ಅವರಿಬ್ಬರೂ ಮನಸಾರೆ ಒಬ್ಬರನೊಬ್ಬರು ಪ್ರೀತಿಸಿದ್ರು. ಜಾತಿಯ ಎಲ್ಲೆ ಮೀರಿ ಪ್ರೀತಿಸಿದ್ದ ಆ ಯುವತಿ ಮದುವೆಯಾಗೋ ಕನಸು ಕಂಡಿದ್ದಳು. ಆದ್ರೆ ಪ್ರೀತಿಸುವ ವೇಳೆ ನೀನೇ ನನ್ನ ನಲ್ಲೆ. ನೀನೆ ನನ್ನ ಪ್ರಾಣ – ಬಂಗಾರ ಅಂತಿದ್ದ ಆ ಪ್ರೇಮಿ ಮದುವೆ ಮಾತು ಬರುತ್ತಿದ್ದಂತೆ ಜಾತಿ ವರಸೆ ತಗೆದಿದ್ದ. ನೀನು ಕೀಳು ಜಾತಿಯವಳು ಅಂತಾ ಹೀಯಾಳಿಸಿ ಮೂರು ವರ್ಷದ ಪ್ರೀತಿ ಮುರಿದು ಹಾಕಿದ್ದ. ಯುವತಿಯನ್ನ (Bellary Girl) ನಂಬಿಸಿ ಲವ್ ಸೆಕ್ಸ್ ದೋಖಾ ಮಾಡಿದ ಆ ಪ್ರಿಯತಮ ಇದೀಗ ಅಂದರ್ ಆಗಿದ್ದರೆ (Ballari Police), ಇತ್ತ ಯುವತಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾಳೆ ನೋಡಿ. ಅಷ್ಟಕ್ಕೂ ಆ ಪ್ರೇಮಿಗಳ ಮಧ್ಯೆ ನಡೆದಿದ್ದಾದ್ರು ಏನು. ಏನಿದು ಲವ್ ಸೆಕ್ಸ್ ದೋಖಾ ಸ್ಟೋರಿ.. ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.. ಪ್ರಿಯಕರನ ಮೋಸ ತಾಳದೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ (suicide attempt) ಯುವತಿ. ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ಮಾಡ್ತಿರೋ ಮುದ್ದಾದ ಚೆಲುವೆ ಅವಳು. ಚೆಂದದ ಚೆಂದುಳ್ಳಿಯಂತಹ ಮುದ್ದಾದ ಮಗಳ ಸ್ಥಿತಿ ಕಂಡು ಕಣ್ಣೀರಿಡುತ್ತಿರುವ ಪೋಷಕರು. ಹೌದು. ಇದು ಮೂರು ವರ್ಷಗಳ ಕಾಲ ಮನಸಾರೆ ಪ್ರೀತಿಸಿದ ಪ್ರೇಮಿಯೊಬ್ಬ ಮಾಡಿದ ಲವ್ ಸೆಕ್ಸ್ ದೋಖಾ ಕಥೆ (Love Sex Dhoka story).
ಅತ್ತಿಗೆಯ ಸ್ನೇಹಿತೆಯ ಮನಸ್ಸನ್ನೆ ಕದ್ದ ಬಳ್ಳಾರಿಯ ಚೋರ..!
ಪ್ರೀತಿ ಮಾಡಬಾರದು ಮಾಡಿದ್ರೆ ಯಾರಿಗೂ ಹೆದರಬಾರದು ಅಂತಾರೆ. ಹೌದು. ಯಾರಿಗೂ ಅಂಜದೇ ಅಳುಕದೇ ಪ್ರೀತಿಸಿದ್ರು ಈ ಪ್ರೇಮಿಗಳಿಬ್ಬರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಂತೆ ಮನಸಾರೆ ಪ್ರೀತಿಸಿದ್ದ ಈ ಪ್ರೇಮಿಗಳು ಪಾರ್ಕು, ಹೊಟೇಲ್ ಅಂತಾ ಎಲ್ಲೆಡೆ ತಿರುಗಾಡಿದ್ರು. ಒಬ್ಬರ ಬರ್ತಡೇಯನ್ನ ಇನ್ನೊಬ್ಬರು ಸಂಭ್ರಮದಿಂದ ಆಚರಿಸಿದ್ರು. ಆದ್ರೆ ಯುವಕನ ಬಣ್ಣದ ಮಾತುಗಳಿಗೆ ಮರುಳಾಗಿ ಮನಸಾರೆ ಪ್ರೀತಿಸಿದ ಯುವತಿ ಇಂದು ಸಾವು ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾಳೆ ನೋಡಿ.
