ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 9ರಿಂದ 15ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಹೊಸ ಕಾರು ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಹಣಕಾಸಿನ ಅನುಕೂಲ, ಮನೆಯಲ್ಲಿ ಕುಟುಂಬಸ್ಥರ ಬೆಂಬಲ ದೊರೆಯುವ ಸಾಧ್ಯತೆ ಇದೆ. ಕೆಲಸ ಬದಲಾವಣೆ ಮಾಡಬೇಕು ಅಂದುಕೊಂಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆ ಆಗಬಹುದು. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಒಪ್ಪಿಕೊಂಡ ಕೆಲಸ ಮುಗಿಸುವುದರೊಳಗೆ ಬಹಳ ಶ್ರಮ ಪಡಬೇಕಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವವರಿಗೆ ಆಯಾ ವ್ಯಾಪ್ತಿಯಲ್ಲಿ ಮೆಚ್ಚುಗೆ, ಗೌರವ- ಸಮ್ಮಾನಗಳು ದೊರೆಯುವ ಅವಕಾಶಗಳು ಉಂಟು. ಸಹಕಾರ ಸಂಘಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಪ್ರಭಾವಿಗಳ ಶಿಫಾರಸು ದೊರೆತು, ಶೀಘ್ರ ಸಾಲ ಮಂಜೂರಾಗಲಿದೆ. ವೃತ್ತಿನಿರತರಿಗೆ ನಾನಾ ಸವಾಲುಗಳು ಎದುರಾಗಲಿವೆ. ಈ ಹಿಂದೆ ನೀವೇ ಆಡಿದ್ದ ಮಾತು ಅಥವಾ ಇನ್ನೊಬ್ಬರ ವಿಚಾರವಾಗಿ ಸಾರ್ವಜನಿಕವಾಗಿ ಮಂಡಿಸಿದ್ದ ಅಭಿಪ್ರಾಯಕ್ಕೆ ಈಗ ಆಕ್ಷೇಪಗಳು ವ್ಯಕ್ತ ಆಗುತ್ತವೆ. ದೇವತಾ ಕಾರ್ಯಗಳಿಗೆ ಹಣಕಾಸಿನ ದೇಣಿಗೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ವಿನಾಕಾರಣದ ಪ್ರಯಾಣ ಮತ್ತು ಇದರಿಂದ ಅನಗತ್ಯವಾಗಿ ಖರ್ಚುಗಳು ಆಗಲಿವೆ. ಮಹಿಳೆಯರು ಈ ಹಿಂದೆ ಮಾಡಿದ್ದ ಹೂಡಿಕೆಗೆ ಈಗ ಹೆಚ್ಚು ಲಾಭ ದೊರೆಯಲಿದೆ. ಬಂದ ಲಾಭದಿಂದ ಚಿನ್ನಾಭರಣಗಳನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಸಾಧ್ಯವಾದಲ್ಲಿ ಈ ವಾರದಲ್ಲಿ ಬರುವ ಗುರುವಾರದಂದು ನೀವು ಗುರುಗಳಾಗಿ ಭಾವಿಸುವವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದುಕೊಳ್ಳಿ.
ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ದೊರೆಯಲಿದೆ. ಭವಿಷ್ಯದ ಬಗ್ಗೆ ಬಹಳ ಮುಖ್ಯವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದೀರಿ. ನಿಮ್ಮ ಮಾತಿಗೆ ಬೆಲೆ ದೊರೆಯಲಿದೆ. ಇತರರ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ನೀವು ಪ್ರಭಾವಿಗಳಾಗಲಿದ್ದೀರಿ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಬೆಳವಣಿಗೆ ವೇಗ ಪಡೆದುಕೊಳ್ಳಲಿದೆ. ನಿಮ್ಮ ನಿರೀಕ್ಷೆಗೂ ಮೀರಿದಂತೆ ಸವಾಲುಗಳನ್ನು ಸಲೀಸಾಗಿ ದಾಟಿ ಹೋಗಲಿದ್ದೀರಿ. ಕೃಷಿ ವಲಯದಲ್ಲಿ ಇರುವವರಿಗೆ ಕಟ್ಟಡ ನಿರ್ಮಾಣಗಳಿಗೆ ಹಣ ಖರ್ಚಾಗುವ ಯೋಗ ಇದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಅಥವಾ ಹಣದ ಮೂಲಕ್ಕಾಗಿ ಪ್ರಯತ್ನಿಸುತ್ತಾ ಇದ್ದಲ್ಲಿ ಅದು ಒದಗಿ ಬರುವಂಥ ಸಾಧ್ಯತೆಗಳಿವೆ. ಯಾವುದೇ ಕೆಲಸವನ್ನಾಗಲಿ ಪೂರ್ಣ ಮನಸ್ಸಿನಿಂದ ಮಾಡಬೇಕು. ಆರಂಭದಲ್ಲಿ ಇರುವ ಉತ್ಸಾಹ ಕೆಲಸ ಪೂರ್ಣ ಆಗುವ ತನಕ ಇರಬೇಕು. ವೃತ್ತಿನಿರತರಿಗೆ ಈ ವಾರ ಮಿಶ್ರ ಫಲ ಇದೆ. ಶುಭಾಶುಭ ಫಲಗಳ ಮಿಶ್ರಣ ಇರುವುದರಿಂದ ಯಾವುದೇ ಕೆಲಸ ಮಾಡುವಾಗಲೂ ಅದರ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಅಂದಾಜು ಇರಲಿ. ವಿದ್ಯಾರ್ಥಿಗಳು ಸ್ನೇಹಿತರ ಮಧ್ಯೆ ತುಂಬ ಅಚ್ಚರಿ ಮೂಡಿಸುವಂಥ ಸಾಧನೆಯನ್ನು ಮಾಡುವಿರಿ. ಮದುವೆ ಸೂಕ್ತ ವಯಸ್ಸಿನ ಯುವತಿಯರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ.
ಬಡ್ತಿ, ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ಬಗ್ಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಆದರೆ ಇದಕ್ಕಾಗಿ ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನಿತ್ಯದ ಕೆಲಸಗಳಲ್ಲಿ ಕೆಲವು ಮಟ್ಟಿಗೆ ಗೊಂದಲ ಏರ್ಪಡಬಹುದು. ಇನ್ನೊಬರು ಮಾಡುತ್ತಾರೆ ಎಂದುಕೊಂಡು ನೀವು ಹಾಗೂ ನೀವೇ ಮಾಡುತ್ತಿರಿ ಎಂದುಕೊಂಡು ಇತರರು ಗೊಂದಲ ಮಾಡಿಕೊಂಡು ಕೆಲಸವು ಕೊನೆ ಕ್ಷಣದ ಹಾಗೇ ಬಾಕಿ ಉಳಿದುಹೋಗುವ ಸಾಧ್ಯತೆ ಇದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರುಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಇರುವವರಿಗೆ ಆದಾಯ ಜಾಸ್ತಿ ಆಗುವ ಜತೆಗೆ ಹೆಸರು, ಕೀರ್ತಿ ಹಾಗೂ ಮನ್ನಣೆ ಕೂಡ ಜಾಸ್ತಿ ಆಗುತ್ತದೆ. ವೃತ್ತಿನಿರತರು ಹೊಸ ವಾಹನ, ಲ್ಯಾಪ್ ಟಾಪ್, ಕಚೇರಿಗೆ ಬೇಕಾದಂಥ ಸಲಕರಣೆಗಾಗಿ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕಡಿಮೆ ಆಗಬಹುದು. ಪಠ್ಯೇತರ ಸಂಗತಿಗಳಲ್ಲಿ ನಿಮ್ಮ ಮನಸ್ಸು ವಾಲುವುದರಿಂದ ಮನೆಯಲ್ಲಿ ಕೂಡ ಆಕ್ಷೇಪಣೆಗಳು ಕೇಳಿಬರಲಿವೆ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಇದ್ದಲ್ಲಿ ಏಳ್ಗೆ ಸಾಧ್ಯತೆಗಳು ಹೆಚ್ಚಾಗಿವೆ. ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಕಡೆಗೆ ಗಮನವನ್ನು ನೀಡಬೇಕು.
