ಬೆಳಗಾವಿ, ಸೆ.5: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಜೊತೆ ಕೋಲ್ಡ್‌ವಾರ್ ಇರುವುದು ನಿಜ ಎಂದು ಈ ಹಿಂದೆ ಸ್ವತಃ ಸತೀಶ್ ಜಾರಕಿಹೊಳಿ (Satish Jarkiholi) ಅವರೇ ಒಪ್ಪಿಕೊಂಡಿದ್ದರು. ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕೇಳಿದಾಗ “ಈ ಕೋಲ್ಡ್ ವಾರ್, ಹಾಟ್ ವಾರ್ ನನಗೇನೂ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ, ನಮ್ಮ ನಡುವೆ ಯಾವುದೇ ವಾರ್ ಇಲ್ಲ” ಎಂದು ಹೇಳಿದ್ದಾರೆ.
ಈ ಚರ್ಚೆ ನೋಡಿ ನನಗೆ ವಿಚಿತ್ರ ಅನಿಸುತ್ತಿದೆ, ಕೋಲ್ಡ್ ವಾರ್, ಹಾಟ್ ವಾರ್ ಅಂದರೇನು? ಈ ಕೋಲ್ಡ್ ವಾರ ಬಗ್ಗೆ ನನಗೆ ತಿಳಿಯುತ್ತಿಲ್ಲ, ನನಗೆ ಮೊದಲು ಬಿಡಿಸಿ ಹೇಳಿ. ನಾನು ಉಡುಪಿ ಜಿಲ್ಲಾ ಉಸ್ತುವಾರಿ, ರಾಜ್ಯದ ಸಚಿವೆ. ನನ್ನ ಮೇಲೆ ದೊಡ್ಡ ಜವಾದ್ಬಾರಿ ಇದೆ, 36 ಸಾವಿರ ಕೋಟಿ ಹಣ ಮಹಿಳೆಯರಿಗೆ ಕೊಡಬೇಕು. ಬಹಳಷ್ಟು ಅಳೆದು ತೂಗಿ ನಾನು ಸಚಿವೆ ಆಗಿ ಹೆಜ್ಜೆ ಇಡುತ್ತಿದ್ದೇನೆ. ಅಲ್ಲದೆ ಉಡುಪಿ ಜಿಲ್ಲೆ ಕೂಡ ರಾಜ್ಯದಲ್ಲಿ ಸದಾ ಹಾಟ್ ಇರುವ ಜಿಲ್ಲೆ. ಬಿಟ್ಟು ಬಿಡದೇ ಕೆಲಸದಿಂದ ನನಗೆ ಇಲ್ಲೇ ಪುರುಸೊತ್ತು ಸಿಗುತ್ತಿಲ್ಲ. ಈ ಕೋಲ್ಡ್ ವಾರ್ ಹಾಟ್ ವಾರ್ ನನಗೇನೂ ಗೊತ್ತಿಲ್ಲ. ಬೇಕಾದರೆ ನೀವು ಸತೀಶ್ ಜಾರಕಿಹೊಳಿ ಅವರನ್ನು ಒಮ್ಮೆ ಕೇಳಿ ಎಂದರು.
ಇದನ್ನೂ ಓದಿ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮಧ್ಯಭಾಗದಲ್ಲೇ ಹೊರಟು ನಿಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಹೊರಡಿ ಎಂದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ, ನಮ್ಮ ನಡುವೆ ಯಾವುದೇ ವಾರ್ ಇಲ್ಲ. ನಮ್ಮದು ಬಿಜೆಪಿ ವಿರುದ್ಧದ ಹೋರಾಟ ಎಂದು ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ 11 ಸ್ಥಾನ ಗೆಲ್ಲಲು ನಮ್ಮ ಒಗ್ಗಟ್ಟು ಕಾರಣ. ಸತೀಶ್ ಅಣ್ಣ ಕೂಡ ಕೋಲ್ಡ್ ವಾರ್ ಬಗ್ಗೆ ಹೇಳಿಲ್ಲ, ನಾನೂ ಕೇಳಿಲ್ಲ. ನನ್ನ, ಸತೀಶ್ ಮಧ್ಯೆ ಲೋಕಸಭಾ ಚುನಾವಣೆ ಗೆಲುವು ಗುರಿ ಇದೆ. ನನ್ನ ಹಾಗೂ ಸತೀಶ್ ಅಣ್ಣ ಮಧ್ಯೆ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಇಲ್ಲ. ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಆಗುತ್ತದೆ ಎಂದರು.
ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಬೆಳಗಾವಿಯ ಇತರೆ ನಾಯಕರು ಮುನಿಸಿಕೊಂಡಿರುವಂತೆಯೇ, ಕಾಂಗ್ರೆಸ್ನಲ್ಲೂ ಸತೀಶ್ ಜಾರಕಿಹೊಳಿ ವಿರುದ್ಧ ಇತರೆ ನಾಯಕರ ಮುನಿಸಿಕೊಂಡಿದ್ದಾರೆ. ಸತೀಶ್ ಅವರು ಹೆಬ್ಬಾಳ್ಕರ್ ಮತ್ತು ಲಕ್ಷ್ಮಣ ಸವದಿ ಜೊತೆ ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. ಈ ಪೈಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಕೋಲ್ಡ್‌ವಾರ್ ಇರುವುದು ನಿಜ ಎಂದು ಸ್ವತಃ ಸತೀಶ್ ಜಾರಕಿಹೊಳಿ ಅವರೇ ಹೇಳಿಕೆ ನೀಡಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