ಬಳ್ಳಾರಿ: ಬ್ಯಾನರ್ ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳಿಗೆ ಬಿಜೆಪಿ ಉಚ್ಛಾಟಿತ ನಾಯಕ ಕವಿರಾಜ್ ಅರಸ್ ಆವಾಜ್ ಹಾಕಿದ್ದಾರೆ. ಹೊಸ ವರ್ಷ ಶುಭಾಶಯ ಕೋರಿ ಬ್ಯಾನರ್ಗಳನ್ನ ಹಾಕಲಾಗಿತ್ತು. ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಬಂದಿದ್ದರು. ಆದರೆ ವಿಜಯನಗರ ಬಿಜೆಪಿ ಉಚ್ಚಾಟಿತ ಮುಖಂಡ ಕವಿರಾಜ್ ಬ್ಯಾನರ್ಗಳನ್ನು ತೆರವು ಮಾಡಲು ಬಿಡದೆ ಅವರಿಗೆ ಆವಾಜ್ ಹಾಕಿದ್ದಾರೆ.
ನಗರ ಪಾಲಿಕೆ ಹೆಲ್ತ್ ಇನ್ಸಪೆಕ್ಟರ್ ವೆಂಕಟೇಶ್ಗೆ ಸಾರ್ವಜನಿಕವಾಗಿ ಅವಾಜ್ ಹಾಕಿ ಬೆದರಿಸಿದ್ದಾರೆ. ಹೋಗಿ ನಿಮ್ಮ ಮೇಡಮ್ಗೆ ಹೇಳಿ, ನಾನೇನಾದ್ರು ಮುನ್ಸಿಪಾಲಿಟಿಗೆ ಬಂದ್ರೆ ದೇವರಾಣೆ ಬೆಂಕಿ ಹತ್ತತ್ತೆ ಹೊಸಪೇಟೆ ಶಾಂತವಾಗಿದೆ, ನಿಮ್ಮಿಂದ ಬೆಂಕಿ ಹತ್ತತ್ತೆ ಅಂತಾ ಬೆರಳು ತೋರಿಸಿ ಅವಾಜ್ ಹಾಕಿದ್ದಾರೆ.
ಬ್ಯಾನತರ್ ಇದ್ರೆ ನಿಮ್ಮದೇನು ಗಂಟು ಹೊಗತ್ತೆ? ನಿಮ್ಮಿಂದನೇ ಹೊಸಪೇಟೆ ಇಷ್ಟು ಗಲೀಜಾಗಿದೆ. ಎಲ್ಲೆಂದರಲ್ಲಿ ಕಸ, ಚರಂಡಿ ನೀರು ಇದೆ. ಹೊಸ ವರ್ಷ ಇದ್ರೂ ಕ್ಲೀನ್ ಮಾಡ್ಸಿಲ್ಲ. ನಾನು ಹಾಕಿರೋ ಬ್ಯಾನರ್ನಿಂದ ನಗರ ಚೆನ್ನಾಗಿ ಕಾಣ್ತಿದೆ. ನಿಮಗೆ ನಾವು ಟ್ಯಾಕ್ಸ್ ಕೊಟ್ಟಿ ಸಂಬಳ ನೀಡ್ತಿರೋದು. ಯಾವುದೇ ಕಾರಣಕ್ಕೂ ಯಾರ ಬ್ಯಾನರ್ ಕೂಡಾ ತೆಗಿಯಬಾರದು ಅಂತಾ ಕವಿರಾಜ್ ಆವಾಜ್ ಹಾಕಿದ್ದಾರೆ.
Published On - 5:08 pm, Wed, 1 January 20