Weekly Horoscope: ವಾರ ಭವಿಷ್ಯ, ಮೇ 14ರಿಂದ ಮೇ 20 ವರೆಗಿನ ನಿಮ್ಮ ಭವಿಷ್ಯ ಹೀಗಿದೆ

|

Updated on: May 14, 2023 | 5:46 AM

2023ರ ಮೇ 14ರಿಂದ ಮೇ 20ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ವಾರ ಭವಿಷ್ಯ, ಮೇ 14ರಿಂದ ಮೇ 20 ವರೆಗಿನ ನಿಮ್ಮ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಮೇ 14ರಿಂದ ಮೇ 20 ವರೆಗಿನ ನಿಮ್ಮ ಭವಿಷ್ಯ
Image Credit source: freepik
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಮೇ 14ರಿಂದ ಮೇ 20ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.

ಮೇಷ: ಈ ವಾರ ನಮಗೆ ಶುಭವಾಗಲಿದೆ. ನೀವು ಸರಿಯಾದ ಸಮಯಕ್ಕೆ ತೆಗೆದುಕೊಂಡ ಸೂಕ್ತ ನಿರ್ಧಾರವು ಉತ್ತಮ ಗುರಿಯನ್ನು ಸಾಧಿಸಲು ಯೋಗ್ಯವಾಗುವುದು.‌ ಸಾಮಾಜಿಕ ಗೌರವಗಳು, ಸಮ್ಮಾನಗಳು ಪ್ರಾಪ್ತವಾದೀತು. ಹಿತಶತ್ರುಗಳು ನಿಮ್ಮ ಸೋಲಿಗೆ ಬೇಕಾದ ಯೋಜನೆಯನ್ನು ಮಾಡಿಕೊಳ್ಳುವರು.‌ ಅವ ಮಾತಿನಿಂದ ಅಪಾಯವುಂಟಾದೀತು.‌ ಅವರ ವಿಚಾರವನ್ನು ಸರಿಯಾಗಿ‌ ತಿಳಿಯಿರಿ. ರವಿಯು ದ್ವಿತೀಯಕ್ಕೆ ಹೋಗಲಿದ್ದು ತಂದೆಯಿಂದ‌ ಸಹಕಾರ ಸಿಗಲಿದೆ. ಕುಜನು ಚತುರ್ಥ ಸ್ಥಾನಕ್ಕೆ ಹೋಗಿ ಸಹೋದರರ‌ ನಡುವೆ ಭಿನ್ನತೆ ಬರುವಂತೆ ಮಾಡುವನು.

ವೃಷಭ: ಈ ವಾರ ನಿಮಗೆ ಹಣದ ಹರಿವು ಬಹಳ ಅತಿಯಾಗಿ ಇರದು. ದ್ವಿತೀಯದ ಶುಕ್ರನು ತಾಯಿಯ‌ ಕಡೆಯಿಂದ ಅಥವಾ ಮಾತುಗಾರಿಕೆಯಿಂದ ಸಂಪತ್ತನ್ನು ಕೊಟ್ಟಾನು.‌ ಧಾರ್ಮಿಕ‌ ಕಾರ್ಯಗಳನ್ನು ಮಾಡುವತ್ತ ಮನಸ್ಸು ಮಾಡುವಿರಿ. ಹಣವು ಅದಕ್ಕಾಗಿ ವ್ಯಯವಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಜನರು ತಿಳಿದುಕೊಳ್ಳುವರು. ರಾಜಕಾರಣಿಗಳು ನೂತನ ಜವಾಬ್ದಾರಿಯನ್ನು ಪಡೆದು ಕೆಲಸವನ್ನು ಆರಂಭಿಸುವರು. ಸೂರ್ಯನು ನಿಮ್ಮ ರಾಶಿಗೆ ಬಂದಿರುವುದರಿಂದ ಆರೋಗ್ಯ ವೃದ್ಧಿ ಜಾಗೂ ತಂದೆ – ತಾಯಿ ಪ್ರೀತಿಯೂ ಸಿಗಲಿದೆ. ಸಹೋದರನ‌ ಸಾಮರ್ಥ್ಯವನ್ನು ತಿಳಿದುಕೊಳ್ಳುವಿರಿ. ಸುಬ್ರಹ್ಮಣ್ಯನ ಸ್ತೋತ್ರವನ್ನು ಮಾಡಿರಿ.

