ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸೋಂಕನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿದ ಜೊತೆಗೆ ಚಿಕಿತ್ಸೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಆದರೆ ಕೊರೊನಾ ಬಗ್ಗೆ ಕೆಲ ಜನರಿಗೆ ಮಾತ್ರ ಇನ್ನು ಭಯ ಹುಟ್ಟಿಲ್ಲ. ಇಬ್ಬರು ಯುವತಿಯರಿಗೆ ಕೊರೊನಾ ಸೋಂಕು ತಗುಲಿತ್ತು. ಕೊವಿಡ್ ಕೇರ್ ಸೆಂಟರ್ಗೆ ದಾಖಲಾಗಿದ್ದರು. ಆದರೆ ಆ ಯುವತಿಯರು ಕೊರೊನಾ ಭೀತಿಯಲ್ಲದೆ ಕೊವಿಡ್ ಕೇರ್ ಸೆಂಟರ್ನಿಂದ ಪರಾರಿಯಾಗಿದ್ದಾರೆ.
ಕೊರೊನಾ ಸೋಂಕಿತ ಯುವತಿಯರು ದಾವಣಗೆರೆ ಜೆ.ಎಚ್.ಪಟೇಲ್ ಬಡಾವಣೆಯ ಕೊವಿಡ್ ಕೇರ್ ಸೆಂಟರ್ನಿಂದ ಪರಾರಿಯಾಗಿದ್ದಾರೆ. ರಾಜ್ಯ ಮಹಿಳಾ ನಿಲಯ ನಿವಾಸಿಗಳಾಗಿದ್ದ 21 ಮತ್ತು 19 ವರ್ಷದ ಯುವತಿಯರು ಪರಾರಿಯಾದವರು. ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಅಂತರ್ ಧರ್ಮೀಯ ಯುವಕನನ್ನು ಒಬ್ಬರು ಮದುವೆಯಾಗಿದ್ದರು. ಆದರೆ ಆಗ 18 ವರ್ಷ ತುಂಬದೇ ಇದ್ದ ಕಾರಣ ಪ್ರಕರಣ ದಾಖಲಿಸಿ ಯುವಕನನ್ನು ಜೈಲಿಗೆ ಕಳುಹಿಸಲಾಗಿತ್ತು. ಯುವತಿ ಹೆತ್ತವರ ಮನೆಗೆ ಹೋಗಲು ಒಪ್ಪಿರಲಿಲ್ಲ.
ಅದೇ ರೀತಿ ಮತ್ತೊಬ್ಬರು 2020ರಲ್ಲಿ ತನ್ನ ಸಂಬಂಧಿ ಯುವಕನನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ದರು. ಅವರಿಗೂ ಆಗ 18 ತುಂಬಿರಲಿಲ್ಲ. ಮದುವೆಯನ್ನು ತಡೆಯಲಾಗಿತ್ತು. ಆಕೆಯೂ ತಾಯಿ ಜೊತೆ ಹೋಗಲು ಒಪ್ಪಿರಲಿಲ್ಲ. ಹಾಗಾಗಿ ಇಬ್ಬರೂ ಸ್ಟೇ ಹೋಂನಲ್ಲಿದ್ದರು. ಕೊರೊನಾ ಬಂದರೂ ಲಕ್ಷಣಗಳು ಇಲ್ಲದ ಕಾರಣ ಅವರನ್ನು ಕೊವಿಡ್ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ತಡರಾತ್ರಿ ವಾಚ್ಮನ್ ಊಟಕ್ಕೆ ಹೋಗಿದ್ದ ಸಮಯದಲ್ಲಿ ಪರಾರಿಯಾಗಿದ್ದಾರೆ. ಪರಾರಿಯಾದ ಯುವತಿಯರು ಆ ಯುವಕರ ಜೊತೆಗೆ ಪರಾರಿಯಾಗಿರಬೇಕು ಎಂದು ಶಂಕಿಸಲಾಗಿದೆ. ಈ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ
ನಿಮ್ಮ ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಇದೆಯೇ ಒಮ್ಮೆ ಗಮನಿಸಿ
ನಮ್ಮ ಊರಿಗೆ ಕೊವಿಡ್ ಬಾರದಂತೆ ನೋಡಿಕೊಳ್ತೀವಿ; ಕೊರೊನಾ ನಿಯಂತ್ರಣಕ್ಕೆ ಪ್ರತಿಜ್ಞಾವಿಧಿ ಸ್ವೀಕರಿಸಿದ ಗ್ರಾಮಸ್ಥರು
(Two Corona infected escapes from davanagere covid care center )