ಬೆಳಗಾವಿ, ಅ.6: ಹಲವು ಕಾರಣಗಳಿಂದ ಬೆಳಗಾವಿ ವಿಮಾನ (Belagavi Airport) ನಿಲ್ದಾಣದಿಂದ ಕೆಲವು ಪ್ರಮುಖ ಸ್ಥಳಗಳಿಗೆ ವಿಮಾನ ಸಂಚಾರ ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೀಗ ಬೆಳಗಾವಿಯಿಂದ ದೆಹಲಿಗೆ (Delhi) ನೇರ ವಿಮಾನ ಸೇವೆ ಮತ್ತೆ ಆರಂಭಗೊಂಡಿದ್ದು, ಅಧಿಕಾರಿಯೊಬ್ಬರು ವಿಮಾನದ ಪ್ರಯಾಣಿಕರನ್ನು ಕನ್ನಡದಲ್ಲೇ ಸ್ವಾಗತಿಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಕ್ಷಯ ಪಾಟೀಲ್ ಅವರು ಪ್ರಯಾಣಿಕರನ್ನು ಕನ್ನಡದಲ್ಲಿ ಸ್ವಾಗತಿಸಿದರು. ನೇರ ವಿಮಾನ ಸೇವೆಗೆ ಕಾರಣರಾದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಲಾಯಿತು.
ಇನ್ನೂ ಮುಂದೆ ದೆಹಲಿ ದೂರ ಇಲ್ಲ ಕೇವಲ 2.10 ನಿಮಿಷದಲ್ಲಿ ತಲುಪುತ್ತೇವೆ. ದೆಹಲಿ ವಿಮಾನದಿಂದ ಜನರಿಗೆ ಅನಕೂಲ ಆಗಿದೆ. ಇದೇ ರೀತಿ ಬೆಳಗಾವಿ, ಹುಬ್ಬಳಿಯಿಂದ ದೇಶ ವಿದೇಶಕ್ಕೆ ವಿಮಾನ ಸೇವೆ ಸಿಗಲಿ. ಎಲ್ಲೂರು ಆರಾಮವಆಗಿ ಕುಳಿತುಕೊಳ್ಳಿ. 2 ಗಂಟೆ 10 ನಿಮಿಷದಲ್ಲಿ ದೆಹಲಿ ತಲಪುತ್ತೇವೆ ಎಂದು ಅಕ್ಷಯ್ ಹೇಳಿದರು.
ಇದನ್ನೂ ಓದಿ: ಬೆಳಗಾವಿ: ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಮಹಿಳೆ ಮೇಲಿನ ಗ್ಯಾಂಗ್ ರೇಪ್ ಬಾಯ್ಬಿಟ್ಟ ಆರೋಪಿಗಳು
ಕೆಲವು ತಿಂಗಳುಗಳ ಹಿಂದೆ ಬೆಳಗಾವಿ ಮತ್ತು ದೆಹಲಿ ನಡುವಣ ವಿಮಾನ ಕೂಡ ಸ್ಥಗಿತಗೊಂಡಿತ್ತು. ಇದರಿಂದ ರಾಷ್ಟ್ರ ರಾಜಧಾನಿಗೆ ತೆರಳುವ ಹೆಚ್ಚಿನ ಸಂಖ್ಯೆಯ ವಿಮಾನ ಪ್ರಯಾಣಿಕರು ತೊಂದರೆಗೆ ಒಳಗಾಗಿದ್ದರು. ದೀರ್ಘಾವಧಿಯ ನಂತರ ಅಕ್ಟೋಬರ್ 5 ರಿಂದ ಬೆಳಗಾವಿ ಮತ್ತು ದೆಹಲಿ ನಡುವಿನ ದೈನಂದಿನ ವಿಮಾನ ಸಂಚಾರ ಪ್ರಾರಂಭವಾಗಿದೆ.
ಮೂಲಗಳ ಪ್ರಕಾರ, ಬೆಳಗಾವಿ-ದೆಹಲಿ ವಿಮಾನ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಇಂಡಿಗೋ ಏರ್‌ಲೈನ್ಸ್ ಎರಡು ನಗರಗಳ ನಡುವೆ ವಿಮಾನ ಸೇವೆ ನೀಡಲಿದ್ದು, ದೆಹಲಿ-ಬೆಳಗಾವಿ ವಿಮಾನವು ದೆಹಲಿಯಿಂದ ಪ್ರತಿದಿನ ಮಧ್ಯಾಹ್ನ 3.45 ಕ್ಕೆ ಟೇಕ್ ಆಫ್ ಆಗಲಿದ್ದು, ಸಂಜೆ 6.05 ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿ-ದೆಹಲಿ ವಿಮಾನವು ಬೆಳಗಾವಿಯಿಂದ ಸಂಜೆ 6.35 ಕ್ಕೆ ಹೊರಟು ದೆಹಲಿಯನ್ನು ರಾತ್ರಿ 9 ಕ್ಕೆ ತಲುಪಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