ಮಿಥುನ: ಈ ವಾರ ನಿಮಗೆ ಹೊಸ ಜವಾಬ್ದಾರಿಗಳು ಬರುವ ವಾರವಾಗಲಿದೆ. ಉದ್ಯೋಗಕ್ಕಾಗಿ ನೂತನ ಸ್ಥಳವನ್ನು ಹುಡುಕುವಿರಿ. ಕುಜನು ನೀಚನಾಗಿ ಕೆಟ್ಟ ಕೆಟ್ಟ ಭೂಮಿಯನ್ನು ತೋರಿಸವನು. ಅನಿವಾರ್ಯವಾಗಿ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗಬಹುದು. ಅನಾರೋಗ್ಯದ ಕಾರಣದಿಂದ ಹಣವು ಖರ್ಚಾದೀತು. ಶಿವನ ಧ್ಯಾನವು ನಿಮಗೆ ಅನುಕೂಲವಾದೀತು. ತಾಯಿಯ ಪ್ರೀತಿಯು ಕಡಿಮೆ ಆದೀತು.‌ ಮಾನಸಿಕವಾಗಿ ಕುಗ್ಗುವಿರಿ. ಕಠೋರ ಮಾತುಗಳಿಂದ ನಿಮ್ಮವರಿಗೆ ನೋವಾದೀತು. ಮಾತಿನ ಮೇಲೆ ಹಿಡಿತವಿರಲಿ. ಮಹಾವಿಷ್ಣುವಿನ ಸ್ಮರಣೆಯನ್ನು ಮಾಡಿ.

ಕರ್ಕ: ಈ ವಾರ ಬಹಳ ಎಚ್ಚರಿಕೆಯಿಂದ ಇರಬೇಕಾದೀತು. ಕುಜನು ಸ್ಥಾನವನ್ನು ಬದಲಿಸಿ, ನೀಚನಿಂದ ವ್ಯಯಕ್ಕೆ ಬರುತ್ತಿದ್ದಾನೆ. ವಾಹನ ಅಪಘಾತಗಳು ಹೆಚ್ಚಾದೀತು. ದೇಹಕ್ಕೆ ನಾನಾ ಪೀಡಗಳು ಉಂಟಾಗಬಹುದು. ಕೌಟುಂಬಿಕ ಗೊಂದಲದ ಅರಿವಾಗಿ ಅದರ ಕುರಿತು ದೀರ್ಘಾಲೋಚನೆಯನ್ನು ಮಾಡುವಿರಿ. ಸಾಹಸ ವೃತ್ತಿಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಬಂಧುಗಳ ಸಹಕಾರವು ನಿಮಗೆ ಸಿಗದೇ ಹೋದೀತು. ಆತ್ಮಬಲವೇ ನಿಮ್ಮನ್ನು ಮುನ್ನಡೆಯಲು ಬಲವನ್ನು ಕೊಡುವುದು. ವಿದ್ಯಾರ್ಥಿಗಳು ಮುಂದು ಉಪಯೋಗವಾಗುವ ವಿಷಯವನ್ನು ಆಯ್ಕೆ ಮಾಡಿಕೊಳ್ಳುವರು.