ಬ್ಯಾಂಕಿಂಗ್ ವ್ಯವಹಾರಗಳಿಗೆ ಅಲೆದಾಟ ನಡೆಸುತ್ತಾ, ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಈ ವಾರದಲ್ಲಿ ಮುಗಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಯಾರನ್ನಾದರೂ ಸರಿ, ಸುಖಾ- ಸುಮ್ಮನೆ ಬೈದಾಡಿಕೊಂಡು ಓಡಾಡಬೇಡಿ.ಯಾರು- ಯಾವ ಸಮಯದಲ್ಲಿ ಹಾಗೂ ಹೇಗೆ ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಹೇಳುವುದೇ ಕಷ್ಟವಾದ ದಿನಗಳಿವು. ವಾಹನ ಖರೀದಿ ಮಾಡಬೇಕು ಎಂದು ಕೊನೆ ಕ್ಷಣದ ತನಕ ಯೋಚನೆ ಮಾಡದೆ ದಿಢೀರ್ ಎಂದು ತೀರ್ಮಾನ ಮಾಡಲಿದ್ದೀರಿ. ಕೃಷಿ ವಲಯದಲ್ಲಿ ಇರುವವರಿಗೆ ಹೊಸ ಮಾರುಕಟ್ಟೆ, ಖರೀದಿದಾರರು ದೊರೆಯುವ ಅವಕಾಶಗಳು ಹೆಚ್ಚಿವೆ. ಇದರೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳು ಸ್ವಲ್ಪ ಮಟ್ಟಿಗಾದರೂ ಪೂರೈಕೆ ಆಗುತ್ತದೆ. ಕೃಷಿ ಉತ್ಪನ್ನಗಳ ರಫ್ತು ವಹಿವಾಟನ್ನು ಮಾಡುತ್ತಿರುವವರಿಗೆ ಸವಾಲಿನ ಸಮಯ ಇದಾಗಿರುತ್ತದೆ. ನಿಮ್ಮದಲ್ಲದ ತಪ್ಪಿಗೆ ಇತರರ ನಿಂದೆಯನ್ನು ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯ, ಪೌರೋಹಿತ್ಯ, ರೇಕಿ, ಪ್ರಾಣಿಕ್ ಹೀಲಿಂಗ್ ಇಂಥದ್ದರದಲ್ಲಿ ತೊಡಗಿರುವವರಿಗೆ ಈ ವಾರ ಬಿಡುವಿಲ್ಲದಂಥ ಕೆಲಸ ಇರಲಿದೆ. ಈ ಮೊದಲು ನಿಮ್ಮಿಂದ ಕೆಲಸ ಮಾಡಿಸಿರುವವರು ಮತ್ತೆ ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಿಂದ ಯಾವುದಾದರೂ ಸ್ಪರ್ಧೆ, ಅಧ್ಯಯನ ಪ್ರವಾಸ ಇತ್ಯಾದಿಗಳಿಗೆ ಕಳಿಸುವಂಥ ಯೋಗ ಇದೆ. ಮಹಿಳೆಯರು ಈ ವಾರ ಸಾಧ್ಯವಾದಷ್ಟೂ ಇತರರ ವೈಯಕ್ತಿಕ ವಿಚಾರಗಳನ್ನು ಮಾತನಾಡದಿರುವುರು ಒಳಿತು.
