ಇದು ನವೆಂಬರ್ ತಿಂಗಳ ಎರಡನೇ ವಾರವಿದಾಗಿದೆ. 10-11-2024 ರಿಂದ 16-11-2024ರವರೆಗೆ ಇರಲಿದೆ. ಕುಜನು ನೀಚ ಹಾಗೂ ಸೂರ್ಯನು ನಿಚಸ್ಥಾನವನ್ನು ಬಿಟ್ಟು ಮುಂದಕ್ಕೆ ಸಾಗಿದ್ದಾನೆ. ತಡೆಯಾಗಿದ್ದ ಕಾರ್ಯಗಳು ಒಂದೊಂದಾಗಿಯೇ ಆರಂಭವಾಗಲಿದೆ. ಸೂರ್ಯಾರಾಧನೆಯನ್ನು ಮಾಡಿದರೆ ಎಷ್ಟೋ ಕಾರ್ಯಗಳಿಗೆ ಚಾಲನೆ ಸಿಗಲಿದೆ.
ಮೇಷ ರಾಶಿ: ನವೆಂಬರ್ ತಿಂಗಳ ಎರಡನೇ ವಾರದಲ್ಲಿ ರಾಶಿ ಚಕ್ರದ ಮೊದಲನೇ ರಾಶಿಯಬರಿಗೆ ದೈವಾನುಕೂಲ ಇರುವ ಕಾರಣ ಶ್ರಮಕ್ಕೆ ತಕ್ಕ ಫಲವನ್ನು ಪಡೆದು ಸಂತೋಷಿಸುವಿರಿ. ಅನಗತ್ಯ ಕೆಲಸಗಳಿಗೆ ಹಣವು ವ್ಯಯವಾಗುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಹೆಚ್ವು ಕಾಲ ಕಳೆಯಿರಿ. ನೀವು ಕೆಲಸದಲ್ಲಿ ಒಂದು ಒಳ್ಳೆಯ ಸುದ್ದಿ ಪಡೆಯಬಹುದು. ಈ ವಾರ ಮಾನಸಿಕವಾಗಿ ಸ್ವಲ್ಪ ಮಟ್ಟಿನ ಕಿರಿಕಿರಿ, ಒತ್ತಡವನ್ನು ಅನುಭವಿಸುವಿರಿ. ಹೆಚ್ಚು ಒಂಟಿತನವನ್ನು ಇಷ್ಟಪಡುತ್ತೀರಿ. ಗುರುವಿನ ದರ್ಶನಕ್ಕಾಗಿ ಪ್ರಯತ್ನ ಸಾಗಲಿದೆ. ಈ ವಾರ ಒಳ್ಳೆಯ ಸಮಾಚರ ನಿಮ್ಮನ್ನು ಸೇರಬಹುದು. ದೃಢವಾದ ನಂಬಿಕೆಯು ನಿಮ್ಮನ್ನು ಅದು ಕೈ ಬಿಡದು.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರದಲ್ಲಿ ನಿಮ್ಮ ಸಂಗಾತಿಯಿಂದ ಅಚ್ಚರಿಯ ಸುದ್ದಿ ಕಾದಿರಲಿದೆ. ನಿಮ್ಮ ಎಲ್ಲ ಕೆಲಸವನ್ನು ಬಿಟ್ಟು ಬಂಧುಗಳ ಜೊತೆ ಸಮಯವನ್ನು ಕಳೆಯಬಹುದು. ಹಳೆಯ ರೋಗ ನಿಮ್ಮನ್ನು ಕಾಡಬಹುದು. ಈ ವಾರದ ಕೊನೆಯಲ್ಲಿ ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶ ಬರುವುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಜೀವನದ ತೊಂದರೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಲು ಬಯಸುವಿರಿ. ಆದರೆ ಅವರ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ಆಪ್ತರ ಜೊತೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಒಳ್ಳೆಯದನ್ನು ಪಡೆಯಲು ಸುದ್ದಿಯನ್ನು ಕೇಳಲು ಲಲಿತಾಸಹಸ್ರನಾಮವನ್ನು ಪಠಿಸಿ.
