ಗಡಿಯಲ್ಲಿ ಮತ್ತೆ ಕಿರಿಕ್ ಮಾಡಲು ಮುಂದಾದ ‌ನಾಡದ್ರೋಹಿ‌ MES: ಅನುಮತಿ ಇಲ್ಲದಿದ್ದರೂ ಕರಾಳದಿನ ಆಚರಣೆಗೆ ಸಿದ್ಧತೆ

ಬೆಳಗಾವಿ ಮರಾಠಾ ಮಂಡಲ ಕಾರ್ಯಾಲಯದಲ್ಲಿ ಎಂಇಎಸ್ ಕೆಲವು ಮುಖಂಡರು ಸಭೆ ನಡೆಸಿದರು. ನವೆಂಬರ್‌ 1ರಂದು ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೆ, ಕರಾಳ ದಿನಾಚರಣೆ ಮಾಡಿಯೇ ಸಿದ್ಧ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಗಡಿಯಲ್ಲಿ ಮತ್ತೆ ಕಿರಿಕ್ ಮಾಡಲು ಮುಂದಾದ ‌ನಾಡದ್ರೋಹಿ‌ MES: ಅನುಮತಿ ಇಲ್ಲದಿದ್ದರೂ ಕರಾಳದಿನ ಆಚರಣೆಗೆ ಸಿದ್ಧತೆ
ಎಂಇಎಸ್​ ಸಭೆ
Edited By: ಆಯೇಷಾ ಬಾನು

Updated on: Oct 15, 2024 | 9:26 AM

ಬೆಳಗಾವಿ, ಅ.15: ನವೆಂಬರ್ ತಿಂಗಳು ಬಂದ್ರೆ ಸಾಕು ನಾಡದ್ರೋಹಿ ಎಂಇಎಸ್​ (MES) ಪುಂಡರ ಅಟ್ಟಹಾಸ ಹೆಚ್ಚಾಗುತ್ತೆ. ಗಡಿಯಲ್ಲಿ ಮತ್ತೆ ಕಿರಿಕ್​ ಮಾಡಲು ಎಂಇಎಸ್ ಸಿದ್ಧತೆ ನಡೆಸುತ್ತಿದೆ. ಬೆಳಗಾವಿಯ (Belagavi) ಮರಾಠಾ ಮಂಡಲ ಕಾರ್ಯಾಲಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವು ಮುಖಂಡರು ಸಭೆ ನಡೆಸಿದರು. ಸಭೆಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ ದಿನ ಆಚರಣೆಗೆ ‌ನಿರ್ಧಾರ ಮಾಡಲಾಗಿದೆ.

ಸಭೆಯಲ್ಲಿ ಕರಾಳ ದಿನದ ಮೆರವಣಿಗೆ ನಡೆಸಲು ಎಂಇಎಸ್ ನಿರ್ಧಾರ ಮಾಡಿದೆ. ನವೆಂಬರ್‌ 1ರಂದು ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಆದರೆ, ಕರಾಳ ದಿನಾಚರಣೆ ಮಾಡಿಯೇ ಸಿದ್ಧ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಮೆರವಣಿಗೆ ಮಾಡಿದ್ರೆ ಕ್ರಮ ಕೈಗೊಳ್ಳುವುದಾಗಿ ಡಿಸಿ ರೋಷನ್ ಎಚ್ಚರಿಕೆ ನೀಡಿದ್ದಾರೆ. ಡಿಸಿ ಹೇಳಿಕೆ ಬೆನ್ನಲ್ಲೇ ಸಭೆ ಮಾಡಿ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದಾರೆ. ನ.1ರಂದು ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ‌ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು ಮತ್ತೊಂದೆಡೆ ‌ಬೆಳಗಾವಿಯಲ್ಲಿ ಕರಾಳ ದಿನ ಆಚರಣೆಗೆ MES ನಿರ್ಧಾರ ಮಾಡಿದೆ. ಮಹಾರಾಷ್ಟ್ರ ನಾಯಕರ ಆಹ್ವಾನಿಸಿ ಶಾಂತಿಗೆ ಭಂಗ ತರಲು‌ MES ಯತ್ನ ಮಾಡುತ್ತಿದೆ. ಮಹಾರಾಷ್ಟ್ರ ವಿಧಾನಸಭೆ ‌ಚುನಾವಣೆ ಘೋಷಣೆಗೆ ದಿನಗಣನೆ ಹಿನ್ನೆಲೆ MES ಮುಖಂಡರ ಆಹ್ವಾನಕ್ಕೆ ಮಹಾರಾಷ್ಟ್ರ ನಾಯಕರು ಕಾಯ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಲಾಭ ಪಡೆಯಲು ಮಹಾ ನಾಯಕರು ಹುನ್ನಾರ ಮಾಡ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ

ಎಂಇಎಸ್‌ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖಂಡರು ಒಕ್ಕೊರಲಿನಿಂದ ಅವಕಾಶಕ್ಕೆ ಒತ್ತಾಯಿಸಿದರು. ಒಕ್ಕೂಟ ವ್ಯವಸ್ಥೆಗೆ ಕರ್ನಾಟಕ ಸರ್ಕಾರ ಬೆಲೆ ಕೊಡುತ್ತಿಲ್ಲ. ಗಡಿಯಲ್ಲಿ ಮರಾಠಿಗರ ಮೇಲೆ ದೌರ್ಜನ್ಯ ಮುಂದುವರಿಸಿದೆ. ಗಡಿ ವಿಷಯ ಸುಪ್ರೀಂಕೋರ್ಟ್‌ನಲ್ಲಿ ಇರುವಾಗ ಗಡಿ ಭಾಗದ ಎರಡೂ ಕಡೆಯ ಜನರಿಗೆ ಸಮಾನ ಹಕ್ಕು, ಅವಕಾಶಗಳು ಇರುತ್ತವೆ. ಈ ದೃಷ್ಟಿಯಿಲ್ಲಿ ಕರಾಳ ದಿನಾಚರಣೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us