ದೇವನಹಳ್ಳಿ: ಆಸ್ತಿ ವಿಚಾರಕ್ಕೆ ಜಗಳ, ದಾಯಾದಿಗಳಿಂದ ಏಕಾಏಕಿ ಮನೆ ಧ್ವಂಸ; ಕುಟುಂಬ ಬೀದಿ ಪಾಲು

|

Updated on: Mar 14, 2023 | 2:48 PM

ಜಮೀನು ವಿವಾದ ಸಂಬಂಧ ಆಂಜಿನಪ್ಪ ಮತ್ತು ವೆಂಕಟೇಶ್ ಎಂಬುವವರ​ ನಡುವೆ ಜಗಳ ನಡೆದಿದ್ದು ಜೆಸಿಬಿ ತಂದು ಮನೆಯನ್ನು ಧ್ವಂಸ ಮಾಡಿದ ವೆಂಕಟೇಶ್ ದರ್ಪ ಮೆರೆದಿದ್ದಾರೆ.

ದೇವನಹಳ್ಳಿ: ಆಸ್ತಿ ವಿಚಾರಕ್ಕೆ ಜಗಳ, ದಾಯಾದಿಗಳಿಂದ ಏಕಾಏಕಿ ಮನೆ ಧ್ವಂಸ; ಕುಟುಂಬ ಬೀದಿ ಪಾಲು
ಕುಟುಂಬ ಬೀದಿ ಪಾಲು
Follow us on

ದೇವನಹಳ್ಳಿ: ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಜಗಳವಾಗಿದ್ದು ಏಕಾಏಕಿ ಮನೆ ಧ್ವಂಸ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚಿಕ್ಕಂಡಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ. ಜೆಸಿಬಿಯಿಂದ ಮನೆ ಧ್ವಂಸ ಮಾಡಿ ದರ್ಪ ಮೆರೆಯಲಾಗಿದ್ದು ಕುಟುಂಬ ಬೀದಿಗೆ ಬಿದ್ದಿದೆ.

ಜಮೀನು ವಿವಾದ ಸಂಬಂಧ ಆಂಜಿನಪ್ಪ ಮತ್ತು ವೆಂಕಟೇಶ್ ಎಂಬುವವರ​ ನಡುವೆ ಜಗಳ ನಡೆದಿದೆ. ಇದೇ ವಿಚಾರವಾಗಿ ಎರಡೂ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಗ ಪೊಲೀಸರು ಕೇಸ್ ಇತ್ಯಾರ್ಥ ಮಾಡಿ ಕಳಿಸಿದ್ದಾರೆ. ಮನೆ ಖಾಲಿ ಮಾಡಲು ಆಂಜಿನಪ್ಪ ಕುಟುಂಬಸ್ಥರು ಸಮಯ ಕೇಳಿದ್ದರು. ಆದ್ರೆ ಅಷ್ಟರಲ್ಲೇ ಜೆಸಿಬಿ ತಂದು ಮನೆಯನ್ನು ಧ್ವಂಸ ಮಾಡಿದ ವೆಂಕಟೇಶ್ ದರ್ಪ ಮೆರೆದಿದ್ದಾರೆ. ಗುಂಪು ಕಟ್ಟಿಕೊಂಡು ಬಂದು ಮನೆ ಕೆಡವಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಮನೆಯಿಲ್ಲದೆ ಬೀದಿಯಲ್ಲಿ ಸಾಮಾನುಗಳ‌ನ್ನ ಹಾಕ್ಕೊಂಡು ಆಂಜಿನಪ್ಪ ಕುಟುಂಬ ಕಣ್ಣೀರು ಹಾಕುತ್ತಿದೆ. ನಂದಗುಡಿ ಪೊಲೀಸರು ನಮಗೆ ನ್ಯಾಯಕೊಡಿಸಲಿಲ್ಲವೆಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಬಾಗಲಕೋಟೆ: ಅಕ್ಕನ ಮನೆಗೆ ನುಗ್ಗಿ ಬಾಮೈದನ ಅಟ್ಟಹಾಸ; ಕಲ್ಲಿನಿಂದಲೇ ಜಜ್ಜಿ ಇಬ್ಬರ ಕೊಲೆ