ಮಿಥುನ ರಾಶಿ: ಈ ವಾರದಲ್ಲಿ ಮಾನಸಿಕವಾದ ಉಲ್ಲಾಸದಲ್ಲಿ ಇರಲು ಆಗದು. ದೈಹಿಕ ಸೌಕರ್ಯವನ್ನು ಸಾಧಿಸಲಾಗುತ್ತದೆ. ಈ ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ಈ ವಾರದಲ್ಲಿ ನಿಮ್ಮ ಪ್ರೀತಿಪಾತ್ರರ ಪ್ರೀತಿಯನ್ನು ಅನುಭವಿಸುತ್ತೀರಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಅದನ್ನು ಲೆಕ್ಕಿಸದೇ ನಿಮ್ಮಷ್ಟಕ್ಕೆ ಕಾರ್ಯವನ್ನು ಮಾಡುವಿರಿ. ಪ್ರಯಾಣದ ಸಮಯದಲ್ಲಿ ಖರ್ಚು ಹೆಚ್ಚಾಗುತ್ತದೆ. ಈ ವಾರದಲ್ಲಿ ನೀವು ಮಾಡಿಕೊಳ್ಳುವ ಕೆಲವು ವ್ಯವಹಾರ ಅಥವಾ ಒಪ್ಪಂದದೊಂದಿಗೆ ಸಂಪರ್ಕ ಹೊಂದಿದ್ದರೆ, ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ವಿಷ್ಣುಸಹಸ್ರನಾಮವನ್ನು ಒಳ್ಳೆಯದಕ್ಕಾಗಿ ಪಠಿಸಿ.
ಕರ್ಕಾಟಕ ರಾಶಿ: ನವೆಂಬರ್ ತಿಂಗಳ ಈ ವಾರದಲ್ಲಿ ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರದ ಗಟ್ಟಿತನ ಧೈರ್ಯ ಕೊಡಲಿದೆ. ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳಲು ಪ್ರಯತ್ನಿಸುವಿರಿ. ಸಾಲವನ್ನು ಮರುಪಾವತಿ ಮಾಡದೇ ಇರುವ ನಿಮ್ಮ ಸಂಬಂಧಿಕರಿಗೆ ಇಂದು ಸಾಲ ಕೊಡಬಾರದು. ಅತಿಥಿಗಳ ಆಗಮನದಿಂದ ಮನೆಯಲ್ಲಿ ಆಹ್ಲಾದಕರ ವಾತಾವರಣ. ನಿಮ್ಮ ಕೆಲಸದ ಸ್ಥಳದಲ್ಲಿ ಪ್ರೀತಿ ಮೇಲುಗೈ ಸಾಧಿಸುತ್ತದೆ. ಈ ವಾರ ವ್ಯವಹಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ. ಶ್ರಮದ ಕಾರ್ಯಗಳು ಫಲವನ್ನು ನೀಡುವುವು.
ಸಿಂಹ ರಾಶಿ; ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರದಲ್ಲಿ ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ಸ್ನೇಹಿರಿಗೆ ಸಾಲವನ್ನು ನೀಡಬೇಕಾಗಿಬರುವುದು. ಈ ವಾರ ಸಂಗಾತಿಯ, ಪ್ರೇಯಸಿ ಜೊತೆಯಲ್ಲಿ ಯಾರ ಕಣ್ಗಾವಲಿಲ್ಲದೇ ಸುತ್ತಾಟ ಮಾಡುವುರಿ. ಆದರೆ ಮಾತು ಕಡಿಮೆ ಇದ್ದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಚಿತ್ರಣದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವ್ಯಾಪಾರಿಗಳಿಗೆ ಹಳೆಯ ಹೂಡಿಕೆಯ ಕಾರಣದಿಂದಾಗಿ ನಷ್ಟವಾಗುವ ಸಾಧ್ಯತೆ ಇದೆ. ಒಬ್ಬ ಧಾರ್ಮಿಕ ನಾಯಕರು ಅಥವಾ ಹಿರಿಯರು ಮಾರ್ಗದರ್ಶನ ದೊರೆಯಲಿದೆ. ಶಿವನನ್ನು ಪೂಜಿಸಿ.
ಕನ್ಯಾ ರಾಶಿ: ನವೆಂಬರ್ ತಿಂಗಳ ಈ ವಾರದಲ್ಲಿ ಒರಟುತನದಿಂದ ಪತಿ ಪತ್ನಿಯರ ನಡುವೆ ಹೆಚ್ಚು ಕಲಹ ನಡೆಯಲಿದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಉತ್ತಮ ಕೆಲಸಕ್ಕೆ ಹಿರಿಯರ ಸಲಹೆಯನ್ನು ಒಡೆಯಿರಿ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ಈ ವಾರದಲ್ಲಿ ನೀವು ನಿರಾಸೆ ಅನುಭವಿಸುತ್ತೀರಿ. ಬಿಡುವಿನ ವೇಳೆಯಲ್ಲಿ ಆಧ್ಯಾತ್ಮಿಕ ಪುಸ್ತಕಗಳ ಅಧ್ಯಯನ ಮಾಡಬೇಕು. ದಾಂಪತ್ಯಜೀವನ ಅಪರೂಪದ ಕ್ಷಣಗಳ ಇಂದಿರಲಿವೆ.
