ಯುಟ್ಯೂಬ್​ನಲ್ಲಿ ಕರ್ನಾಟಕ ಹೈಕೋರ್ಟ್​ ಕಲಾಪ ಮೊದಲ ಬಾರಿಗೆ ನೇರಪ್ರಸಾರ

ಕರ್ನಾಟಕ ಹೈಕೋರ್ಟ್​ನಲ್ಲಿ ನಡೆಯುವ ಕಲಾಪವನ್ನು ಯುಟ್ಯೂಬ್​ನಲ್ಲಿ ಇಂದು ನೇರ ಪ್ರಸಾರ ಮಾಡಲಾಯಿತು. ಹೈಕೋರ್ಟ್​ ಹಾಲ್-1ರ ಕಲಾಪವನ್ನು ನೇರಪ್ರಸಾರ ಮಾಡಲಾಯಿತು. ನ್ಯಾಯದಾನ ಪ್ರಕ್ರಿಯೆಯ ಇತಿಹಾಸದಲ್ಲಿ ಇದು ಐತಿಹಾಸಿಕ ಕ್ರಮ ಎನಿಸಿಕೊಂಡಿದೆ.

ಯುಟ್ಯೂಬ್​ನಲ್ಲಿ ಕರ್ನಾಟಕ ಹೈಕೋರ್ಟ್​ ಕಲಾಪ ಮೊದಲ ಬಾರಿಗೆ ನೇರಪ್ರಸಾರ
ಕರ್ನಾಟಕ ಹೈಕೋರ್ಟ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:May 31, 2021 | 4:52 PM

ಬೆಂಗಳೂರು: ಹೈಕೋರ್ಟ್​ನಲ್ಲಿ ನಡೆಯುವ ಕಲಾಪವನ್ನು ಯುಟ್ಯೂಬ್​ನಲ್ಲಿ ಇಂದು ನೇರ ಪ್ರಸಾರ ಮಾಡಲಾಯಿತು. ನ್ಯಾಯದಾನ ಪ್ರಕ್ರಿಯೆಯ ಇತಿಹಾಸದಲ್ಲಿ ಇದು ಐತಿಹಾಸಿಕ ಕ್ರಮ ಎನಿಸಿಕೊಂಡಿದೆ. ಸುಪ್ರೀಂಕೋರ್ಟ್​ ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯ ನೇರ ಪ್ರಸಾರದ ಚಿಂತನೆ ನಡೆಯುತ್ತಿದೆ. ಮಧ್ಯಪ್ರದೇಶ ಹೈಕೋರ್ಟ್​ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಗುಜರಾತ್ ಹೈಕೋರ್ಟ್​ ಈ ಹಿಂದೆ ಯುಟ್ಯೂಬ್​ನಲ್ಲಿ ನೇರ ಪ್ರಸಾರ ಮಾಡಿತ್ತು.

ಜನಸಾಮಾನ್ಯರಿಗೆ ಹೈಕೋರ್ಟ್‌ ಕಲಾಪ ವೀಕ್ಷಿಸಲು ಅವಕಾಶ ಸಿಗಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಈ ಮಹತ್ವದ ಕ್ರಮ ತೆಗೆದುಕೊಂಡರು.

ಮೇ 31ರ ಮಧ್ಯಾಹ್ನ 2.40ರಿಂದ ಹೈಕೋರ್ಟ್​ ಕಲಾಪದ ಯುಟ್ಯೂಬ್ ನೇರ ಪ್ರಸಾರ ಆರಂಭವಾಯಿತು. ಕೋರ್ಟ್​ ಹಾಲ್​ 1ರಲ್ಲಿ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನ್ಯಾಯಪೀಠದಲ್ಲಿದ್ದರು. ಪ್ರಾಯೋಗಿಕವಾಗಿ ಕಲಾಪವನ್ನು ಯುಟ್ಯೂಬ್​ನಲ್ಲಿ ಲೈವ್ ಪ್ರಸಾರ ಮಾಡಲು ನಿರ್ಧರಿಸಲಾಯಿತು.

ಬೈತಕೋಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರರ ಸಂಘ ನಿಯಮಿತ ಮತ್ತು ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಪೀಠವು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಕಾರವಾರ ಬಂದರನ್ನು 2ನೇ ಹಂತದಲ್ಲಿ ಬೈತಕೋಲ್ ಗ್ರಾಮದ ಸಮೀಪ ಅಭಿವೃದ್ಧಿಪಡಿಸಲು ಆರಂಭಿಸಿರುವ ಕಾಮಗಾರಿಯ ಪಾರಿಸರಿಕ ಪರಿಣಾಮಗಳ ಬಗ್ಗೆ ಹಾಗೂ ಪರಿಸರ ಕಾಯ್ದೆಗಳ ಉಲ್ಲಂಘನೆಗಳ ಬಗ್ಗೆ ಈ ಸಂಘಗಳು ಅರ್ಜಿ ಸಲ್ಲಿಸಿವೆ.

ಸುಪ್ರೀಂಕೋರ್ಟ್​ ಸಹ ಈಚಿನ ದಿನಗಳಲ್ಲಿ ಪ್ರಕರಣಗಳ ವಿಚಾರಣೆಗಳನ್ನು ಲೈವ್​ ಸ್ಟ್ರೀಮಿಂಗ್ ಮಾಡುವ ಬಗ್ಗೆ ಪರಿಶೀಲಿಸುತ್ತಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್​ನಲ್ಲಿ ಅರ್ಜಿಯೊಂದು ವಿಚಾರಣೆಗೆ ಬಾಕಿಯಿದೆ. ಸುಪ್ರೀಂಕೋರ್ಟ್​ನ ‘ಇ-ಸಮಿತಿ’ ಅಧ್ಯಕ್ಷ ಡಿ.ವೈ.ಚಂದ್ರಚೂಡ್​ ಸಹ ನ್ಯಾಯದಾನ ಪ್ರಕ್ರಿಯೆಯ ಮುಖ್ಯ ಹಂತ ಎನಿಸಿರುವ ವಿಚಾರಣೆಯ ಲೈವ್​ ಸ್ಟ್ರೀಮಿಂಗ್ ಬಗ್ಗೆ ಒಲವು ತೋರಿರುವುದನ್ನು ಇಲ್ಲಿ ಸ್ಮರಿಸಬಹುದು.

(For The First Time Karnataka High Court Live Stream Its Proceedings on Trail Basis)

ಇದನ್ನೂ ಓದಿ: ನ್ಯಾಯಸಮ್ಮತ ತನಿಖೆ ನಿಮಗೆ ಇಷ್ಟವಿಲ್ಲವೇ? ರಮೇಶ್ ಜಾರಕಿಹೊಳಿ ಪರ ವಕೀಲರಿಗೆ ಹೈಕೋರ್ಟ್​ ಪ್ರಶ್ನೆ

ಇದನ್ನೂ ಓದಿ: Central Vista ಸೆಂಟ್ರಲ್ ವಿಸ್ಟಾ ಯೋಜನೆ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್

Published On - 4:44 pm, Mon, 31 May 21

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