ಸಿಂಹ: ಈ ವಾರ ನಿಮಗೆ ಖರ್ಚುಗಳು ಅಧಿಕವಾಗಲಿದೆ. ನೂತನ ವಾಹನದ ವಿಚಾರದಲ್ಲಿ ಸುಮ್ಮನಿರುವುದು ಒಳ್ಳೆಯದು. ಎಲ್ಲ ವಿಚಾರಗಳಿಗೂ ಕೋಪವನ್ನು ಮಾಡಿಕೊಳ್ಳಲಿದ್ದೀರಿ. ತಾಳ್ಮೆಯ ಅವಶ್ಯಕತೆ ಬಹಳ ಇದೆ. ನಿಮ್ಮ ಧಾರ್ಮಿಕ ಭಾವನೆಗೆ ತೊಂದರೆಯಾದೀತು.‌ ಅವಿವಾಹಿತರಿಗೆ ವಿವಾಹವು ನಡೆಯಲಿದೆ. ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಮಕ್ಕಳಿಂದ ಸಂತೋಷದ ಸುದ್ದಿಗಳು ಬರಲಿದೆ. ವಾಹನದಿಂದ‌ ಅಧಿಕ ಲಾಭವನ್ನು ನೀವು ಪಡೆಯುವಿರಿ. ನಿಮ್ಮ ಪ್ರಭಾವವು ಈ ವಾರ ಕಛೇರಿಯಲ್ಲಿ ಗೊತ್ತಾಗಲಿದೆ. ಶಿಸ್ತಿಗೆ ಹೆಚ್ಚು ಪ್ರಾಮುಖ್ಯವನ್ನು ಕೊಡುವಿರಿ.

ಕನ್ಯಾ: ಈ ವಾರ ನಿಮಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ಕೊರತೆ ಕಾಣುವುದು. ಅಷ್ಟಮದಲ್ಲಿರುವ ಗುರುವು ಎಂತಹ ವ್ಯಕ್ತಿಗಳನ್ನೂ ಅಪಮಾನ ಮಾಡಿಸದೇ ಇರನು. ಈ ವಾರ ಅಪರೂಪದ ಶ್ರೇಷ್ಠ ಜನರ ಭೇಟಿಯಾಗಲಿದೆ. ವೃತ್ತಿಯಲ್ಲಿ ಬದಲಾವಣೆಯಾಗಿ ಅಧಿಕ ವೇತನದ ಕೆಲಸಕ್ಕೆ ಸೇರುವಿರಿ. ತಂದೆಯಿಂದ ನಿಮಗೆ ಅನೇಕ ಅನುಕೂಲತೆಗಳು ಆಗಲಿದೆ. ಕಲಾವಿದರು ಹೆಚ್ಚಿನ ಕೀರ್ತಿಯನ್ನು ಪಡೆಯುವರು. ಸಹೋದರನಿಂದ ಧನಲಾಭವೂ ಆಗಬಹುದು. ಮಾತಿನಲ್ಲಿ ಅಸ್ಪಷ್ಟತೆ ಇರಲಿದೆ. ಗಣಪತಿಯನ್ನು ಆರಾಧಿಸಿ ಪ್ರಾತಃಕಾಲದಲ್ಲಿ.

ತುಲಾ: ಈ ವಾರವು ನಿಮ್ಮ ಜೀವನಕ್ಕೆ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ವಿವಾಹ ಯೋಗವಂತೂ ನಿಮಗಿದೆ. ಆದಷ್ಟು ಬೇಗ ಮಾಡಿಕೊಳ್ಳಿ. ಕುಟುಂಬವೂ ನಿಮ್ಮನ್ನು ಗೌರವಿಸುವುದು. ತಂದೆಯಿಂದ ನಿಮಗೆ ಕಿರಿಕಿರಿ ಎನಿಸಬಹುದು. ಜಗನ್ಮಾತೆಯ ಅನುಗ್ರಹವು ನಿಮ್ಮ ಮೇಲೆ ಇರಲಿದೆ. ಪರಿಶ್ರಮದ ಕೆಲಸವನ್ನು ಈ ವಾರ ಹೆಚ್ಚು ಮಾಡಬೇಕಾಗಬಹುದು. ಸರ್ಕಾರಿ ಕೆಲಸದಲ್ಲಿ ಹಿನ್ನಡೆಯಾದೀತು. ಮಕ್ಕಳ ಪ್ರೀತಿಯನ್ನು ಅನುಭವಿಸುವಿರಿ. ವೃತ್ತಿಕ್ಷೇತ್ರದಲ್ಲಿ ಸಾಧಿಸಲು ಅವಕಾಶಗಳು ಸಿಗಲಿದೆ. ಈ ವಾರ ಅಧಿಕ ಪ್ರಯಾಣವನ್ನು ಮಾಡುವಿರಿ. ತ್ರಿಪುರಸುಂದರಿಯ ಆರಾಧನೆಯನ್ನು ಮಾಡಿ.

