ಬೆಂಗಳೂರು, ಜೂನ್ 23: ಬಳ್ಳಾರಿ (Ballari) ಜಿಲ್ಲೆಯ ಸಂಡೂರು (Sandur) ತಾಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿ ಬೆಟ್ಟ 401.57 ಹೆಕ್ಟರ್ ಅರಣ್ಯ ಭೂಮಿಯಲ್ಲಿ (Forest Aria) ಕಬ್ಬಿಣದ ಅದಿರು ಗಣಿಗಾರಿಕೆ (Mining) ನಡೆಸದಂತೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆಐಒಸಿಎಲ್)ಗೆ ಅರಣ್ಯ ಇಲಾಖೆ ಸೂಚನೆ ನೀಡಿದೆ.
ಕೆಐಒಸಿಎಲ್ ಈ ಹಿಂದೆ ಕುದುರೆಮುಖ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿದ ಸಂದರ್ಭದಲ್ಲಿ ಹಲವು ಲೋಪಗಳನ್ನು ಎಸಗಿದೆ. ಅಲ್ಲದೆ, ಅರಣ್ಯ ಕಾಯ್ದೆಯನ್ನು ಉಲ್ಲಂಘಿಸಿದೆ. ಈ ಕಾರಣಕ್ಕಾಗಿ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನಿಗದಿತ ಕಾಲಮಿತಿಯೊಳಗೆ ಅರಣ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳುವಂತೆ ಕೆಐಒಸಿಎಲ್‌ಗೆ ನಿರ್ದೇಶಿಸಿತ್ತು.
ಆದರೆ, ಕೆಐಒಸಿಎಲ್ ನಿರ್ದೇಶನಗಳನ್ನು ಜಾರಿ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವವರಿಗೆ ದೇವದಾರಿ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆಗಾಗಿ ನೀಡಲಿರುವ ಅರಣ್ಯ ಭೂಮಿಯನ್ನು ಕೆಐಒಸಿಎಲ್‌ಗೆ ಹಸ್ತಾಂತರಿಸಬಾರದು ಹಾಗೂ ಅರಣ್ಯ ತೀರುವಳಿಗುತ್ತಿ ಗೆ ಪತ್ರಕ್ಕೆ ಅಧಿಕಾರಿಗಳು ಸಹಿ ಹಾಕದಿರುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿರ್ದೇಶಿಸಿದ್ದಾರೆ.
ಈ ಸಂಬಂಧ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ದೇವದಾರಿ ಬೆಟ್ಟ ಪ್ರದೇಶದಲ್ಲಿ ಗಣಿಗಾರಿಕೆಗಾಗಿ 2018 ನಲ್ಲಿ ಕೆಐಓಸಿಎಲ್ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಅರಣ್ಯಕ್ಕೆ ಮತ್ತು ಜಲಮೂಲಗಳಿಗೆ ಹಾನಿ ಆಗುತ್ತದೆ ಎಂದು ಕೇಂದ್ರ ಸರ್ಕಾರ ಅನುಮತಿ ನೀಡಲು ನಿರಾಕರಿಸಿತು. ಆದರೆ 2023 ಏಪ್ರಿಲ್ನಲ್ಲಿ ಕೆಲ ಷರತ್ತುಗಳ ಮೇರೆಗೆ ಮೊದಲ ಹಂತಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ದೇವದಾರಿ ಹಿಲ್ಸ್ನಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ; ಗುತ್ತಿಗೆಗೆ ಸಹಿ ಹಾಕದಂತೆ ಈಶ್ವರ ಖಂಡ್ರೆ ಸೂಚನೆ
ಒಪ್ಪಿಗೆ ಸಿಕ್ಕ ಬಳಿಕ ಗಣಿಗಾರಿಕೆ ಕೆಐಓಸಿಎಲ್ ಆರಂಭಿಸಲು ಮುಂದಾಗಿದ್ದತ್ತು. ಆದರೆ, ಕೆಐಓಸಿಎಲ್ ಈ ಹಿಂದೆ ನಡೆಸಿದ ಹಿಂದೆ ಗಣಿಗಾರಿಕೆ ಮಾಡುವ ಸಂದರ್ಭದಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪಗಳಿವೆ ಹೀಗಾಗಿ ತಡೆದಿದ್ದೇವೆ ಎಂದು ಹೇಳಿದರು.
ಇದು ರಾಜ್ಯ ಸರ್ಕಾರದ ಸ್ವತ್ತು. ನಮ್ಮ ಅನುಮತಿಯಿಲ್ಲದೆ ಗಣಿಗಾರಿಕೆ ಮಾಡಲು ಬರಲ್ಲ. ಮತ್ತು ನಮ್ಮ ಇಲಾಖೆಯ ಷರತ್ತು ಪೂರೈಸುವವರೆಗೂ ಜಮೀನು ಹಸ್ತಾಂತರಿಸಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಗಣಿಗಾರಿಕೆಗೆ ಅರಣ್ಯ ಭೂಮಿಯನ್ನು ಹಸ್ತಾಂತರ ಮಾಡಿದ ಮೇಲೆ ಏನು ಮಾಡಲು ಬರುವುದಿಲ್ಲ. ಹೀಗಾಗಿ, ತಡೆ ಹಿಡಿದ್ದೇವೆ ಎಂದು ಮಾಹಿತಿ ನೀಡಿದರು.
ದೇವದಾರಿ ಬೆಟ್ಟ ಪ್ರದೇಶದ ವರ್ಜಿನ್ ಕಾಡಿನಲ್ಲಿ 99 ಸಾವಿರ ಮರಗಳಿವೆ. ಜೀವವೈವಿಧ್ಯಕ್ಕೆ ಧಕ್ಕೆ ಆಗಲಿದೆ ಎಂಬ ಪರಿಸರವಾದಿಗಳ ಅಭಿಪ್ರಾಯವಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Sun, 23 June 24