Ballari News: ಬಳ್ಳಾರಿ; ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

ಆಟವಾಡುತ್ತಿದ್ದಾಗ ಕೈಗೆ ಸಿಕ್ಕಿದ ಮೆಂಥೋಪ್ಲಸ್​​ನ ಚಿಕ್ಕ ಡಬ್ಬಿಯನ್ನು ಮಗು ನುಂಗಿದೆ. ಇದಾದ ನಂತರ ಮಗುವಿಗೆ ಉಸಿರಾಟ ತೊಂದರೆ ಹೆಚ್ಚಾಗಿದ್ದು ಖಾಸಗಿ ವೈದ್ಯರ ಬಳಿಗೆ ಪೋಷಕರು ಕರೆದುಕೊಂಡು ಹೋಗಿದ್ದಾರೆ.

Ballari News: ಬಳ್ಳಾರಿ; ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಸಾವು
ಪುತ್ರಿ ಪ್ರಿಯದರ್ಶಿನಿ ಜತೆ ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ

Updated on: Jun 09, 2023 | 10:41 PM

ಬಳ್ಳಾರಿ: ಮೆಂಥೋಪ್ಲಸ್ ಡಬ್ಬಿ ನುಂಗಿ 9 ತಿಂಗಳ ಮಗು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆ ಕಂಪ್ಲಿ (Kampli) ಪಟ್ಟಣದ 5ನೇ ವಾರ್ಡ್​ನ ಇಂದಿರಾನಗರದಲ್ಲಿ ನಡೆದಿದೆ. ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿಗಳ ಪುತ್ರಿ ಪ್ರಿಯದರ್ಶಿನಿ ಮೃತಪಟ್ಟ ದುರ್ದೈವಿ. ಆಟವಾಡುತ್ತಿದ್ದಾಗ ಕೈಗೆ ಸಿಕ್ಕಿದ ಮೆಂಥೋಪ್ಲಸ್​​ನ ಚಿಕ್ಕ ಡಬ್ಬಿಯನ್ನು ಮಗು ನುಂಗಿದೆ. ಇದಾದ ನಂತರ ಮಗುವಿಗೆ ಉಸಿರಾಟ ತೊಂದರೆ ಹೆಚ್ಚಾಗಿದ್ದು ಖಾಸಗಿ ವೈದ್ಯರ ಬಳಿಗೆ ಪೋಷಕರು ಕರೆದುಕೊಂಡು ಹೋಗಿದ್ದಾರೆ.

ಮಗುವನ್ನು ಪರೀಕ್ಷಿಸಿದ ವೈದ್ಯರು, ಮಾರ್ಗಮಧ್ಯೆಯೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಈ ದಂಪತಿಗೆ ವಿವಾಹವಾಗಿ 10 ವರ್ಷಗಳ ನಂತರ ಈ ಮಗು ಜನಿಸಿತ್ತು.

ದಾವಣಗೆರೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವು

ಸಿಡಿಲು ಬಡಿದು ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರಿನಲ್ಲಿ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಕಾಟಲಿಂಗಪ್ಪ(43), ರಾಜು(35) ಮೃತಪಟ್ಟವರು. ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ, ತಹಶೀಲ್ದಾರ್‌ ಸಂತೋಷ್ ಭೇಟಿ ನೀಡಿದ್ದು, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Fri, 9 June 23