ಆರೋಗ್ಯ ಸಚಿವರ ಊರಿನ ಆಸ್ಪತ್ರೆಯಲ್ಲೇ ಬೆಂಕಿ ಅಪಘಡ

|

Updated on: Jan 29, 2020 | 4:55 PM

ಬಳ್ಳಾರಿ: ಆರೋಗ್ಯ ಸಚಿವ ಬಿ ಶ್ರೀರಾಮುಲು ಊರಲ್ಲೇ ಬೆಂಕಿ ಅವಘಡ ಸಂಭವಿಸಿದೆ. ಸಿರುಗುಪ್ಪ ಸರ್ಕಾರಿ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಆಕಸ್ಮಿಕ ಅಗ್ನಿ ಕಾಣಿಸಿಕೊಂಡಿದೆ. ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ಒಳಗಿದ್ದ ರೋಗಿಗಳನ್ನು ಹೊರ ಕಳಿಸಿದ್ದಾರೆ. ಸುಮಾರು 100 ಹಾಸಿಗೆ ಇದ್ದ ಸರ್ಕಾರಿ ಆಸ್ಪತ್ರೆ ಒಳ ಭಾಗ ಬೆಂಕಿಗೆ ಸುಟ್ಟು ಹೋಗಿದೆ. ಬೆಂಕಿಗೆ ಆಸ್ಪತ್ರೆ ಸುತ್ತ ದಡ್ಡ ಹೊಗೆ ಅವರಿಸಿದ್ದು, ಸಿಬ್ಬಂದಿ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು […]

ಆರೋಗ್ಯ ಸಚಿವರ ಊರಿನ ಆಸ್ಪತ್ರೆಯಲ್ಲೇ ಬೆಂಕಿ ಅಪಘಡ
Follow us on

ಬಳ್ಳಾರಿ: ಆರೋಗ್ಯ ಸಚಿವ ಬಿ ಶ್ರೀರಾಮುಲು ಊರಲ್ಲೇ ಬೆಂಕಿ ಅವಘಡ ಸಂಭವಿಸಿದೆ. ಸಿರುಗುಪ್ಪ ಸರ್ಕಾರಿ ಆಸ್ಪತ್ರೆ ತೀವ್ರ ನಿಗಾ ಘಟಕದಲ್ಲಿ ಆಕಸ್ಮಿಕ ಅಗ್ನಿ ಕಾಣಿಸಿಕೊಂಡಿದೆ. ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ಒಳಗಿದ್ದ ರೋಗಿಗಳನ್ನು ಹೊರ ಕಳಿಸಿದ್ದಾರೆ.

ಸುಮಾರು 100 ಹಾಸಿಗೆ ಇದ್ದ ಸರ್ಕಾರಿ ಆಸ್ಪತ್ರೆ ಒಳ ಭಾಗ ಬೆಂಕಿಗೆ ಸುಟ್ಟು ಹೋಗಿದೆ. ಬೆಂಕಿಗೆ ಆಸ್ಪತ್ರೆ ಸುತ್ತ ದಡ್ಡ ಹೊಗೆ ಅವರಿಸಿದ್ದು, ಸಿಬ್ಬಂದಿ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಏನು ಕಾರಣ ಎಂಬುವುದು ಇನ್ನು ತಿಳಿದುಬಂದಿಲ್ಲ. ಆದರೆ ಪ್ರಾಣ ಕಾಪಾಡುವ ಆಸ್ಪತ್ರೆಯಲ್ಲಿ ಯಾರದೋ ನಿರ್ಲಕ್ಷ್ಯದಿಂದ ಆತಂಕ ಎದುರಿಸುವಂತಾಗಿದ್ದು ವಿಪರ್ಯಾಸ.

Published On - 4:39 pm, Wed, 29 January 20