ನಾಡಿನಾದ್ಯಂತ ವಿಶ್ವ ವಿಖ್ಯಾತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಸೆಪ್ಟೆಂಬರ್ 29 ರಿಂದ ದಸರಾ ನವರಾತ್ರಿ ಶುರುವಾಗಿದೆ. ಅಲ್ಲದೇ ಇದೇ ತಿಂಗಳಿನಲ್ಲಿ ದೀಪಾವಳಿ ಹಬ್ಬವು ಇರುವುದರಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಸಿಗಲಿದೆ.
ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಬ್ಯಾಂಕ್ ಗಳಿಗೆ ಈ ತಿಂಗಳಿನಲ್ಲಿ 11 ದಿನ ರಜೆ ಇರಲಿದೆ. ಎಂದಿನಂತೆ ಭಾನುವಾರ ಹಾಗೂ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇರಲಿದೆ.
ಬ್ಯಾಂಕ್ ಗೆ ರಜಾ ಇರುವ ದಿನಗಳ ಪಟ್ಟಿ
ಅಕ್ಟೋಬರ್ 2-ಗಾಂಧಿ ಜಯಂತಿ, ಅಕ್ಟೋಬರ್ 6-ಭಾನುವಾರ, ಅಕ್ಟೋಬರ್ 7-ಮಹಾನವಮಿ, ಅಕ್ಟೋಬರ್ 8-ವಿಜಯದಶಮಿ, ಅಕ್ಟೋಬರ್ 12-ಎರಡನೇ ಶನಿವಾರ, ಅಕ್ಟೋಬರ್ 13 – ಭಾನುವಾರ, ಅಕ್ಟೋಬರ್ 20-ಭಾನುವಾರ, ಅಕ್ಟೋಬರ್ 26-ನಾಲ್ಕನೇ ಶನಿವಾರ, ಅಕ್ಟೋಬರ್ 27-ಭಾನುವಾರ, ಅಕ್ಟೋಬರ್ 28-ಗೋವರ್ಧನ ಪೂಜೆ ಇರುವುದರಿಂದ ಕೆಲ ರಾಜ್ಯದ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಅಕ್ಟೋಬರ್ 29-ಬಲಿಪಾಡ್ಯಮಿ. ಅಲ್ಲದೆ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಇರುವುದರಿಂದ ಅಂದು ಕೂಡ ರಜೆ ಇರಲಿದೆ.
Published On - 1:33 pm, Tue, 1 October 19