ಬೈಕ್​ನಲ್ಲಿ ಹೋಗುತ್ತಾ ಮಹಿಳೆಯರ ಮೈ ಮುಟ್ಟುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಅರೆಸ್ಟ್

| Updated By: sandhya thejappa

Updated on: Jun 05, 2021 | 8:43 AM

ರಾತ್ರಿ ವೇಳೆ ಬೈಕ್​ನಲ್ಲಿ ಓಡಾಡಿ ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ. ಮೇ 31ರ ರಾತ್ರಿ ಕೋರಮಂಗಲ 4ನೇ ಹಂತದಲ್ಲಿ ಡೆಲಿವರಿಗೆ ಹೋಗಿದ್ದಾಗ ಅಸಭ್ಯವಾಗಿ ವರ್ತನೆ ತೋರಿದ್ದ. ಉತ್ತರ ಭಾರತ ಮೂಲದ ಯುವತಿಯ ಹಿಂಭಾಗ ಸ್ಪರ್ಶಿಸಿ ಪರಾರಿಯಾಗಿದ್ದ.

ಬೈಕ್​ನಲ್ಲಿ ಹೋಗುತ್ತಾ ಮಹಿಳೆಯರ ಮೈ ಮುಟ್ಟುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಅರೆಸ್ಟ್
ಬಂಧಿತ ಆರೋಪಿ ಸೈಕೋ ಅರುಣ್ ಕುಮಾರ್
Follow us on

ಬೆಂಗಳೂರು: ಬೈಕ್​ನಲ್ಲಿ ಹೋಗುವಾಗ ಮಹಿಳೆಯರ ಮೈ ಮುಟ್ಟುತ್ತಿದ್ದ ಸೈಕೋ ಅರುಣ್ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೆಜಿಎಫ್​ನ ರಾಬರ್ಟ್ಸನ್ ಪೇಟೆಯ ಅರುಣ್ ಕುಮಾರ್ ಮೇ 31ರಂದು ಯುವತಿ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಕಂಟ್ರೋಲ್ ರೂಂಗೆ ಕರೆ ಮಾಡಿ ಯುವತಿ ದೂರು ನೀಡಿದ್ದಳು. ಸದ್ಯ ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದು, ತನ್ನ ತಪ್ಪನ್ನು ಅರುಣ್ಕುಮಾರ್ ಒಪ್ಪಿಕೊಂಡಿದ್ದಾನೆ.

ರಾತ್ರಿ ವೇಳೆ ಬೈಕ್​ನಲ್ಲಿ ಓಡಾಡಿ ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ. ಮೇ 31ರ ರಾತ್ರಿ ಕೋರಮಂಗಲ 4ನೇ ಹಂತದಲ್ಲಿ ಡೆಲಿವರಿಗೆ ಹೋಗಿದ್ದಾಗ ಅಸಭ್ಯವಾಗಿ ವರ್ತನೆ ತೋರಿದ್ದ. ಉತ್ತರ ಭಾರತ ಮೂಲದ ಯುವತಿಯ ಹಿಂಭಾಗ ಸ್ಪರ್ಶಿಸಿ ಪರಾರಿಯಾಗಿದ್ದ. ಯುವತಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿ ದೂರು ನೀಡಿದ್ದಳು. ಈ ಪ್ರಕರಣವನ್ನು ಕೋರಮಂಗಲ ಪೊಲೀಸರಿಗೆ ಹಸ್ತಾಂತರವಾಗಿತ್ತು. 40ಕ್ಕೂ ಅಧಿಕ ಸಿಸಿಟಿವಿ ಹಾಗೂ 80 ಬೈಕ್​ಗಳ ತಪಾಸಣೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

ಕಳೆದ 3 ತಿಂಗಳಿನಿಂದ ಮೇಸ್ತರಿ ಪಾಳ್ಯದಲ್ಲಿ ವಾಸವಿದ್ದ ಆರೋಪಿ ಅರುಣ್ ಕುಮಾರ್, ಸಹೋದರನ ಜೊತೆ ಡಂಜೋ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ. ಸಹೋದರರಿಬ್ಬರು ಒಂದೇ ಐಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದೊಂದು ತಿಂಗಳ ಅವಧಿಯಲ್ಲಿ ಮೂರ್ನಾಲ್ಕು ಕಡೆ ಇದೇ ರೀತಿ ಕೃತ್ಯ ಎಸಗಿದ್ದಾಗಿ ಆರೋಪಿ ಬಾಯಿ ಬಿಟ್ಟಿದ್ದಾನೆ.

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಕ್ಕೆ
ಶಿವಮೊಗ್ಗ: ಹೊಸನಗರ ತಾಲೂಕಿನ ಸಂಪೆಕಟ್ಟೆಯ ಫೂಟ್​ವೇರ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸುಮಾರು 12 ಸಾವಿರ ಮೌಲ್ಯದ 27.9 ಲೀಟರ್ ಮದ್ಯವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದ ರಾಮಚಂದ್ರ ಪರಾರಿಯಾಗಿದ್ದಾನೆ.

ಇದನ್ನೂ ಓದಿ

ಗಂಭೀರಾವಸ್ಥೆಗೆ ತಲುಪಿದ ಕೊರೊನಾ ಸೋಂಕಿತರ ಜೀವ ಉಳಿಸಿದ 2ಡಿಜಿ ಔಷಧ; ಬೆಂಗಳೂರಿನಲ್ಲಿ ಮೂರಕ್ಕೆ ಮೂರು ಪ್ರಯೋಗವೂ ಯಶಸ್ವಿ

ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಅಗತ್ಯವಿರುವಷ್ಟು ಔಷಧ ಪೂರೈಕೆ ಆಗದಿದ್ದರೆ ಸಾವಿನ ಪ್ರಮಾಣ ಹೆಚ್ಚಳವಾಗಲಿದೆ: ಕಳವಳ ವ್ಯಕ್ತಪಡಿಸಿದ ವೈದ್ಯರು

(Police have arrested a man who was charged with disorderly conduct with women)