ವಿದೇಶದಿಂದ ಶುಭ ಸುದ್ದಿ ನಿರೀಕ್ಷೆ ಮಾಡುತ್ತಿರುವವರಿಗೆ ಅದು ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಅಥವಾ ಕೆಲಸವೇ ಹೋಗುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ತೀರಾ ಗಾಬರಿಗೆ ಬೀಳಬೇಡಿ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಕೆಲಸದಿಂದ ತೆಗೆಯಲಾಗಿದೆ ಎಂದುಕೊಂಡು, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇನ್ನು ಬೇಸರದಿಂದಾಗಿ ಈಗಿನ ಸ್ನೇಹಿತರಿಂದ ದೂರ ಕೂಡ ಆಗದಿರಿ. ಏಕೆಂದರೆ ನಿಮ್ಮ ಸ್ನೇಹಿತರೇ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಹೊಸದಾಗಿ ಸಣ್ಣ ಪ್ರಮಾಣದಲ್ಲಿಯಾದರೂ ಭೂಮಿ ಖರೀದಿಸುವುದಕ್ಕೆ ಮನಸ್ಸು ಮಾಡುವ ಸಾಧ್ಯತೆ ಇದೆ. ಇನ್ನು ಕೆಲವರು ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಖರೀದಿಸಬಹುದು. ಇನ್ನು ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ಅದಕ್ಕೆ ಸಿದ್ಧತೆ ನಡೆಸಲಿದ್ದೀರಿ. ವೃತ್ತಿನಿರತರಿಗೆ ಅನಿರೀಕ್ಷಿತವಾಗಿ ಹೊಸ ಆದಾಯ ಮೂಲ ದೊರೆಯಲಿದೆ. ಆದರೆ ನಿಮಗೆ ಬರಬೇಕಾದ ಹಣವನ್ನು ಪಡೆಯುವುದಕ್ಕೆ ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ತೆಗೆದುಕೊಳ್ಳುವ ಇಚ್ಛೆಯಿದ್ದಲ್ಲಿ ಸರಿಯಾಗಿ ವಿಚಾರಿಸಿ, ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ಇನ್ನು ಮಹಿಳೆಯರು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಏನು ಪೋಸ್ಟ್ ಮಾಡುತ್ತಿದ್ದೀರಿ ಎಂಬ ಬಗ್ಗೆ ಗಮನ ಕೊಡಿ. ಯಾರ ಬಗ್ಗೆಯಾದರೂ ಮಾತನಾಡುವಾಗ, ಅಭಿಪ್ರಾಯ ಹೇಳುವಾಗ ಸ್ವಲ್ಪ ಎಚ್ಚರ ವಹಿಸಿ. ಈ ವಾರದಲ್ಲಿ ಒಂದು ದಿನ ಕನಿಷ್ಠ ನಾಲ್ಕು ಗಂಟೆ ಕಾಲ ಮೌನವಾಗಿರುವುದಕ್ಕೆ ಪ್ರಯತ್ನಿಸಿ, ಇದರಿಂದ ನಿಮಗೆ ಅನುಕೂಲ ಇದೆ. ಗಾರ್ಡನಿಂಗ್ ಮಾಡುವಂಥ ಅಭ್ಯಾಸ ಇದ್ದರೆ ಒಳ್ಳೆಯದು, ಇಲ್ಲದಿದ್ದರೆ ರೂಢಿಸಿಕೊಳ್ಳಿ. ಏಕಾಗ್ರತೆ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸೂಕ್ತ ಸಮಯ ಇದು. ಬೇರೆಯವರ ಟೀಕೆಯನ್ನು ಪಾಸಿಟಿವ್ ಆಗಿ ಸ್ವೀಕರಿಸಿ. ಕೃಷಿಕರಿಗೆ ಹೊಸ ಹೊಸ ತಂತ್ರಜ್ಞಾನ, ವಿಧಾನವನ್ನು ಅಳವಡಿಸಿಕೊಳ್ಳುವುದಕ್ಕೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ಮಾಮೂಲಿಗಿಂತ ಹೆಚ್ಚಿನ ಕೆಲಸದ ಒತ್ತಡವನ್ನು ಎದುರಿಸಲಿದ್ದೀರಿ. ಮನೆಗೆ ಬರುವಂಥ ಹೊಸ ವಸ್ತುಗಳ ಗುಣಮಟ್ಟ ಹಾಗೂ ಸ್ಥಿತಿಯನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ. ವೃತ್ತಿನಿರತರಿಗೆ ಮಿತ್ರರು, ಸಂಬಂಧಿಕರಿಂದ ಶಿಫಾರಸುಗಳು ಬರಬಹುದು. ಅಂದರೆ ಯಾರಿಗಾದರೂ ಕೆಲಸ ನೀಡುವಂತೆ ಅಥವಾ ಯಾವುದಾದರೂ ವಸ್ತುಗಳನ್ನು ಇಂಥವರಿಂದಲೇ ಖರೀದಿಸುವಂತೆ ಕೇಳಬಹುದು. ಇನ್ನು ವಿದ್ಯಾರ್ಥಿಗಳಿಗೆ ಕೀರ್ತಿ ಹೆಚ್ಚಾಗಲಿದೆ. ಕ್ರೀಡಾಕ್ಷೇತ್ರದಲ್ಲಿ ಇರುವವರಿಗೆ ಪ್ರಾಯೋಜಕರು ದೊರೆಯುವಂಥ ಅವಕಾಶಗಳಿವೆ. ಮಹಿಳೆಯರಿಗೆ ವಿದೇಶಗಳಿಂದ ಶುಭ ಸುದ್ದಿ ಕೇಳುವ ಯೋಗ ಇದೆ. ಫ್ಯಾಷನ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶ, ಕೆಲಸಗಳು ದೊರೆಯಲಿವೆ.
