ಡ್ರಾಪ್ ಕೊಡುವ ನೆಪದಲ್ಲಿ ದರೋಡೆಗೈಯುತ್ತಿದ್ದ ಆರೋಪಿಗಳು ಅಂದರ್

ನೆಲಮಂಗಲ: ಡ್ರಾಪ್ ಕೊಡುವ ನೆಪದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಗೈಯುತ್ತಿದ್ದ ನಾಲ್ವರು ದರೋಡೆಕೋರರನ್ನು ನೆಲಮಂಗಲ ನಗರ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರಾಹುತನಹಳ್ಳಿ ಚೇತನ್(38), ಮಾಕಳಿ ಸುರೇಂದ್ರ ಬಾಬು(30), ಶಿವನಪುರ ನಸ್ರುಲ್ಲಾ(43), ಕೃಷ್ಣ ಸಿಂಗ್(35) ಬಂಧಿತರು. ಬಂಧಿತ ದರೋಡೆಕೋರರಿಂದ ಒಂದು ಕಾರು, 30ಸಾವಿರ ನಗದು, ಲ್ಯಾಪ್‌ಟಾಪ್, ವಿವಿಧ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್​ಗಳು, ಡೆಬಿಟ್ ಕಾರ್ಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾರದ ಹಿಂದೆ ನೆಲಮಂಗಲ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ PDO ಹರೀಶ್ ಅವರಿಗೆ ಡ್ರಾಪ್ ಕೊಡುವ […]

ಡ್ರಾಪ್ ಕೊಡುವ ನೆಪದಲ್ಲಿ ದರೋಡೆಗೈಯುತ್ತಿದ್ದ ಆರೋಪಿಗಳು ಅಂದರ್
Edited By:

Updated on: Jun 20, 2020 | 5:13 PM

ನೆಲಮಂಗಲ: ಡ್ರಾಪ್ ಕೊಡುವ ನೆಪದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಗೈಯುತ್ತಿದ್ದ ನಾಲ್ವರು ದರೋಡೆಕೋರರನ್ನು ನೆಲಮಂಗಲ ನಗರ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ರಾಹುತನಹಳ್ಳಿ ಚೇತನ್(38), ಮಾಕಳಿ ಸುರೇಂದ್ರ ಬಾಬು(30), ಶಿವನಪುರ ನಸ್ರುಲ್ಲಾ(43), ಕೃಷ್ಣ ಸಿಂಗ್(35) ಬಂಧಿತರು.

ಬಂಧಿತ ದರೋಡೆಕೋರರಿಂದ ಒಂದು ಕಾರು, 30ಸಾವಿರ ನಗದು, ಲ್ಯಾಪ್‌ಟಾಪ್, ವಿವಿಧ ಬ್ಯಾಂಕ್ ಖಾತೆಯ ಎಟಿಎಂ ಕಾರ್ಡ್​ಗಳು, ಡೆಬಿಟ್ ಕಾರ್ಡ್ ಸೇರಿದಂತೆ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾರದ ಹಿಂದೆ ನೆಲಮಂಗಲ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ PDO ಹರೀಶ್ ಅವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಹತ್ತಿಸಿಕೊಂಡು ದರೋಡೆಗೈದಿದ್ದರು. ಪ್ರಕರಣ ಸಂಬಂಧ ಆರೋಪಿಗಳನ್ನ ‌ಬಂಧಿಸಲು ಹೆಚ್ಚುವರಿ ಎಸ್​ಪಿ ಸಜೀತ್ ತಂಡ ರಚಿಸಿದ್ರು. ಇದೀಗ ನೆಲಮಂಗಲ CPIಶಿವಣ್ಣ ನೇತೃತ್ವದಲ್ಲಿ ಅರೋಪಿಗಳನ್ನು ಬಂಧಿಸಲಾಗಿದೆ.