ಖಾಲಿ ಜಮೀನಿನಲ್ಲಿ ಕಾಣಿಸಿಕೊಂಡ ಅಗ್ನಿ, ಆವಲಹಳ್ಳಿ ಪೊಲೀಸ್​ ಠಾಣೆ ಕೊಠಡಿಗೆ ಆವರಿಸಿದ ಬೆಂಕಿಯ ಕೆನ್ನಾಲಿಗೆ

|

Updated on: Apr 13, 2023 | 3:00 PM

ತಾಲೂಕಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಠಾಣೆಯ ಆವರಣದಲ್ಲಿದ್ದ ಹಲವು ವಾಹನ ಬೆಂಕಿಗಾಹುತಿಯಾದ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬಂದಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಖಾಲಿ ಜಮೀನಿನಲ್ಲಿ ಕಾಣಿಸಿಕೊಂಡ ಅಗ್ನಿ, ಆವಲಹಳ್ಳಿ ಪೊಲೀಸ್​ ಠಾಣೆ ಕೊಠಡಿಗೆ ಆವರಿಸಿದ ಬೆಂಕಿಯ ಕೆನ್ನಾಲಿಗೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು : ತಾಲೂಕಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಗ್ನಿ ಅವಘಡ(Fire Accident) ಸಂಭವಿಸಿದೆ. ಠಾಣೆ ಹಿಂಭಾಗದಲ್ಲಿದ್ದ ಖಾಲಿ ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿ ಬಳಿಕ ಜಮೀನಿನಿಂದ ಆವಲಹಳ್ಳಿ ಠಾಣೆಯ ಕಚೇರಿಗೂ ಹಬ್ಬಿದ್ದು, ಠಾಣೆಯ ಆವರಣದಲ್ಲಿದ್ದ ಹಲವು ವಾಹನ ಬೆಂಕಿಗಾಹುತಿಯಾದ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬಂದಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಕಾರ್ಖಾನೆಯಲ್ಲಿ ಬೆಂಕಿ; ಪ್ರಾಣಾಪಾಯದಿಂದ ಪಾರು

ಬೆಂಗಳೂರು ದಕ್ಷಿಣ: ತಾಲೂಕಿನ ಕುಂಬಳಗೂಡು ಕೆಮಿ‌ ಟ್ರೆಡ್ ಕಾರ್ಪೋರೇಷನ್ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಕುಂಬಳಗೂಡು ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಅದೃಷ್ಟವಶಾತ್​ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಪ್ರಾಣಾಪಾಯದಿಂದ ಪಾರಾಗಿದ್ದು, ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಕುಂಬಳಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:Bengaluru Karaga Mahotsava: ಬೆಂಗಳೂರಿನ ಐತಿಹಾತಿಕ ಕರಗ ಮಹೋತ್ಸವದ ವೇಳೆ ಅಗ್ನಿ ಅವಘಡ, ಬೈಕ್​ಗಳು ಭಸ್ಮ

ವಾಸವಿದ್ದ ಗುಡಿಸಲಿಗೆ ಆಕಸ್ಮಿಕ ಬೆಂಕಿ ಸಂಪೂರ್ಣ ನಾಶ; ಸ್ಥಳಕ್ಕೆ ಶಾಸಕ ಡಾ ರಾಜೇಶ್ ಗೌಡ ಭೇಟಿ

ತುಮಕೂರು: ವಾಸವಿದ್ದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟಹೋದ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಮಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚಿಕ್ಕಣ್ಣರಿಗೆ ಸೇರಿದ ಗುಡಿಸಲು ಮನೆ ಇದಾಗಿದ್ದು, ಅಲ್ಲಿಯೇ ವಾಸಿಸುತ್ತಿದ್ದರು. ಇನ್ನು ಈ ಸುದ್ದಿ ತಿಳಿದ ಶಾಸಕ ಡಾ ರಾಜೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಚಿಕ್ಕಣ್ಣರಿಗೆ ಧೈರ್ಯ ತುಂಬಿದ್ದು, ಪರಿಹಾರಕ್ಕಾಗಿ ಮನೆಯವರು ಒತ್ತಾಯ ಮಾಡಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: ಚಾಲಕನಿಗೆ ಗಂಭೀರ ಗಾಯ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಗೇನಹಳ್ಳಿಯಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂತೆಬೆನ್ನೂರು ಕಡೆಯಿಂದ ದಾವಣಗೆರೆಗೆ ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ವಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬನ್ನೇರುಘಟ್ಟ ಬೋಟಿಂಗ್ ಪ್ರದೇಶಕ್ಕೆ ನುಗ್ಗಿದ ಮೊಸಳೆ

ಬೆಂಗಳೂರು ನಗರ: ಜಿಲ್ಲೆಯ ಅನೇಕಲ್ ತಾಲೂಕಿನ ಬನ್ನೇರುಘಟ್ಟ ಬೋಟಿಂಗ್ ಪ್ರದೇಶಕ್ಕೆ ಮೊಸಳೆ ನುಗ್ಗಿದೆ. ಮೊಸಳೆ ಕಂಡು ಬನ್ನೇರುಘಟ್ಟ ಅಧಿಕಾರಿಗಳು ಶಾಕ್ ಆಗಿದ್ದು, ಮೊಸಳೆ ಹಿಡಿಯಲು ಬಿಬಿಪಿ ಅಧಿಕಾರಿಗಳು ಅರಣ್ಯ ಇಲಾಖೆ ಸಿಬ್ಬಂದಿ ಮೊರೆ ಹೋಗಿದ್ದಾರೆ. ಕೆಲ‌‌ ದಿನಗಳಿಂದ ಕೆರೆಯಲ್ಲಿ ಬೋಟಿಂಗ್ ನಿಲ್ಲಿಸಲಾಗಿತ್ತು. ಇಂದು(ಏ.13) ಬೆಳಗಿನ ಜಾವ ಬೋಟಿಂಗ್ ಏರಿಯಾದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಮೊಸಳೆ ಹಿಡಿದು ಬೇರೆ ಕಡೆ ಬಿಡುವವರೆಗೂ ಸಧ್ಯಕ್ಕೆ ಬೋಟಿಂಗ್ ಏರಿಯಾವನ್ನ ಕ್ಲೋಸ್ ಮಾಡಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Thu, 13 April 23