ತುಲಾ ರಾಶಿ: ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಉದ್ಯೋಗ ಬದಲಾವಣೆಯ ಸಾಧ್ಯತೆ ಇದೆ. ಕೋಪವನ್ನು ಹತೋಟಯಲ್ಲಿ ಇಟ್ಟುಕೊಳ್ಳಿ. ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ವಿಷಯದಲ್ಲಿ ಗಮನವಿರಲಿ. ಈ ವಾರ ನಿಮ್ಮ ಪ್ರಣಯದ ಸಂಬಂಧಿಸಿದಂತೆ ಹೆಚ್ಚು ಬೇಡಿಕೆಗಳು ಬರಬಹುದು. ಆಪ್ತರೊಂದಿಗೆ ಹೊಸ ಉದ್ಯೋಗವನ್ನು ಆರಂಭಿಸಬಹುದು. ಆದರೆ ಪಾಲುದಾರರ ಜೊತೆ ಕೈಜೋಡಿಸುವ ಮೊದಲು ಯೋಚಿಸಿ. ಜೀವನದಲ್ಲಿ ಆಸಕ್ತಿದಾಯಕ ವಿಷಯಗಳಿಗೆ ಕಾಯುತ್ತಿದ್ದಲ್ಲಿ ನಿಮಗೆ ಈಗ ಸ್ವಲ್ಪವಾದರೂ ಪರಿಹಾರ ದೊರಕುವುದು ಖಚಿತ. ಈ ವಾರದಲ್ಲಿ ದೇವಿಯನ್ನು ಆರಾಧಿಸಿ. ಇಷ್ಟಾರ್ಥವನ್ನು ನೀಡುವಳು.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರದಲ್ಲಿ ಮಾತು ಕಡಿಮೆ, ಕಾರ್ಯ ಹೆಚ್ಚು ಮಾಡುವತ್ತ ಗಮನ ಹರಿಸುವುದು ಉತ್ತಮ. ಪ್ರಭಾವೀ ವ್ಯಕ್ತಿಗಳ ಭೇಟಿ ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಕುಟುಂಬದೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ಳಬೇಡಿ. ಅದು ನಿಮಗೆ ಮುಳ್ಳಾಗಬಹುದು. ಈ ವಾರ ನಿಮ್ಮ ಕೆಲಸಕ್ಕೆ ತಡೆಯೊಡ್ಡುವವರು ತೀವ್ರ ಅವನತಿ ಹೊಂದುತ್ತಾರೆ. ನಿಮ್ಮ ಕುಟುಂಬದ ಯಾವುದೇ ಸದಸ್ಯ ಇಂದು ನಿಮ್ಮೊಂದಿಗೆ ಸಮಯವನ್ನು ಕಳೆಯಲು ಒತ್ತಾಯಿಸಬಹುದು. ಈ ಕಾರಣದಿಂದಾಗಿ ನಿಮ್ಮ ಕೆಲವು ಸಮಯ ವ್ಯರ್ಥವಾಗಬಹುದು. ಅನಾರೋಗ್ಯ ಕಾಡಬಹುದು. ಕಾರ್ತಿಕೇಯನನ್ನು ಸ್ಮರಿಸಿ.
ಧನು ರಾಶಿ: ನವೆಂಬರ್ ತಿಂಗಳ ಈ ವಾರದಲ್ಲಿ ಖರ್ಚುಗಳಿಗೆ ದುಡಿಮೆಯ ಹಣವೇ ಬಳಕೆಯಾಗುವುದು. ಯಾವುದೇ ವಾದ ವಿವಾದಗಳಿಗೆ ಕಿವಿಯನ್ನು ಕೊಡಬೇಡಿ. ಬಾಯನ್ನು ಹಾಕಲೇ ಬೇಡಿ. ದಾಖಲೆಯನ್ನು ಸರಿಮಾಡಿಕೊಳ್ಳಲು ಒಂದು ಅನುಕೂಲಕರ ವಾರ. ಎಲ್ಲ ಹತಾಶೆ, ನೋವು, ಸಂಕಟ, ತುಮುಲಗಳನ್ನು ನಿವಾರಿಸಿಕೊಳ್ಳಲು ಒಳ್ಳೆಯ ಸಮಯ ಮತ್ತಾವುದೂ ಇಲ್ಲ. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವುದು. ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಕಾಳಜಿವಹಿಸಿದ್ದಲ್ಲಿ ಆಸ್ಪತ್ರೆಯ ಅಲೆದಾಟ ತಪ್ಪಲಿದೆ. ಗುರುಸಮಾಧಿಗೆ ಪ್ರದಕ್ಷಿಣೆ ಬನ್ನಿ.