ಉದ್ಯೋಗ ವಿಚಾರ ಪ್ರಾಶಸ್ತ್ಯ ಪಡೆಯುತ್ತದೆ. ಎಷ್ಟು ಖರ್ಚೆಂದರೆ ಬರುವ ಸಂಬಳ ಏನೇನೂ ಸಾಕಾಗುತ್ತಿಲ್ಲ. ಏನಾದರೂ ಹೊಸ ವ್ಯವಹಾರ ಶುರು ಮಾಡುವುದು ಉತ್ತಮವಾ ಎಂಬ ಆಲೋಚನೆ ಬರುತ್ತದೆ. ನೆನಪಿರಲಿ, ಯಾವ ಕಾರಣಕ್ಕೂ (ಒಂದಕ್ಕಿಂತ ಹೆಚ್ಚು ಕಡೆ, ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಂದು ಕಡೆ ಕೆಲಸ ಮಾಡುವುದು ಬೇಡ. ಏಕೆಂದರೆ ನೀವು ಕೆಲಸ ಮಾಡುವ ಸ್ಥಳದಲ್ಲೇ ಶತ್ರುಗಳ ಕಾಟ ಇದೆ. ಇನ್ನು ಮೂಳೆ ಆರೋಗ್ಯದ ಕಡೆ ಗಮನ ನೀಡಿ, ಸುಖಾಸುಮ್ಮನೆ ತಿರುಗಾಟದಿಂದ ಖರ್ಚಾಗುತ್ತದೆ. ಜತೆಗೆ ದೇಹಾಲಸ್ಯವೂ ಜಾಸ್ತಿ ಆಗುತ್ತದೆ. ಕೃಷಿ ವಲಯದಲ್ಲಿ ಇರುವವರಿಗೆ ರಾಜಕೀಯವಾಗಿ ಪ್ರಾಮುಖ್ಯ ದೊರೆಯುವ ಅವಕಾಶಗಳು ಹೆಚ್ಚಿದೆ. ನಿಮಗೆ ಯಾವುದಾದರೂ ಪ್ರಮುಖ ಜವಾಬ್ದಾರಿ ವಹಿಸಬಹುದು ಹಾಗೂ ಭವಿಷ್ಯದಲ್ಲಿ ಇದೇ ನಿಮ್ಮ ಏಳ್ಗೆ, ಪ್ರಗತಿಗೆ ಕಾರಣವಾಗುವ ಎಲ್ಲ ಅವಕಾಶಗಳು ಇವೆ. ಈ ಸಂದರ್ಭದಲ್ಲಿ ನಿಮ್ಮ ನಿರ್ಧಾರದ ಬಗ್ಗೆ ಕುಟುಂಬದಲ್ಲಿ, ಸ್ನೇಹ ವಲಯದಲ್ಲಿ ಬೇರೆ ಬೇರೆ ಅಭಿಪ್ರಾಯ ಬರಬಹುದು. ಆದರೆ ನಿಮಗೆ ಸ್ಪಷ್ಟತೆ ಇರುವುದು ಮುಖ್ಯ. ಇನ್ನು ವೃತ್ತಿನಿರತರಿಗೆ ಹೊಸ ಸ್ಥಳ, ಜಮೀನು ಖರೀದಿಸಬೇಕು ಎಂದಿದ್ದಲ್ಲಿ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸಮಯ ಇದು. ನೀವು ಈಗಾಗಲೇ ಮಾಡಿರುವ ಹೂಡಿಕೆಯಿಂದ ಹಣ ಹಿಂಪಡೆದು, ಬೇರೆ ಕಡೆ ಅದನ್ನು ಹೂಡಿಕೆ ಮಾಡಲಿದ್ದೀರಿ. ಇನ್ನು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಕಡೆಗೆ ನಿಗಾ ಜಾಸ್ತಿ ಆಗಿ, ವ್ಯಾಸಂಗದಲ್ಲಿ ಹಿನ್ನಡೆ ಇದೆ. ಮಹಿಳೆಯರು ಹೊಸಬರ ಜತೆಗೆ ಸ್ನೇಹ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.