ವೃಶ್ಚಿಕ: ಈ ವಾರ ನಿಮಗೆ ಅತಿಯಾದ ಒತ್ತಡ ಸಮಯವಾಗಲಿದೆ. ನಿಮ್ಮ ಆತ್ಮವಿಶ್ವಾಸ ಒತ್ತಡದ ಕೆಲಸವನ್ನು ನಿಭಾಯಿಸುವಿರಿ. ಅನವಶ್ಯಕ ಕೆಲಸಗಳಿಗೆ ಹಣವನ್ನು ವ್ಯಯ ಮಾಡುವಿರಿ. ಅಪವಾದಗಳು ಬರಲಿದ್ದು, ನಿಮ್ಮ ಚಿಂತೆಯನ್ನು ಹೆಚ್ವಿಸೀತು. ಸ್ತ್ರೀಯರಿಂದ ಹೆಚ್ಚು ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಅದೃಷ್ಟವು ಕೈಕೊಡಬಹುದು. ನಿಮ್ಮ ಮಾತುಗಳು ನಿಮಗೇ ಕಂಟಕವಾಗಬಹುದು.‌ ನ್ಯಾಯಾಲತದಲ್ಲಿ ಜಯವಾಗಬಹುದು.‌ ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಬಲವಂತವಾಗಿ ವ್ಯಾಪರಗಳನ್ನು ಮಾಡಬೇಡಿ. ವಿಷ್ಣು ಸಹಸ್ರನಾಮವನ್ನು ಪಠಿಸಿ.

ಧನು: ಈ ವಾರ ನಿಮಗೆ ನಿರ್ಣಯಗಳನ್ನು ತೆಗದು ನಿಮ್ಮ ದುಡುಕುತನವೇ ಸಹಕಾರಿಯಾಗಲಿದೆ. ಮಹತ್ವದ ಕಾರ್ಯಕ್ಕೆ ದುಡುಕಿನ ಹೆಜ್ಜೆಯೇ ಸಾಧನೆಯ ದಾರಿ ತೋರಲಿದೆ. ನ್ಯಾಯಾಲಯದಲ್ಲಿ ಪರಾಜಯವಾಗಬಹುದು. ಮಾನಸಿಕವಾಗಿ ಕುಗ್ಗುವಿರಿ. ಇತರರ ಬೆಳವಣಿಗೆಯನ್ನು ಸಹಿಸುವುದಿಲ್ಲ. ಉತ್ತಮ‌ ಸ್ತ್ರೀಯ ಜೊತೆ ವಿವಾಹವಾಗಲಿದೆ. ವಿದ್ಯುತ್ ಉಪಕರಣಗಳು ನಿಮಗೆ ಧನವ್ಯಯವನ್ನು ಮಾಡೀತು. ಕುಟುಂಬದಲ್ಲಿ ಸ್ವಲ್ಪ ಅಶಾಂತಿ ಇರಬಹುದು. ಲಕ್ಷ್ಮೀ ನಾರಾಯಣ ಸ್ತೋತ್ರವನ್ನು ಪಠಿಸಿ.

