ಬೆಳಗಾವಿ: ಮನೆಗೆ ನುಗ್ಗಿದ ಕಳ್ಳರಿಂದ ತಪ್ಪಿಸಿಕೊಳ್ಳಲು ಹೋಗಿ ಮಹಿಳೆ ದುರಂತ ಸಾವು

ಬೆಳಗಾವಿ(Belagavi) ತಾಲೂಕಿನ ಶಿಂದೋಳ್ಳಿ ಗ್ರಾಮದಲ್ಲಿ ಮನೆಗೆ ಕನ್ನ ಹಾಕಲು ಕಳ್ಳರು ಬಂದರೂ ಎಂದು ತಪ್ಪಿಸಿಕೊಳ್ಳಲು ಹೋದ ಮಹಿಳೆ ಕೊಳ್ಳದಲ್ಲಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಮ್ಸ್ ಆಸ್ಪತ್ರೆಗೆ ಶವವನ್ನು ಶಿಪ್ಟ್ ಮಾಡಲಾಗಿದೆ.

ಬೆಳಗಾವಿ: ಮನೆಗೆ ನುಗ್ಗಿದ ಕಳ್ಳರಿಂದ ತಪ್ಪಿಸಿಕೊಳ್ಳಲು ಹೋಗಿ ಮಹಿಳೆ ದುರಂತ ಸಾವು
ಮೃತ ಮಹಿಳೆ ಭರಮಕ್ಕಾ ಪೂಜಾರಿ
Edited By: ಕಿರಣ್ ಹನುಮಂತ್​ ಮಾದಾರ್

Updated on: Sep 26, 2024 | 4:05 PM

ಬೆಳಗಾವಿ, ಸೆ.26: ಮನೆಗೆ ಕನ್ನ ಹಾಕಲು ಕಳ್ಳರು ಬಂದರೂ ಎಂದು ತಪ್ಪಿಸಿಕೊಳ್ಳಲು ಹೋದ ಮಹಿಳೆ ಕೊಳ್ಳದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾವಿ(Belagavi) ತಾಲೂಕಿನ ಶಿಂದೋಳ್ಳಿ ಗ್ರಾಮದಲ್ಲಿ ನಡೆದಿದೆ. ಭರಮಕ್ಕಾ ಪೂಜಾರಿ ಸಾವನ್ನಪ್ಪಿದ ಮಹಿಳೆ. ನಿನ್ನೆ(ಸೆ.25) ಮಧ್ಯರಾತ್ರಿ ಕಳ್ಳತನ ಮಾಡಲು ಮನೆಗೆ ಕಳ್ಳರ ಗ್ಯಾಂಗ್ ಎಂಟ್ರಿಯಾಗಿತ್ತು. ಇದನ್ನ ಗಮನಿಸಿದ ಮಹಿಳೆ, ಮನೆಯ ಹಿತ್ತಲ ಬಾಗಿಲಿನಿಂದ ಹೊರ ಬಂದಿದ್ದರು. ಗಾಬರಿಯಲ್ಲಿ ಓಡಿ ಬರುವಾಗ ಕೊಳ್ಳದಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಇದೀಗ ಮೃತದೇಹವನ್ನು ಸ್ಥಳೀಯ ನಿವಾಸಿಗಳು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಮ್ಸ್ ಆಸ್ಪತ್ರೆಗೆ ಶವವನ್ನು ಶಿಪ್ಟ್ ಮಾಡಲಾಗಿದೆ.

ಕಳ್ಳತನದ ಮೊಬೈಲ್ ಮಾರಾಟ ಮಾಡ್ತಿದ್ದ ಕಳ್ಳನ ಬಂಧನ

ಹುಬ್ಬಳ್ಳಿ: ಕಳ್ಳತನ ಮಾಡಿದ್ದ ಮೊಬೈಲ್​ಗಳನ್ನ​ ಮಾರುತ್ತಿದ್ದ ವ್ಯಕ್ತಿಯನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ಯಾಟ್ಸನ್ ಜಮಖಂಡಿ ಬಂಧಿತ ಯುವಕ. ಇನ್ಸ್​ಪೆಕ್ಟರ್​​ ಎಮ್.ಆರ್.ಚೆನ್ನಣ್ಣವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇತ ಕದ್ದ ಮೊಬೈಲ್​ಗಳನ್ನು ರಿಂಗ್ ರೋಡ್ ಬಳಿ ಇಟ್ಟುಕೊಂಡು ಲಾರಿಗಳ ಚಾಲಕರಿಗೆ ಮಾರಾಟ ಮಾಡುತ್ತಿದ್ದ. ಈ ವೇಳೆ ಆತನನ್ನು ಪೊಲಿಸರು ಹೆಡೆಮುರಿ ಕಟ್ಟಿದ್ದಾರೆ. ಆತನಿಂದ 50,000 ಮೌಲ್ಯದ ವಿವಿಧ ಕಂಪನಿ 10 ಆ್ಯಂಡ್ರಾಯ್ಡ್​​ ಫೋನ್​ಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ:ರೋಗಿ ಸೋಗಿನಲ್ಲಿ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಕಳ್ಳತನ: ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ರೋಗಿಗಳು

ಬಸ್ ನಿಲ್ದಾಣದಲ್ಲಿ ಹಣ ಕಳವು ಮಾಡಿದ್ದ ಆರೋಪಿ‌ ಬಂಧನ

ಶಿವಮೊಗ್ಗ: ಸಾಗರ ನಗರದ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಸ್ ನಿಲ್ದಾಣದಲ್ಲಿ ಹಣ ಕಳವು ಮಾಡಿದ್ದ ಆರೋಪಿ‌ಯನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಪರಶುರಾಮ ಬಂಧಿತ ಆರೋಪಿ. ಇತ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತ ನಿಂತಿದ್ದ ಪರಮೇಶ್ವರ್ ಎಂಬ ವ್ಯಕ್ತಿಯ ಬ್ಯಾಗಿನಲ್ಲಿದ್ದ 1 ಲಕ್ಷ ರೂ. ನಗದನ್ನು ಎಗರಿಸಿದ್ದ. ಈ ಬಗ್ಗೆ ಪರಮೇಶ್ವರ್ ಸಾಗರ ಪಟ್ಟಣ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇತನಿಂದ 1 ಲಕ್ಷ ರೂ. ನಗದು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us