ಈ ಹಿಂದೆ ಯಾವಾಗಲೋ ಕೊಟ್ಟ ಮಾತಿಗೆ ಈಗ ಪಶ್ಚಾತ್ತಾಪ ಪಡುವಂತಾಗುತ್ತದೆ. ಕೆಲಸದಲ್ಲಿ ಒತ್ತಡ ಜಾಸ್ತಿಯಾಗಿ, ಇನ್ನೇನು ಕೆಲಸ ಕಳೆದುಕೊಂಡು ಬಿಟ್ಟೆ ಎಂಬ ಆತಂಕಕ್ಕೆ ಗುರಿ ಆಗುತ್ತೀರಿ. ಬಿಪಿ- ಶುಗರ್ ಇರುವಂಥವರಿಗೆ ಭುಜ, ಮೀನಖಂಡ, ನರಗಳ ಸಮಸ್ಯೆ ಹೆಚ್ಚಾಗುತ್ತದೆ. ಪಾರ್ಟಿಗಳಿಗೆ ಆಹ್ವಾನ ಬರಲಿದೆ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ವೇಗ ದೊರೆಯುತ್ತದೆ. ಮನೆಗೆ ಹೊಸ ವಸ್ತುಗಳನ್ನು ತರಲಿದ್ದೀರಿ. ಕೃಷಿಕರಿಗೆ ಹೊಸ ವಿಚಾರಗಳನ್ನು ಕಲಿಯುವ ಯೋಗ ಇದೆ. ಕೃಷಿ ವಲಯದಲ್ಲಿ ಇರುವವರಿಗೆ ದೂರ ಪ್ರಯಾಣ ಮಾಡುವ ಯೋಗ ಇದೆ. ಪಶು ಸಾಕಣೆ ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಮಕ್ಕಳ ಸಲುವಾಗಿ ಹೊಸ ವಾಹನವನ್ನು ಖರೀದಿಸಲಿದ್ದೀರಿ. ಒಟ್ಟಿನಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರಲಿದ್ದು, ಕುಟುಂಬದಲ್ಲಿ ವೃದ್ಧಿ ಕಾರ್ಯಗಳು ನಡೆಯಲಿವೆ. ವೃತ್ತಿನಿರತರು ಕಾರು ಖರೀದಿ ಮಾಡುವಂಥ ಯೋಗ ಇದೆ. ಒಂದು ವೇಳೆ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಬೇಕು ಎಂದಿರುವವರು ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿ, ಹೊಸದನ್ನೇ ಕೊಂಡುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ನೀವು ಇದಕ್ಕಾಗಿ ಮಾಡುವ ಸಾಲವೋ ಅಥವಾ ಬೇರೆ ರೀತಿ ಹಣದ ಹೊಂದಾಣಿಕೆಯನ್ನೋ ಬೇಗ ಹಿಂತಿರುಗಿಸುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ನಿರ್ಧಾರದ ಬಗ್ಗೆ ಆತಂಕಗೊಳ್ಳಬೇಡಿ. ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಉತ್ತಮ ಸಾಧ್ನೆ ಮಾಡಲಿದ್ದೀರಿ. ಭಾಗವಹಿಸುವ ಯಾವುದೇ ಅವಕಾಶವನ್ನೂ ಕೈ ಚೆಲ್ಲಬೇಡಿ. ಮಹಿಳೆಯರು ವಾಹನ ಚಲಾಯಿಸುವಂತಿದ್ದರೆ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಅನಿವಾರ್ಯ ಅಂತಲ್ಲದಿದ್ದರೆ ಇದೊಂದು ವಾರ ವಾಹನ ಚಲಾಯಿಸಬೇಡಿ.