ಮಕರ: ಈ ವಾರ ಹಳೆಯ ಘಟನೆಗಳು‌ ನೆನಪಾಗಿ ಸಂಕಟಪಡಬಹುದು. ನಿಮಗೆ ಸಿಗಬೇಕಾದ ಪರಿಹಾರಗಳು ಸಿಗಲಿದೆ. ವಿವಾಹವು ಮುಂದೆಹೋಗಬಹುದು.‌ ವಿದ್ಯಾರ್ಥಿಗಳು ಸ್ಪರ್ಧಾತ್ಮಪರೀಕ್ಷೆಗೆ ಅಭ್ಯಾಸವನ್ನು ಚೆನ್ನಾಗಿ ಮಾಡುವಿರಿ. ತಂದೆ ಮಕ್ಕಳ‌ ನಡುವೆ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ಹೊಸ ಉದ್ಯೋಗದಲ್ಲಿ ಬಹಳ ಉತ್ಸಾಹವು ಇರುವುದು. ಕಾರ್ತಿಕೇಯನ ಆರಾಧನೆ ಮಾಡಿ. ಸ್ನೇಹಿತರ‌ ಸಹವಾಸದಿಂದ ಕೆಡುವ ಸಾಧ್ಯತೆ ಇದೆ. ಎಚ್ಚರವಿರಲಿ.

ಕುಂಭ: ಮೇ ತಿಂಗಳ ಎರಡನೇ ವಾರವು ಹೊಸ ಕೆಲಸ ಕಾರ್ಯಗಳ ಆರಂಭಕ್ಕೆ ಅಷ್ಟು ಅನುಕೂಲಕರವಲ್ಲ.‌ ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಆರಂಭಿಸಬಹುದು. ಸಣ್ಣ ಪುಟ್ಟ ವಿಚಾರದಲ್ಲಿ ಹೊಂದಾಣಿಕೆ ಕೊರತೆ ಹೆಚ್ಚು ಕಾಣಿಸುವುದು. ಅತಿಯಾದ ಆಲಸ್ಯದಿಂದ ಆರ್ಥಿಕವಾಗಿ ಹಿಂದುಳಿಯಬಹುದು. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಯವರು ಮಕ್ಕಳ‌ ಮೇಲೆ ಕಣ್ಣಿಡುವುದು ಮುಖ್ಯ. ಸಾಲವು ಮುಕ್ತಾಯದ ಹಂತಕ್ಕೆ ಬರುವುದು.

ಮೀನ: ಈ ವಾರವು ಮೇ ತಿಂಗಳ ಎರಡನೆಯ ವಾರವಾಗಿದೆ. ನಿಮಗೆ ಅಧಿಕ ಸುತ್ತಾಟದಿಂದ ಆಯಾಸ ಕಾಣಿಸಿಕೊಳ್ಳಲಿದೆ. ಹೊಸ ಯೋಜನೆಗೆ ಚಾಲನೆ ದೊರೆತು ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗಲಿದೆ. ಶಿಕ್ಷಕರುಗಳಿಗೆ ಪುರಸ್ಕಾರಗಳು ಸಿಗಲಿದೆ. ರಾಜಕಾರಣಿಗಳು ಹೋರಾಟದಲ್ಲಿ ಜಯ ಸಾಧಿಸುವರು. ಮನೆಯಿಂದ‌ ದೂರದಲ್ಲಿ ವಾಸ‌ಮಾಡಲಿದ್ದೀರಿ. ವಿದೇಶಕ್ಕೆ ಹೋಗುವ ಅವಕಾಶಗಳು ಬರಬಹುದು. ನಿರೀಕ್ಷಿತ ಲಾಭವನ್ನು ಗಳಸಿವುದು ಈ ವಾರ ಕಷ್ಟವಾದೀತು ‌

-ಲೋಹಿತಶರ್ಮಾ ಇಡುವಾಣಿ