನಿಮ್ಮ ರಾಶಿಯಲ್ಲಿಯೇ ಇರುವ ಶನಿ ಖರ್ಚು ಮಾಡಿಸಲು ಸಿದ್ಧನಾಗಿಯೇ ಇದ್ದಾನೆ. ವ್ಯರ್ಥ ಓಡಾಟವು ಆಗಲಿದೆ. ನಿಮ್ಮ ಸಹಾಯ ಕೇಳಿ ಬಂದವರಿಗೆ ಸಹಾಯವನ್ನು ಮಾಡಿ. ಆಗುವುದಿಲ್ಲ.‌ ಮನಸ್ಸು ತೊಳಲಾಟದಲ್ಲಿ ಇರಲಿದೆ. ತೃತೀಯದಲ್ಲಿರುವ ರಾಹು ನಿಮ್ಮ ಶಕ್ತಿಯನ್ನು ತೋರಿಸುವನು. ಕೆಲಸಗಳಲ್ಲಿ ಮುಂದಡಿ ಇಡುವಂತೆ ನೋಡಿಕೊಳ್ಳುವನು. ಚತುರ್ಥದಲ್ಲಿರುವ ಕುಜನು ಆಸ್ತಿಯನ್ನು ಖರೀದಿಸುವಂತೆ ಮಾಡುವನು. ರವಿಯು ಶನಿಯೊಂದಿಗೆ ಇರುವುದರಿಂದ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು.‌ ಈಶ್ವರನಿಗೆ ರುದ್ರಾಭಿಷೇಕವನ್ನು ಮಾಡಿಸಿ.

ಮೀನ: ಗುರು ಮತ್ತು ಶುಕ್ರರು ನಿಮ್ಮ ಮನೆಯಲ್ಲಿಯೇ ಇದ್ದರೂ ದ್ವಾದಶದ ಶನಿಯು ನಿಮಗೆ ನಿಮಗೆ ಲೆಕ್ಕಕ್ಕೆ ಸಿಗದಷ್ಟು ಖರ್ಚನ್ನು ಮಾಡಿಸುವನು. ಇದರಿಂದ ಬಹಳ‌ನೋವನ್ನು ಅನುಭವಿಸುವಿರಿ. ಅನಾರೋಗ್ಯ, ಮನೆಯಲ್ಲಿ ಅಶಾಂತಿ, ನೆಮ್ಮದಿಯ ಕೊರತೆ ಕಾಡಲಿದೆ. ಉದ್ವೇಗಕ್ಕೆ ಒಳಗಾಗದೇ ಎಲ್ಲ ಕೆಲಸಗಳನ್ನು ಮಾಡಿ. ಹೆಚ್ಚು ಸಹನೆಯಿದ್ದರೂ ಅದನ್ನು ಉಳಿಸಿಕೊಳ್ಳಬೇಕಾದ ಸ್ಥಿತಿ ಇರಲಿದೆ. ದ್ವಾದಶದಲ್ಲಿರುವ ಬುಧನಿಂದ ನಿಮಗೆ ಅರಿಯಾದ ನೋವುಗಳು ಕಾಡಬಹುದು. ಗ್ರಹಗಳಾವುವು ಅನುಕೂಲಕರವಾಗಿ ಇಲ್ಲದೇ ಇದ್ದುದರಿಂದ ನಿಮ್ಮ ಮಾತು ಅನರ್ಥಕ್ಕೇ ಕಾರಣವಾಗುವುದು. ಮೌನ ಲೇಸು. ಹನುಮಾನ್ ಚಾಲೀಸ್ ಪಠಿಸಿ.

-ಲೋಹಿತಶರ್ಮಾ, ಇಡುವಾಣಿ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