Bengaluru Police: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.96.1ರಷ್ಟು ಪೊಲೀಸರಿಗೆ ಲಸಿಕೆ ವಿತರಣೆ

|

Updated on: May 31, 2021 | 8:52 PM

Covid Vaccination: ಕೊವಿಡ್ ಎರಡನೇ ಅಲೆಯಲ್ಲಿ ಬೆಂಗಳೂರಿನ 1663 ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 16 ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 1,319 ಪೊಲೀಸರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

Bengaluru Police: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ.96.1ರಷ್ಟು ಪೊಲೀಸರಿಗೆ ಲಸಿಕೆ ವಿತರಣೆ
ಪೊಲೀಸ್ ಸಿಬ್ಬಂದಿ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ ವಿರುದ್ಧದ ಹೋರಾಟ ಬಿರುಸಿನಿಂದ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇಕಡಾ 96.1ರಷ್ಟು ಪೋಲೀಸರು ಈಗಾಗಲೇ ಕೊವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿರುವ ಒಟ್ಟು 21,130 ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದು, ಈವರೆಗೂ 18,297 ಪೊಲೀಸರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈವರೆಗೆ 15,093 ಪೊಲೀಸರು ಎರಡನೇ ಡೋಸ್ ಕೊವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

ಕೊವಿಡ್ ಎರಡನೇ ಅಲೆಯಲ್ಲಿ ಬೆಂಗಳೂರಿನ 1663 ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 16 ಪೊಲೀಸ್ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 1,319 ಪೊಲೀಸರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಸದ್ಯ 328 ಪೊಲೀಸರಿಗೆ ಕೊವಿಡ್ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸಮಸ್ಯೆ, ದೀರ್ಘ ರಜೆ ಇರುವ ಕಾರಣಗಳಿಂದ ಬೆಂಗಳೂರಿನ 624 ಪೊಲೀಸ್ ಸಿಬ್ಬಂದಿ ವ್ಯಾಕ್ಸಿನ್ ಪಡೆದಿಲ್ಲ.

ಮೇ 30ರವರೆಗೆ ಜಪ್ತಿ ಮಾಡಲಾದ ವಾಹನಗಳೆಷ್ಟು ಗೊತ್ತೆ ನಿಮಗೆ?
ಲಾಕ್​ಡೌನ್​​ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರನ್ನು ತಡೆದು, ನಗರದಲ್ಲಿ ಪೊಲೀಸರು ಮೇ 30ರವರೆಗೆ  36 ಸಾವಿರಕ್ಕೂ ಹೆಚ್ಚು ವಾಹನ ಜಪ್ತಿ ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ₹ 17 ಕೋಟಿಗೂ ಹೆಚ್ಚು ಮೊತ್ತದ ದಂಡ ವಸೂಲಿಯಾಗಿದೆ. ಮಾಸ್ಕ್​ ಧರಿಸದವರಿಂದ ಈವರೆಗೆ ಒಟ್ಟು ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.

ನಗರದಲ್ಲಿ ಈವರೆಗೆ ಒಟ್ಟು 35,905 ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಅದರಲ್ಲಿ 32 ಸಾವಿರ ದ್ವಿಚಕ್ರ ವಾಹನಗಳು, 1678 ಆಟೊಗಳು, 2024 ಕಾರುಗಳು ಸೇರಿವೆ. ಈ ವಾಹನಗಳನ್ನು ಮಾಲೀಕರು ವಾಪಸ್ ಪಡೆಯಲು ಮಾಲೀಕರು ದಂಡ ಕಟ್ಟಬೇಕಿದೆ. ಮಾಸ್ಕ್​ ಧರಿಸದವರಿಗೆ ಮತ್ತು ಸಾಮಾಜಿಕ ಅಂತರ ಕಾಪಾಡದವರಿಗೂ ಪೊಲೀಸರು ದಂಡ ವಿಧಿಸಿದ್ದಾರೆ. ಇಂಥವರಿಂದ ಈವರೆಗೆ ₹ 3.91 ಕೋಟಿ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: Karnataka Covid Update: ಕರ್ನಾಟಕದಲ್ಲಿ ಇಂದು ಒಂದೇ ದಿನ 16,604 ಜನರಿಗೆ ಕೊವಿಡ್ ಸೋಂಕು ದೃಢ, ಬೆಂಗಳೂರಿನಲ್ಲಿ 3,992 ಜನರಿಗೆ ಸೋಂಕು ಪತ್ತೆ

ಯುಟ್ಯೂಬ್​ನಲ್ಲಿ ಕರ್ನಾಟಕ ಹೈಕೋರ್ಟ್​ ಕಲಾಪ ಮೊದಲ ಬಾರಿಗೆ ನೇರಪ್ರಸಾರ

(97 percent of Bangalore Police get Covid Vaccination till today )