ಯಾವುದು ಮೊದಲು, ಯಾವುದು ನಂತರ ಎಂಬ ಸ್ಪಷ್ಟತೆ ಇರಲಿ. ಬಿಡುವು ಸಿಗದಷ್ಟು ಮೇಲಿಂದ ಮೇಲೆ ಕೆಲಸ ಬರಲಿದೆ. ನಾಲ್ಕಾರು ಜನರಿಗೆ ಸಹಾಯ ಆಗುವಂಥ ಪ್ರಾಜೆಕ್ಟ್‌ಗಳನ್ನು ಮಾಡುತ್ತಿರುವವರಿಗೆ ಹೊಸ ಹೊಸ ಜನರ ಪರಿಚಯ ಆಗುತ್ತದೆ. ಅಡ್ವರ್ಟೈಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ದೀರ್ಘ ಕಾಲದ ಪ್ರಾಜೆಕ್ಟ್ ದೊರೆಯುವ ಅವಕಾಶಗಳಿವೆ. ಡೇ ಕೇರ್, ಕಿಂಟರ್‌ಗಾರ್ಡನ್‌ನಂಥದ್ದನ್ನು ನಡೆಸುತ್ತಿರುವವರಿಗೆ ಭವಿಷ್ಯದ ಯೋಜನೆಗಳು ಸಾಕಾರಗೊಳ್ಳಲಿವೆ. ಹಣಕಾಸು ಉಳಿತಾಯದ ಬಗ್ಗೆ ಗಂಭೀರ ಚಿಂತನೆ ನಡೆಸಲಿದ್ದೀರಿ. ಪ್ರೀತಿ- ಪ್ರೇಮ ವಿಚಾರಗಳು ಪ್ರಾಶಸ್ತ್ಯ ಪಡೆದುಕೊಳ್ಳಲಿವೆ. ಕೃಷಿ ಕ್ಷೇತ್ರದಲ್ಲಿ ಇರುವವರು ನಿಮ್ಮದಲ್ಲದ ವಿಚಾರಗಳಿಗೆ ಮೂಗು ತೂರಿಸಬೇಡಿ. ರಾಜೀ- ಸಂಧಾನಕ್ಕೆ ಅಂತ ಕರೆದರು, ಸುಮ್ಮನೆ ಜತೆಗೆ ಬಾ, ನೀನೇನು ಮಾತನಾಡದೆ ಇದ್ದರೂ ಪರವಾಗಿಲ್ಲ ಅಂದರು ಎಂಬ ಕಾರಣಕ್ಕೆ ಕೂಡ ಯಾರ ಜತೆಗೂ ಹೋಗಬೇಡಿ. ಏಕೆಂದರೆ ಕೋಲು ಕೊಟ್ಟು ಹೊಡೆಸಿಕೊಂಡಂತೆ ಆಗುತ್ತದೆ ನಿಮ್ಮ ಪರಿಸ್ಥಿತಿ. ಇನ್ನು ವೃತ್ತಿನಿರತರಿಗೆ ಯಾರಿಂದಾದರೂ ಬೆದರಿಕೆಗಳು ಬರಬಹುದು. ಮುಖ್ಯವಾಗಿ ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ ಗಳು, ಪತ್ರಕರ್ತರು ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನು ರಾಜಕಾರಣಿಗಳು ತಮ್ಮ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇಂಥ ಗ್ಯಾಜೆಟ್ ಗಳಿಂದ ಡೇಟಾ ಯಾರೂ ಕದಿಯದಂತೆ ಜಾಗ್ರತೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರಯಾಣ ಯೋಗ ಇದೆ. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಅಲ್ಪಾವಧಿಗಾದರೂ ವಿದೇಶಕ್ಕೆ ತೆರಳುವ ಅವಕಾಶ ಬರಲಿದೆ.
ಲೇಖನ- ಎನ್.ಕೆ.ಸ್ವಾತಿ