ಮಕರ ರಾಶಿ: ಈ ವಾರದಲ್ಲಿ ದೀರ್ಘ ಪ್ರಯಾಣವನ್ನು ಮಾಡುವುದು ಒಳಿತಲ್ಲ. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಹಿತಶತ್ರುಗಳೇ ಅವಕಾಶವನ್ನು ಮಾಡಿಕೊಡುವರು. ಸಹೋದರರಿಂದ ಸಲಹೆ ಪಡೆದು ಮುನ್ನಡೆಯಿರಿ. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಉತ್ತಮವಾದ ಯೋಜನೆಗಳನ್ನು ರೂಪಿಸಿ. ಈ ವಾರದಲ್ಲಿ ಚಿರಸ್ನೇಹವು ಪ್ರೇಮವಾಗಿ ಅಂಕುರಿಸುವ ಸಾಧ್ಯತೆ ಇದೆ. ಅದಕ್ಕೆ ತಂಪಾದ ನೀರೆರೆದರೆ ಫಲಿಸಲೂ ಬಹುದು. ನಿಮ್ಮ ಸಂಗಾತಿಯು ನಿಮಗೆ ಅನುಕೂಲವನ್ನು ಕಲ್ಪಿಸುವವಳೇ ಆಗಿದ್ದಾಳೆ.
ಕುಂಭ ರಾಶಿ: ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಆತುರದ ತೀರ್ಮಾನ ಹಾಗೂ ಒತ್ತಡಗಳಿಗೆ ಸಿಲಿಕದೇ ಎಚ್ಚರಿಕೆಯಿಂದಿರಿ. ಹಣಕಾಸಿನ ಹರಿವು ಹೆಚ್ಚಾಗಲಿದೆ. ಕೊಟ್ಟ ಸಾಲ ಮರಳಿ ತಾನಾಗಿಯೇಡ ಬರವುದು. ಈ ವಾರ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ಸಹಾನುಭೂತಿಯು ಉಂಟಾಗುವುದು. ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ. ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ. ನೀವು ಗಣ್ಯರ ಜೊತೆ ಇಂದಿನ ಒಡನಾಡವಿರಲಿದೆ. ವಿವಾಹಕ್ಕೆ ಸಂಬಂಧಿಸಿದ ಕಟು ಮಾತುಗಳು ಕೇಳಿಬರಬಹುದು. ಉತ್ತರಿಸಲು ಹೋಗದೇ ಅಲೆಗಳು ಶಾಂತವಾಗುವವರೆಗೆ ಸುಮ್ಮನಿರಿ. ಶಿವನ ಅನುಗ್ರಹಕ್ಕೆ ಪಾತ್ರರಾಗಿ.
ಮೀನ ರಾಶಿ: ನವೆಂಬರ್ ತಿಂಗಳ ಎರಡನೇ ವಾರದಲ್ಲಿ ನಿಮಗೆ ಉದ್ವಿಗ್ನಗೊಳ್ಳದೇ ಸಮಾಧಾನದಿಂದ ಇರಬೇಕಾಗುವುದು. ದುರಭ್ಯಾಸಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಉಳಿಸಿಕೊಳ್ಳಲು ಕಷ್ಟ. ಮಾಡದೇ ಉಳಿದ ಕೆಲಸ ಕಾರ್ಯಗಳತ್ತ ಗಮನಹರಿಸಿ. ಈ ವಾರ ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗುವುದು. ಕಾರ್ಯಸ್ಥಾನದಲ್ಲಿ ಗೊಂದಲದ, ಹತಾಶೆಯ ವಾತಾವರಣ ಇರಲಿದೆ. ಪುಣ್ಯಸ್ಥಳಗಳ ದರ್ಶನಭಾಗ್ಯ ಸಿಗಲಿದೆ. ರಾಯರ ಅನುಗ್ರಹವನ್ನು ಪಡೆಯಿರಿ.
ಲೋಹಿತ ಹೆಬ್ಬಾರ್ – 8762924271 (what’s app only)