ಬೆಂಗಳೂರು: ನಗರದಲ್ಲಿ ಟ್ರಾಫಿಕ್ ನಿಯಂತ್ರಣ (Bengaluru traffic)ಗೊಳಿಸಲು ಕೆಲ ಬದಲಾವಣೆಗೆ ಮುಂದಾಗಿರುವ ನಗರ ಸಂಚಾರ ಪೊಲೀಸ್ ವಿಭಾಗವು ಹೆವಿ ಮತ್ತು ಲಘು ಗೂಡ್ಸ್ ವಾಹನಗಳ ನಿರ್ಬಂಧ ವಿಧಿಸಲು ಮುಂದಾಗಿದೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ವಿಶೇಷ ಆಯುಕ್ತ ಡಾ.ಎಂ.ಎ. ಸಲೀಂ (Dr.M.A.Salim) ಅವರು, ಹೆಬ್ಬಾಳದ ಫ್ಲೈಓವರ್ ಬಳಿ ಟ್ರಾಫಿಕ್ (Hebbal Traffic) ದಟ್ಟಣೆ ಹಿನ್ನಲೆ ಕಳೆದ ಒಂದು ವಾರದಿಂದ ಗೂಡ್ಸ್ ವಾಹನಗಳ ನಿರ್ಬಂಧ ವಿಧಿಸಲಾಗಿದೆ. ಹೆವಿ ಮತ್ತು ಲಘು ಗೂಡ್ಸ್ ವಾಹನಗಳ ನಿರ್ಬಂಧದಿಂದ ಟ್ರಾಫಿಕ್ ಸುಧಾರಣೆಯಾಗಲಿದೆ ಎಂದರು.
ಇದನ್ನೂ ಓದಿ: ಓಲಾ, ಊಬರ್ ಆಟೋಗಳಿಗೆ ದರ ನಿಗದಿ ಪಡಿಸಿದ ಸಾರಿಗೆ ಇಲಾಖೆ, ಪ್ರಯಾಣಿಕರೇ ಗಮನಿಸಿ
ಸಂಚಾರ ದಟ್ಟಣೆಯಿಂದ ವಾಹನ ಸವಾರರ ಸುಮಾರು 20 ನಿಮಿಷ ವ್ಯರ್ಥವಾಗುತ್ತಿತ್ತು. ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲು ಹಾಗೂ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಹೆವಿ ಮತ್ತು ಲಘು ಗೂಡ್ಸ್ ವಾಹನಗಳನ್ನು ನಿರ್ಬಂಧಿಸಲಾಗಿದೆ. ಈ ಕ್ರಮದಿಂದಾಗಿ ಶೇಕಡಾ 25ರಷ್ಟು ಸಂಚಾರ ದಟ್ಟಣೆ ಕಡಿಮೆಯಾಗಿದೆ. ಈಗ ವ್ಯರ್ಥವಾಗುತ್ತಿದ್ದ 20 ನಿಮಿಷವು ಏಳು ನಿಮಿಷಕ್ಕೆ ಇಳಿದಿದೆ. ಅದನ್ನ ಇನ್ನೂ ಕಡಿಮೆ ಮಾಡಲು ಪ್ರಯತ್ನ ಮಾಡಲಾಗುತ್ತದೆ ಎಂದು ಸಲೀಂ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಘಾತ, ಆಸ್ಪತ್ರೆಯಲ್ಲಿ ನಿಧನ
ಹೆಬ್ಬಾಳ ರೀತಿಯಲ್ಲಿ ನಗರದ ಬೇರೆ ಭಾಗಗಳ ಟ್ರಾಫಿಕ್ ದಟ್ಟಣೆ ಬಗ್ಗೆ ಅಧ್ಯಯನ ಮಾಡಲಾಗುವುದು. ಕೆಲವು ಟ್ರಾಫಿಕ್ ಮ್ಯಾನೇಜ್ಮೆಂಟ್ ಸಂಬಂಧ ಸಮಸ್ಯೆ ಇದೆ. ಇನ್ನೂ ಕೆಲವು ಇಂಜಿನಿಯರಿಂಗ್ ಸಂಬಂಧಿತ ಸಮಸ್ಯೆ ಇದೆ. ಅದನ್ನ ಸರಿಪಡಿಸುವ ಕೆಲಸಕ್ಕೆ ಚರ್ಚೆ ನಡೆಸಲಾಗಿದೆ. ನಗರದಲ್ಲಿ ಅಲ್ಲಿನ ಸ್ಥಳೀಯ ಟ್ರಾಫಿಕ್ ಅಧ್ಯಯನ ಮಾಡಿ ಅಲ್ಲಿ ಬದಲಾವಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಮಾನ ನಿಲ್ದಾಣ ಮತ್ತು ನಗರದ ನಡುವಿನ ಪ್ರಯಾಣವನ್ನು ಸುಲಭಗೊಳಿಸಲು ಸಾದಹಳ್ಳಿ ಜಂಕ್ಷನ್ನಿಂದ ಹೆಬ್ಬಾಳ ಫ್ಲೈಓವರ್ (hebbal flyover) ವರೆಗೆ ಪೀಕ್ ಅವರ್ನಲ್ಲಿ ಭಾರೀ (ಸರಕು ಸಾರಿಗೆ) ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು. ಪ್ರತಿದಿನ ಬೆಳಗ್ಗೆ 8.30 ರಿಂದ ಬೆಳಗ್ಗೆ 10.30ರ ವರೆಗೆ (ಎರಡು ಗಂಟೆ) ಭಾರೀ (ಸರಕು ಸಾರಿಗೆ) ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ನಿಯಮ 18/11/2022ರಿಂದ ಒಂದು ತಿಂಗಳ ವರೆಗೆ ಜಾರಿಯಲ್ಲಿರುತ್ತದೆ. ಬೆಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ-7ನಲ್ಲಿ ಪ್ರತಿದಿನ ಲಕ್ಷಾಂತರ ಸರಕು ಸಾರಿಗೆ ವಾನಗಳು ಸಂಚರಿಸುತ್ತಿದ್ದು, ಇದರಿಂದಾಗಿ ದೈನಂದಿನ ಪೀಕ್ ಅವರ್ನಲ್ಲಿ ಸಂಚಾರದಲ್ಲಿ ವ್ಯತ್ಯಯವಾಗುತ್ತಿದೆ. ಇದನ್ನು ಗಮನಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಡಾ.ಎಂ.ಎ.ಸಲೀಂ ಆದೇಶದಲ್ಲಿ ತಿಳಿಸಿದ್ದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Fri, 25 November 22