ಬಾಗಲಕೋಟೆ: ರಕ್ತ ನೀರಿನಂತೆ ಹರಿದಿದೆ. ಮನೆ ಮುಂದೆಯೇ ನೆತ್ತರ ಓಕುಳಿಯಾಗಿದೆ. ಅಲ್ಲಿನ ಘನಘೋರ ಕಂಡು ಊರವರೆಲ್ಲಾ ಬೆದರಿ ನಿಂತಿದ್ದರು. ಸ್ಪಾಟ್‌ಗೆ ಬಂದಿದ್ದ ಪೊಲೀಸರು ಸಂಜೆ ಹೊತ್ತಲ್ಲೇ ಬೆವತು ಹೋಗಿದ್ರು. ಹೌದು ಮನೆಗೆ ಬರಬೇಡ ಎಂದ ಬಾವನ ಸಹೋದರಿಯರನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬನಹಟ್ಟಿ ನಗರದ ಶನಿವಾರಪೇಟೆಯಲ್ಲಿ ನಿನ್ನೆ(ಮಾ.13) ನಡೆದಿದೆ. ಕಾಡಪ್ಪ ಭುಜಂಗ ಎಂಬುವವನೇ ಕೊಲೆ ಮಾಡಿರುವ ಆರೋಪಿ, ಬೋರವ್ವ ಮಿರ್ಜಿ (40), ಯಲ್ಲವ್ವ ಪೂಜಾರ (48) ಮೃತರು. ಬಾಮೈದನ ಅಟ್ಟಹಾಸಕ್ಕೆ ಮಹಿಳೆಯರಿಬ್ಬರು ಹೆಣವಾಗಿದ್ದಾರೆ. ಹೌದು ಬೆಳಗಿನಿಂದ ಸಂಜೆವರೆಗೂ ರಣರಣ ಬಿಸಿಲು, ಸಂಜೆಯಾಗುತ್ತಿದ್ದಂತೆ ಸ್ವಲ್ಪ ತಣ್ಣನೆ ಗಾಳಿ ಬೀಸಿತ್ತು. ಹೀಗೆ ತಂಪಿನ ವಾತಾವರಣದಲ್ಲಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಶಾಂತವಾಗಿತ್ತು. ಆದರೆ ಅದೇ ಹೊತ್ತಲ್ಲೇ ನುಗ್ಗಿದ್ದ ಹಂತಕ ರಕ್ತದ ಕೋಡಿ ಹರಿಸಿದ್ದಾನೆ.

ಅಂದಹಾಗೆ ಬನಹಟ್ಟಿಯ ಲಕ್ಷ್ಮೀನಗರ ನಿವಾಸಿ ಕಾಡಪ್ಪ ಭುಜಂಗ ಎಂಬಾತ ತನ್ನ ಸಹೋದರಿ ಬಂದವ್ವಳನ್ನ ಇದೇ ಊರಿನ ಶನಿವಾರ ಪೇಟೆಯಲ್ಲಿ ವಾಸವಾಗಿರುವ ಮಿರ್ಜಿ ಫ್ಯಾಮಿಲಿಗೆ ಕೊಟ್ಟು ಮದುವೆ ಮಾಡಿದ್ದ. ಇನ್ನು ಕಾಡಪ್ಪನ ಸಹೋದರಿಯ ಗಂಡ ಸಾವಿನ ಮನೆ ಸೇರಿದ್ದ. ವಿಷ್ಯ ಅಂದರೆ ಕಾಡಪ್ಪನ ಭಾವ ಸಾವಿನ ಮನೆ ಸೇರುತ್ತಿದ್ದಂತೆ ಆಸ್ತಿ ಕಲಹ ಶುರುವಾಗಿತ್ತು. ಎಲ್ಲಾ ಆಸ್ತಿ ನನಗೇ ಸೇರಬೇಕು ಎಂದು ಬಂದವ್ವ ಅಂದುಕೊಂಡಿದ್ರೆ, ಆಕೆಯ ಗಂಡನ ಸಹೋದರಿಯರು ಇದಕ್ಕೆ ಅಡ್ಡಿಯಾಗಿದ್ರು. ಒಂದು ವರ್ಷದಿಂದಲೂ ಹೀಗೆ ಜಗಳ ನಡೆದಿತ್ತು. ಆದರೆ ನಿನ್ನೆ ಸಂಜೆ ಮಾತ್ರ ತನ್ನ ಸಹೋದರಿಯ ಮನೆಗೆ ಬಂದಿದ್ದ ಕಾಡಪ್ಪ ಮತ್ತೆ ಆಸ್ತಿ ಜಗಳ ತೆಗೆದಿದ್ದ. ಈ ವೇಳೆ ಮನೆಯಲ್ಲಿದ್ದ ಬೋರವ್ವ ಹಾಗೂ ಯಲ್ಲವ್ವ, ನಮ್ಮ ಮನೆಗೆ ನೀನು ಬರಬೇಡ ಅಂದಿದ್ದಾರೆ ಅಷ್ಟೇ. ಅಷ್ಟಕ್ಕೆ ಕಾಡಪ್ಪ ಇಬ್ಬರನ್ನು ಕಲ್ಲಿನಿಂದಲೇ ಜಜ್ಜಿ ಕೊಲೆ ಮಾಡಿದ್ದ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:48 pm, Tue, 14 March 23