ಹೌದು. ಈ ಯುವತಿಯ ಹೆಸರು ಅಮೃತಾ. ಹೆಸರಿಗೆ ತಕ್ಕಂತೆ ಚೆಂದುಳ್ಳಿ ಚೆಲುವೆ. ಬಳ್ಳಾರಿಯ ನಾಗಲಕೇರಿಯ ಈ ಮುದ್ದಾದ ಯುವತಿಯನ್ನ ಸುನೀಲ್ ಎನ್ನುವ ಯುವಕ ಮೂರು ವರ್ಷಗಳ ಕಾಲ ಪ್ರೀತಿ ಮಾಡಿದ್ದ. ಸಹೋದರ ಮಂಜುವಿನ ಪತ್ನಿ ದೀಪ್ತಿಯ ಸ್ನೇಹಿತೆಯಾಗಿದ್ದ ಅಮೃತಾಳ ಜೊತೆಗಿನ ಪರಿಚಯ ಸ್ನೇಹಕ್ಕೆ ತಿರುಗಿದ ನಂತರ ಸುನೀಲ್ ಅಮೃತಾಳನ್ನ ಮದುವೆಯಾಗುವುದಾಗಿ ನಂಬಿಸಿ ಪ್ರೀತಿಯ ನಾಟಕವಾಡಿದ್ದ. ಆದ್ರೆ ಮೂರು ವರ್ಷಗಳ ಕಾಲ ಪ್ರೀತಿಸಿದ ಯುವತಿ ಮದುವೆಯ ಮಾತು ಎತ್ತುತ್ತಿದ್ದಂತೆ ಪ್ರೇಮಿ ಸುನೀಲ್ ವರಸೆ ಬದಲಿಸಿದ್ದ. ನಿನ್ನ ಜಾತಿ ಬೇರೆ ನನ್ನದು ಮೇಲ್ಜಾತಿಯೆಂದು ಕಿರಿಕ್ ತಗೆದಿದ್ದ.
ಸುನೀಲ್ ನನ್ನ ಮನಸಾರೆಯಾಗಿ ಪ್ರೀತಿಸಿದ್ದ ಅಮೃತಾ ಸುನೀಲ್ ಗೆ ಎಲ್ಲವನ್ನೂ ಅರ್ಪಿಸಿದ್ದಳು. ಪ್ರೀತಿಯ ಹೆಸರಿನಲ್ಲಿ ಅಮೃತಾಳ ಜೊತೆ ದೈಹಿಕ ಸಂಪರ್ಕ ಬೆಳಿಸಿದ್ದ ಸುನೀಲ್ ಮದುವೆ ಮಾತು ಬರುತ್ತಿದ್ದಂತೆ ಮಾತು ಬದಲಿಸಿದ್ದ. ಹೀಗಾಗಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಕ್ಕೆ ಮನನೊಂದ ಅಮೃತಾ ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದ್ರೆ ನೇಣು ಬಿಗಿದುಕೊಂಡ ಅಮೃತಾಳನ್ನ ಪೋಷಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ರು.
ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ಅಮೃತಾ ಇದೀಗ ಪ್ರೀತಿ ಹೆಸರಿನಲ್ಲಿ ಮಾಡಿದ ಮೋಸದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದಲ್ಲದೇ ಜಾತಿ ನಿಂದನೆ ಮಾಡಿದ ಪ್ರೇಮಿ ಸುನೀಲ್ ಹಾಗೂ ಕುಟುಂಬದ ವಿರುದ್ದ ಅಮೃತಾಳ ಪೋಷಕರು ದೂರು ದಾಖಲಿಸಿದ್ದಾರೆ. ಬಳ್ಳಾರಿಯ ಮಹಿಳಾ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರೀತಿಯ ಹೆಸರಿನಲ್ಲಿ ನಾಟಕವಾಡಿದ ಪ್ರೇಮಿ ಸುನೀಲ್, ಅವನಿಗೆ ಸಹಕರಿಸಿದ ಅವನ ಸಹೋದರ ಮಂಜುನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನಾದರು ಪ್ರೀತಿ ಪ್ರೇಮ ಅನ್ನೋ ಪ್ರೇಮಿಗಳು ಎಚ್ಚರವಾಗಿರಬೇಕಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:00 pm, Fri, 30 June 23